ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷೆ: ಸಚಿವ ಕೃಷ್ಣ ಬೈರೇಗೌಡ

ಶೀಘ್ರ ಐಎಂಡಿಯಿಂದ ಸ್ಪಷ್ಟ ಮುನ್ಸೂಚನೆ

Team Udayavani, Mar 25, 2024, 10:37 PM IST

ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷೆ: ಸಚಿವ ಕೃಷ್ಣ ಬೈರೇಗೌಡ

ಬೆಂಗಳೂರು: ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಬರುವ ನಿರೀಕ್ಷೆಯಿದ್ದು ಮಾ.29 ಅಥವಾ 30ರಂದು ಭಾರತೀಯ ಹವಾಮಾನ ಇಲಾಖೆಯ ವರದಿ ಬಂದ ಬಳಿಕ ಸ್ಪಷ್ಟ ಮುನ್ಸೂಚನೆ ಸಿಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದಿಂದ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರಕಾರ ತಕರಾರು ಅರ್ಜಿ ಸಲ್ಲಿಸಿದ್ದು, ಸಮರ್ಪಕ ದಾಖಲೆಗಳ ಸಮೇತ ವಾದ ಮಂಡನೆ ಮಾಡುತ್ತೇವೆ. ಸದ್ಯಕ್ಕೆ ರಾಜ್ಯ ಸರಕಾರದಿಂದಲೇ ಬರ ನಿರ್ವಹಣೆಯನ್ನು ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಅಷ್ಟೇನೂ ಸಮಸ್ಯೆ ಆಗಿಲ್ಲ. ಸಮಸ್ಯೆ ಇರುವೆಡೆ ಟ್ಯಾಂಕರ್‌ ಮೂಲಕ ನೀರು ಕೊಡಲಾಗುತ್ತಿದ್ದು ನಗರ ಪ್ರದೇಶದಲ್ಲಿ ಸಮಸ್ಯೆ ಬಿಗಡಾಯಿಸುತ್ತಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಗೋಶಾಲೆಗಳನ್ನು ತೆರೆದಿದ್ದು, ಅಗತ್ಯವಿರುವೆಡೆ ಮೇವು ಬ್ಯಾಂಕ್‌ ನಿರ್ಮಾಣಕ್ಕೆ ಅನುಮತಿ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

ಇಷ್ಟು ದಿನ ಪೆಸಿಫಿಕ್‌ ಮಹಾಸಾಗರದ ಮೇಲ್ಮೆ„ ಉಷ್ಣಾಂಶ ಹೆಚ್ಚಿ ಎಲ್‌ನಿನೋ ಪರಿಣಾಮದಿಂದಾಗಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಈಗ ಸಮುದ್ರದ ಮೇಲ್ಮೆ„ ಉಷ್ಣಾಂಶ ತಗ್ಗಿ ಎಲ್‌ ನಿನೋ ಪರಿಣಾಮದಿಂದ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಈ ಬಗ್ಗೆ ಅಮೆರಿಕ, ಯೂರೋಪ್‌ ಸಹಿತ ಹಲವು ರಾಷ್ಟ್ರಗಳು ವೈಜ್ಞಾನಿಕ ಅಧ್ಯಯನ ಕೈಗೊಂಡಿದ್ದು, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಕೊಡುವ ಮುನ್ಸೂಚನೆಯೂ ಆಶಾದಾಯಕವಾಗಿ ಇರಲಿದೆ ಎಂದು ನಿರೀಕ್ಷಿಸಿದ್ದೇವೆ ಎಂದು ವಿವರಿಸಿದರು.

ಡಿಎಂಕೆ ಪ್ರಣಾಳಿಕೆಯಲ್ಲಿ ಮೇಕೆದಾಟು ಪ್ರಸ್ತಾವ: ಶೀಘ್ರ ಸಭೆ
ಕರ್ನಾಟಕದಲ್ಲಿ ಮೇಕೆದಾಟು ಯೋಜನೆ ಜಾರಿಗೆ ಬಿಡುವುದಿಲ್ಲ ಎಂಬ ಡಿಎಂಕೆ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಮ್ಮ ಪಕ್ಷದ ಅಧ್ಯಕ್ಷ ಹಾಗೂ ರಾಜ್ಯದ ಜಲಸಂಪನ್ಮೂಲ ಸಚಿವರೂ ಆಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಶೀಘ್ರದಲ್ಲೇ ನಿರ್ಧಾರ ತಿಳಿಸುತ್ತಾರೆ ಎಂದಷ್ಟೇ ಹೇಳಿದರು.

ಮೇಕೆದಾಟು ಯೋಜನೆಯೇ ಅವೈಜ್ಞಾನಿಕ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನೀರಾವರಿ ಯೋಜನೆಗಳೇ ಅವೈಜ್ಞಾನಿಕ ಎನ್ನುವವರಿದ್ದಾರೆ. ನರ್ಮದಾ ಯೋಜನೆಗೆ ಅನೇಕರು ಪ್ರತಿಭಟಿಸಿದ್ದುಂಟು. ಮೇಧಾ ಪಾಟ್ಕರ್‌ ಅವರು ದೊಡ್ಡ ಹೋರಾಟವನ್ನೇ ಮಾಡಿದ್ದಾರೆ. ಅರಣ್ಯ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬೇಕೆಂದಾಗಲೂ ಇಂತಹ ಹೋರಾಟಗಳು ನಡೆದಿವೆ. ಪರಿಸರ ಹಾಗೂ ಮನುಷ್ಯನ ಆವಶ್ಯಕತೆಯ ಪೂರೈಕೆಯನ್ನು ಸರಿದೂಗಿಸಿಕೊಂಡು ಹೋಗಬೇಕಿದೆ. ಬೆಂಗಳೂರು ಬೆಳೆದಿರುವುದೂ ಅವೈಜ್ಞಾನಿಕ ಎನ್ನುತ್ತಾರೆ. ಆದರೆ ಜನರ ಆವಶ್ಯಕತೆ ಪೂರೈಸಲೇಬೇಕಿದೆ ಎಂದರು.

ಟಾಪ್ ನ್ಯೂಸ್

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

Siddaramaiah ಎಸ್‌ಐಟಿ ಮೇಲೆ ನಂಬಿಕೆಯಿಡಿ, ಸಿಬಿಐ ತನಿಖೆ ಬೇಕಿಲ್ಲ

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

SSLC Exam Result ಸಂಭ್ರಮಿಸಲು ವಿದ್ಯಾರ್ಥಿಯೇ ಇರಲಿಲ್ಲ!

ವಿವಾಹ ನಿಶ್ಚಿತಾರ್ಥ ಕಳೆದು ವಾಪಸಾಗುತ್ತಿದ್ದಾಗ ವಾಹನ ಅಪಘಾತದಲ್ಲಿ ವರನ ತಂದೆ ಸಾವು

Kasaragod ವಾಹನ ಅಪಘಾತ: ವರನ ತಂದೆ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kapu ದಿಢೀರ್‌ ಅನಾರೋಗ್ಯ; ಬಾಲಕಿ ಸಾವು

Kollur ಯುವತಿ ಮೇಲೆ ಅತ್ಯಾಚಾರ; ದೂರು

Kollur ಯುವತಿ ಮೇಲೆ ಅತ್ಯಾಚಾರ; ದೂರು

1-wqeqwew

IPL; ಚೆನ್ನೈ ವಿರುದ್ಧ ಅಬ್ಬರ; ಗುಜರಾತ್ ಪ್ಲೇ ಆಫ್ ಆಸೆ ಜೇವಂತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.