Pak ವಿರುದ್ಧ ಜಯ: ‘ಏರುಪೇರಲ್ಲ , ನೈಜ ಸಾಮರ್ಥ್ಯಕ್ಕೆ ಒಲಿದ ಜಯ’ : ಜೊನಾಥನ್‌ ಟ್ರಾಟ್‌


Team Udayavani, Oct 24, 2023, 11:29 PM IST

1-sdsadasd

ಚೆನ್ನೈ: ಈ ಐತಿಹಾಸಿಕ ಗೆಲುವು ಖಂಡಿತವಾಗಿಯೂ ಅಪ್‌ಸೆಟ್‌ ಅಲ್ಲ, ಇದು ನಮ್ಮವರ ನೈಜ ಸಾಮರ್ಥ್ಯಕ್ಕೆ ಒಲಿದ ಜಯ. ಅಫ್ಘಾನಿಸ್ಥಾನದ ಮುಂದಿನ ಕ್ರಿಕೆಟ್‌ ಪೀಳಿಗೆಗೆ ಈ ಜಯ ಸ್ಫೂರ್ತಿ ಆಗಲಿದೆ ಎಂದಿದ್ದಾರೆ, ಅಫ್ಘಾನ್‌ ತಂಡದ ಕೋಚ್‌ ಜೊನಾಥನ್‌ ಟ್ರಾಟ್‌.
ಸೋಮವಾರ ಚೆನ್ನೈಯಲ್ಲಿ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಅಫ್ಘಾನಿಸ್ಥಾನ 8 ವಿಕೆಟ್‌ಗಳಿಂದ ಪಾಕಿಸ್ಥಾನವನ್ನು ಬಗ್ಗುಬಡಿದ ಬಳಿಕ ಟ್ರಾಟ್‌ ಈ ಹೇಳಿಕೆ ನೀಡಿದ್ದಾರೆ.

“ನಮ್ಮ ತಂಡದಲ್ಲಿ ಅದೆಷ್ಟು ಮಂದಿ ಪ್ರತಿಭಾವಂತರಿದ್ದಾರೆ ಎಂಬುದಕ್ಕೆ ಈ ಬಾರಿಯ ವಿಶ್ವಕಪ್‌ಗಿಂತ ಉತ್ತಮ ನಿದರ್ಶನ ಖಂಡಿತ ಬೇಕಿಲ್ಲ. ಇದಕ್ಕೂ ಮುನ್ನ ನಾವು ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ ತಂಡವನ್ನೂ ಮಣಿಸಿದ್ದೆವು. ಇದು ದೇಶದ ಮುಂದಿನ ಕ್ರಿಕೆಟ್‌ ಪೀಳಿಗೆಗೊಂದು ಸ್ಫೂರ್ತಿ. ಅವರೂ ಕ್ರಿಕೆಟ್‌ ಬ್ಯಾಟ್‌, ಬಾಲ್‌ನೊಂದಿಗೆ ಫಿಟ್‌ನೆಸ್‌ ಸಾರುತ್ತ ದೇಶವನ್ನು ಪ್ರತಿನಿಧಿಸಲು ಇಂಥ ಫ‌ಲಿತಾಂಶಗಳು ಅಗತ್ಯ’ ಎಂಬುದಾಗಿ ಮೂಲತಃ ಇಂಗ್ಲೆಂಡ್‌ನ‌ವರಾದ ಜೊನಾಥನ್‌ ಟ್ರಾಟ್‌ ಹೇಳಿದರು.

ಅಫ್ಘಾನಿಸ್ಥಾನ ವಿಶ್ವಕಪ್‌ ಕೂಟವೊಂದರಲ್ಲಿ 2 ಪಂದ್ಯಗಳನ್ನು ಜಯಿಸಿದ್ದು ಇದೇ ಮೊದಲು. ಇವರಿಂದ ಆಘಾತ ಅನುಭವಿಸಿದ ಎರಡೂ ತಂಡಗಳು ಮಾಜಿ ಚಾಂಪಿಯನ್ಸ್‌ ಎಂಬುದನ್ನು ಮರೆಯುವಂತಿಲ್ಲ. ಆದರೆ ಇದನ್ನು “ಅಪ್‌ಸೆಟ್‌’ ಎನ್ನಲು ಟ್ರಾಟ್‌ ಒಪ್ಪುವುದಿಲ್ಲ.

