Public toilet: ಶತಮಾನದ ಶಾಲಾವರಣದಲಿ ಸಾರ್ವಜನಿಕ ಶೌಚಾಲಯ


Team Udayavani, Nov 28, 2023, 4:06 PM IST

Public toilet: ಶತಮಾನದ ಶಾಲಾವರಣದಲಿ ಸಾರ್ವಜನಿಕ ಶೌಚಾಲಯ

ಚಾಮರಾಜನಗರ: ನಗರದ ಶತಮಾನ ಕಂಡ ಸರ್ಕಾರಿ ಶಾಲೆಯಾದ ಪೇಟೆ ಪ್ರೈಮರಿ ಶಾಲೆ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ ಮಾಡಲು ನಗರಸಭೆ ಮುಂದಾಗಿದ್ದು, ಸಾಹಿತಿಗಳು, ಚಿಂತಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಪೇಟೆ ಪ್ರೈಮರಿ ಶಾಲೆ 118 ವರ್ಷ ಹಳೆಯದಾಗಿದ್ದು, ಪಾರಂಪರಿಕ ಕಟ್ಟಡವನ್ನು ಹೊಂದಿದೆ. 1 ರಿಂದ 7ನೇ ತರಗತಿಯವರೆಗೆ, ಈ ಸಾಲೆಯಲ್ಲಿ ನೂರಾರು ವಿದ್ಯಾ ರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇದನ್ನು ಪುನರುಜ್ಜೀವನಗೊಳಿಸ ಬೇಕೆಂದು ಹಿರಿಯ ವಿದ್ಯಾರ್ಥಿಗಳು, ಸಾರ್ವಜನಿಕರು ಒತ್ತಾಯಿಸಿದ್ದರು.

ಶೌಚಾಲಯ ನಿರ್ಮಾಣಕ್ಕಾಗಿ ಜಾಗ ಗುರುತು: ಆದರೆ ಶಾಲಾ ಕಟ್ಟಡ ಪುನರ್‌ನಿರ್ಮಾಣ ಮಾಡುವು ದಿರಲಿ, ಶಾಲೆಯ ಮುಂದೆ ವಿಶಾಲವಾದ ಆವರಣ ವಿದ್ದು, ಇಲ್ಲಿ ಸಾರ್ವಜನಿಕ ಬಳಕೆಗಾಗಿ ಸ್ನಾನಗೃಹ ಹಾಗೂ ಶೌಚಾಲಯ ನಿರ್ಮಾಣ ಮಾಡಲು ನಗರ ಸಭೆ ಆಯುಕ್ತರು ಮತ್ತು ಅಧಿಕಾರಿಗಳು ಮುಂದಾ ಗಿದ್ದಾರೆ. ಈಗಾಗಲೇ ನಗರಸಭೆ ಆಯುಕ್ತ ರಾಮ ದಾಸ್‌ ಮತ್ತು ಸಿಬ್ಬಂದಿ ಶಾಲೆಯ ಮೈದಾನದಲ್ಲಿ 30/40 ಅಡಿ ಜಾಗವನ್ನು ಶೌಚಾಲಯ ನಿರ್ಮಾಣ ಕ್ಕಾಗಿ ಗುರುತಿಸಿದ್ದಾರೆ.

ಶೈಕ್ಷಣಿಕ ವಾತಾವರಣವೇ ಕಲುಷಿತವಾಗಲಿದೆ: ಇಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾದಲ್ಲಿ ಶಾಲೆಯ ಶೈಕ್ಷಣಿಕ ವಾತಾವರಣವೇ ಕಲುಷಿತವಾಗ ಲಿದೆ ಎಂದು ಎಸ್‌ಡಿಎಂಸಿ ಸದಸ್ಯರು, ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಹಿರಿಯ ಸಾಹಿತಿಗಳಾದ ಡಾ. ಹನೂರು ಕೃಷ್ಣಮೂರ್ತಿ ಮತ್ತು ಪ್ರೊ. ಜಿ.ಎಸ್‌. ಜಯದೇವ್‌ ಸೇರಿದಂತೆ ಚಿಂತಕರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.

