ಶ್ರೇಷ್ಠರ ಕುರಿತ ಕಿರುಚಿತ್ರ

Team Udayavani, Sep 29, 2017, 6:40 AM IST

Shreshtaru_(112).jpg

ಒಂದು ಸಿನಿಮಾ ನಿರ್ದೇಶನ ಮಾಡುವುದಕ್ಕೆ ಮೊದಲ ವೇದಿಕೆ ಅಂದರೆ, ಯಾವುದಾದರೊಂದು ಶಾರ್ಟ್‌ಫಿಲ್ಮ್ ಮಾಡುವುದು. ಇದು ಈಗಿನ ಟ್ರೆಂಡ್‌. ಈಗಾಗಲೇ ಹೊಸಬರು ಅಂಥದ್ದೊಂದು ಸಾಹಸಕ್ಕೆ ಕೈ ಹಾಕುವ ಮೂಲಕ ಅದರಲ್ಲಿ ಎಷ್ಟೋ ಮಂದಿ ಸಕ್ಸಸ್‌ ಆಗಿದ್ದೂ ಉಂಟು. ಇದೀಗ ಅಂಥದ್ದೇ ಯುವ ತಂಡವೊಂದು ಕಿರುಚಿತ್ರ ಮಾಡುವ ಮೂಲಕ ಅದನ್ನೀಗ ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡಿ, ತಮ್ಮ ಪ್ರತಿಭೆಯನ್ನು ಹೊರ ಹಾಕಿದೆ. ಅಂದಹಾಗೆ, ಆ ಕಿರುಚಿತ್ರದ ಹೆಸರು “ಶ್ರೇಷ್ಟರು’. ಶೀರ್ಷಿಕೆಯೇ ಹೇಳುವಂತೆ, ಇದೊಂದು ದೇಶ ಕಾಯುವ ಸೈನಿಕ ಹಾಗೂ ದೇಶಕ್ಕೆ ಅನ್ನ ಕೊಡುವ ರೈತಾಪಿ ವರ್ಗದ ಚಿತ್ರ.

ಈ ಕಿರುಚಿತ್ರವನ್ನು ನಿರ್ದೇಶಿಸಿರುವುದು ತ್ಯಾಗರಾಜ್‌. ಇದು ಇವರ ಮೊದಲ ಪ್ರಯತ್ನ. ಕಥೆ, ಚಿತ್ರಕಥೆ ಅವರೇ ಬರೆದಿದ್ದಾರೆ. ಹೊಸಬರ ಪ್ರಯತ್ನವನ್ನು ಮೆಚ್ಚಿಕೊಂಡು ಅವರಿಗೆ ಸಾಥ್‌ ಕೊಡುವ ಮೂಲಕ ಕಿರುಚಿತ್ರವನ್ನು ನಿರ್ಮಾಣ ಮಾಡಿರುವುದು ರಾಜೇಶ್ವರಿ. ಇವರ ಪ್ರೋತ್ಸಾಹ ಸಿಕ್ಕಿದ್ದರಿಂದಲೇ ತ್ಯಾಗರಾಜ್‌, ಒಳ್ಳೆಯ ಕಥೆ ಹೆಣೆದು, ಹೊಸ ತಂಡ ಕಟ್ಟಿಕೊಂಡು 27 ನಿಮಿಷದ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ “ಶ್ರೇಷ್ಟರು’ ಕಿರುಚಿತ್ರವನ್ನು ನಿರ್ದೇಶಕರು ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡಿದ್ದಾರೆ.

“ಶ್ರೇಷ್ಟರು’ ಕಿರುಚಿತ್ರದ ಮೂಲಕ ನಿರ್ದೇಶಕರು ಹೇಳಿರುವ ವಿಷಯವಿಷ್ಟೇ. ದೇಶಕ್ಕಾಗಿ, ದೇಶದ ಜನರ ಹಿತಕ್ಕಾಗಿ ಬಿಸಿಲು, ಮಳೆ, ಛಳಿ ಎನ್ನದೆ ಗಡಿಭಾಗದಲ್ಲಿ ರಾತ್ರಿ, ಹಗಲು ಗಡಿ ಕಾಯುವ ಸೈನಿಕರ ನೋವು, ನಲಿವು ಹಾಗೂ ಇಡೀ ದೇಶಕ್ಕೆ ಅನ್ನ ಕೊಡುವ ರೈತಾಪಿ ವರ್ಗದ ನೂರಾರು ಸಮಸ್ಯೆಗಳ ನಡುವೆಯೂ, ಮುಂದುವರೆಸುವ ತಮ್ಮ ಕಾಯಕ ಎಂಥದ್ದು ಎಂಬುದನ್ನು ಈ ಕಿರುಚಿತ್ರ ಮೂಲಕ ಹೇಳಹೊರಟಿದ್ದಾರಂತೆ ನಿರ್ದೇಶಕರು. ಇಷ್ಟೆಲ್ಲಾ ಆಗಿದ್ದರೂ, ದೇಶ ಕಾಯುವ ಯೋಧರಿಗೆ, ದೇಶಕ್ಕೇ ಅನ್ನ ಕೊಡುವ ರೈತರಿಗೆ ಈಗಲೂ ಸಿಗಬೇಕಾದ ಸೌಲಭ್ಯ ಸಿಕ್ಕಿದೆಯಾ? ಎಂಬುದನ್ನಿಲ್ಲಿ ಹೇಳಿದ್ದಾರಂತೆ.  ಅಂದಹಾಗೆ, ತ್ಯಾಗರಾಜ್‌, ತಮ್ಮ ಕಿರುಚಿತ್ರದಲ್ಲಿ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ನವೀನ್‌, ರಾಜ್‌, ಗಿರೀಶ್‌ ಬಿಜ್ಜಲ್‌, ಭಾರ್ಗವ ಮಹೇಶ್‌, ಅಶ್ವಿ‌ನಿ.ಕೆ.ಎನ್‌.ಕಣ್ಣನ್‌ ಸೇರಿದಂತೆ ಹಲವು ಯುವ ನಟ,ನಟಿಯರು ಇಲ್ಲಿ ನಟಿಸಿದ್ದಾರೆ. ಇನ್ನು, ಈ ಚಿತ್ರಕ್ಕೆ “ರಾಮಾ ರಾಮಾರೇ’ಗೆ ಹಿನ್ನಲೆ ಸಂಗೀತ ನೀಡಿದ್ದ ನೋಬಿಲ್‌ಪೌಲ್‌ ಸಂಗೀತವಿದೆ. ಅಜಿತ್‌ ಅವರ ಛಾಯಾಗ್ರಹಣವಿದೆ. ಕಿರಣ್‌ ಸಂಕಲನ ಮಾಡಿದ್ದಾರೆ. ಅಂದು ಪ್ರತಿಯೊಬ್ಬರೂ ತಮ್ಮ “ಶ್ರೇಷ್ಟರು’ ಕುರಿತು ಪ್ರೀತಿಯಿಂದ ಮಾತನಾಡಿದರು. ಈ ಪ್ರಯತ್ನದ ಮೂಲಕ ಹೊಸ ಹೆಜ್ಜೆ ಇಡುವ ಭರವಸೆಯೊಂದಿಗೆ ಅಂದಿನ ಮಾತುಕತೆಗೆ ಇತಿಶ್ರೀ ಹಾಡಿದರು.

ಟಾಪ್ ನ್ಯೂಸ್

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.