ಪುರುಷ ಮತ್ತು ಮಹಿಳೆಯರಲ್ಲಿ ಲೈಂಗಿಕ ಅಸಾಮರ್ಥ್ಯ


Team Udayavani, Jul 16, 2017, 3:50 AM IST

Arogyavani.gif

ಪುರುಷ ಅಥವಾ ಅವನ ಸಂಗಾತಿ ಮಹಿಳೆಗೆ ಲೈಂಗಿಕ ಕ್ರಿಯೆಯಲ್ಲಿ ಸಂತೃಪ್ತಿಯನ್ನು ಹೊಂದಲು ತಡೆ ಉಂಟು ಮಾಡುವ ಯಾವುದೇ ದೈಹಿಕ ಅಥವಾ ಮಾನಸಿಕ ಸಮಸ್ಯೆಯನ್ನು ಲೈಂಗಿಕ ಅಸಾಮರ್ಥ್ಯ ಅಥವಾ ಸೆಕುÏವಲ್‌ ಡಿಸ್‌ಫ‌ಂಕ್ಷನ್‌ ಎಂದು ಕರೆಯುತ್ತಾರೆ. ಪುರುಷ ಮತ್ತು ಮಹಿಳೆಯರಲ್ಲಿ ಇದು ಯಾವುದೇ ವಯಸ್ಸಿನಲ್ಲಿ ಉಂಟಾಗಬಹುದು. ಆದರೆ, ಸಾಮಾನ್ಯವಾಗಿ ನಾಚಿಕೆ ಮತ್ತು ಸಾಂಸ್ಕೃತಿಕವಾದ ಕಾರಣಗಳಿಂದಾಗಿ ಮಹಿಳೆಯರು ಈ ತೊಂದರೆಯ ಪರಿಹಾರಕ್ಕೆ ವೈದ್ಯಕೀಯ ನೆರವು ಪಡೆದುಕೊಳ್ಳಲು ಇಚ್ಛಿಸುವುದಿಲ್ಲ. ಲೈಂಗಿಕ ಚಟುವಟಿಕೆಯು ವಯಸ್ಸು, ಆರೋಗ್ಯ ಸ್ಥಿತಿ ಮತ್ತು ಲಿಂಗಗಳಿಂದ ಪ್ರಭಾವಕ್ಕೊಳಪಡುತ್ತದೆ. ಹೀಗಾಗಿ ಜನರು ವಯಸ್ಸು ಹೆಚ್ಚುತ್ತ ಹೋದಂತೆ ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಉಂಟಾದಾಗ ಲೈಂಗಿಕ ಅಸಾಮರ್ಥ್ಯವನ್ನು ಅನುಭವಿಸುತ್ತಾರೆ. ಲೈಂಗಿಕ ಸಮಸ್ಯೆಗಳ ಕುರಿತು ನಮ್ಮಲ್ಲಿ ಅನೇಕ ತಪ್ಪು ಅಭಿಪ್ರಾಯಗಳು, ಅರಿವಿನ ಕೊರತೆ ಇದೆ. ಇದೇ ಕಾರಣದಿಂದಾಗಿ ಜನರು ನಿಯತಕಾಲಿಕಗಳಲ್ಲಿ, ಅಂತರ್ಜಾಲದಲ್ಲಿ ಕಂಡುಬರುವ ಜಾಹೀರಾತುಗಳ ಮೊರೆ ಹೊಗುವುದು ಸರ್ವೇಸಾಮಾನ್ಯವಾಗಿದೆ. 

ಪುರುಷ ಲೈಂಗಿಕ ಅಸಾಮರ್ಥ್ಯ: ಇದು ಎಲ್ಲ ವಯೋಮಾನದ ಪುರುಷರನ್ನೂ ಬಾಧಿಸಬಹುದು. ಆದರೆ, ವಯಸ್ಸು ಹೆಚ್ಚಿದಂತೆ ಇದು ಉಂಟಾಗುವುದು ಅಧಿಕ. ನಿಮಿರು ದೌರ್ಬಲ್ಯ (ಇರೆಕ್ಟೆ„ಲ್‌ ಡಿಸ್‌ಫ‌ಂಕ್ಷನ್‌ ), ಶೀಘ್ರ ಸ್ಖಲನ (ಪ್ರಿಮೆಚೂÂರ್‌ ಇಜಾಕ್ಯುಲೇಶನ್‌ ) ಮತ್ತು ಲೈಂಗಿಕಾಸಕ್ತಿಯ ಕೊರತೆ ಪುರುಷ ಲೈಂಗಿಕ ಅಸಾಮರ್ಥ್ಯಗಳಲ್ಲಿ ಮುಖ್ಯವಾದವುಗಳು. 

