ದತ್ತ ಜನ್ಮರಹಸ್ಯ,ತ್ರಿಮೂರ್ತಿಗಳ ಬೇಡಿಕೆಗೆ ಅನಸೂಯ ತಬ್ಬಿಬ್ಬಾಗಿದ್ದೇಕೆ


Team Udayavani, Apr 24, 2018, 4:58 PM IST

Anasuya_feeding_the_Hindu_.jpg

ಬ್ರಹ್ಮನ ಮಾನಸ ಪುತ್ರರಾದ ಅತ್ರಿ ಋಷಿಗಳು ಮಹಾ ತಪಸ್ವಿಗಳು ಹಾಗೂ ಅವರ ಪತ್ನಿ ಅನುಸೂಯದೇವಿಯು ಮಹಾ ಪತಿವ್ರತೆ. ಪತಿಯೇ ಅವಳಿಗೆ ದೇವನು, ಅಥಿತಿ ಸೇವೆ ಅತ್ರಿ ಋಷಿಗಳ ಆಶ್ರಮದ ನಿಯಮವಾಗಿತ್ತು. ಅನುಸೂಯೆಯ ಪತಿವ್ರತಾ ಶಕ್ತಿಗೆ ದೇವತೆಗಳು ಹೆದರುತ್ತಿದ್ದರು.  ಅವಳ ಈ ಕೀರ್ತಿ ಎಲ್ಲೆಡೆ ಹರಡಿತ್ತು.

ಹೀಗಿರುವಾಗ ಒಮ್ಮೆ ಇಂದ್ರ ಮತ್ತು ಇತರೆ ದೇವತೆಗಳು ಸೇರಿ ತ್ರಿಮೂರ್ತಿಗಳ ಬಳಿಗೆ ಬಂದು ಅನುಸೂಯೆಯ ಪಾತಿವ್ರತ್ಯ ಹಾಗೂ ಪತಿವ್ರತಾ ಶಕ್ತಿಯ ಬಗ್ಗೆ ತಿಳಿಸಿದರು. ತ್ರಿಮೂರ್ತಿಗಳು ಆಶ್ಚರ್ಯದಿಂದ ಸ್ವತಃ ತಾವು ಕಣ್ಣಿಂದ ನೋಡಿ ತಿಳಿಯಬೇಕು ಎಂದು ಅತ್ರಿ ಋಷಿಗಳ ಆಶ್ರಮದ ಕಡೆ ನಡೆದರೂ. ಅತ್ರಿ ಋಷಿಗಳು ಆಶ್ರಮದಲ್ಲಿ ಇಲ್ಲದ ಸಮಯದಲ್ಲಿ ತ್ರಿಮೂರ್ತಿಗಳು ಅನುಸೂಯೆಯನ್ನು ಪರೀಕ್ಷಿಸಲು ಋಷಿವೇಷ ಧರಿಸಿ ಆಶ್ರಮಕ್ಕೆ ಬಂದರು.

ಅನುಸೂಯೆ ಅವರನ್ನು ಸ್ವಾಗತಿಸಿದಳು, ಅಥಿತಿಗಳ ಕಾಲು ತೊಳೆದು ಒಳಗೆ ಕರೆದಳು. ಆಗ ಆ ಋಷಿಗಳು, ನಿಮ್ಮ ಆಶ್ರಮದ ಅಥಿತಿ ಸತ್ಕಾರದ ಬಗ್ಗೆ ತಿಳಿದು ನಾವು ಇಲ್ಲಿಗೆ ಬಂದಿದ್ದೇವೆ.. ನಮಗೆ ತುಂಬಾ ಹಸಿವಾಗಿದೆ ನಮಗೆ ಇಚ್ಛಾ ಭೋಜನವನ್ನು ನೀಡುವೆಯಾ ಎಂದು ಕೇಳಿದರು. 

