ನೇತನ್ಯಾಹುಗೆ ಕಂಡ ಭಾರತ ನಮ್ಮವರಿಗೆ ಕಾಣಲಿಲ್ಲ


Team Udayavani, Jan 28, 2018, 11:55 AM IST

bottom-left-manipal.jpg

ಗತವನ್ನು ತಿಳಿಯದೇ ವರ್ತಮಾನವೂ ತಿಳಿಯದು. ಭವಿಷ್ಯತ್ತಿಗೆ ದಾರಿ ಸಿಗದು. ರಾಷ್ಟ್ರದ ಭವಿಷ್ಯತ್ತಿಗೆ ಮಾರ್ಗದರ್ಶಕ ಚರಿತ್ರೆ. ಚರಿತ್ರೆ ಕೇವಲ ಒಂದು ಪಠ್ಯವಲ್ಲ. ಹುಟ್ಟು ಸಾವಿನ ಪಟ್ಟಿಯಲ್ಲ. ಪಾಳುಬಿದ್ದ ಕಟ್ಟಡಗಳ ಕಥೆಯಲ್ಲ. ಎಲ್ಲ ಪ್ರಜೆಗಳಿಗೂ ಸಂಬಂಧಿಸಿರುವ, ಜೀವನದುದ್ದಕ್ಕೂ ಪ್ರತಿಯೊಬ್ಬರು ಗುರುತಿಟ್ಟುಕೊಳ್ಳಬೇಕಾದ ಸಂಗತಿಯೇ ಚರಿತ್ರೆ. 

ಇತ್ತೀಚೆಗೆ ಭಾರತ ಭೇಟಿಗೆ ಬಂದಿದ್ದ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೇತನ್ಯಾಹು ತನ್ನ ನಿರ್ಗಮನದ ಮುಂಚೆ ಎರಡು ಉಪಯುಕ್ತ ಸಂದೇಶಗಳನ್ನು ಭಾರತೀಯರಿಗೆ, ವಿಶೇಷವಾಗಿ ಬಹುಸಂಖ್ಯಾತ ಹಿಂದುಗಳಿಗೆ ನೀಡಿ ತೆರಳಿದ್ದಾರೆ. ನಿಮಗೆ ಹಿಂದುವಾಗಿ ಬದುಕುವ ಇಚ್ಛೆಯಿದ್ದರೆ ನಿಮ್ಮ ಇತಿಹಾಸವನ್ನು ನೆನಪಿಸಿಕೊಳ್ಳಿ. ನಿಮಗೆ ಶಾಂತಿ ಬೇಕೆಂದರೆ ನೀವು ಬಲಶಾಲಿ ಯಾಗಬೇಕು. ಭಾರತದ ಇಂದಿನ ಕಾಲಘಟ್ಟದಲ್ಲಿ ಈ ಎರಡೂ ಸಂದೇಶಗಳು ಸಮಯೋಚಿತವಾಗಿ, ಅತ್ಯಂತ ಮಾರ್ಮಿಕವಾಗಿ ಜನಮಾನಸವನ್ನು ತಟ್ಟಿವೆ ಎಂದರೆ ಅತಿಶಯೋಕ್ತಿಯಾಗಲಾರದು. 

ಇಸ್ರೇಲ್‌ ಈ ಎರಡೂ ಅಂಶಗಳನ್ನು ಮೈಗೂಡಿಸಿಕೊಂಡಿದ್ದರಿಂದ ಇಂದು ಸುತ್ತ ಶತ್ರು ರಾಷ್ಟ್ರಗಳಿದ್ದರೂ ಇಸ್ರೇಲಿನ ತಂಟೆಗೆ ಹೋಗುವ ದುಸ್ಸಾಹಸಕ್ಕೆ ಯಾರೂ ಕೈಹಾಕುವುದಿಲ್ಲ. ದೇಶ ಆಪತ್ತಿಗೆ ಒಳಗಾದರೆ ಇಸ್ರೇಲಿಗೆ ಇಸ್ರೇಲೇ ಒಂದಾಗಿ ಸೆಟೆದು ನಿಲ್ಲುತ್ತದೆ. ಕಾರಣ ದೇಶ‌ದ ಇತಿಹಾಸವನ್ನು ಬಲ್ಲ ಜನ ಅಲ್ಲಿದ್ದಾರೆ, ದೇಶ ಬಲಿಷ್ಠವಾಗಿದೆ. ತನ್ನ ದೇಶದ ಒಬ್ಬ ನಾಗರಿಕನನ್ನು ಶತ್ರು ರಾಷ್ಟ್ರ ಹತ್ಯೆಮಾಡಿತು ಎಂದು ತಿಳಿದ ಇಸ್ರೇಲ್‌ ತಡಮಾಡದೆ, ಘಟನೆ ನಡೆದ ಗಂಟೆಯೊಳಗೆ ಪ್ರತೀಕಾರವನ್ನು ತೀರಿಸಿತ್ತು. 

