ಒಂದು ಮರೆಯಲಾಗದ ಕತೆ!


Team Udayavani, Feb 9, 2017, 3:45 AM IST

kathe.jpg

ನಾನು ರೈಲಿನ ಮೊದಲ ಬೋಗಿಗೆ ಜಿಗಿದೆ. ನನ್ನ ಗೆಳೆಯರು ರಾಮನ್‌ ಹಾಗೂ ಶಾಮನ್‌ ನನ್ನನ್ನು ಹಿಂಬಾಲಿಸಿದರು. ಸುತ್ತಮುತ್ತ ದಿಟ್ಟಿಸಿದೆ, ಪ್ರಯಾಣಿಕರು ತಮ್ಮ ಪಾಡಿಗೆ ತಾವಿದ್ದರು, ಹೆಚ್ಚಿನ ಸದ್ದುಗದ್ದಲ ಇರಲಿಲ್ಲ. ಈ ಸ್ಥಳ ಸೇಫ್ ಆಗಿದೆ ಅನಿಸಿ ನೆಮ್ಮದಿಯ ನಿಟ್ಟುಸಿರುಬಿಟ್ಟೆ. ಆದರೆ ನನ್ನ ಈ ನಿರಾಳತೆ ಹೆಚ್ಚು ಸಮಯ ಉಳಿಯಲಿಲ್ಲ. ಭಾಸ್ಕರ್‌ ಆ ಕಡೆಯಿಂದ ಬರುತ್ತಿದ್ದರು. ಭಾಸ್ಕರ್‌ ಟಿ.ಟಿ.ಇ, ಅಂದರೆ ರೈಲ್‌ನಲ್ಲಿ ಟಿಕೆಟ್‌ ಪರೀಕ್ಷಿಸುವ ವ್ಯಕ್ತಿ. ಅವರು ಇನ್ನೊಂದು ಬೋಗಿಯಿಂದ ಈ ಬೋಗಿಯ ಕಡೆಗೇ ಬರುತ್ತಿದ್ದರು. 

“ಥೂ, ಯಾವ ಕಡೆಯಿಂದ ಬರಿ¤ದ್ದಾರೆ ಅವ್ರು?’ ರಾಮನ್‌ ಅಸಹನೆಯಿಂದ ಪಿಸುಗುಟ್ಟಿದ.
“ನಂಗೇನು ಗೊತ್ತು, ಬರಿ¤ದ್ದಾರೆ ಅಂತ ಹೇಳಿದ್ದು ಅಜಿತ್‌ ತಾನೆ, ಅವನನ್ನೇ ಕೇಳು’ ಹೊರಗೆ ಫ್ಲಾಟ್‌ಫಾರ್ಮ್ ಕಡೆಗೆ ಇಣುಕುತ್ತ ಹೊರಗೆ ಜಿಗಿಯಲು ಅವಕಾಶ ಇದೆಯಾ ಅಂತ ನೋಡ್ತಿದ್ದ ಶಾಮನ್‌.

” ಶ್ಯಾಮ್‌ ಹೊರಗೆ ಇಣುಕಬೇಡ, ರೈಲಿನ ವೇಗ ಹೆಚ್ಚಾಗುತ್ತಿದೆ, ಈಗ ಹೊರಗಿಣುಕಿದರೆ ಯಾವ ಪ್ರಯೋಜನವೂ ಇಲ್ಲ. ಹೊರಗೆ ಜಿಗಿಯಲು ಪ್ರಯತ್ನಿಸಬೇಡ, ಅಪಾಯ’ ಅಂದೆ. 