1. ನಿಮಿರು ದೌರ್ಬಲ್ಯ
ಲೈಂಗಿಕ ಸಂಭೋಗಕ್ಕೆ ಅಗತ್ಯವಾದ ಲೈಂಗಿಕ ನಿಮಿರುವಿಕೆ ಉಂಟಾಗದಿರುವುದು  ಅಥವಾ ಅದನ್ನು ಕಾಪಾಡಿಕೊಳ್ಳಲು ಸಾಧ್ಯವಾಗದಿರುವುದೇ ನಿಮಿರು ದೌರ್ಬಲ್ಯ. ಸಾಮಾನ್ಯ ಜನ ವರ್ಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡುಬರುವ ಇದು ಪುರುಷ ಲೈಂಗಿಕ ಅಸಾಮರ್ಥ್ಯಗಳಲ್ಲಿ ಅತಿ ಸಾಮಾನ್ಯವಾದುದು. ನಿಮಿರು ದೌರ್ಬಲ್ಯಕ್ಕೆ ಮುಖ್ಯವಾಗಿ ಮಾನಸಿಕ ತೊಂದರೆಗಳು (ಒತ್ತಡ, ಸಂಬಂಧದಲ್ಲಿ ಬಿಕ್ಕಟ್ಟು, ಖನ್ನತೆ, ಲೈಂಗಿಕ ಕಾರ್ಯನಿರ್ವಹಣೆಯ ಬಗ್ಗೆ ಆತಂಕ) ಕಾರಣವಿರಬಹುದು ಅಥವಾ ಲಕ್ವಾ, ಬೆನ್ನುಹುರಿಯ ಗಾಯ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ ಮಟ್ಟದಂತಹ ಕಾಯಿಲೆಗಳು ಕಾರಣವಾಗಿರಬಹುದು ಅಥವಾ ಬೊಜ್ಜನ್ನು ಉಂಟುಮಾಡುವಂತಹ ಮಿತಿಮೀರಿದ ಆಹಾರ ಸೇವನೆ, ಧೂಮಪಾನ, ಮದ್ಯಪಾನ ಮತ್ತು ದೈಹಿಕ ಚಟುವಟಿಕೆ, ವ್ಯಾಯಾಮದ ಕೊರತೆ ಕಾರಣವಾಗಿರಬಹುದು ಅಥವಾ ಅಧಿಕ ರಕ್ತದೊತ್ತಡ/ ಮಾನಸಿಕ ಸಮಸ್ಯೆಗಳ ಪರಿಹಾರಕ್ಕೆ ಸೇವಿಸುತ್ತಿರುವ ಔಷಧಿಗಳು ಕಾರಣವಾಗಬಹುದು. ನಿಮಿರು ದೌರ್ಬಲ್ಯ ಮತ್ತು ಹೃದ್ರೋಗಗಳು ಹಲವು ಸಮಾನ ಅಪಾಯಾಂಶಗಳನ್ನು ಹೊಂದಿವೆ. ಹೀಗಾಗಿ ನಿಮಿರು ದೌರ್ಬಲ್ಯವು ಭವಿಷ್ಯದಲ್ಲಿ ಕಾಣಿಸಿಕೊಳ್ಳಬಲ್ಲ ಹೃದ್ರೋಗದ ಮುನ್ಸೂಚನೆಯೂ ಆಗಿರಬಲ್ಲುದು. ಪ್ರಾಸ್ಟ್ರೇಟ್‌ ಗ್ರಂಥಿಯ ಸಮಸ್ಯೆಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಲ್ಲಿ ಆ ಬಳಿಕವೂ ನಿಮಿರುದೌರ್ಬಲ್ಯ ಕಾಣಿಸಿಕೊಳ್ಳಬಹುದು. ಕ್ಷಿಪ್ರಗತಿಯಲ್ಲಿ ಉಂಟಾಗುವ ನಿಮಿರುದೌರ್ಬಲ್ಯಕ್ಕೆ ಮಾನಸಿಕ ಸಮಸ್ಯೆಗಳು ಕಾರಣವಾಗಿರುತ್ತವೆ; ಇನ್ನೆಲ್ಲ ಸಂದರ್ಭಗಳಲ್ಲಿ ಅದು ನಿಧಾನವಾಗಿ ಹೆಚ್ಚುತ್ತದೆ. 