“ದಯವಿಟ್ಟು ಇದನ್ನು ನೀವು ಅಪ್‌ಸೆಟ್‌ ಅಥವಾ ಏರುಪೇರು ಎಂದು ಹೇಳಬೇಡಿ. ಇದು ನಮ್ಮವರ ಸ್ವಸಾಮರ್ಥ್ಯದಿಂದ ಒಲಿದ ಗೆಲುವು. ನಮ್ಮವರ ಕಠಿನ ಶ್ರಮ ಇಲ್ಲಿ ಅಡಗಿದೆ. ಬೇಕಿದ್ದರೆ ಅಂಡರ್‌ಡಾಗ್ಸ್‌ ಅಥವಾ ಇನ್ನೇನಾದರೂ ಹೇಳಿ. ಆದರೆ ಇದು ಖಂಡಿತ ಅಪ್‌ಸೆಟ್‌ ಅಲ್ಲ, ನೈಜ ಫ‌ಲಿತಾಂಶ. ಈ ಉತ್ತಮ ಪ್ರದರ್ಶನವನ್ನು ನಾವು ಮುಂದುವರಿಸಬೇಕಿದೆ. ಇದಕ್ಕೆ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಹೋಗಬೇಕಿದೆ…’ ಎಂದರು.

ಪಾಕ್‌ ಪಲ್ಟಿ!
ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ಥಾನ 7 ವಿಕೆಟಿಗೆ 282 ರನ್‌ ಗಳಿಸಿದರೆ, ಅಫ್ಘಾನಿಸ್ಥಾನ 49 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 286 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಆರಂಭಿಕರಾದ ರೆಹಮಾನುಲ್ಲ ಗುರ್ಬಜ್‌ 65, ಇಬ್ರಾಹಿಂ ಜದ್ರಾನ್‌ 87 ರನ್‌ ಬಾರಿಸುವುದರ ಜತೆಗೆ 21.1 ಓವರ್‌ಗಳಲ್ಲಿ 130 ರನ್‌ ಪೇರಿಸಿ ಭದ್ರ ಬುನಾದಿ ನಿರ್ಮಿಸಿದರು. ಬಳಿಕ ರೆಹಮತ್‌ ಶಾ (ಅಜೇಯ 77) ಮತ್ತು ನಾಯಕ ಹಶ್ಮತುಲ್ಲ ಶಾಹಿದಿ (ಅಜೇಯ 48) ಸೇರಿಕೊಂಡು ತಂಡವನ್ನು ಸುರಕ್ಷಿತವಾಗಿ ದಡ ಸೇರಿಸಿದರು. ಇವರಿಬ್ಬರು ಸೇರಿಕೊಂಡು 96 ರನ್‌ ಜತೆಯಾಟ ನಿಭಾಯಿಸಿದರು.

ಮೊದಲ ವಿಶ್ವಕಪ್‌ ಪಂದ್ಯವಾಡಿದ ಚೈನಾಮನ್‌ ಬೌಲರ್‌ ನೂರ್‌ ಅಹ್ಮದ್‌ 3 ವಿಕೆಟ್‌ ಉರುಳಿಸಿ ಪಾಕಿಸ್ಥಾನಕ್ಕೆ ಕಡಿವಾಣ ಹಾಕಿದರು. ಬಾಬರ್‌ ಆಜಂ, ಮೊಹಮ್ಮದ್‌ ರಿಜ್ವಾನ್‌ ಅವರ ಬಹುಮೂಲ್ಯ ವಿಕೆಟ್‌ಗಳೂ ಇದರಲ್ಲಿ ಸೇರಿದ್ದವು. ಆದರೆ ಪಾಕಿಸ್ಥಾನದ ಬೌಲರ್‌ಗಳಿಗೆ ಯಶಸ್ಸು ಸಾಧಿಸಲಾಗಲಿಲ್ಲ.