ಶತ್ರು ವಶದಲ್ಲಿದ್ದ ತನ್ನ ಒಬ್ಬ ಸೇನಾಧಿ ಕಾರಿಯ ಬಿಡುಗಡೆಗಾಗಿ ಇಸ್ರೇಲ್‌, ತನ್ನ ಒತ್ತೆಯಲ್ಲಿದ್ದ ಶತ್ರು ರಾಷ್ಟ್ರದ 1500ಕ್ಕೂ ಮಿಕ್ಕ ಸೈನಿಕರನ್ನು ಬಿಡುಗಡೆಗೊಳಿಸುವ ಕೆಚ್ಚೆದೆ ತೋರಿಸಿತ್ತು. ಅಕಾರಣವಾಗಿ ಹಿಂಸೆ, ದಾಳಿ ಎಸಗುವ ಶತ್ರು ರಾಷ್ಟ್ರಗಳ ಗಡಿಯೊಳಗೆ ನುಗ್ಗಿ ಸದೆಬಡಿಯಿರಿ ಎಂದೇ ಇಸ್ರೇಲ್‌ ತನ್ನ ಸೇನೆಗೆ ನೀಡುವ “ಸ್ಟಾಂಡಿಂಗ್‌ ಇನ್ಸ$óಕ್ಷನ್‌’. ಆದರೆ ಭಾರತದಲ್ಲಿ? ಇತಿಹಾಸವೂ ಬೇಡ, ಪುರಾಣವೂ ಬೇಡ. ಬಹುಸಂಖ್ಯಾತ ಹಿಂದೂಗಳ ಹತ್ಯಾಕಾಂಡವಾದರೂ, ಅವರನ್ನು ಊರಿನಿಂದ ಹೊಡೆ ದೋಡಿಸಿದರೂ, ಸರಕಾರಗಳು ಸುಮ್ಮನಿರುತ್ತವೆ. ದೇಶವನ್ನು ತುಂಡು ತುಂಡು ಮಾಡುತ್ತೇವೆ ಎಂದರೂ ಪ್ರಶ್ನಿಸುವವರಿಲ್ಲ. ಗಡಿಯಾಚೆಗಿನ ಗುಂಡಿನ ದಾಳಿಗೆ ನಮ್ಮ ಯೋದರು ಬಲಿಯಾಗು ತ್ತಿದ್ದರೂ ಸರಕಾರಗಳ ನೀರಸ, ನಿಸ್ತೇಜ ಪ್ರತಿಕ್ರಿಯೆ ಬಿಟ್ಟರೆ ಹೆಚ್ಚಿನ ದೇನೂ ಪರಿಣಮಿಸದು. ಇತಿಹಾಸ ಮರೆತರೆ ದೇಶ ದುರ್ಬಲ ವಾಗುತ್ತದೆ ಎಂಬುದಕ್ಕೆ ಭಾರತವೇ ಒಂದು ಉತ್ತಮ ಉದಾಹರಣೆ.