2. ಶೀಘ್ರ ಸ್ಖಲನ 
(ಪ್ರಿಮೆಚೂÂರ್‌ 
ಇಜಾಕ್ಯುಲೇಶನ್‌)

ಶೀಘ್ರ ಸ್ಖಲನವು ಒಂದು ಬಹುಸಾಮಾನ್ಯ ಲೈಂಗಿಕ ಸಮಸ್ಯೆಯಾಗಿದ್ದು, ಇಲ್ಲಿ ಪುರುಷನು ಲೈಂಗಿಕ ಸಂಪರ್ಕಕ್ಕೆ ಮುನ್ನವೇ ಅಥವಾ ಸಂಭೋಗಕ್ಕೆ ತೊಡಗಿದ ಒಂದು ನಿಮಿಷದ ಒಳಗಾಗಿ ಸ್ಖಲಿಸಿಬಿಡುತ್ತಾನೆ. ಎಲ್ಲ ಪುರುಷನೂ ಆಗೊಮ್ಮೆ ಈಗೊಮ್ಮೆ ಇದನ್ನು ಅನುಭವಿಸುತ್ತಾರೆ; ಆದರೆ, ಪದೇಪದೇ ಅಥವಾ ಪ್ರತೀ ಬಾರಿ ಸಂಭೋಗಿಸುವಾಗಲೂ ಶೀಘ್ರಸ್ಖಲನ ಉಂಟಾಗುತ್ತಿದ್ದು, ಹತಾಶೆ ಮತ್ತು ವಿಷಾದ ಉಂಟಾಗುತ್ತಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಪ್ರಾಯಃ ಸಾಂಸ್ಕೃತಿಕ ಕಾರಣಗಳಿಂದಾಗಿ ಪಶ್ಚಿಮದ ದೇಶಗಳಿಗಿಂತ ಪೌರಾತ್ಯ ದೇಶಗಳಲ್ಲಿ ಶೀಘ್ರಸ್ಖಲನದ ಕಾಣಿಸಿಕೊಳ್ಳುವಿಕೆ ಹೆಚ್ಚಾಗಿದೆ. ನಿಖರವಾದ ಕಾರಣಗಳು ಇನ್ನೂ ತಿಳಿದಿಲ್ಲವಾದರೂ, ಶೀಘ್ರ ಸ್ಖಲನ ಸಮಸ್ಯೆ ಹೊಂದಿರುವ ಶೇ.30ರಷ್ಟು ಮಂದಿಗೆ ನಿಮಿರು ದೌರ್ಬಲ್ಯದ ತೊಂದರೆಯೂ ಇರುತ್ತದೆ. 

3. ಲೈಂಗಿಕ ಅನಾಸಕ್ತಿ ಅಥವಾ ಕಾಮಾಸಕ್ತಿಯ ಕೊರತೆ
ಪುರುಷರ ಪೈಕಿ ಶೇ.5ರಿಂದ ಶೇ.15 ಮಂದಿಯಲ್ಲಿ ಕಾಮಾಸಕ್ತಿಯ ಕೊರತೆ ಉಂಟಾಗುತ್ತದೆ ಮತ್ತು ವಯಸ್ಸು ಹೆಚ್ಚಿದಂತೆ ಕಾಮಾಸಕ್ತಿಯೂ ಇಳಿಮುಖವಾಗುತ್ತದೆ ಮತ್ತು ಇನ್ನಿತರ ಲೈಂಗಿಕ ಸಮಸ್ಯೆಗಳ ಜತೆಗೂಡಿ ಉಂಟಾಗುತ್ತದೆ. ಲೈಂಗಿಕ ಆಸಕ್ತಿಯ ಕೊರತೆ ಕಾಣಿಸಿಕೊಳ್ಳುವಲ್ಲಿ ಮಾನಸಿಕ ಚಿಕಿತ್ಸೆಯ ಔಷಧಿಗಳ ಸೇವನೆ, ಮದ್ಯಪಾನ, ಖನ್ನತೆ, ಕೊಕೇನ್‌ ಇತ್ಯಾದಿ ಮಾದಕದ್ರವ್ಯ ವ್ಯಸನ, ಗಂಡು-ಹೆಣ್ಣು ಸಂಬಂಧದಲ್ಲಿ ಬಿಕ್ಕಟ್ಟು, ಮಧುಮೇಹ, ಮೂತ್ರಪಿಂಡ ಇತ್ಯಾದಿ ಕಾಯಿಲೆಗಳು ಹಾಗೂ ಪುರುಷ ಲೈಂಗಿಕ ಹಾರ್ಮೋನಿನ ಕೊರತೆ ಪ್ರಮುಖ ಪಾತ್ರ ವಹಿಸುತ್ತವೆ. 