ಐಪಿಎಲ್‌ ಅನುಭವ ತನ್ನ ಯಶಸ್ಸಿಗೆ ಕಾರಣ ಎಂಬುದು ನೂರ್‌ ಅಹ್ಮದ್‌ ಪ್ರತಿಕ್ರಿಯೆ. ಅವರು ಐಪಿಎಲ್‌ನಲ್ಲಿ ಗುಜರಾತ್‌ ಜೈಂಟ್ಸ್‌ ತಂಡದ ಆಟಗಾರ.

ಸಂಕ್ಷಿಪ್ತ ಸ್ಕೋರ್‌
ಪಾಕಿಸ್ಥಾನ-7 ವಿಕೆಟಿಗೆ 282 (ಬಾಬರ್‌ 74, ಶಫೀಕ್‌ 58, ಶದಾಬ್‌ 40, ಇಫ್ತಿಕಾರ್‌ 40, ನೂರ್‌ ಅಹ್ಮದ್‌ 49ಕ್ಕೆ 3, ನವೀನ್‌ 52ಕ್ಕೆ 2). ಅಫ್ಘಾನಿಸ್ಥಾನ-48 ಓವರ್‌ಗಳಲ್ಲಿ 2 ವಿಕೆಟಿಗೆ 286 (ಜದ್ರಾನ್‌ 87, ಗುರ್ಬಜ್‌ 65, ರೆಹಮತ್‌ ಶಾ ಔಟಾಗದೆ 77, ಶಾಹಿದಿ ಔಟಾಗದೆ 48, ಅಫ್ರಿದಿ 58ಕ್ಕೆ 1, ಹಸನ್‌ ಅಲಿ 44ಕ್ಕೆ 1). ಪಂದ್ಯಶ್ರೇಷ್ಠ: ಇಬ್ರಾಹಿಂ ಜದ್ರಾನ್‌.

