ವಿದೇಶ ಪ್ರವಾಸಕ್ಕೆ ತೆರಳುವ ಬಿಸಿಸಿಐ ಅಧಿಕಾರಿಗಳ ದಿನಭತ್ಯೆ 48 ಸಾವಿರ!

Team Udayavani, May 18, 2017, 3:45 AM IST

BCCI-750-18.jpg

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆಟಗಾರರ ವೇತನವಾಗಲೀ, ಅವರ ಜಾಹೀರಾತು ಮೊತ್ತವಾಗಲೀ ವಿಶ್ವದ ಹೆಸರಾಂತ ಕ್ರೀಡಾಪಟುಗಳಿಗೆ ಸಮನಾಗಿದೆ. ಆದರೆ ಭಾರತ ತಂಡದ ವಿದೇಶ ಪ್ರವಾಸವನ್ನಷ್ಟೇ ಗಮನದಲ್ಲಿಟ್ಟುಕೊಂಡರೆ ಈ ಕ್ರಿಕೆಟಿಗರಿಗಿಂತ ಬಿಸಿಸಿಐ ಪದಾಧಿಕಾರಿಗಳೇ ಹೆಚ್ಚು ಶ್ರೀಮಂತರು! ಹೇಗೆ ಎನ್ನುತ್ತೀರಾ? ಇಲ್ಲಿರುವ ಲೆಕ್ಕಾಚಾರವನ್ನು ಓದಿ, ನಿಮಗೆ ಆಶ್ಚರ್ಯವಾಗದಿದ್ದರೆ ಕೇಳಿ…

ವಿದೇಶ ಪ್ರವಾಸದ ತಂಡದ ಜೊತೆ ತೆರಳುವ ಬಿಸಿಸಿಐ ಅಧಿಕಾರಿಗಳಿಗೆ ಕೊಡುವ ದಿನಭತ್ಯೆ 48,000 ರೂ., ಅದೇ ಕ್ರಿಕೆಟಿಗರಿಗೆ ಬರೀ 8 ಸಾವಿರ ರೂ.! ಅದೂ ಪದಾಧಿಕಾರಿಗಳಿಗೆ ಬೇಕಾದ ವಿಮಾನ ಟಿಕೆಟ್‌, ಪಂಚತಾರಾ ಹೋಟೆಲ್‌ನಲ್ಲಿ ಕೊಠಡಿ, ಊಟ, ಓಡಾಟಕ್ಕಾಗಿ ವಾಹನ ಈ ಎಲ್ಲ ವ್ಯವಸ್ಥೆಗಳನ್ನು ಮಾಡಿಯೂ ಬಿಸಿಸಿಐ ಹೆಚ್ಚುವರಿಯಾಗಿ 48000 ರೂ. ನೀಡುತ್ತದೆ.

ಇದು ಭಾರತ ಕ್ರಿಕೆಟ್‌ ತಂಡದ ಕಥೆಯಾದರೆ ರಾಜ್ಯ ತಂಡಗಳ ಪದಾಧಿಕಾರಿಗಳ ದಿನ ಭತ್ಯೆಯೇನು ಕಡಿಮೆಯಿಲ್ಲ. ತಂಡದೊಂದಿಗೆ ತೆರಳುವ ಒಬ್ಬ ಪದಾಧಿಕಾರಿಗೆ 32,000 ರೂ. ನೀಡಲಾಗುತ್ತದೆ. ಆಟಗಾರನಿಗೆ ಸಿಗುವ ಮೊತ್ತ 6000 ರೂ. ಮಾತ್ರ. ಈ ವ್ಯತ್ಯಾಸವೇಕೆ ಎಂಬ ಪ್ರಶ್ನೆಗೆ ಉತ್ತರ, ಕ್ರಿಕೆಟಿಗರಿಗೆ ಪಂದ್ಯಶುಲ್ಕ ರೂಪದಲ್ಲಿ ಭರ್ಜರಿ ಹಣ ಸಿಗುತ್ತದೆ, ಆದರೆ ಪದಾಧಿಕಾರಿಗಳಿಗೆ ಅಂತಹ ಅವಕಾಶವಿಲ್ಲದಿರುವುದರಿಂದ ಅವರ ದಿನಭತ್ಯೆ ಹೆಚ್ಚಿಸಲಾಗಿದೆ!