ಪುರುಷ ಲೈಂಗಿಕ 
ಅಸಾಮರ್ಥ್ಯ – ತಪಾಸಣೆ

ಲೈಂಗಿಕ ಮತ್ತು ಮನಶಾÏಸ್ತ್ರೀಯ ವೈದ್ಯಕೀಯ ಚರಿತ್ರೆಗಳ ಪರಿಶೀಲನೆಯ ಬಳಿಕ ರೋಗಿಗಳು ರಕ್ತಕಣಗಳ ಸಂಖ್ಯೆ, ರಕ್ತದಲ್ಲಿಯ ಸಕ್ಕರೆಯ ಮಟ್ಟ, ಕೊಲೆಸ್ಟ್ರಾಲ್‌ ಮಟ್ಟ ತಪಾಸಣೆ, ಮೂತ್ರಪಿಂಡ ಮತ್ತು ಪಿತ್ತಕೋಶ ಕಾರ್ಯನಿರ್ವಹಣೆ ಪರೀಕ್ಷೆಯಂತಹ ನಿಯಮಿತ ಪ್ರಯೋಗಾಲಯ ಪರೀಕ್ಷೆಗಳಿಗೆ ಒಳಪಡಬೇಕು. ಜತೆಗೆ ರಕ್ತದಲ್ಲಿಯ ಟೆಸ್ಟೊಸ್ಟಿರಾನ್‌ ಪ್ರಮಾಣವನ್ನೂ ಪರೀಕ್ಷೆಗೊಳಪಡಿಸಬೇಕು. 

ಪುರುಷ ಲೈಂಗಿಕ 
ಅಸಾಮರ್ಥ್ಯ – ನಿರ್ವಹಣೆ

ಲೈಂಗಿಕ ಅಸಾಮರ್ಥ್ಯವನ್ನು ಅನುಭವಿಸುತ್ತಿರುವ ಪುರುಷ ರೋಗಿಗಳನ್ನು ಬಹುಶಾಸ್ತ್ರೀಯ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆಗೊಳಪಡಿಸುವುದು ಒಳ್ಳೆಯದು. ಇಲ್ಲಿ ರೋಗಿಗಳು ಲೈಂಗಿಕ ಚಿಕಿತ್ಸಾ ತಜ್ಞರಿಂದ ತಜ್ಞ ಸಲಹೆಗಳನ್ನು ಪಡೆಯಬಹುದಾಗಿದೆ. 

ಅಪಾಯಾಂಶಗಳನ್ನು ಗುರುತಿಸಿ ನಿಭಾಯಿಸುವುದು ಲೈಂಗಿಕ ಅಸಾಮರ್ಥ್ಯ ನಿರ್ವಹಣೆಯಲ್ಲಿ ಅತ್ಯಂತ ಪ್ರಮುಖವಾಗಿದೆ. ದಢೂತಿ ದೇಹವುಳ್ಳ ರೋಗಿಗಳು ಆರೋಗ್ಯಕರ ಆಹಾರಾಭ್ಯಾಸ ಪಾಲನೆ, ವ್ಯಾಯಾಮದಂತಹ ಜೀವನ ವಿಧಾನ ಬದಲಾವಣೆ ಕ್ರಮಗಳನ್ನು ಅನುಸರಿಸಬೇಕು. ಮದ್ಯಪಾನ ಮತ್ತು ಧೂಮಪಾನಗಳನ್ನು ತ್ಯಜಿಸಬೇಕು. ಅಧಿಕ ರಕ್ತದೊತ್ತಡ ಅಥವಾ ಮಾನಸಿಕ ಸಮಸ್ಯೆಗಳಿಗಾಗಿ ಔಷಧಿ ಸೇವನೆಯ ಬಳಿಕ ಈ ತೊಂದರೆ ಉಂಟಾಗಿರುವುದಾದರೆ, ಔಷಧಿಗಳನ್ನು ಬದಲಾಯಿಸಬೇಕಾಗುತ್ತದೆ. ಮಧುಮೇಹಿಗಳು ಮತ್ತು ಅಧಿಕ ರಕ್ತದೊತ್ತಡ ಉಳ್ಳವರು ತಮ್ಮ ರಕ್ತದಲ್ಲಿಯ ಸಕ್ಕರೆಯ ಅಂಶ ಹಾಗೂ ರಕ್ತದೊತ್ತಡ ನಿಯಂತ್ರಣದಲ್ಲಿ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಅಧಿಕ ಕೊಲೆಸ್ಟ್ರಾಲ್‌ ಹೊಂದಿರುವವರು ಆಹಾರ ಸೇವನೆಯಲ್ಲಿ ಮುನ್ನೆಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಹಾಗೂ ಸಮರ್ಪಕ ಔಷಧಿಗಳನ್ನು ಸೇವಿಸಬೇಕಾಗುತ್ತದೆ.

