Karnataka: ಕಾನೂನಿನ ಅನ್ವಯವೇ ವರದಿ ತಯಾರಿ- ಕಾಂತರಾಜು

Team Udayavani, Nov 25, 2023, 11:19 PM IST

kantaraju

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ಕಾನೂನಿನ ಚೌಕಟ್ಟಿನಲ್ಲೇ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವರದಿ ಸಿದ್ಧಪಡಿಸಿದೆ. ಹೀಗಾಗಿ, ಅದನ್ನು ಯಥಾವತ್‌ ಆಗಿ ಸರಕಾರ ಸ್ವೀಕರಿಸಬೇಕು. ಅದನ್ನು ಆಯೋಗದ ಹಾಲಿ ಅಧ್ಯಕ್ಷರು ಸರಕಾರಕ್ಕೆ ಸಲ್ಲಿಕೆ ಮಾಡಬೇಕೆಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್‌.ಕಾಂತರಾಜು ಹೇಳಿದ್ದಾರೆ.

ಶನಿವಾರ ಬೆಂಗಳೂರಿನಲ್ಲಿ ಮಾತನಾಡಿದ ಎಚ್‌.ಕಾಂತರಾಜು ಕಾನೂನಿನಲ್ಲಿ ಆಯೋಗದ ವರದಿ ಮರುಪರಿಶೀಲನೆಗೆ ಅವಕಾಶವಿಲ್ಲ. ಸರಕಾರಕ್ಕೆ ಮಾತ್ರ ಅದು ಸಾಧ್ಯ. ಕೆಲವರು ಈ ವರದಿ ಸೋರಿಕೆಯಾಗಿದೆ ಮತ್ತು ಅವೈಜ್ಞಾನಿಕವಾಗಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದರಲ್ಲಿ ಯಾವುದೇ ಹುರುಳಿಲ್ಲ. ಸೋರಿಕೆ ಆಗಿರುವುದನ್ನು ಸಾಬೀತುಮಾಡಲಿ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್ ಸೈನ್ಸ್‌ ಸಂಸ್ಥೆಯ ತಜ್ಞರ ಸಲಹೆ ಪಡೆದು ವರದಿ ತಯಾರಿಸಲಾಗಿದೆ ಎಂದು ಹೇಳಿದರು.

55 ಪ್ರಶ್ನಾವಳಿಗಳನ್ನು ತೆಗೆದುಕೊಂಡು ವರದಿ ತಯಾರಿಸಲಾಗಿದೆ. ಅದರಲ್ಲಿ ಜಾತಿ, ಧರ್ಮ, ಉದ್ಯೋಗ, ಆರ್ಥಿಕತೆ, ಬ್ಯಾಂಕ್‌ ಖಾತೆ ಇದೆಯೇ ಎನ್ನುವುದೂ ಸಹಿತ ಹಲವು ಪ್ರಶ್ನೆಗಳನ್ನು ಇರಿಸಲಾಗಿತ್ತು. ಸಮೀಕ್ಷಾ ವರದಿ ತಯಾರಾದಾಗಿನಿಂದ ರಾಜ್ಯ ಸರಕಾರ ಅದನ್ನು ಸ್ವೀಕರಿಸಬೇಕೆಂದು ಆಯೋಗ ಮನವಿ ಮಾಡುತ್ತಾ ಬಂದಿದೆ. ಮುಖ್ಯಮಂತ್ರಿಗಳಾಗಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರಿಗೂ ವರದಿ ಸ್ವೀಕರಿಸುವಂತೆ ಮನವಿ ಮಾಡಲಾಗಿತ್ತು. ಅನಂತರ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲು ಅವಕಾಶ ಕೋರಲಾಗಿತ್ತು. ಆದರೆ ಅವಕಾಶ ದೊರೆಯಲಿಲ್ಲ ಎಂದು ದೂರಿದರು.

