ಸುರತ್ಕಲ್‌ ರಾ.ಹೆ.: ಕಾಟಾಚಾರದ ಬಸ್‌ ನಿಲ್ದಾಣ

Team Udayavani, May 15, 2018, 10:43 AM IST

15-May-3.jpg

ಸುರತ್ಕಲ್ : ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುತ್ತಿಗೆದಾರರಿಗೆ ಗುತ್ತಿಗೆ ನೀಡಿದ ಸಲುವಾಗಿ ಕಾಟಾಚಾರದ ಬಸ್‌ ಶೆಲ್ಟರ್‌ಗಳು ನಿರ್ಮಾಣ ಮಾಡುತ್ತಿದ್ದು, ಇದ್ದು ಉಪಯೋಗವಿಲ್ಲದಂತಾಗಿದೆ. ಇನ್ನೊಂದೆಡೆ ಹೆದ್ದಾರಿ ಬಳಿಯೇ ನಿರ್ಮಿಸುತ್ತಿರುವ ಬಸ್‌ ಶೆಲ್ಟರ್‌ಗಳಿಂದಾಗಿ ಅಪಘಾತವಲಯ ನಿರ್ಮಾಣವಾಗುತ್ತಿಯೇನೋ ಎಂಬ ಮಾತುಗಳುಸಾರ್ವಜನಿಕರಿಂದ ಕೇಳಿಬರುತ್ತಿವೆ.

ಇಡ್ಯಾ ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನದ ಕೆಳಗಿನ ರಸ್ತೆಗೆ ಹೊಂದಿಕೊಂಡಂತೆ ನಿಲ್ದಾಣ ನಿರ್ಮಿಸಲಾಗುತ್ತಿದ್ದು ಇಲ್ಲಿ ಸರ್ವಿಸ್‌ ರಸ್ತೆಯಿಲ್ಲ. ಬಸ್‌ ನಿಲ್ದಾಣವಾದರೆ ವಿದ್ಯಾರ್ಥಿಗಳು, ಹಿರಿಯರು ನಡೆದಾಡಲು ಸ್ಥಳವಿಲ್ಲದಂತಾಗುತ್ತದೆ ಇನ್ನೊಂದೆಡೆ ದೇಗುಲಕ್ಕೆ ಈ ರಸ್ತೆಯಾಗಿ ಯೇ ಹೋಗಬೇಕಾಗಿದ್ದು ವಾಹನ ತಿರುವಿಗೆ ಅಡಚಣೆಯಾಗಲಿದೆ. ಇಲ್ಲಿ ಬಸ್‌ ಬೇ ಅನತಿ ದೂರದಲ್ಲಿದ್ದರೂ ನಿಲ್ದಾಣ ಇನ್ನೊಂದೆಡೆ ನಿರ್ಮಾಣವಾಗುತ್ತಿದೆ.

ನಿಲ್ದಾಣವೇ ಇಲ್ಲದಲ್ಲಿ ಬಸ್‌ ಶೆಲ್ಟರ್‌
ಹೊನ್ನಕಟ್ಟೆ ಬಳಿ ಕುಳಾಯಿ ಮಹಿಳಾ ಮಂಡಳಿ ಮುಂಭಾಗ ಹೆದ್ದಾರಿಯಲ್ಲಿಯೇ ಬಸ್‌ ಶೆಲ್ಟರ್‌ ನಿರ್ಮಿಸಲಾಗುತ್ತಿದೆ. ಇಲ್ಲಿ ಮುಖ್ಯವಾಗಿ ನಿಲ್ದಾಣವೇ ಇಲ್ಲ. ಆದರೆ ಸಿಗ್ನಲ್‌ ಮುಂದೆ ಬಸ್‌ ನಿಲ್ಲುವುದನ್ನು ತಡೆಯಲು ಈ ಭಾಗದಲ್ಲಿ ಬಸ್‌ ಶೆಲ್ಟರ್‌ ನಿರ್ಮಿಸಲಾಗುತ್ತಿದೆ. ಆದರೆ ಇಲ್ಲಿ ಬಸ್‌ ಬೇ ಇಲ್ಲದ ಕಾರಣ ಬಸ್‌ಗಳು ರಸ್ತೆಯಲ್ಲಿಯೇ ನಿಂತು ಪ್ರಯಾಣಿಕರನ್ನು ಹತ್ತಿ ಇಳಿಸುವ ಕಾರ್ಯ ಅನಿವಾರ್ಯವಾಗಿ ಮಾಡಬೇಕಾಗುತ್ತದೆ.

ಹೆದ್ದಾರಿ ಬದಿ ವ್ಯಾಪಾರ ಕೇಂದ್ರಗಳಿದ್ದು ಪ್ರತೀ ಭಾಗದಲ್ಲಿ ಬಸ್‌ ಶೆಲ್ಟರ್‌ ನಿರ್ಮಾಣಕ್ಕೆ ಅಡೆ ತಡೆ ಬಂದಿದೆ. ಹೀಗಾಗಿ ಅಧಿಕಾರಿಗಳು ಅನಿವಾರ್ಯವಾಗಿ ಖಾಲಿ ಜಾಗ ಹುಡುಕಿ ಬಸ್‌ ಶೆಲ್ಡರ್‌ ನಿರ್ಮಿಸುವತ್ತಾ ಗಮನ ಹರಿಸಿದ್ದಾರೆ.