ಬಹುತೇಕ ಪ್ರಕರಣಗಳಲ್ಲಿ ಮನಶಾÏಸ್ತ್ರೀಯ ಆಪ್ತ ಸಮಾಲೋಚನೆ ಅಗತ್ಯವಾಗಿರುತ್ತದೆ. ಲೈಂಗಿಕ ಸಂಗಾತಿಯ ಜತೆಗೆ ಮಾತುಕತೆಯೂ ಮುಖ್ಯವಾಗಿದೆ. 

ಲೈಂಗಿಕ ಚಿಕಿತ್ಸಾ ತಜ್ಞರಷ್ಟೇ ಲೈಂಗಿಕ ಅಸಾಮರ್ಥ್ಯದಂತಹ ತೊಂದರೆಗಳಿಗೆ ಔಷಧೀಯ ಚಿಕಿತ್ಸೆಯನ್ನು ಆರಂಭಿಸಬೇಕು. ಹೃದ್ರೋಗ ಹೊಂದಿರುವವರು ಅಥವಾ ಅಧಿಕ ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿರುವವರಲ್ಲಿ ಲೈಂಗಿಕ ಚಿಕಿತ್ಸೆಯ ಔಷಧಿಗಳು ಗಂಭೀರ ಅಡ್ಡ ಪರಿಣಾಮಗಳನ್ನು ಉಂಟು ಮಾಡಬಲ್ಲವಾದ್ದರಿಂದ ಸ್ವಯಂ ವೈದ್ಯಕೀಯ ಅತ್ಯಂತ ಅಪಾಯಕಾರಿ, ಅದಕ್ಕೆ ಮುಂದಾಗಲೇ ಬಾರದು. ಶೀಘ್ರಸ್ಖಲನದ ತೊಂದರೆಯಿಂದ ಪಾರಾಗಲು ಸರಳ ಔಷಧೇತರ ತಂತ್ರಗಳಿವೆ – ತಜ್ಞರು ಇವನ್ನು ಕಲಿಸಿಕೊಡಬಲ್ಲರು. 
ಲೈಂಗಿಕ ಬಲ ಅಥವಾ ಸಾಮರ್ಥ್ಯವನ್ನು ವೃದ್ಧಿಸುವುದಾಗಿ ಹೇಳಿಕೊಳ್ಳುವ ಪೂರಕ ಆಹಾರಗಳ ಸೇವನೆಗೆ ಕಡ್ಡಾಯವಾಗಿ ಮುಂದಾಗಲೇ ಬಾರದು. ಅವುಗಳಲ್ಲಿ ನಕಲಿ ಅಥವಾ ಪರವಾನಿಗೆ ರಹಿತವಾದ ಹಾನಿಕರ ಅಂಶಗಳು ಇರುವುದು ಸಾಧ್ಯ. 

ಔಷಧಿಗಳಿಗೆ ಸ್ಪಂದಿಸದ ರೋಗಿಗಳಿಗೆ ಇಂಜೆಕ್ಷನ್‌ ಮತ್ತು ಇತರ ಉಪಕರಣಗಳ ಚಿಕಿತ್ಸೆಗಳಂತಹ ವಿಶೇಷ ಚಿಕಿತ್ಸೆಗಳನ್ನು ಒದಗಿಸುವ ಮೂಲಕ ಲೈಂಗಿಕ ಅಸಾಮರ್ಥ್ಯಕ್ಕೆ ಚಿಕಿತ್ಸೆ ನೀಡುವ ಆಯ್ಕೆಗಳು ಲಭ್ಯವಿವೆ. 

ಸ್ತ್ರೀ ಲೈಂಗಿಕ ಅಸಾಮರ್ಥ್ಯ 
(ಫಿಮೇಲ್‌ ಸೆಕುÏವಲ್‌ 
ಡಿಸ್‌ಫ‌ಂಕ್ಷನ್‌ – ಎಫ್ಎಸ್‌ಡಿ)