ಎಕ್ಸ್‌ ಟ್ರಾ ಇನ್ನಿಂಗ್ಸ್‌

 ಅಫ್ಘಾನಿಸ್ಥಾನ ತನ್ನ ಏಕದಿನ ಚರಿತ್ರೆಯಲ್ಲಿ ಪಾಕಿಸ್ಥಾನವನ್ನು ಮೊದಲ ಸಲ ಸೋಲಿಸಿತು. ಇದು ಇತ್ತಂಡಗಳ ನಡುವಿನ 8ನೇ ಏಕದಿನ ಪಂದ್ಯ.
 ಪಾಕಿಸ್ಥಾನ ಮೊದಲ ಬಾರಿಗೆ ಏಕದಿನದಲ್ಲಿ 275ಕ್ಕೂ ಹೆಚ್ಚಿನ ಮೊತ್ತವನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. 14 ಸಲ ಈ ಮೊತ್ತವನ್ನು ದಾಖಲಿಸಿದ ವೇಳೆ ಪಾಕ್‌ 13ರಲ್ಲಿ ಜಯ ಸಾಧಿಸಿತ್ತು.
 ಅಫ್ಘಾನಿಸ್ಥಾನ ತನ್ನ ಏಕದಿನದ ಅತ್ಯಧಿಕ ಮೊತ್ತದ ಯಶಸ್ವಿ ಚೇಸಿಂಗ್‌ ದಾಖಲೆ ಬರೆಯಿತು (283). 2014ರ ದುಬಾೖ ಪಂದ್ಯದಲ್ಲಿ ಯುಎಇ ವಿರುದ್ಧ 274 ರನ್‌ ಚೇಸ್‌ ಮಾಡಿ ಗೆದ್ದದ್ದು ಈವರೆಗಿನ ದಾಖಲೆ ಆಗಿತ್ತು.
 ಪಾಕಿಸ್ಥಾನ ವಿರುದ್ಧದ ವಿಶ್ವಕಪ್‌ ಪಂದ್ಯಗಳಲ್ಲಿ ಅಫ್ಘಾನ್‌ ಅತ್ಯಧಿಕ ಮೊತ್ತವನ್ನು ಬೆನ್ನಟ್ಟಿ ಗೆದ್ದ ದಾಖಲೆ ಸ್ಥಾಪಿಸಿತು. 2003ರ ಸೆಂಚುರಿಯನ್‌ ಪಂದ್ಯದಲ್ಲಿ ಭಾರತ 274 ರನ್‌ ಚೇಸ್‌ ಮಾಡಿ ಗೆದ್ದ ದಾಖಲೆ ಪತನಗೊಂಡಿತು.
 ಅಫ್ಘಾನ್‌ 286 ರನ್‌ ಬಾರಿಸಿತು. ಇದು ವಿಶ್ವಕಪ್‌ನಲ್ಲಿ ಅಫ್ಘಾನ್‌ ತಂಡದ 2ನೇ ಗರಿಷ್ಠ ಗಳಿಕೆ. 2019ರ ಲೀಡ್ಸ್‌ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಎದುರು 288 ರನ್‌ ಬಾರಿಸಿದ್ದು ದಾಖಲೆ.
 ಪಾಕಿಸ್ಥಾನ ಈ ವಿಶ್ವಕಪ್‌ನ ಪವರ್‌ ಪ್ಲೇಯಲ್ಲಿ ಮೊದಲ ಸಿಕ್ಸರ್‌ ಬಾರಿಸಿತು. ಹೊಡೆದವರು ಅಬ್ದುಲ್ಲ ಶಫೀಕ್‌.
 ನೂರ್‌ ಅಹ್ಮದ್‌ ವಿಶ್ವಕಪ್‌ ಪದಾರ್ಪಣ ಪಂದ್ಯದಲ್ಲೇ ಅತ್ಯುತ್ತಮ ಬೌಲಿಂಗ್‌ ಸಾಧನೆಗೈದ ಅಫ್ಘಾನ್‌ ಬೌಲರ್‌ ಎನಿಸಿದರು (49ಕ್ಕೆ 3).
 ಅಫ್ಘಾನ್‌ ಸ್ಪಿನ್ನರ್ ಈ ಪಂದ್ಯದಲ್ಲಿ 38 ಓವರ್‌ ಬೌಲಿಂಗ್‌ ನಡೆಸಿದರು. ಇದರೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ ಸ್ಪಿನ್‌ ಬೌಲಿಂಗ್‌ ನಡೆಸಿದ ತನ್ನದೇ ಜಂಟಿ ದ್ವಿತೀಯ ಸ್ಥಾನದ ದಾಖಲೆಯನ್ನು ಅಫ್ಘಾನ್‌ ಸರಿದೂಗಿಸಿತು. ಪಾಕಿಸ್ಥಾನ ವಿರುದ್ಧವೇ 2019ರ ಲೀಡ್ಸ್‌ ಪಂದ್ಯದಲ್ಲೂ ಅಫ್ಘಾನ್‌ ಸ್ಪಿನ್ನರ್ 38 ಓವರ್‌ ಎಸೆದಿದ್ದರು. ನ್ಯೂಜಿಲ್ಯಾಂಡ್‌ ಎದುರಿನ 1996ರ ಫೈಸಲಾಬಾದ್‌ ಪಂದ್ಯದಲ್ಲಿ ಯುಎಇ ಸ್ಪಿನ್ನರ್ ಹಾಗೂ 2011ರ ಆಸ್ಟ್ರೇಲಿಯ ಎದುರಿನ ಅಹ್ಮದಾಬಾದ್‌ ಪಂದ್ಯದಲ್ಲಿ ಜಿಂಬಾಬ್ವೆ ಸ್ಪಿನ್ನರ್ 39 ಓವರ್‌ ಬೌಲಿಂಗ್‌ ನಡೆಸಿದ್ದು ದಾಖಲೆ.
 ವಿಶ್ವಕಪ್‌ ಪಂದ್ಯವೊಂದರಲ್ಲಿ ಮೊದಲ ಬಾರಿಗೆ ಅಘಾ^ನಿಸ್ಥಾನ ತಂಡದ ಅಗ್ರ ಮೂವರು ಅರ್ಧ ಶತಕ ಹೊಡೆದರು.
 ಇಬ್ರಾಹಿಂ ಜದ್ರಾನ್‌ ಏಕದಿನದಲ್ಲಿ ಸಾವಿರ ರನ್‌ ಪೂರ್ತಿಗೊಳಿಸಿದರು. ಜತೆಗೆ ಅತೀ ಕಡಿಮೆ ಇನ್ನಿಂಗ್ಸ್‌ ಗಳಲ್ಲಿ ಈ ಸಾಧನೆಗೈದ ಅಫ್ಘಾನ್‌ ಕ್ರಿಕೆಟಿಗನೆನಿಸಿದರು (24 ಇನ್ನಿಂಗ್ಸ್‌).
 ಗುರ್ಬಜ್‌-ಜದ್ರಾನ್‌ ಏಕದಿನದಲ್ಲಿ ಅಫ್ಘಾನ್‌ ಪರ ಅತ್ಯಧಿಕ 4 ಶತಕದ ಜತೆಯಾಟ ನಿಭಾಯಿಸಿದರು. ಬಳಿಕ ಶಾ-ಶಾಹಿದಿ ಇದನ್ನು ಸರಿದೂಗಿಸಿದರು.