ಸದಸ್ಯ ಕಾರ್ಯದರ್ಶಿಗೆ ನೀಡಲಾಗಿತ್ತು
2019ರ ಸೆ.21ರಂದು ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ನೇಮಕಾತಿ ರದ್ದುಪಡಿಸಿದ ಹಿನ್ನೆಲೆಯಲ್ಲಿ ಆಗ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿದ್ದ ಪಿ.ವಸಂತಕುಮಾರ್‌ ಅವರಿಗೆ ಸಮೀಕ್ಷೆ ವರದಿ ನೀಡಲಾಗಿತ್ತು. ಆಯೋಗ ಸಂಗ್ರಹಿಸಿದ ಮಾಹಿತಿಯನ್ನು ಅಧ್ಯಕ್ಷರು, ಎಲ್ಲ ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ಸಹಿ ಮಾಡಿ ದೃಢೀಕರಿಸಿರುತ್ತಾರೆ. ಈ ಅವಧಿಯಲ್ಲಿ 3 ಜನ ಸದಸ್ಯ ಕಾರ್ಯದರ್ಶಿಗಳು ಕಾರ್ಯ ನಿರ್ವಹಿಸಿದ್ದು, ಕಾಲಾವಧಿಗೆ ತಕ್ಕಂತೆ ಎಲ್ಲ ಸಂಪುಟಗಳಿಗೂ ಎಲ್ಲ ದತ್ತಾಂಶಗಳಿಗೂ ಸಹಿ ಮಾಡಿದ್ದಾರೆ ಎಂದು ಹೇಳಿದರು.

ಆಯೋಗ ತಯಾರಿಸಿರುವ ವರದಿಯನ್ನು ಅವೈಜ್ಞಾನಿಕ ಅಥವಾ ಸರಿಯಿಲ್ಲ ಎನ್ನುವುದು ಈ ಹಂತದಲ್ಲಿ ಸರಿಯಾಗುವುದಿಲ್ಲ. ನಾವು ತಯಾರಿಸಿರುವ ವರದಿಗಳು ಅತ್ಯಂತ ವೈಜ್ಞಾನಿಕವಾಗಿವೆ. ಆಯೋಗದ ವರದಿಯನ್ನು ಸರಕಾರ ಬಿಡುಗಡೆ ಮಾಡಿ ಅವರಿಂದ ಸ್ವೀಕೃತಿ ಪಡೆಯಲಾಗಿದೆ. ವರದಿಯನ್ನು ಸರಕಾರ ಬಿಡುಗಡೆ ಮಾಡಿದ ಬಳಿಕ ಪರಿಶೀಲಿಸಿ, ಅಧ್ಯಯನ ಮಾಡಿ, ಅಭಿಪ್ರಾಯ ತಿಳಿಸುವುದು ಸೂಕ್ತ ಎಂದರು.

ಟಾಪ್ ನ್ಯೂಸ್

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

Amit Shah

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

IMD

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

trai

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

1-wqeewqewq

UP ರ್‍ಯಾಲಿಯಲ್ಲಿ ಗಲಾಟೆ: ಮಾತಾಡದೆ ರಾಹುಲ್‌, ಅಖಿಲೇಶ್‌ ವಾಪಸ್‌!

Modi (2)

Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

State Govt ದೇವೇಗೌಡರ ಬಲಿ ಪಡೆಯಲು ಸಂಚು: ಜೆಡಿಎಸ್‌ ಆರೋಪ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

Prajwal Revanna Case; ಸಿಬಿಐಗೆ ವಹಿಸಿದರೆ ಸರಕಾರದಲ್ಲಿ ಇರುವವರು ಜೈಲಿಗೆ

ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

Govt ಕಚೇರಿಗಳಲ್ಲಿ ಇ-ಆಫೀಸ್‌ ತಂತ್ರಾಂಶ ಕಡ್ಡಾಯಕ್ಕೆ ಆದೇಶ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

ಜೂನ್‌ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು? ಮುಂದಿನ 5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

Amit Shah

NDAಗೆ ಈಗಾಗಲೇ 270 ಕ್ಷೇತ್ರಗಳಲ್ಲಿ ಜಯ ಸಿಕ್ಕಿದೆ: ಅಮಿತ್‌ ಶಾ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

Prajwal ಬಂಧನಕ್ಕೆ ರೆಡ್‌ ಕಾರ್ನರ್‌ ಅಸ್ತ್ರ; ಕೇಂದ್ರ ಸರಕಾರಕ್ಕೆ ಪತ್ರ ಬರೆಯುವ ಸಾಧ್ಯತೆ

IMD

47.8 degrees; ಉತ್ತರ ಭಾರತದ ಹಲವೆಡೆ ಶಾಖದ ಅಲೆ ಅಲರ್ಟ್‌!

trai

TRAI ವ್ಯಾಪ್ತಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌, ಎಕ್ಸ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.