ಮಧ್ಯಪ್ರದೇಶ: ಕೊಳವೆ ಬಾವಿಗೆ ಬಿದ್ದಿದ್ದ 6 ವರ್ಷದ ಮಗು ಸಾವು
Team Udayavani, Apr 15, 2024, 12:34 AM IST
ಭೋಪಾಲ್: ಮಧ್ಯಪ್ರದೇಶದ ರೀವಾ ಜಿಲ್ಲೆಯಲ್ಲಿ ಶುಕ್ರವಾರ ಆಟವಾಡುವ ವೇಳೆ ಕೊಳವೆ ಬಾವಿಗೆ ಬಿದ್ದಿದ್ದ 6 ವರ್ಷದ ಬಾಲಕ ಮೃತಪಟ್ಟಿದ್ದಾನೆ. 40 ಅಡಿ ಆಳದಲ್ಲಿ ಸಿಲು ಕಿದ್ದ ಬಾಲಕಕನ್ನು ರಕ್ಷಿಸಲು ಎನ್ಡಿಆರ್ಎಫ್ ಜಿಲ್ಲಾಡಳಿತ ವತಿಯಿಂದ ಜಂಟಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಡಿದಾದ ಜಾಗದಲ್ಲಿ ಬಾಲಕನು ಸಿಲುಕಿದ್ದರಿಂದ 40 ಗಂಟೆಗಳ ಹರಸಾಹಸದ ನಡುವೆಯೂ ಆತನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.