ಬೋಪಣ್ಣ, ಶರಣ್ ನಿರ್ಗಮನ
Team Udayavani, Jan 23, 2018, 6:40 AM IST
ಮೆಲ್ಬರ್ನ್: ಸೋಮವಾರದ 3ನೇ ಸುತ್ತಿನ ಮುಖಾಮುಖೀಯಲ್ಲಿ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಪರಾಭವಗೊಳ್ಳುವುದರೊಂದಿಗೆ ಆಸ್ಟ್ರೇಲಿಯನ್ ಓಪನ್ ಪುರುಷರ ಡಬಲ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ರೋಜರ್ ಬೋಪಣ್ಣ-ಎಡ್ವರ್ಡ್ ರೋಜರ್ ವೆಸಲಿನ್ (ಫ್ರಾನ್ಸ್) ಅವರನ್ನು ಒಲಿವರ್ ಮರಾಕ್ (ಆಸ್ಟ್ರಿಯ)-ಮ್ಯಾಟೆ ಪಾವಿಕ್ (ಕ್ರೊವೇಶಿಯ) ಸೇರಿಕೊಂಡು 6-4, 7-6 (7-5), 6-3 ಅಂತರದಿಂದ ಹಿಮ್ಮೆಟ್ಟಿದರು. ತೀವ್ರ ಪೈಪೋಟಿಯಿಂದ ಕೂಡಿದ ಈ ಪಂದ್ಯ 2 ಗಂಟೆಗೂ ಹೆಚ್ಚು ಕಾಲ ಸಾಗಿತು. ಇದಕ್ಕೂ ಮೊದಲು ನಡೆದ 3ನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ದಿವಿಜ್ ಶರಣ್-ಆ್ಯಂಡಿ ರಾಮ್ (ಅಮೆರಿಕ) ಕೂಡ ಉತ್ತಮ ಹೋರಾಟವೊಂದನ್ನು ನಡೆಸಿದ ಬಳಿಕ ಶರಣಾದರು. ಇವರನ್ನು ಲುಕಾಸ್ ಕುಬೋಟ್ (ಪೋಲೆಂಡ್)-ಮಾರ್ಸೆಲೊ ಮೆಲೊ (ಬ್ರಝಿಲ್) ಸೇರಿಕೊಂಡು 6-3, 7-6 (7-4), 6-4 ಅಂತರದಿಂದ ಪರಾಭವಗೊಳಿಸಿದರು. ಈ ಪಂದ್ಯ 2 ಗಂಟೆ, 12 ನಿಮಿಷಗಳ ತನಕ ನಡೆಯಿತು. ರವಿವಾರದ ಸೆಣಸಾಟದಲ್ಲಿ ಲಿಯಾಂಡರ್ ಪೇಸ್-ಪುರವ್ ರಾಜ ಜೋಡಿ ಸೋಲನುಭವಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್
IPL 2025: ಮತ್ತೆ ರಾಹುಲ್ ದ್ರಾವಿಡ್ ಜತೆ ಸೇರಿದ ವಿಕ್ರಮ್ ರಾಥೋರ್
INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್ ಗೆ ಆಲೌಟ್
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Chess Olympiad: ಚೀನ, ಜಾರ್ಜಿಯ ವಿರುದ್ಧ ಭಾರತಕ್ಕೆ ಜಯ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.