ಭೋಜನ ಸಿದ್ಧವಾಗಿದೆ ಎಂದು ಅನುಸೂಯೆಯು ಹೇಳಲು, ಆ ಋಷಿಗಳು ಅವಳ ಮುಂದೆ ಒಂದು ಬೇಡಿಕೆಯನ್ನು ಇಟ್ಟರು, ಅದೇನೆಂದರೆ ನೀನು ವಿವಸ್ತ್ರಳಾಗಿ ನಮಗೆ ಭೋಜನವನ್ನು ಬಡಿಸಬೇಕು ಎಂದು ಇಚ್ಛೆಯನ್ನು ತಿಳಿಸಿದರು.

ಇಲ್ಲವಾದರೆ ಈಗಲೇ ಹೇಳಿಬಿಡು ನಾವು ಹೋರಾಡುತ್ತೇವೆ ಎಂದು ಹೇಳಿದರು. ಅನುಸೂಯೆಯು ಒಮ್ಮೆಗೆ ತಬ್ಬಿಬಾದರು, ಇವರು ಸಾಮಾನ್ಯರಲ್ಲ ನನ್ನನು ಪರೀಕ್ಷಿಸಲು ಬಂದಿದ್ದಾರೆ ಎಂದು ಅರಿತು. ನನ್ನ ಮನಸ್ಸು ಪರಿಶುದ್ಧವಾಗಿದೆ. ನನ್ನ ಪತಿಭಕ್ತಿಯೇ ನನ್ನನ್ನು ರಕ್ಷಿಸುತ್ತದೆ ಎಂದು ನಿರ್ಧರಿಸಿ ಅನುಸೂಯೆಯು ವಿನಯದಿಂದ ಆಗಲಿ ಎಂದು ಒಪ್ಪಿದಳು, ಆದರೆ ನೀವು ಚಂಚಲರಾಗದೆ ಭೋಜನ ಮಾಡಬೇಕು ಎಂದು ತಿಳಿಸಿ ಅಡುಗೆ ಮನೆಗೆ ನಡೆದು ತನ್ನ ಪತಿಯನ್ನು ಭಕ್ತಿಯಿಂದ ಸ್ಮರಿಸಿ ಮಾತೃ ಭಾವವನ್ನು ಹೊಂದಿ  ವಿವಸ್ತ್ರಳಾಗಿ ಬರಲು ಅವಳ ಪತಿವ್ರತಾ ಶಕ್ತಿಗೆ ಬಂದ ಅಥಿತಿಗಳು ಶಿಶುಗಳಾಗಿ ಹೋಗಿದ್ದರು.  ಆ ಶಿಶುಗಳನ್ನೂ ಅಪ್ಪಿ ಹಾಲುಣಿಸಿ ಜೋಗುಳ ಹಾಡಿ ತೊಟ್ಟಿಲಲ್ಲಿ ಮಲಗಿಸಿದಳು.

ಆಶ್ರಮಕ್ಕೆ ಹಿಂದಿರುಗಿದ ಅತ್ರಿ ಋಷಿಗಳು ಶಿಶುಗಳನ್ನು ಕಂಡು ಆಶ್ಚರ್ಯ ಚಕಿತರಾದರು. ಅನುಸೂಯಾದೇವಿಯು ನಡೆದ ಸಂಗತಿಯನ್ನೆಲ್ಲ ತಿಳಿಸಲು ಅತ್ರಿ ಋಷಿಗಳು ಯೋಗ ದೃಷ್ಟಿಯಿಂದ ಅವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಮೂರು ಶಿಶುಗಳು ತ್ರಿಮೂರ್ತಿ ರೂಪದಿಂದ ದರ್ಶನ ನೀಡಿ, ಅತ್ರಿ ದಂಪತಿಗಳಿಗೆ ಆಶೀರ್ವದಿಸಿ “ನಿಮ್ಮ ಆತಿಥ್ಯದಿಂದ ಸಂತುಷ್ಟರಾಗಿದ್ದೇವೆ ಏನು ವರಬೇಕೋ ಕೇಳಿ ಎಂದು ಹೇಳಿದರು”.