ಗತವನ್ನು ಮರೆತ ರಾಷ್ಟ್ರಕ್ಕೆ ಭವಿಷ್ಯತ್ತು ಎಂದಿಗೂ ಕತ್ತಲು. ಗತವನ್ನು ತಿಳಿಯದೇ ಹೋದರೆ ವರ್ತಮಾನವೂ ತಿಳಿಯದು. ಭವಿಷ್ಯತ್ತಿಗೆ ದಾರಿ ಸಿಗದು. ರಾಷ್ಟ್ರದ ಭವಿಷ್ಯತ್ತಿಗೆ ಮಾರ್ಗದರ್ಶನ ವೀಯುವುದೇ ಚರಿತ್ರೆ. ಚರಿತ್ರೆ ಕೇವಲ ಒಂದು ಪಠ್ಯವಲ್ಲ. ಹುಟ್ಟು ಸಾವಿನ ಪಟ್ಟಿಯಲ್ಲ. ಪಾಳುಬಿದ್ದ ಕಟ್ಟಡಗಳ ಕಥೆಯಲ್ಲ. ಎಲ್ಲ ಪ್ರಜೆಗಳಿಗೂ ಸಂಬಂಧಿಸಿರುವ, ಜೀವನದುದ್ದಕ್ಕೂ ಪ್ರತಿಯೊಬ್ಬರು ಗುರುತಿಟ್ಟುಕೊಳ್ಳಬೇಕಾದ ಸಂಗತಿಯೇ ಚರಿತ್ರೆ. ನಮ್ಮ ಪೂರ್ವಜರ ಕುರಿತಾಗಿ, ಅವರು ಪಟ್ಟ ಕಷ್ಟ ನಷ್ಟಗಳ ಕುರಿತು, ಅವರ ಸಾಧನೆ ಗಳು, ಜಯಾಪಜಯದ ಕುರಿತು, ಪರ್ಯಾವಸಾನದ ಕುರಿತು ತಿಳಿಯುವುದೇ ಚರಿತ್ರೆ. ಸಾವಿರಾರು ವರ್ಷಗಳ ನಾಗರಿಕತೆಯುಳ್ಳ ನಮ್ಮಿà ದೇಶಕ್ಕೆ ಒಂದು ವಿಶಿಷ್ಟ ಚರಿತ್ರೆ ಇದೆಯೆಂಬ ವಿಷಯವನ್ನೇ ನಮ್ಮ ಚರಿತ್ರೆಯ ಪುಸ್ತಕಗಳು ಗುರುತಿಸುವುದಿಲ್ಲ. 

ನೂರಾರು ವರ್ಷಗಳಲ್ಲಿ, ತಲೆತಲೆಮಾರುಗಳಲ್ಲಿ ದೇಶದ ಲಕ್ಷ ಲಕ್ಷ ಜನರು ದುರಾಕ್ರಮಣಕಾರರ ಕೈಗೆ ಸಿಕ್ಕಿ ಪಶುಗಳಂತೆ ಮಾರಲ್ಪ ಟ್ಟರೂ, ಅಯೋಗ್ಯರ ಸೇವೆ ಮಾಡುತ್ತಾ ಇದ್ದರೂ, ನಾಚಿಕೆಯಿಂದ, ಎಲ್ಲವನ್ನೂ ಕಳೆದುಕೊಂಡ ದಾರುಣ ಸ್ಥಿತಿಯಲ್ಲಿದ್ದರೂ, ತಮ್ಮ ದೇಶದ ಜನರಿಗೆ ಆದ ಘೋರ ದುರಂತವನ್ನು ನೆನೆದು ಕನಿಷ್ಟ ಕಣ್ಣೀರಿನ ಒಂದು ಹನಿಯನ್ನಾದರೂ ಸುರಿಸಬೇಕಲ್ಲವೆ? ಅದರ ಬದಲು ಅಂತಹ ಘೋರ ಘಟನೆಗಳು ಅಲ್ಲೊಂದು ಇಲ್ಲೊಂದು ನಡೆದಿತ್ತು, ಮೊಗಲರ ರಾಜ್ಯಭಾರ ಒಟ್ಟಾರೆಯಾಗಿ ಸುಗಮವಾಗಿ ನಡೆದಿತ್ತು ಎಂಬ ವಿಕೃತ ಪಠ್ಯವಿರುವ ನಮ್ಮ ಚರಿತ್ರೆಯ ಪುಸಕ್ತಗಳು ನಮ್ಮ ಮಕ್ಕಳ ಮಸ್ತಕ ಸೇರಿದವು. ಪ್ರಜಾ ಹಿಂಸಕರೇ ರಾಷ್ಟ್ರ ಹೆಮ್ಮೆ ಪಡುವಂತಹ ಪೂರ್ವಜರು, ರಾಷ್ಟ್ರೀಯತೆಯ ಅಡಿಪಾಯ ಹಾಕಿದ ಮಹಾಪುರುಷರೆಂಬಂತೆ ಚಿತ್ರಿಸ ಹೊರಟ ನಮ್ಮ ಚರಿತ್ರೆಕಾರರ ಜ್ಞಾನ ಎಂತಹದು? ಅದಮ್ಯ ರಾಷ್ಟ್ರಪ್ರೇಮಿಗಳನ್ನು ಬಂಡುಕೋರರು, ದಾರಿತಪ್ಪಿದವರೆಂದು ಬಿಂಬಿಸಿದರೆ, ದೇಶಭಕ್ತಿ, ರಾಷ್ಟ್ರಪ್ರಜ್ಞೆ, ಸ್ವಾಭಿಮಾನ, ಪೌರುಷಗಳಂತಹ ಉತ್ತಮ ಗುಣಗಳು ಭಾವೀ ನಾಗರಿಕರಿಗೆ ದೊರಕಲು ಹೇಗೆ ಸಾಧ್ಯ? ಗತದ ಬಗ್ಗೆ ನಮ್ಮ ತಿಳುವಳಿಕೆ ಇಷ್ಟು ವಿಕೃತವಾಗಿರುವಾಗ, ವರ್ತಮಾನದ ಸಮಸ್ಯೆ ಗಳು ಹೇಗೆ ಅರ್ಥವಾದೀತು? ಭವಿಷ್ಯದ ದಾರಿ ಹೇಗೆ ಗೋಚರ ವಾಗಬೇಕು? ಚರಿತ್ರೆ ಎಂಬುದು ರಾಷ್ಟ್ರದ ಜನತೆಗೆ ಸ್ಪೂರ್ತಿಯನ್ನು ನೀಡಿ ಮುಂದಕ್ಕೆ ಕರೆದೊಯ್ಯಬೇಕಾಗಿರುವ ಶಕ್ತಿ.