ಪಾರಂಪರಿಕ ಶೈಲಿಯ ಕಟ್ಟಡ: ಸರ್ಕಾರಿ ಪೇಟೆ ಹಿರಿಯ ಪ್ರಾಥಮಿಕ ಶಾಲೆಯು ಶತಮಾನದಾಟಿದ ಶಾಲೆಯಾಗಿದ್ದು, ಪಾರಂಪರಿಕ ಶೈಲಿಯ ಕಟ್ಟಡಗಳ ನ್ನೊಳಗೊಂಡ, ವಿಶಾಲ ಮೈದಾನವನ್ನೂ ಹೊಂದಿರುವ ಈ ಶಾಲೆಯು ನಗರದ ಹೃದಯ ಭಾಗದಲ್ಲಿರುವುದು ಇದರ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ದೂರದೃಷ್ಟಿ ಯುಳ್ಳ ತಾವು ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಇಂಟ್ಯಾಕ್‌ ಸಂಸ್ಥೆಯ ಮೂಲಕ ಪಾರಂಪರಿಕ ಶೈಲಿ ಯಲ್ಲೇ ಪುನರ್‌ನಿರ್ಮಾಣ ಮಾಡಿಸುವ ಪ್ರಯತ್ನದಲ್ಲಿ ದ್ದೀರಿ ಎಂದು ಪತ್ರಿಕೆಗಳು ವರದಿ ಮಾಡಿವೆ. ತಮ್ಮ ಈ ಶ್ಲಾಘನೀಯ ಪ್ರಯತ್ನವನ್ನು ನಾವೆಲ್ಲರೂ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಆದರೆ ಸದರಿ ಶಾಲೆಯ ಆವರಣದಲ್ಲಿ ಹೈಟೆಕ್‌ ಸಾರ್ವಜನಿಕ ಶೌಚಾ ಲಯವೊಂದನ್ನು ನಿರ್ಮಿಸುವ, ಯೋಜನೆ ಯೊಂದು ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಯೆಂದು ಮತ್ತು ಈಗಾಗಲೇ ನಿರ್ಮಾಣ ಕಾರ್ಯಕ್ಕೆ ಸಂಬಂಧಪಟ್ಟ ಪೂರ್ವ ಸಿದ್ಧತೆಗಳನ್ನು ನಗರಸಭೆಯ ಪೌರಾಯುಕ್ತರು ಕೈಗೊಂಡಿದ್ದಾರೆಂದು ತಿಳಿದು ಬಂದಿದೆ.

ಅನ್ಯ ಉದ್ದೇಶಕ್ಕೆ ಶಾಲಾ ಆವರಣ ಬಳಸಬೇಡಿ: ಶತಮಾನ ದಾಟಿದ ಶಾಲೆಯ ಆವರಣವನ್ನು ಅನ್ಯ ಉದ್ದೇಶಗಳಿಗೆ ಹೀಗೆ ಬಳಸಲು ಪ್ರಾರಂಭಿಸಿದರೆ, ಶತಮಾನಗಳ ಕಾಲ ಸಮಾಜದ ಭಾಗವಾಗಿ ಬೆಳೆದು ಬಂದ ಈ ಶಿಕ್ಷಣ ಸಂಸ್ಥೆಯನ್ನು ನಾವೇ ನಾಶ ಮಾಡಿದ ಹಾಗೆ ಆಗುತ್ತದೆ. ಅಭಿವೃದ್ಧಿಯ ಹೆಸರಿನಲ್ಲಿ ಆಕ್ರಮಣಶೀಲವಾಗಿ ಸಂಭವಿಸುತ್ತಿರುವ ಪ್ರಗತಿ ಮಕ್ಕಳ ಶಿಕ್ಷಣವನ್ನು ಅಂಚಿಗೆ ತಳ್ಳುತ್ತಿದೆ.

ಈ ಸಂದರ್ಭದಲ್ಲಿ ತಾವು ದಯಮಾಡಿ ಶಾಲಾವರಣವನ್ನು ಶೌಚಾಲಯ ಇತ್ಯಾದಿ ಯಾವುದೇ ಅನ್ಯ ಉದ್ದೇಶಗಳಿಗೆ ಬಿಟ್ಟುಕೊಡದಂತೆ ತಡೆಯಾಜ್ಞೆ ಹೊರಡಿಸಬೇಕೆಂದು ಮತ್ತು ಶತಮಾನ ದಾಟಿದ ತಾಲೂಕಿನ ಅತಿಮುಖ್ಯವಾದ ಈ ಶಾಲೆಯನ್ನು ಪುನರುಜ್ಜೀವನಗೊಳಿಸಲು ತೀವ್ರ ಕ್ರಮಗಳನ್ನು ಕೈಗೊಳ್ಳಬೇಕೆಂದ ಈ ಮೂಲಕ ಕೋರುತ್ತೇವೆ ಎಂಬ ಪತ್ರವನ್ನು ಬರೆದಿದ್ದಾರೆ.