ಬಸ್‌ ಶೆಲ್ಟರ್‌ ನಿರ್ಮಿಸಿ
ಕೇವಲ ನಾಲ್ಕೈದು ಪ್ರಯಾಣಿಕರು ಕುಳಿತು ಕೊಳ್ಳಲಷ್ಟೇ ಅವಕಾಶವಿದೆ. ಇನ್ನೊಂ ದೆಡೆ ಬಿಸಿಲು, ಮಳೆಯಿಂದ ರಕ್ಷಣೆಯಿಲ್ಲ. ಕುಳಾಯಿ ಬಳಿ ಬಸ್‌ ನಿಲ್ದಾಣ ನಿರ್ಮಾಣ ಅಪಘಾತಕ್ಕೆ ಕಾರಣವಾಗಬಹುದು. ಇಲ್ಲಿ ತಾಂತ್ರಿಕವಾಗಿ ನೋಡಿದರೆ ನಿಲ್ದಾಣಕ್ಕೆ ಸಾಧ್ಯವಾಗದ ಜಾಗ. ಹೀಗಾಗಿ ಬಸ್‌ ಬೇ ಇರುವಲ್ಲಿಯೇ ಬಸ್‌ ಶೆಲ್ಟರ್‌ ನಿರ್ಮಿಸಿ ಎಂದು ಸ್ಥಳೀಯರಾದ ದೀಪಕ್‌ ಕುಳಾಯಿ ಆಗ್ರಹಿಸಿದ್ದಾರೆ.

ಮಳೆಗಾಳಿಗೆ ರಕ್ಷಣೆ ನೀಡದ ನಿಲ್ದಾಣಗಳು 
ಕರಾವಳಿಯಲ್ಲಿ ಮಳೆ ಅಧಿಕವಿದ್ದು ಪ್ರಯಾಣಿಕರಿಗೆ ಈ ಹಿಂದೆ ಸಂಘ – ಸಂಸ್ಥೆಗಳು ನಿರ್ಮಿಸಿದ್ದ ಬಸ್‌ ನಿಲ್ದಾಣಗಳು ಒದ್ದೆಯಾಗದಂತೆ ರಕ್ಷಣೆ ನೀಡುತ್ತಿದ್ದವು.ಆದರೆ ಇದೀಗ ಜಾಹೀರಾತು ಫಲಕ ಅಳವಡಿಕೆಯನ್ನೇ ಕೇಂದ್ರವಾಗಿಸಿ ಬಸ್‌ ನಿಲ್ದಾಣಗಳು ಆಧುನಿಕ ಶೈಲಿಯಲ್ಲಿ ನಿರ್ಮಾಣವಾಗುತ್ತಿವೆ.

 ಸೂಕ್ತ ನಿರ್ದೇಶನ ನೀಡಲಾಗುವುದು
ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಒಂದೇ ಮಾದರಿಯಲ್ಲಿ ಬಸ್‌ ನಿಲ್ದಾಣ ನಿರ್ಮಾಣಕ್ಕೆ ಟೆಂಡರು ನೀಡಲಾಗಿದೆ. ಉತ್ತಮ ಗುಣಮಟ್ಟದ ಮಾರ್ಬಲ್‌ ಬಳಸಲು ಸೂಚಿಸಲಾಗಿದೆ. ಕೆಲವೆಡೆ ಮಾರ್ಬಲ್‌ ತುಂಡಾದ ಘಟನೆಯೂ ಗಮನಕ್ಕೆ ಬಂದಿದೆ. ಈ ಬಗ್ಗೆ ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಲಾಗುವುದು.
– ವಿಜಯ್‌ ಸ್ಯಾಮ್ಸನ್‌,
  ಹೆದ್ದಾರಿ ಇಲಾಖೆ ಪ್ರಾಜೆಕ್ಟ್ ಡೈರೆಕ್ಟರ್‌

ಟಾಪ್ ನ್ಯೂಸ್

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

PM ಮೋದಿ ಹೋದಲ್ಲೆಲ್ಲ ಕಾಂಗ್ರೆಸ್‌ ಗೆದ್ದಿದೆ: ಸಿಎಂ ಸಿದ್ದರಾಮಯ್ಯ

1-24-sunday

Daily Horoscope: ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ, ಅವಿವಾಹಿತರಿಗೆ ವಿವಾಹ ಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-dandeli

Dandeli: 6 ವರ್ಷದ ಮಗುವನ್ನು ನಾಲಾಕ್ಕೆಸೆದ ತಾಯಿ: ಮುಂದುವರಿದ ಮಗುವಿನ ಶೋಧ ಕಾರ್ಯಾಚರಣೆ

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

T20 Cricket; ಈ ದಿನಗಳಲ್ಲಿ ಮೈದಾನ ಗಾತ್ರ ಅಪ್ರಸ್ತುತ: ಅಶ್ವಿ‌ನ್‌

Terror Attack On IAF Convoy In poonch

Poonch; ವಾಯುಸೇನೆ ವಾಹನದ ಮೇಲೆ ಉಗ್ರ ದಾಳಿ; ಓರ್ವ ಹುತಾತ್ಮ, ನಾಲ್ವರಿಗೆ ಗಾಯ

2-vitla

Vitla: ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

ಬಿಸಿಲ ಬೇಗೆಯ ಪರಿಣಾಮ; ಜಾನುವಾರುಗಳಲ್ಲಿ ಅನಾರೋಗ್ಯದ ಪ್ರಮಾಣ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.