ಅದು ಚರಿತ್ರೆ ಕಲಿಸುವ ಶಿಕ್ಷಕರುಗಳಿಗೆ, ಪಠ್ಯಪುಸ್ತಕ ಬರೆಯುವ ಲೇಖಕರಿಗೆ, ಸಿಲೆಬಸ್‌ ಬರೆಸುವ ಸರಕಾರಿ ಸಂಸ್ಥೆಗಳಿಗೆ, ಸರಕಾರಕ್ಕೆ , ರಾಜಕೀಯ ಪಕ್ಷಗಳಿಗೆ ಸೀಮಿತವಾಗಿರುವ ಒಂದು ಲಘು ವಿಷಯವಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನೇತನ್ಯಾಹು ಎಚ್ಚರಿಕೆ ಅತ್ಯಂತ ಸಮಯೋಚಿತ ವಾಗಿದೆ. ನಾವು ಪಾಠ ಕಲಿಯುವುದೆಂದು? ಭಾವೀ ಜನಾಂಗಕ್ಕೆ ನಮ್ಮ ದೇಶದ ಚರಿತ್ರೆಯೂ ಬೇಡ, ನಮ್ಮ ಭವ್ಯ ಸಂಸ್ಕೃತಿಯೂ ಬೇಡ. ಇವೆರಡೂ ಇಲ್ಲದಿರುವ ನಮ್ಮ ಯುವ ಜನಾಂಗ ಮರಳುಗಾಡಿನಲ್ಲಿ ನಡೆದಾಡುವ ದಾರಿಹೋಕರಂತೆ ಕಾಣುತ್ತದೆ. ಎಲ್ಲವೂ ಅಸ್ಪಷ್ಟ. ನಾವಿಂದು ನಿಷ್ಕ್ರಿಯ ಪದವೀಧರರನ್ನು ತಯಾರಿಸುತ್ತಿದ್ದೇವೆ ಹೊರತು ಉತ್ತಮ ನಾಗರಿಕರನ್ನಲ್ಲ. ಉದಾತ್ತ ದೇಶಪ್ರೇಮಿಗಳನ್ನಲ್ಲ. ವಿದೇಶೀಯ ನೇತನ್ಯಾಹು ಕಂಡ ಭಾರತ ವನ್ನು ನಮ್ಮ ನೇತಾರರು ಕಾಣಲು ವಿಫ‌ಲರಾದರು.

– ಜಲಂಚಾರು ರಘುಪತಿ ತಂತ್ರಿ 

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.