ಇದನ್ನು ಬಿಸಿಸಿಐನೊಳಗಿನ ಕೆಲವರು ಪ್ರಶ್ನಿಸಿದ್ದು, ಅಷ್ಟೇಕೆ ಬೇಕು, ಕಡಿಮೆ ಮಾಡಿ ಎಂದು ಆಗ್ರಹಿಸಿದ್ದಾರೆ. ಪರಿಣಾಮ ಜೂ.1ರಿಂದ ಇಂಗ್ಲೆಂಡ್‌ನ‌ಲ್ಲಿ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಗೆ ತಂಡದೊಂದಿಗೆ ತೆರಳುವ ಪದಾಧಿಕಾರಿಗಳಿಗೆ ಹಣದ ಮೊತ್ತದಲ್ಲಿ ಅಲ್ಪ ಕಡಿತ ಮಾಡಿ 32,000 ರೂ.ಗಿಳಿಸುವ ಸಾಧ್ಯತೆಯಿದೆ.

ಟಾಪ್ ನ್ಯೂಸ್

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Revant Reddy

TG; ತೆಲಂಗಾಣದ ಸಂಕ್ಷಿಪ್ತ ರೂಪ ಇನ್ನು ಮುಂದೆ ‘ಟಿಎಸ್‌’ ಅಲ್ಲ!

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

1-wewewqe

Swimwear ಫ್ಯಾಶನ್‌ ಶೋ: ಮೊದಲ ಬಾರಿಗೆ ಸೌದಿಯಿಂದ ಅನುಮತಿ!

1-wqewewq

IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

1-wqewewq

IPL ವಿಚಿತ್ರ; ಎಲ್ಲ ಪಂದ್ಯ ಮುಗಿದ ಬಳಿಕ ನಾಯಕ ಪಾಂಡ್ಯಗೆ ಒಂದು ಪಂದ್ಯ ನಿಷೇಧ!

tennis

ಇಟಾಲಿಯನ್‌ ಓಪನ್‌ ಟೆನಿಸ್‌ : ಜರ್ರಿ-ಜ್ವೆರೇವ್‌ ನಡುವೆ ಫೈನಲ್‌

1-IPL

CSK ವಿರುದ್ಧ ಗೆದ್ದು ಪ್ಲೇ ಆಫ್ ಪ್ರವೇಶಿಸಿದ ಆರ್ ಸಿಬಿ; ಪ್ರಶಂಸೆಗಳ ಸುರಿಮಳೆ

badminton

ಥಾಯ್ಲೆಂಡ್‌ ಓಪನ್‌ : ಪ್ರಶಸ್ತಿ ಸುತ್ತಿಗೆ ಚಿರಾಗ್‌-ಸಾತ್ವಿಕ್‌

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Siddaramaiah ಸರಕಾರಕ್ಕೆ ನಾಳೆಗೆ 1ವರ್ಷ; ಸಂಭ್ರಮಾಚರಣೆಗೆ ಚುನಾವಣೆ ನೀತಿ ಸಂಹಿತೆ ಅಡ್ಡಿ

Revant Reddy

TG; ತೆಲಂಗಾಣದ ಸಂಕ್ಷಿಪ್ತ ರೂಪ ಇನ್ನು ಮುಂದೆ ‘ಟಿಎಸ್‌’ ಅಲ್ಲ!

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

Prajwal Revanna ಪತ್ತೆಗೆ ವಿತ್ತ ಅಸ್ತ್ರ ! ಬ್ಯಾಂಕ್‌ ವ್ಯವಹಾರ ಪರಿಶೀಲನೆ

1-wq-eeqeqwe

Kyrgyzstan:ಭಾರತೀಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ; ಪಾಕಿಸ್ಥಾನದ 3 ವಿದ್ಯಾರ್ಥಿಗಳ ಕೊಲೆ?

BCCI

T20 ವಿಶ್ವಕಪ್‌: ಮೇ 25ರಂದು ಭಾರತದ ಬಹುತೇಕ ಆಟಗಾರರ ಮೊದಲ ತಂಡ ನ್ಯೂಯಾರ್ಕ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.