ಜಾಗತಿಕವಾಗಿ ಶೇ.40 ಮಂದಿ ಮಹಿಳೆಯರು ಲೈಂಗಿಕ ಸಮಸ್ಯೆಗಳನ್ನು ಹೊಂದಿರುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ ಲೈಂಗಿಕ ಅಸಾಮರ್ಥ್ಯವುಳ್ಳ ಸ್ತ್ರೀಯರು ನಿರ್ದಿಷ್ಟವಾಗಿ ಪ್ರಶ್ನಿಸದೆ ಇದ್ದರೆ ಈ ತೊಂದರೆಗಳ ಪರಿಹಾರಕ್ಕಾಗಿ ವೈದ್ಯಕೀಯ ನೆರವು ಪಡೆಯುವುದಿಲ್ಲವಾದ್ದರಿಂದ ದೇಶದಲ್ಲಿ ಲೈಂಗಿಕ ಅಸಾಮರ್ಥ್ಯದಿಂದ ಬಳಲುತ್ತಿರುವ ಸ್ತ್ರೀಯರ ಪ್ರಮಾಣ ಎಷ್ಟು ಎಂಬುದು ಖಚಿತವಾಗಿ ತಿಳಿದುಬರುತ್ತಿಲ್ಲ. ಗ್ರಾಮೀಣ ಮಹಿಳೆಯರು ಮತ್ತು ಅನಕ್ಷರಸ್ಥ ಮಹಿಳೆಯರಲ್ಲಿ ಲೈಂಗಿಕ ಆರೋಗ್ಯದ ಪ್ರಾಮುಖ್ಯದ ಬಗ್ಗೆ ಅರಿವೇ ಇರುವುದಿಲ್ಲ ಹಾಗೂ ಆ ಬಗ್ಗೆ ಹೇಳಿಕೊಳ್ಳಲು ಅವರು ಸಂಕೋಚವನ್ನೂ ಹೊಂದಿರುತ್ತಾರೆ. 

ಲೈಂಗಿಕ ಆಸಕ್ತಿಯ ಕೊರತೆ, ಸಂಭೋಗದ ಬಳಿಕ ತೃಪ್ತಿ ಹೊಂದದಿರುವಿಕೆ ಹಾಗೂ ಸಂಭೋಗ ಸಂದರ್ಭದಲ್ಲಿ ನೋವು ಸ್ತ್ರೀ ಲೈಂಗಿಕ ಅಸಾಮರ್ಥ್ಯದ ಪ್ರಮುಖ ವಿಧಗಳು. 

ವಯಸ್ಸು ಹೆಚ್ಚುತ್ತಿರುವಂತೆ ಅನೇಕ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತ ಹೋಗುತ್ತದೆ; ಆದರೆ ಇದು ಮಾನಸಿಕ ಒತ್ತಡ ಅಥವಾ ತೊಂದರೆಗಳ ಜತೆಗೆ ಸಂಬಂಧ ಹೊಂದಿರುವುದಿಲ್ಲ. ಸ್ತ್ರೀ ಹಾರ್ಮೋನ್‌ನ ಪ್ರಮಾಣದಲ್ಲಿ ಕುಸಿತವೂ ಈ ಸಮಸ್ಯೆಗೆ ಕೊಡುಗೆ ನೀಡುತ್ತದೆ. ಯುವ ವಯೋಮಾನದ ಸ್ತ್ರೀಯರಲ್ಲಿ ಲೈಂಗಿಕ ಅಸಾಮರ್ಥ್ಯಕ್ಕೆ ಕಾರಣಗಳು ಬಹುಮುಖೀಯಾಗಿರುತ್ತವೆ; ಇದು ಖನ್ನತೆ ಮತ್ತು ಆತಂಕಗಳನ್ನು ಉಂಟು ಮಾಡುವ ಒತ್ತಡದಿಂದ ಆಗಿರಬಹುದು ಅಥವಾ ಮನೆ ಮತ್ತು ನೌಕರಿ ಎಂಬ ಎರಡೆರಡು ಕಾರ್ಯಕ್ಷೇತ್ರಗಳಲ್ಲಿ ದಕ್ಷ ಕಾರ್ಯನಿರ್ವಹಣೆಯನ್ನು ಸಾಧಿಸುವ ನಿಟ್ಟಿನಲ್ಲಿ ತಲೆದೋರುವ ದಣಿವಿನಿಂದ ಆಗಿರಬಹುದು. ಪತಿ ಅಥವಾ ಲೈಂಗಿಕ ಜತೆಗಾರನ ಜತೆಗೆ ಇರುವ ಸಂಬಂಧವು ಸ್ತ್ರೀ ಅನುಭವಿಸುವ ಲೈಂಗಿಕ ತೃಪ್ತಿಯಲ್ಲಿ ಪ್ರಾಮುಖ್ಯ ಪಾತ್ರವನ್ನು ವಹಿಸುತ್ತದೆ.
 
