ಬಿಜೆಪಿ ಸೇರಿದ ಶಾಸಕರ ವಿರುದ್ಧ ಜೆಡಿಎಸ್‌ ಗರಂ

Team Udayavani, Jan 20, 2018, 6:00 AM IST

JDS.jpg

ಬೆಂಗಳೂರು: ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್‌ ಹಾಗೂ ರಾಯಚೂರು ಶಾಸಕ ಶಿವರಾಜ್‌ ಪಾಟೀಲ್‌ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಂಡು ಐದು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂಧ ಹೇರಬೇಕು ಎಂದು ಜೆಡಿಎಸ್‌ ಚುನಾವಣಾ ಆಯೋಗ ಹಾಗೂ ಸ್ಪೀಕರ್‌ಗೆ ಪತ್ರ ಬರೆದಿದೆ.

ತಾಂತ್ರಿಕವಾಗಿ ಇನ್ನೂ ಜೆಡಿಎಸ್‌ ಶಾಸಕರಾಗಿದ್ದರೂ ಬಿಜೆಪಿ ಸೇರ್ಪಡೆಗೊಂಡಿರುವ ಕಾರಣ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿ ಯಾವುದೇ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. 

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್‌ ಹಿರಿಯ ಉಪಾಧ್ಯಕ್ಷ ಹಾಗೂ ರಾಯಚೂರು ಜಿಲ್ಲಾ ಉಸ್ತುವಾರಿ ಟಿ.ಎ.ಶರವಣ, ಇಬ್ಬರೂ ಶಾಸಕರ ವಿರುದ್ಧ ಕ್ರಮಕ್ಕೆ ಚುನಾವಣಾ ಆಯೋಗ ಹಾಗೂ ವಿಧಾನಸಭೆ ಸ್ಪೀಕರ್‌ಗೆ ಪತ್ರ ಬರೆಯಲಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಈ ಪ್ರಕರಣದ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

2013ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದಿಂದ ಟಿಕೆಟ್‌ ಪಡೆದು ಆಯ್ಕೆಯಾಗಿ ಅಧಿಕಾರ ಅನುಭವಿಸಿ ಅಂತಿಮ ದಿನಗಳಲ್ಲಿ ಸದನ ಸ್ಥಾನಕ್ಕೆ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸದೇ ಅಧಿಕೃತವಾಗಿ ಬಿಜೆಪಿ ಸೇರಿರುವುದು ಮಾಧ್ಯಮಗಳಿಂದ ತಿಳಿದು ಬಂದಿದೆ. ಹೀಗಾಗಿ, ಇದು ಪಕ್ಷ ವಿರೋಧಿ ಕ್ರಮ. ಇವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಇಬ್ಬರೂ ಶಾಸಕರು ಸ್ಪೀಕರ್‌ ಅವರನ್ನು ಖುದ್ದಾಗಿ ಭೇಟಿ ನೀಡಿ ರಾಜೀನಾಮೆ ನೀಡಿಲ್ಲ. ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಯವರಿಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಇನ್ನೂ ಅಂಗೀಕಾರವಾಗಿಲ್ಲ. ಅಷ್ಟರಲ್ಲೇ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಇದು, ಭಾರತದ ಸಂವಿಧಾನದ 52 ನೇ ತಿದ್ದುಪಡಿಯ 10ನೇ ಅನುಸೂಚಿಯ ಸ್ಪಷ್ಟ ಉಲ್ಲಂಘನೆ. ಸಂವಿಧಾನದ ಅನುಚ್ಛೇದ 105 ಮತ್ತು 194ರಡಿ ಸೂಕ್ತ ಕ್ರಮ ಕೈಗೊಳ್ಳಲು ಸಭಾಧ್ಯಕ್ಷರಿಗೆ ಅಧಿಕಾರವಿದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್‌ 9ರಡಿ ಸದನ ಸದಸ್ಯತ್ವದಿಂದ ಅನರ್ಹಗೊಳಿಸಿ ಐದು ವರ್ಷ ಚುನಾವಣೆಗೆ ನಿಲ್ಲುವುದನ್ನು ನಿರ್ಬಂಧಿಸಬಹುದಾಗಿದೆ ಎಂದು ಹೇಳಿದರು.

ಟಾಪ್ ನ್ಯೂಸ್

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

D. K. Shivakumar ಕಾಂಗ್ರೆಸ್‌ನ ಭರವಸೆ, ಬಿಜೆಪಿಯ ಬುರುಡೆ ನಡುವೆ ಹೋರಾಟ

D. K. Shivakumar ಕಾಂಗ್ರೆಸ್‌ನ ಭರವಸೆ, ಬಿಜೆಪಿಯ ಬುರುಡೆ ನಡುವೆ ಹೋರಾಟ

BJP leaders ನಡ್ಡಾ, ವಿಜಯೇಂದ್ರ ವಿರುದ್ಧ ಎಫ್ಐಆರ್‌

BJP leaders ನಡ್ಡಾ, ವಿಜಯೇಂದ್ರ ವಿರುದ್ಧ ಎಫ್ಐಆರ್‌

ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್‌

ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

BJP leaders ನಡ್ಡಾ, ವಿಜಯೇಂದ್ರ ವಿರುದ್ಧ ಎಫ್ಐಆರ್‌

BJP leaders ನಡ್ಡಾ, ವಿಜಯೇಂದ್ರ ವಿರುದ್ಧ ಎಫ್ಐಆರ್‌

Prajwal Revanna ಮಾಜಿ ಕಾರು ಚಾಲಕ ಎಲ್ಲಿದ್ದಾನೆ ಎಂದು ಎಸ್‌ಐಟಿಗೆ ಗೊತ್ತು: ಪರಮೇಶ್ವರ್‌

Prajwal Revanna ಮಾಜಿ ಕಾರು ಚಾಲಕ ಎಲ್ಲಿದ್ದಾನೆ ಎಂದು ಎಸ್‌ಐಟಿಗೆ ಗೊತ್ತು: ಪರಮೇಶ್ವರ್‌

CID ಕಚೇರಿಯಲ್ಲಿ ನಿದ್ದೆ ಇಲ್ಲದೆ ರಾತ್ರಿ ಕಳೆದ ರೇವಣ್ಣ

CID ಕಚೇರಿಯಲ್ಲಿ ನಿದ್ದೆ ಇಲ್ಲದೆ ರಾತ್ರಿ ಕಳೆದ ರೇವಣ್ಣ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

ಮತ ಪ್ರಮಾಣ ಹೆಚ್ಚಿಸಲು ಶಾಮಿಯಾನ, ಫ್ಯಾನು, ನೀರು…!

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

JDS ಜತೆ ಮೈತ್ರಿ ಮುರಿದುಕೊಳ್ಳುವುದಿಲ್ಲ: ಯಡಿಯೂರಪ್ಪ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

Prajwal Revanna ಪರ ನಿಲ್ಲುವುದಿಲ್ಲ: ವಿಜಯೇಂದ್ರ

1-ewqqwe

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

D. K. Shivakumar ಕಾಂಗ್ರೆಸ್‌ನ ಭರವಸೆ, ಬಿಜೆಪಿಯ ಬುರುಡೆ ನಡುವೆ ಹೋರಾಟ

D. K. Shivakumar ಕಾಂಗ್ರೆಸ್‌ನ ಭರವಸೆ, ಬಿಜೆಪಿಯ ಬುರುಡೆ ನಡುವೆ ಹೋರಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.