“ನಾವು ಈ ಕೋಚ್‌ಗೆ ಬಂದಿದ್ದನ್ನು ಬಹುಶಃ ಆ ಟಿಟಿಇ ನೋಡಿರ್ಬೇಕು, ಅದಕ್ಕೇ ನೇರ ಈ ಕಡೆ ಬರಿ¤ದ್ದಾರೆ’ ಅಂದ ಶ್ಯಾಮ್‌
“ಫ್ಲಾಟ್‌ಫಾರ್ಮ್ನಲ್ಲಿ ಅಷ್ಟು ನೋಡಿದರೂ ಕಾಣಲಿಲ್ಲ, ಈಗ ಇದ್ದಕ್ಕಿದ್ದ ಹಾಗೆ ಎಲ್ಲಿಂದ ಪ್ರತ್ಯಕ್ಷ ಆದ್ರಪ್ಪ?’ ರಾಮನ್‌ ಕೇಳಿದ.
“ಇವತ್ತು ಬೆಳಗ್ಗಿನ ಟಿಕೆಟ್‌ ಹಣ ಉಳಿಸಿದ್ದೇವೆ ರಾಮನ್‌. ಈಗ ಬೆಳಗಿನದ್ದೂ ಸೇರಿಸಿ ದಂಡ ಕಟ್ಟಬೇಕಾಗುತ್ತೋ ಏನೋ’ ಅಂದೆ.

“ಛೇ, ಎಂಥ ದುರಾದೃಷ್ಟ’ ಅಂದ ರಾಮನ್‌.
ಇದೇ ಸಮಯಕ್ಕೆ ಭಾಸ್ಕರ್‌ ಪ್ರಯಣಿಕರ ಟಿಕೆಟ್‌ಗಳನ್ನು ಪರೀಕ್ಷಿಸತೊಡಗಿದರು. 
“ನೋಡಿ ನೋಡಿ, ಈ ಕಡೆಗೇ ಬರಿ¤ದ್ದಾರೆ, ಈ ಸಲ ಹೇಗಾದ್ರೂ ತಪ್ಪಿಸಿಕೊಳ್ಳಬೇಕು. ನಾವೀಗ ಸೋತುಹೋದ ಹಾಗೆ ಜೋಲು ಮೋರೆ ಹಾಕಿ ನಿಲ್ಲೋಣ. ಆಗ ನಮ್ಮ ಕಡೆ ಸ್ವಲ್ಪ ಕರುಣೆ ತೋರಿಸಿದರೂ ತೋರಿಸಬಹುದು’ ಅಂದೆ.
ಉಳಿದ ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸಿ ನಮ್ಮತ್ತ ಬರಲು ಭಾಸ್ಕರ್‌ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. 
“ಹುಡುಗ್ರಾ, ನಿಮ್ಮ ಟಿಕೆಟ್‌ ತೋರಿಸಿ’ ಅಂದರು ಭಾಸ್ಕರ್‌.

“ಸಾರಿ ಸಾರ್‌, ನಾನು ರೈಲಿಗೆ ಹತ್ತುವಾಗ ನೂಕುನೂಗ್ಗುಲಿತ್ತು. ಟಿಕೆಟ್‌ ಎಲ್ಲೋ ಕೆಳಬಿದ್ದಿರಬೇಕು, ಆಮೇಲೆ ಎಷ್ಟು ಹುಡುಕಿದರೂ ಸಿಗಲಿಲ್ಲ’ ಅಂದೆ.

“ಸಾರ್‌, ನನ್ನ ಟಿಕೆಟೇ ಅವನ ಜೇಬಿನಲ್ಲಿತ್ತು. ನನ್ನ ಜೇಬು ಹರಿದಿದ್ದ ಕಾರಣ, ಅವನ ಬಳಿ ಟಿಕೆಟ್‌ ಕೊಟ್ಟಿದ್ದೆ’ ಅಂದ ರಾಮನ್‌ ಅವನ ಹರಿದ ಜೇಬನ್ನು ತೋರಿಸಿದ.

