ಸಸ್ಯಾಹಾರ ಊಟ ಆರ್ಡರ್ ಮಾಡಿದರೆಸಿಕ್ಕಿದ್ದು 2 ತುಂಡು ಹಣ್ಣು
Team Udayavani, Nov 23, 2017, 4:11 AM IST
ಕೆಲ ವಿಮಾನಗಳಲ್ಲಿ ನೀಡುವ ಊಟ ದೇವರಿಗೇ ಪ್ರೀತಿ ಎಂಬಂತಿರುತ್ತದೆ. ಕೊಲಂಬೋದ ಏವಿಯಾಂಕ ಏರ್ ಲೈನ್ಸ್ನಲ್ಲಿ ಪ್ರಯಾಣಿಸುತ್ತಿದ್ದ ಸ್ಟೀವ್ ಹೊಗೋರ್ಟಿಗೆ ವಿಮಾನದಲ್ಲಿ ನೀಡಿದ್ದ ಆಹಾರ ನೋಡಿ ಊಟ ಮಾಡುವ ಉತ್ಸಾಹವೇ ಇಳಿದು ಹೋಯಿತಂತೆ. ಹೊಗಾರ್ಟಿ ಸಸ್ಯಾಹಾರ ಊಟವನ್ನು ಆರ್ಡರ್ ಮಾಡಿದ್ದರು. ರುಚಿಯಾದ ಊಟ ಕೊಡುತ್ತಾರೆ ಎಂದು ನಿರೀಕ್ಷಿಸಿದ್ದರು. ಸೇಬಿನ 2 ತುಂಡು ಮತ್ತು ಪಿಯರ್ ಹಣ್ಣಿನ ತುಂಡುಗಳನ್ನು ಪ್ಲಾಸ್ಟಿಕ್ ಡಬ್ಬಿಯಲ್ಲಿ ಪ್ಯಾಕ್ ಮಾಡಿ ಕೊಡಲಾಗಿತ್ತಂತೆ. ಅದನ್ನು ತಿನ್ನಲು ಒಂದು ಪ್ಲಾಸ್ಟಿಕ್ ಸ್ಪೂನ್ ಮತ್ತು ಫೋರ್ಕ್ ಕೂಡ ಇಡಲಾಗಿತ್ತಂತೆ. ಅವರು ಇದನ್ನು
ಟ್ವಿಟರ್ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ, ಸಾವಿರಾರು ಜನ ತಮ್ಮ ಅನುಭವಗಳನ್ನು ಟ್ವೀಟ್ ಮಾಡಿದ್ದಾರೆ.