ಅತ್ರಿ ದಂಪತಿಗಳು ತ್ರಿಮೂರ್ತಿಗಳೇ ನಮ್ಮ ಮಕ್ಕಳಾಗಬೇಕು ಎಂಬ ವರ ಬೇಡಿದರು. ಆದ್ದರಿಂದ ತ್ರಿಮೂರ್ತಿಗಳು ಅತ್ರಿ ಅನುಸೂಯ ದಂಪತಿಗಳ ಮಕ್ಕಳಾಗಿದ್ದರು… ಕೆಲ ಕಾಲ ಕಳೆದ ನಂತರ ತಂದೆ ತಾಯಿಯ ಆಶೀರ್ವಾದ ಪಡೆದು  ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೂ , ಶಿವನು ದುರ್ವಾಸನಾಗಿ ತಪ್ಪಸ್ಸಿಗೂ ಹೋದರು. ಶ್ರೀಮನ್ ನಾರಾಯಣನು ದತ್ತನಾಗಿ ತಂದೆ ತಾಯಿಯ ಸೇವೆ ಮಾಡುತ್ತ ಅಲ್ಲಿಯೇ ಉಳಿದನು. ಇಂದಿಗೂ ದತ್ತಾತ್ರೇಯನು ಗುರುವಾಗಿ  ಬೇರೆ ಬೇರೆ ಅವತಾರದಿಂದ ಭಕ್ತರನ್ನು ಉದ್ದಾರ ಮಾಡುತ್ತಿದ್ದಾನೆ.

ಶ್ರೀಪಾದ ಶ್ರೀವಲ್ಲಭ

ದತ್ತಾತ್ರೇಯನು ಶ್ರೀಪಾದ ಶ್ರೀವಲ್ಲಭರಾಗಿ ಗಣೇಶ್ ಚತುರ್ಥಿ ಯಂದು ಜನಿಸಿದರು ಬಾಲ್ಯದಿಂದಲೇ  ಹಲವಾರು ಪವಾಡಗಳನ್ನೂ ತೋರಿಸಿದರು, ಅವರು ಇಂದಿಗೂ ಕುರುವಪುರದಲ್ಲಿ ಸಂಹಿತರಾಗಿದ್ದರೆ ಹಾಗೂ ಪ್ರತಿದಿನ ಭಿಕ್ಷೆ ಸ್ವೀಕರಿಸಲು ಒಂದಲೊಂದು ರೂಪದಲ್ಲಿ ಬರುತ್ತಾರೆ ಎಂಬ ನಂಬಿಕೆ ಇದೆ.

ಶ್ರೀ ನೃಸಿಂಹ ಸರಸ್ವತಿ

ದತ್ತಾತ್ರೇಯನು ಶ್ರೀ ನೃಸಿಂಹ ಸರಸ್ವತಿಯಾಗಿ ಕಾರಂಜಾ ಗ್ರಾಮದಲ್ಲಿ ಜನಸಿದರು. ಮಗು ಹುಟ್ಟಿದಾಗಲೇ ಓಂಕಾರವನ್ನು ಉಚ್ಚರಿಸಿತು.  ಉಪನಯನದ ಸಂದರ್ಭದವರೆಗೂ ಓಂಕಾರ ಹೊರತು ಬೇರೇನೂ ಮಾತಾಡದ ಮಗು ಮಾತೃ ಭಿಕ್ಷೆ ಸಮಯದಲ್ಲಿ ನಾಲ್ಕು ವೇದಗಳನ್ನು ಸುಲಲಿತವಾಗಿ ಹೇಳುತ್ತಾ ಎಲ್ಲರಲ್ಲಿ ಆಚಾರಿ ಮೂಡಿಸಿದ. ನಂತರ ಸನ್ಯಾಸಿಯಾಗಿ ದೇಶ ಸಂಚಾರ ಮಾಡುತ್ತ ಭಕ್ತರನ್ನು ಉದ್ಧರಿಸುತ್ತ ಗಾಣಗಾಪುರದ ಭೀಮ-ಅಮರಜ ಸಂಗಮ ಕ್ಷೇತ್ರದ ಬಳಿ ಒಂದು ಒದುಂಬರ ವೃಕ್ಷವಿದೆ ಅಲ್ಲಿ ನೆಲೆಸಿದ್ದರು. ಗಂಗಾಪುರದಲ್ಲಿ ಇಂದಿಗೂ ಪ್ರತಿನಿತ್ಯ ಭಿಕ್ಷೆ ರೂಪದಲ್ಲಿ ಅನ್ನದಾನ ನಡೆಯುತ್ತದೆ. ದತ್ತನು ಯಾವುದಾರೊಂದು ರೂಪದಲ್ಲಿ ಬಂದು ಭಿಕ್ಷೆ ಸ್ವೀಕರಿಸುತ್ತಾನೆಂಬ ನಂಬಿಕೆ ಇದೆ.