“ನನ್ನ ಬಟ್ಟೆಗೆ ಜೇಬುಗಳೇ ಇಲ್ಲ. ನಾನೂ ನನ್ನ ಟಿಕೆಟ್‌ನ್ನು ಅವನ ಬಳಿಯೇ ಇಟ್ಟುಕೋ ಅಂದಿದ್ದೆ’ ಅಂದ ಶ್ಯಾಮ್‌ ಸೋತ ದನಿಯಲ್ಲಿ.

“ನೀವು ನಿಜ ಹೇಳ್ತಿದಿರೇನ್ರೊà, ಸತ್ಯವಾಗಿಯೂ ನೀವು ಟಿಕೆಟ್‌ ತಗೊಂಡು ಆಮೇಲೆ ಕಳ್ಕೊಂಡ್ರಾ?’ ಭಾಸ್ಕರ್‌ ಕೇಳಿದರು.

“ಖಂಡಿತಾ ಸಾರ್‌, ನಾವು ಯಾವತ್ತೂ ಸುಳ್ಳು ಹೇಳಲ್ಲ’ ಅಂತ ಎಲ್ಲರ ಪರವಾಗಿ ಖಚಿತ ದನಿಯಲ್ಲಿ ಹೇಳಿದೆ. 
“ಆದರೆ ಟಿಟಿಇ ಒಬ್ರನ್ನು ಬಿಟ್ಟು, ಅದೂ ಅವರು ಟಿಕೆಟ್‌ ಪರೀಕ್ಷಿಸುವ ಸಂದರ್ಭವನ್ನು ಹೊರತುಪಡಿಸಿ! ಉಳಿದ ಸಮಯದಲ್ಲಿ ನೀವು ಸತ್ಯವನ್ನೇ ಹೇಳಿರಬಹುದು, ಯಾರಿಗೊತ್ತು’ ಅಂದ ಅವರ ದನಿಯಲ್ಲಿ ವ್ಯಂಗ್ಯವಿತ್ತು.
“ಇಲ್ಲಾ ಸಾರ್‌, ನಾನು ಹೇಳಿದ್ದು ಖಂಡಿತ ಸುಳ್ಳಲ್ಲ. ನಾವು ಮೂವರೂ ಹೇಳಿದ್ದು ಸತ್ಯವನ್ನೇ, ನಿಜಕ್ಕೂ ನಮ್ಮ ಟಿಕೆಟ್‌ ಕಳೆದುಹೋಗಿದೆ’ ಅಂದೆ.

“ಪ್ರತೀ ಸಲ ನಾನು ಚೆಕಿಂಗ್‌ಗೆ ಬರುವಾಗಲೂ ಯಾಕೆ ಹಾಗಾಗುತ್ತೆ? ಹುಂ, ಹೇಳಿ’ ಅಂದರು ನಿಷ್ಠುರ ದನಿಯಲ್ಲಿ.
“ಯಾಕಂದರೆ ನಾವು ಮಕ್ಕಳಲ್ವಾ ಸಾರ್‌, ನಮಗೆ ಟಿಕೆಟ್‌ನ್ನು ದೊಡ್ಡವರ ಹಾಗೆ ಜೋಪಾನವಿಡಲು ಬರುವುದಿಲ್ಲ. ಹಾಗಾಗಿ ಬಹಳ ಬೇಗ ಟಿಕೆಟ್‌ನ° ಕಳೆದುಕೊಳ್ಳುತ್ತೇವೆ’ ಸಣ್ಣ ನಗುವಲ್ಲಿ ಸಮರ್ಥಿಸಿಕೊಳ್ಳಲು ಯತ್ನಿಸಿದೆ. 
“ಓಹೋ, ಹಾಗೇನು? ನಿಮಗೆ ಟಿಕೆಟ್‌ನ್ನು ಹೇಗೆ ಜೋಪಾನವಾಗಿಡಬೇಕು ಅಂತ ನಾನು ಕಲಿಸುತ್ತೇನೆ, ಈ ಪಾಠ ಕಲಿತರೆ ಇನ್ಯಾವತ್ತೂ ಟಿಕೆಟ್‌ ಕಳೆದುಕೊಳಲ್ಲ, ನೀವು’ ಅಂತ ಜೋರಾಗಿ ಕಿರುಚಿದರು. 

