ಜೆಡಿಎಸ್ ಸೇರಿದ ರೇವು ನಾಯಕ್ ಬೆಳಮಗಿ
Team Udayavani, Apr 23, 2018, 6:20 AM IST
ಬೆಂಗಳೂರು: ಕಲಬುರಗಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ವಂಚಿತ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಭಾನುವಾರ ಜೆಡಿಎಸ್ ಸೇರಿದ್ದಾರೆ.
ಬೆಳಮಗಿಗೆ ಕಲಬುರಗಿ ಗ್ರಾಮಾಂತರ ಕ್ಷೇತ್ರದಿಂದಲೇ ಜೆಡಿಎಸ್ ಟಿಕೆಟ್ ಘೋಷಣೆಯಾಗಿದ್ದು, ಬಿ ಫಾರಂ ಕೂಡ ನೀಡಲಾಗಿದೆ.
ಅದಕ್ಕಾಗಿ ಹೊಂದಾಣಿಕೆ ಕಾರಣಕ್ಕಾಗಿ ಬಿಎಸ್ಪಿಗೆ ನೀಡಿದ್ದ ಈ ಕ್ಷೇತ್ರವನ್ನು ಜೆಡಿಎಸ್ ವಾಪಸ್ ಪಡೆದುಕೊಂಡಿದೆ. ಬಿಎಸ್ಪಿಯ ಸೂರ್ಯಕಾಂತ ನಿಂಬಾಳ್ಕರ್ ಕಣದಿಂದ ಹಿಂದಕ್ಕೆ ಸರಿಯುವ ಸಾಧ್ಯತೆ ಇದೆ.