ಕೆಲಸದಿಂದ ಬ್ರೇಕ್ ತೆಗೆದುಕೊಂಡ ಮಹಿಳೆಯರಿಗಾಗಿ ಉದ್ಯೋಗ ಮೇಳ
Team Udayavani, Sep 16, 2017, 3:50 PM IST
ಮದುವೆ, ತಾಯ್ತನ, ವೃದ್ಧರ ಜವಾಬ್ದಾರಿ ಮುಂತಾದ ಕಾರಣಗಳಿಂದ ಉದ್ಯೋಗದಿಂದ ತಾತ್ಕಾಲಿಕವಾಗಿ ಬ್ರೇಕ್ ಪಡೆದಿದ್ದೀರಾ? ಉದ್ಯೋಗ ಕ್ಷೇತ್ರದಲ್ಲಿ ಮತ್ತೆ ಎರಡನೆ ಇನ್ನಿಂಗ್ಸ್ ಶುರು ಮಾಡುವ ಇಚ್ಛೆ ನಿಮಗಿದೆಯಾ? ಹಾಗಾದರೆ ಇಲ್ಲಿದೆ ನೋಡಿ ಸುವರ್ಣಾವಕಾಶ. ಅಂಥ ಮಹಿಳೆಯರಿಗಾಗಿಯೇ “ಜಾಬ್ಸ್ ಫಾರ್ ಹರ್’ ಸಂಸ್ಥೆ ವತಿಯಿಂದ “ರೀಸ್ಟಾರ್ಟ್ ಹರ್’ ಎಂಬ ಒಂದು ದಿನದ ಉದ್ಯೋಗ ಮೇಳ ಮತ್ತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಉದ್ಯೋಗದಲ್ಲಿ ಬ್ರೇಕ್ ಪಡೆದಿದ್ದ ಮಹಿಳೆಯರಿಗೆ ಮತ್ತೆ ಕೆಲಸಕ್ಕೆ ಸೇರಲು ಸಹಾಯವಾಗುವಂಥ ಕೌಶಲ, ಆತ್ಮವಿಶ್ವಾಸ ಮತ್ತು ಅಗತ್ಯ ಮಾಹಿತಿಗಳನ್ನು ನೀಡುವ ಕಾರ್ಯಾಗಾರ ಇದಾಗಿದೆ. ಅಷ್ಟೇ ಅಲ್ಲದೆ ವಿವಿಧ ಕ್ಷೇತ್ರಗಳ ಸಂಪನ್ಮೂಲ ವ್ಯಕ್ತಿಗಳಿಂದ ಚರ್ಚೆ, ಸಂವಾದವನ್ನು ಕೂಡ ಏರ್ಪಡಿಸಲಾಗಿದೆ. ಕೆಲಸದ ಅವಕಾಶ ನೀಡುವ ಕಂಪನಿಗಳ ಎಚ್.ಆರ್.ಗಳ ಮಾಹಿತಿಯನ್ನೂ ಒದಗಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಛಿಸುವವರು ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು.
ಎಲ್ಲಿ?: ಎಂ.ಎಲ್.ಆರ್ ಕನ್ವೆನÒನ್ ಹಾಲ್, ಫೀನಿಕ್ಸ್ ಮಾರ್ಕೆಟ್ ಸಿಟಿ ಬಳಿ, ವೈಟ್ಫೀಲ್ಡ್
ಯಾವಾಗ?: ಸೆಪ್ಟೆಂಬರ್ 16, ಬೆಳಗ್ಗೆ 8- 5
ಹೆಚ್ಚಿನ ಮಾಹಿತಿಗೆ: www.jobsforher.com/restarther
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
Puttur ಅಡಿಕೆಗೂ ಬಿಸಿಲ ತಾಪ: ಉದುರುತ್ತಿವೆ ನಳ್ಳಿ! ಶೇ. 50ರಷ್ಟು ಫಸಲು ನಷ್ಟದ ಭೀತಿ
ಸಿಆರ್ಝಡ್ ಮರಳು ಇನ್ನು ಸದ್ಯಕ್ಕೆ ಮರೀಚಿಕೆ
Horoscope: ಧೈರ್ಯ, ಸಾಹಸದ ಪ್ರವೃತ್ತಿ ಯಶಸ್ಸಿಗೆ ಪೂರಕ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ
Udupi ಇನ್ನೂ ನಡೆಯದ ಟೆಂಡರ್ ಪ್ರಕ್ರಿಯೆ; ರಾಜ್ಯದಲ್ಲಿ ಅಗ್ನಿಶಾಮಕ ವಾಹನ ಕೊರತೆ