“ಈಗ ನೀವು ಮೂವರೂ ಹೋಗಿ ಆ ಮೂಲೆಯಲ್ಲಿ ಕುಳಿತುಕೊಳ್ಳಿ. ಎದ್ದರೆ ಹುಷಾರ್‌!’ 
ನಾನು ಪ್ರತಿಬಾರಿಯಂತೆ ನಾಟಕ ಮುಂದುವರಿಸಿ, ಮೂಲೆಹಿಡಿದು ಕೂತೆ. ಅವರಿಬ್ಬರೂ ನನ್ನನ್ನು ಹಿಂಬಾಲಿಸಿದರು. ಭಾಸ್ಕರ್‌ ನಮ್ಮನ್ನು ಹಿಡಿದಿರುವುದು ಇದೇ ಮೊದಲ ಸಲ ಏನಲ್ಲ. ಬಹಳ ಸಲ ಟಿಕೆಟ್‌ ಇಲ್ಲದೆ ಪ್ರಯಾಣಿಸಿದಾಗ ಅವರ ಕೈಗೆ ಸಿಕ್ಕಿಬಿದ್ದಿದ್ದೇವೆ. ಅವರು ಪ್ರತಿಬಾರಿಯೂ ನಮ್ಮನ್ನು ಮೂಲೆಯಲ್ಲಿ ಕೂರಿಸಿಬಿಡುತ್ತಿದ್ದರು. ನಮ್ಮ ಸ್ಟೇಶನ್‌ ಬಂದಾಗ, “ಹುಡುಗ್ರಾ, ಹೀಗೆ ಟಿಕೆಟ್‌ ಇಲ್ಲದೇ ಪ್ರಯಾಣ ಮಾಡಬಾರದು. ನಿಮಗೆ ಟಿಕೆಟ್‌ ತಗೊಂಡು ಪ್ರಯಾಣ ಮಾಡಲು ಏನು ಕಷ್ಟ? ಮುಂದಿನ ಸಲವೂ ನೀವು ಹೀಗೆ ಮಾಡಿದ್ರೆ ಖಂಡಿತವಾಗಿ ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ. ಈ ಸಲ ಒಂದು ಬಿಡುತ್ತೇನೆ, ಮುಂದಿನ ಸಲ ಮಾತ್ರ ಖಂಡಿತಾ ಬಿಡಲ್ಲ’ ಅಂದು ನಮ್ಮನ್ನು ಬಿಡುತ್ತಿದ್ದರು. 

ಎಂದಿನಂತೆ ಈ ಸಲವೂ ಅವರು ನಮ್ಮ ಸ್ಟೇಶನ್‌ ಬರುವಾಗ ಬಿಟ್ಟುಬಿಡುತ್ತಾರೆ ಅಂದುಕೊಂಡು ನೆಮ್ಮದಿಯಲ್ಲಿದ್ದೆ. 
ಆದರೆ ಈ ಸಲ ಮಾತ್ರ ಅವರು ಬಿಡಲಿಲ್ಲ. ನಮ್ಮ ಸ್ಟೇಶನ್‌ ಸಮೀಪಿಸಿದರೂ ಅವರು ಮೌನವಾಗಿಯೇ ಇದ್ದರು. ರೈಲು ನಮ್ಮ ಸ್ಟೇಶನ್‌ನಿಂದ ಹೊರಡುತ್ತಿರುವಾಗ ಚಡಪಡಿಕೆ ತಡೆಯಲಾರದೇ ಎದ್ದುನಿಂತೆ. 

