Leo: 1500 ರೂ.ಗೆ ಮಾರಾಟವಾದ ʼಲಿಯೋʼ ಟಿಕೆಟ್‌; ಬೆಂಗಳೂರಿನಲ್ಲೇ ಅತ್ಯಧಿಕ ದರ.!

Team Udayavani, Oct 16, 2023, 3:41 PM IST

Leo: 1500 ರೂ.ಗೆ ಮಾರಾಟವಾದ ʼಲಿಯೋʼ ಟಿಕೆಟ್‌; ಬೆಂಗಳೂರಿನಲ್ಲೇ ಅತ್ಯಧಿಕ ದರ.!

ಚೆನ್ನೈ: ದಳಪತಿ ವಿಜಯ್‌ ಅವರ ʼಲಿಯೋʼ ಸಿನಿಮಾ ರಿಲೀಸ್‌ ಗೆ ದಿನಗಣನೆ ಬಾಕಿ ಉಳಿದಿದೆ. ಇದೇ ವಾರ ಸಿನಿಮಾ ವಿಶ್ವದೆಲ್ಲೆಡೆ ಅದ್ಧೂರಿಯಾಗಿ ತೆರೆಗೆ ಬರಲಿದೆ. ಈ ನಡುವೆ ಸಿನಿಮಾದ ಅಡ್ವಾನ್ಸ್‌ ಬುಕಿಂಗ್‌ ಆರಂಭಗೊಂಡಿದೆ.

ಟ್ರೇಲರ್‌ ನಿಂದ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಅಡ್ವಾನ್ಸ್‌ ಬುಕಿಂಗ್‌ ನಲ್ಲೂ ʼಲಿಯೋʼ ಸದ್ದು ಮಾಡುತ್ತಿದೆ. ಭಾರತ ಸೇರಿದಂತೆ ವಿದೇಶದಲ್ಲೂ ಸಿನಿಮಾದ ಟಿಕೆಟ್‌ ಗಳು ಮುಂಗಡವಾಗಿ ಮಾರಾಟವಾಗುತ್ತಿದೆ.

ರಿಕ್ಲೈನರ್ ಸೀಟ್‌ಗೆ (ಮಲಗಿಕೊಂಡು ನೋಡುವ ಸೀಟು) ನಲ್ಲಿ ʼಲಿಯೋʼ ಸಿನಿಮಾ ನೋಡಲು 1,500 ರೂ. ಟಿಕೆಟ್‌ ನೀಡಬೇಕಿದೆ. ಈಗಾಗಲೇ ಈ ಟಿಕೆಟ್‌ ನ್ನು ಕೆಲವರು ಖರೀದಿಸಿದ್ದಾರೆ ಎಂದು ಬುಕ್ ಮೈ ಶೋ ಹೇಳಿದೆ.

ತಮಿಳುನಾಡು, ಕೇರಳ, ಕರ್ನಾಟಕ ಸೇರಿದಂತೆ ಬಹುತೇಕ ರಾಜ್ಯಗಳಲ್ಲಿ ʼಲಿಯೋʼ ಅಡ್ವಾನ್ಸ್‌ ಬುಕಿಂಗ್‌ ಆರಂಭಗೊಂಡಿದೆ. 200 ರೂ.ನಿಂದ 1500 ರೂ.ವರೆಗೆ ʼಲಿಯೋʼ ಟಿಕೆಟ್‌ ಬೆಲೆ ನಿಗದಿಯಾಗಿದೆ.

ಬೆಂಗಳೂರಿನ ಕೆಲ ಮಲ್ಟಿಫ್ಲೆಕ್ಸ್‌ ನಲ್ಲಿ ʼಲಿಯೋʼ ಸಿನಿಮಾದ ರಿಕ್ಲೈನರ್ ಸೀಟ್‌ ನ ದರವನ್ನು 1500 ರೂಪಾಯಿಗೆ ನಿಗದಿಪಡಿಸಲಾಗಿದೆ. ಈ ಟಿಕೆಟ್‌ ನ್ನು ಅನೇಕರು ಖರೀದಿಸಿದ್ದಾರೆ.

ಚೆನ್ನೈನಲ್ಲಿ 190 ರೂ.ವಿನಿಂದ ಟಿಕೆಟ್‌ ಬೆಲೆ ಆರಂಭಗೊಂಡಿದೆ. ಸರ್ಕಾರದ ಆದೇಶದಂತೆ ಮುಂಜಾನೆ 9 ಗಂಟೆಯಿಂದ ತಮಿಳುನಾಡಿನಲ್ಲಿ ಶೋ ಆರಂಭಗೊಳ್ಳಲಿದೆ.