ಟಾಪ್ ನ್ಯೂಸ್

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

Heavy Rain ಮಳೆಗಾಲದ ವಾತಾವರಣ; ಪೂರ್ವ ಮುಂಗಾರು ಚುರುಕು

1-modi

Varanasi; 25000 ಮಹಿಳೆಯರ ಜತೆ ಸ್ವಕ್ಷೇತ್ರದಲ್ಲಿ ಪಿಎಂ ಸಂವಾದ

ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

Mangaluru ನೇತ್ರಾವತಿಯಲ್ಲಿ ಹರಿವು ಏರಿಕೆ; ತುಂಬೆಗೆ ಎಎಂಆರ್‌ ನೀರು

MOdi (3)

Odisha ರಾಜ್ಯ ಸರಕಾರವು ಭ್ರಷ್ಟರ ಹಿಡಿತಕ್ಕೆ ಸಿಲುಕಿದೆ: ಪಿಎಂ ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

Rohit SHarma (2)

Star Sports ; ರೋಹಿತ್‌ ಶರ್ಮರ ಖಾಸಗಿ ಮಾತು ಪ್ರಸಾರ ಮಾಡಿಲ್ಲ

1-wewqe

Alexander Zverev ರೋಮನ್‌ ಕಿಂಗ್‌: ಜೆರ್ರಿ ವಿರುದ್ಧ 6-4, 7-5 ಜಯ

1-weqwewq

Para Athletics: ದೀಪ್ತಿ ಜೀವಂಜಿ ವಿಶ್ವದಾಖಲೆ

1-nnn

World ಬೆಂಚ್‌ಪ್ರಸ್‌ ಸ್ಪರ್ಧೆ : ಸತೀಶ್‌ ಕುಮಾರ್‌ ಕುದ್ರೋಳಿ ಕೋಚ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

police USA

China ಶಾಲೆಯಲ್ಲಿ ಚಾಕು ಇರಿತ: 5 ಮಂದಿಗೆ ಗಾಯ

prachanda-nepal

Nepal; 4ನೇ ಬಾರಿಗೆ ವಿಶ್ವಾಸಮತ ಗೆದ್ದ ಪ್ರಧಾನಿ ಪ್ರಚಂಡ

1-wqwewqeewqe

RSS ಸದಸ್ಯ ನಾನು ಎಂದ ಕಲ್ಕತ್ತಾ ಹೈಕೋರ್ಟ್ ನಿವೃತ್ತ ಜಡ್ಜ್

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

5, 8, 9ನೇ ತರಗತಿ ಮಕ್ಕಳ ಸಂಕಟಕ್ಕೆ ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.