ಪುರುಷರಂತೆ, ಸ್ತ್ರೀಯರಲ್ಲೂ, ಮಧುಮೇಹ ಇತ್ಯಾದಿಗಳಂತಹ ಆರೋಗ್ಯ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳಿಗೆ ತೆಗೆದುಕೊಳ್ಳುವ ಔಷಧಿಗಳ ಲೈಂಗಿಕ ಕಾರ್ಯಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟು ಮಾಡುತ್ತವೆ. ಬೊಜ್ಜು ಹಾಗೂ ದೇಹಾಕಾರ ಮತ್ತು ಸೌಂದರ್ಯವೂ ಲೈಂಗಿಕಾಸಕ್ತಿಯ ಕೊರತೆಯಲ್ಲಿ ಪಾತ್ರ ವಹಿಸಬಲ್ಲವು. ಗರ್ಭನಿರೋಧಕ ಗುಳಿಗೆಗಳು ಲೈಂಗಿಕ ಸಾಮರ್ಥ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಖಚಿತವಾಗಿ ಹೇಳಲಾಗದು. ಕೆಲವರಲ್ಲಿ ಅವು ಲೈಂಗಿಕಾಸಕ್ತಿಯನ್ನು ಕಡಿಮೆಗೊಳಿಸಿದರೆ ಇನ್ನು ಕೆಲವರಲ್ಲಿ ವೃದ್ಧಿಸಬಹುದು. 

ಲೈಂಗಿಕ ಸಂಭೋಗದ ಸಮಯದಲ್ಲಿ ಕೆಲವು ಮಹಿಳೆಯರು ನೋವು ಅನುಭವಿಸುತ್ತಾರೆ. ಇದು ಅವರ ಆರೋಗ್ಯ, ಆತ್ಮವಿಶ್ವಾಸ, ಜೀವನಮಟ್ಟ ಮತ್ತು ಉದ್ಯೋಗದಲ್ಲಿ ಉತ್ಪಾದಕತೆಯ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಈ ನೋವು ಯುವ ವಯೋಮಾನದ ಮಹಿಳೆಯರಲ್ಲಿ ಅಥವಾ ಋತುಚಕ್ರ ನಿಂತುಹೋಗಿರುವ ಹಿರಿಯ ಸ್ತ್ರೀಯರಲ್ಲಿ ಕಾಣಿಸಿಕೊಳ್ಳಬಹುದು. ಕೆಲವು ಮಹಿಳೆಯರಿಗೆ ಸಂಭೋಗ ಸಮಯದಲ್ಲಿ ನಿಜವಾದ ನೋವುಂಟಾಗುತ್ತದೆ, ಇನ್ನು ಕೆಲವರು ನೋವು ಉಂಟಾಗುವ ಬಗ್ಗೆ ಅತೀವ ಆತಂಕವನ್ನು ಹೊಂದಿರುತ್ತಾರೆ ಹಾಗೂ ಇನ್ನು ಕೆಲವರಲ್ಲಿ ಲೈಂಗಿಕ ಸಂಭೋಗ ಸಾಧ್ಯವೇ ಆಗದಂತಹ ಪೆಲ್ವಿಸ್‌ ಸ್ನಾಯುಗಳ ತೀವ್ರ ಬಿಗಿತ ಇದಕ್ಕೆ ಕಾರಣವಾಗಿರುತ್ತದೆ. 
ಯುವ ವಯೋಮಾನದ ಮಹಿಳೆಯರಲ್ಲಿ ಸಂಭೋಗ ಸಮಯದ ನೋವಿಗೆ ಆತಂಕ ಮತ್ತು ಖನ್ನತೆ, ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ದೌರ್ಜನ್ಯದ ಚರಿತ್ರೆ, ಜನನಾಂಗಕ್ಕೆ ಸಂಬಂಧಿಸಿದ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾ ಸೋಂಕುಗಳು, ಜನನಾಂಗದಿಂದ ಸ್ರಾವಗಳು ಹಾಗೂ ಮೂತ್ರನಾಳದ ಸೋಂಕುಗಳು ಕಾರಣವಾಗಿರುತ್ತವೆ. ವಯಸ್ಕ ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತ್ರೀ ಹಾರ್ಮೋನ್‌ ಸ್ರಾವ ಕಡಿಮೆಯಾಗುವುದರಿಂದ ಜನನಾಂಗದಲ್ಲಿ ಆದ್ರìತೆಯ ಕೊರತೆ ಉಂಟಾಗಿ ನೋವು ಕಾಣಿಸಿಕೊಳ್ಳುತ್ತದೆ. ಜನನಾಂಗದ ಕ್ಯಾನ್ಸರ್‌ನಂತಹ ಪ್ರಕರಣಗಳಲ್ಲಿ ವಿಕಿರಣ ಹಾಯಿಸುವಿಕೆಯಂತಹ ಚಿಕಿತ್ಸೆಗಳು ಆರಂಭದಲ್ಲಿ ನೋವುರಹಿತವಾಗಿದ್ದರೂ ಬಳಿಕ ನೋವಿಗೆ ಕಾರಣವಾಗಬಲ್ಲವು. 