“ಕುತ್ಕೊà’ ಭಾಸ್ಕರ್‌ ಅಬ್ಬರಿಸಿದರು.
“ಇಲ್ಲಿಂದ ಅಲ್ಲಾಡಬಾರದು, ನೀವು ಮೂವರ ತಂದೆಯ ಹೆಸರು ಮತ್ತು ಮನೆಯ ಅಡ್ರೆಸ್‌ ಹೇಳಿ’ ಅಂದರು. 
“ಪ್ಲೀಸ್‌ ಸಾರ್‌’ ನಾನು ಅಂಗಲಾಚತೊಡಗಿದೆ. “ಇದೊಂದು ಸಲ ಬಿಟ್ಟುಬಿಡಿ ಸಾರ್‌, ಮುಂದಿನ ಸಲ ಖಂಡಿತಾ ಟಿಕೆಟ್‌ ಇಲ್ಲದೆ ಪ್ರಯಾಣ ಮಾಡಲ್ಲ. ಟಿಕೆಟ್‌ ತಗೊಂಡ ಬಳಿಕ ಎಚ್ಚರಿಕೆಯಿಂದ ಇಟ್ಟುಕೊಳ್ಳುತ್ತೇನೆ. ಖಂಡಿತ ಕಳೆದುಕೊಳ್ಳುವುದಿಲ್ಲ’ 

“ಸಾರ್‌, ಇನ್ನೊಮ್ಮೆ ಹೀಗೆ ಮಾಡಲ್ಲ ಸಾರ್‌, ದಯವಿಟ್ಟು ಇದೊಂದು ಸಲ ಬಿಟ್ಟುಬಿಡಿ ಸಾರ್‌’ ಶ್ಯಾಮ ಗೋಗರೆದ. 
ಅಷ್ಟರಲ್ಲಿ ರೈಲು ನಿಧಾನಕ್ಕೆ ಸ್ಟೇಶನ್‌ ಬಿಟ್ಟು ಚಲಿಸಲಾರಂಭಿಸಿತು. ನಾವು ಮೂವರೂ ಭಯದಿಂದ ನಿಂತೆವು. “ಪ್ಲೀಸ್‌ ಸಾರ್‌, ರೈಲ್‌ ಹೊರಡ್ತಾ ಇದೆ, ಇದೊಂದು ಸಲ ..’ 

ಊಹೂಂ, ಅವರು ನಮ್ಮ ಗೋಗರೆತವನ್ನು ಕಿವಿಗೇ ಹಾಕಿಕೊಳ್ಳಲಿಲ್ಲ. ನಮ್ಮ ಮನೆಯ ಎಡ್ರೆಸ್‌ ಪಡೆದ ಬಳಿಕ ಉಳಿದ ಪ್ರಯಾಣಿಕರ ಟಿಕೆಟ್‌ ಪರೀಕ್ಷಿಸಲಾರಂಭಿಸಿದರು. 

“ಈ ಹುಡುಗರ ಮೇಲೆ ಸ್ವಲ್ಪ ಕಣ್ಣಿಟ್ಟಿರಿ. ಅವರು ಕೂತಲ್ಲಿಂದ ಎದ್ದರೆ ನನ್ನ ಕರೆಯಿರಿ’ ಎಂದವರು ಕಂಪಾರ್ಟ್‌ಮೆಂಟ್‌ನಿಂದ ಹೊರಹೋದರು. ಅಲ್ಲಿ ಸ್ಟೇಶನ್‌ ಮಾಸ್ಟರ್‌ ಹತ್ರ ಏನೋ ಹೇಳುತ್ತಿರುವುದು ಕಾಣಿಸುತ್ತಿತ್ತು. 
ನಮ್ಮ ದಿಗಿಲು ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಗುತ್ತಿತ್ತು. ರೈಲು ನಿಧಾನಕ್ಕೆ ವೇಗ ಪಡೆದುಕೊಳ್ಳುತ್ತಿತ್ತು!

( ಮುಂದುವರಿಯುವುದು)

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.