ಈ ಪತ್ರಕ್ಕೆ ಹನೂರು ಕೃಷ್ಣಮೂರ್ತಿ ಮತ್ತು ಜಿಎಸ್‌ ಜಯದೇವ್‌ ಅವರಲ್ಲದೇ, ರಂಗಕರ್ಮಿ ಕೆ. ವೆಂಕಟರಾಜು, ಸಾಹಿತಿ ಸೋಮಶೇಖರ ಬಿಸಲವಾಡಿ, ಗಾಯಕ ಸಿ.ಎಂ. ನರಸಿಂಹಮೂರ್ತಿ, ಮುಖ್ಯ ಶಿಕ್ಷಕ ನಾಗೇಂದ್ರ, ಶಿಕ್ಷಕಿ ಸುನೀತಮ್ಮ, ಪರಿಸರವಾದಿ ಡಿ.ಎಸ್‌. ದೊರೆಸ್ವಾಮಿ, ಹಿರಿಯ ಪತ್ರಕರ್ತ ಅಬ್ರಹಾಂ ಡಿಸಿಲ್ವ, ರಂಗನಿರ್ದೇಶಕಿ ಚಿತ್ರಾ, ನಳಿನಿ ವೆಂಕಟರಾಜು ಮತ್ತಿತರರು ಸಹಿ ಹಾಕಿ ಬೆಂಬಲ ಸೂಚಿಸಿದ್ದಾರೆ.

ಟಾಪ್ ನ್ಯೂಸ್

bCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

1-rava

Vote ನೀಡದವರಿಗೆ ತೆರಿಗೆ ಹೆಚ್ಚು ಮಾಡಿ: ನಟ ಪರೇಶ್‌ ರಾವಲ್‌ ಸಲಹೆ

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

1-asasa

LS Election; 5ನೇ ಹಂತದಲ್ಲಿ ಶೇ.58.96 ಮತದಾನ:TMC ಮತ್ತು BJP ನಡುವೆ ವಿವಿಧೆಡೆ ಗಲಾಟೆ

1-asaaasas

Dalai Lama ವಿರುದ್ಧ ಅವಹೇಳನ: ಕಂಗನಾ ವಿರುದ್ಧ ಕಪ್ಪು ಬಾವುಟ

kejriwal

AAP ವಿದೇಶಿ ದೇಣಿಗೆ: ED ದೂರು ಪಿತೂರಿ ಎಂದ ಕೇಜ್ರಿವಾಲ್‌ ಪಕ್ಷ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆBandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Bandipur: ಚಿಕಿತ್ಸೆಗೆ ಸ್ಪಂದಿಸದೇ ಅಸುನೀಗಿದ ಹೆಣ್ಣಾನೆ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Elephant Census; ಮೊದಲ ಬಾರಿಗೆ ದಕ್ಷಿಣದ ರಾಜ್ಯಗಳ ಗಡಿ ಪ್ರದೇಶಗಳಲ್ಲಿ ಆನೆ ಗಣತಿ

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ ಬಲಿಯಾದವು 10ಕುರಿಗಳು!

Dog Attack ಗುಂಡ್ಲುಪೇಟೆ: ನಾಯಿಗಳ ದಾಳಿಗೆ 10 ಕುರಿಗಳು ಸಾವು

1-qeqwqew

Gundlupete: ಕೊಳೆತ ಸ್ಥಿತಿಯಲ್ಲಿ ಹುಲಿಯ ಮೃತ ದೇಹ ಪತ್ತೆ

1-wqewqe

Gundlupete; ಓವರ್ ಟೇಕ್ ಭರದಲ್ಲಿ ಅಪಘಾತ: ಬೈಕ್ ಸವಾರ ಮೃತ್ಯು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

train-track

Train Drivers Association; ಆನೆ ಹಳಿ ದಾಟುವಾಗ ರೈಲು ನಿಲುಗಡೆ ಅಸಾಧ್ಯ

bCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿCongress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

Congress ಶಾಸಕರಿಂದಲೇ ಶಿಂಧೆ ಮಾದರಿ: ಬಿಜೆಪಿ

1-rava

Vote ನೀಡದವರಿಗೆ ತೆರಿಗೆ ಹೆಚ್ಚು ಮಾಡಿ: ನಟ ಪರೇಶ್‌ ರಾವಲ್‌ ಸಲಹೆ

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

1-asasa

LS Election; 5ನೇ ಹಂತದಲ್ಲಿ ಶೇ.58.96 ಮತದಾನ:TMC ಮತ್ತು BJP ನಡುವೆ ವಿವಿಧೆಡೆ ಗಲಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.