4 ತಿಂಗಳ ಹಸುಳೆಯ ಅತ್ಯಾಚಾರ, ಕೊಲೆ: ಆರೋಪಿಗೆ ನೇಣು ಶಿಕ್ಷೆ
Team Udayavani, May 12, 2018, 5:46 PM IST
ಇಂದೋರ್ : ನಾಲ್ಕು ತಿಂಗಳ ಹಸುಳೆಯನ್ನು ಅಪಹರಿಸಿ ಅತ್ಯಾಚಾರಗೈದು ಕೊಲೆ ಮಾಡಿದ್ದ 21 ವರ್ಷದ ವಿಕೃತ ಕಾಮಿ ಯುವಕನಿಗೆ ಇಲ್ಲಿನ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ನೀಡಿದೆ.
ಪ್ರಕರಣ ದಾಖಲಾದ ಕೇವಲ 23 ದಿನಗಳ ಒಳಗೆ ವಿಚಾರಣೆ ನಡೆಸಿ ಆರೋಪಿಗೆ ಮರಣ ದಂಡನೆ ನೀಡುವ ತೀರ್ಪನ್ನು ಕೋರ್ಟ್ ಪ್ರಕಟಿಸಿರುವುದು ಜನರಿಂದ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
ರಾಜವಾಡಾ ಪ್ರದೇಶದ ವಾಣಿಜ್ಯ ಕಟ್ಟಡವೊಂದರ ಕೆಳ ಮಹಡಿಯಲ್ಲಿ ಮಗುವಿನ ಶವ ಪತ್ತೆಯಾಗಿತ್ತ. ತಂದೆ ತಾಯಿಯ ಜತೆಗೆ ನಿದ್ರಿಸಿಕೊಂಡಿದ್ದ ಮಗುವನ್ನು ಆರೋಪಿ ಸುನೀಲ್ ಭೀಲ್ ಎಂಬಾತ ಅಪಹರಿಸಿ ಅತ್ಯಾಚಾರ ಎಸಗಿ ಕೊಲೆಗೈದಿದ್ದ ಎಂದು ಇಂದೋರ್ ಪೊಲೀಸ್ ಉಪ ಮಹಾ ನಿರ್ದೇಶಕ ಎಚ್ ಸಿ ಮಿಶ್ರಾ ತಿಳಿಸಿದ್ದಾರೆ.