ಲೈಂಗಿಕ ಅಸಾಮರ್ಥ್ಯ ಅನುಭವಿಸುತ್ತಿರುವ ಮಹಿಳೆಯರಲ್ಲಿ, ಅದನ್ನು ಉಂಟುಮಾಡುತ್ತಿರುವ ಕಾರಣಗಳನ್ನು ಕಂಡುಕೊಂಡು ಚಿಕಿತ್ಸೆ ಒದಗಿಸಬೇಕಾಗುತ್ತದೆ. ಬಹುತೇಕ ಪ್ರಕರಣಗಳಲ್ಲಿ ಮನಶಾÏಸ್ತ್ರೀಯ ವಿಶ್ಲೇಷಣೆ ಮತ್ತು ಸಾಂಸಾರಿಕ ಆಪ್ತ ಸಮಾಲೋಚನೆಗಳು ಅಗತ್ಯವಾಗಿರುತ್ತವೆ.
 
ಒಟ್ಟಿನಲ್ಲಿ ಹೇಳುವುದಾದರೆ, ವ್ಯಕ್ತಿಯ ಸಮಗ್ರ ಆರೋಗ್ಯ ಸುಸ್ಥಿತಿಯಲ್ಲಿ ಲೈಂಗಿಕ ಆರೋಗ್ಯವು ಒಂದು ಪ್ರಾಮುಖ್ಯವಾದ ಘಟಕವಾಗಿದೆ. ಲೈಂಗಿಕ ಅಸಾಮರ್ಥ್ಯವೆಂಬುದು ಪ್ರಸ್ತುತ ಜನಪೀಳಿಗೆ ಅನುಭವಿಸುತ್ತಿರುವ ಮಧುಮೇಹ, ಅಧಿಕ ರಕ್ತದೊತ್ತಡಗಳಂತಹುದೇ ಒಂದು ಸಾಮಾನ್ಯ ಸಮಸ್ಯೆ; ರೋಗಿಗಳು ಸಂಕೋಚ ಅಥವಾ ಹಿಂಜರಿಕೆ ಇಲ್ಲದೆ ವೃತ್ತಿಪರ ಪರಿಣತ ವೈದ್ಯರ ಜತೆಗೆ ಸಮಸ್ಯೆಯನ್ನು ಹಂಚಿಕೊಂಡು ಪರಿಹಾರವನ್ನು ಪಡೆಯಬೇಕು.

– ಡಾ| ಸುಧೀರ್‌ ನಾಯಕ್‌,
ಅಸೋಸಿಯೇಟ್‌ ಪ್ರೊಫೆಸರ್‌, 
ಡಾ| ಎಸ್‌. ಡಿ. ಶೆಣೈ, ಪ್ರೊಫೆಸರ್‌, 
ಡರ್ಮಟಾಲಜಿ ವಿಭಾಗ, 
ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ.

ಟಾಪ್ ನ್ಯೂಸ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

Shivamogga; ಮಾಜಿ ಸಿಎಂಗಳ ಕುಟುಂಬ ಕಾಳಗಕ್ಕೆ ಈಶ್ವರಪ್ಪ ರಂಗು!

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು

ಇವರ ಬದುಕಿನ ಬಂಡಿಗೆ ಆತ್ಮವಿಶ್ವಾಸ-ಛಲವೇ ಚಕ್ರಗಳು! ಇರುವುದೊಂದೇ ಕಾಲು, ಇರುವುದೊಂದೇ ಬದುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಪ್ರಯಾಣಿಕರ ಗಮನಕ್ಕೆ; ಮಂಗಳೂರಿನಲ್ಲಿ ರೈಲ್ವೇ ಕಾಮಗಾರಿ : ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

Tulu Movie ಮೇ 3: “ಗಬ್ಬರ್‌ ಸಿಂಗ್‌’ ತುಳು ಸಿನೆಮಾ ತೆರೆಗೆ

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

IPL 2024; ಚೆನ್ನೈ ಕಿಂಗ್ಸ್‌ಗೆ ಚೇಸಿಂಗ್‌ ಕಿಂಗ್‌ ಸವಾಲು

17

Justice: ಕೋಮು ದ್ವೇಷದಿಂದ ಹತ್ಯೆ ಪ್ರಕರಣ; ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.