ಇತ್ತ ಕೇರಳ ಹಾಗೂ ತಮಿಳುನಾಡಿನಲ್ಲಿ ಮುಂಜಾನೆ 4 ಗಂಟೆಯಿಂದಲೇ ʼಲಿಯೋʼ ಶೋ ಆರಂಭಗೊಳ್ಳಲಿದೆ. ಕೊಚ್ಚಿಯಲ್ಲಿ ರಿಕ್ಲೈನರ್ ಸೀಟ್‌ಗೆ 340 ರೂ.ವನ್ನು ನಿಗದಿಪಡಿಸಲಾಗಿದೆ. ಬಾಲಿವುಡ್‌ ನಲ್ಲಿ ʼಗಣಪತ್‌ʼ ಸಿನಿಮಾ ರಿಲೀಸ್‌ ಆಗಿರುವುದರಿಂದ ಮುಂಬಯಿ ಹಾಗೂ ಪುಣೆಯಲ್ಲಿ ಕೆಲ ಥಿಯೇಟರ್‌ ನಲ್ಲಿ ಮಾತ್ರ ʼಲಿಯೋʼ ಬಿಡುಗಡೆ ಆಗಲಿದೆ. ಮುಂಬೈನಲ್ಲಿ ಅತಿ ಹೆಚ್ಚು ಟಿಕೆಟ್ ಬೆಲೆ 450 ರೂ ಆಗಿದ್ದರೆ, ಪುಣೆಯಲ್ಲಿ 340 ರೂ.ಆಗಿದೆ.

ಇತ್ತ ತೆಲುಗು ರಾಜ್ಯದಲ್ಲಿ ʼಲಿಯೋʼ ಸಿನಿಮಾಕ್ಕೆ  ಬಾಲಕೃಷ್ಣ ಅಭಿನಯದ ‘ಭಗವಂತ ಕೇಸರಿ’ ಹಾಗೂ ರವಿತೇಜ ಅಭಿನಯದ ‘ಟೈಗರ್ ನಾಗೇಶ್ವರ ರಾವ್ʼ ಟಕ್ಕರ್‌ ನೀಡಲಿದ್ದು,ಇಲ್ಲಿ ʼಲಿಯೋʼ ಸಿನಿಮಾದ ಅತ್ಯಧಿಕ ಟಿಕೆಟ್‌ ಬೆಲೆ 700 ರೂ.ಆಗಿದೆ.( ರಿಕ್ಲೈನರ್ ಸೀಟ್‌ಗೆ)

ಲೋಕೇಶ್‌ ಕನಕರಾಜ್‌ ನಿರ್ದೇಶನದ ʼಲಿಯೋʼ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆಯಿದ್ದು, ದಳಪತಿ ವಿಜಯ್ ಯೊಂದಿಗೆ ತ್ರಿಶಾ, ಮತ್ತು ಸಂಜಯ್ ದತ್ ,ಅರ್ಜುನ್ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದು,ಗೌತಮ್ ವಾಸುದೇವ್ ಮೆನನ್, ಮಿಸ್ಕಿನ್, ಪ್ರಿಯಾ ಆನಂದ್ ಮತ್ತು ಮನ್ಸೂರ್ ಅಲಿ ಖಾನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.

ಟಾಪ್ ನ್ಯೂಸ್

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Revant Reddy

TG; ತೆಲಂಗಾಣದ ಸಂಕ್ಷಿಪ್ತ ರೂಪ ಇನ್ನು ಮುಂದೆ ‘ಟಿಎಸ್‌’ ಅಲ್ಲ!

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12

Cannes‌ Film Festival: ಕೇನ್ಸ್ ನಲ್ಲಿ ಪ್ರದರ್ಶನ ಕಾಣಲಿದೆ ಭಾರತದ ಈ 7 ಸಿನಿಮಾಗಳು

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Ramayana: 100, 200.. ಕೋಟಿಯಲ್ಲ ʼರಾಮಾಯಣʼ ಮೊದಲ ಪಾರ್ಟ್‌ನ ಬಜೆಟ್ಟೇ 835 ಕೋಟಿ ರೂ.

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: ಜೂನ್‌ನಿಂದಲೇ ಬ್ಯುಸಿಯಾಗಲಿದೆ ಬಾಲಿವುಡ್; ಶುರುವಾಗಲಿದೆ ರಿಲೀಸ್‌ ಭರಾಟೆ

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌  ʼಬಾರ್ಡರ್‌ -2ʼ ರಿಲೀಸ್?‌

Bollywood: 2026ರ ಗಣರಾಜ್ಯೋತ್ಸವಕ್ಕೆ ಸನ್ನಿ ಡಿಯೋಲ್‌ ʼಬಾರ್ಡರ್‌ -2ʼ ರಿಲೀಸ್?‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

Kundapura ತಾಯಿಯ ಶವದೊಂದಿಗೆ 72 ಗಂಟೆ ಕಳೆದಿದ್ದ ಪುತ್ರಿ!

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ಎಸೆಸೆಲ್ಸಿ ಪಾಠಕ್ಕೆ ತ್ರಿವಳಿ ಪರೀಕ್ಷೆ ಅಡ್ಡಿ !

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

ನಾನು 100 ಕೋ.ರೂ. ಆಮಿಷ ಒಡ್ಡಿದ್ದರೆ ಲೋಕಾಯುಕ್ತಕ್ಕೆ ದೂರು ಕೊಡಿ: ಡಿಕೆಶಿ ಸವಾಲು

1-qweewq

IPL ಇಂದು ಲೀಗ್‌ ಪಂದ್ಯಗಳಿಗೆ ತೆರೆ: KKR vs RR ಟೇಬಲ್‌ ಟಾಪರ್‌ಗಳ ಸೆಣಸಾಟ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.