ಶ್ರೀ ಗುರುಚರಿತ್ರೆ ಗ್ರಂಥವನ್ನು ಭಕ್ತಿಯಿಂದ ಪಾರಾಯಣ ಮಾಡಿ, ತುಪ್ಪದ ದೀಪ ಹಚ್ಚಿ, ಕರ್ಪೂರದ ಆರತಿ ಮಾಡಿದರೆ. ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬ ವಿಶ್ವಾಸ ಇಂದಿಗೂ ಇದೆ.

ಟಾಪ್ ನ್ಯೂಸ್

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

1-qewqeqw

Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

Karnataka ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು

1-qeqwewqe

Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kambalaHigh-tech touch for Kambala race

Kambala ಓಟಕ್ಕೆ ಹೈಟೆಕ್ ಸ್ಪರ್ಶ; ಗೇಟ್ ತೆರೆದ ಕೂಡಲೇ ಓಟ ಶುರು; ಇಲ್ಲಿದೆ ಸಮಗ್ರ ಮಾಹಿತಿ

JIO SPACE FIBER 1

JioSpace Fiber: ಭಾರತದಲ್ಲಿ ಮತ್ತೊಂದು ಇಂಟರ್ನೆಟ್ ಕ್ರಾಂತಿಗೆ ಜಿಯೋ ಮುನ್ನುಡಿ… ಏನಿದು.?

thumb news web exclusive uv (2) (1)

“ಈ ಕಾಯಿಲೆ” ಇರುವವರು ಅರಿಶಿನ ಹಾಕಿದ ಹಾಲು ಸೇವಿಸಬಾರದು…

thumb web ex (1) (1) (1) (1) (1) (1) copy (1)

ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಿರೋದು ಪಕ್ಕಾ!

web exclusive keer

ಒಂದು ಜಾಹೀರಾತು ದೇಶಕ್ಕೆ ಬೆಂಕಿ ಹಚ್ಚಿತ್ತು.. ಏನಿದು ಪೆಪ್ಸಿಯ ನಂಬರ್ ಫೀವರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

accident

Kunigal; ಬೈಕ್‌ಗೆ ಕಾರು ಡಿಕ್ಕಿ: ಯುವಕರಿಬ್ಬರು ಸ್ಥಳದಲ್ಲೇ ದುರ್ಮರಣ

Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌Election  ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್‌ಡ್ರೈವ್‌; ಸಂಕಷ್ಟದಲ್ಲಿ ಜೆಡಿಎಸ್‌

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ದೂರಿನ ಹಿಂದೆ ದುರುದ್ದೇಶ; ರೇವಣ್ಣ ಮನೆಯಲ್ಲಿ ಯಾರೂ ಹಿಂಸೆ ಕೊಟ್ಟಿಲ್ಲ: ಗೌರಮ್ಮ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

ನಮ್ಮ ವಿರುದ್ಧ ಷಡ್ಯಂತ್ರ: ಎಚ್‌.ಡಿ. ರೇವಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.