ಮೋದಿ ಸರ್ಕಾರದ ಸಾಧನೆ ಹೇಗಿದೆ ಗೊತ್ತೇ?


Team Udayavani, May 26, 2018, 3:31 PM IST

charaka.jpg

ಯುಪಿಎ ಆಡಳಿತವು ಅಂತಾರಾಷ್ಟ್ರೀಯ ಸಮುದಾಯದಲ್ಲಿ ಭಾರತದ ಭವಿಷ್ಯದ ಬಗ್ಗೆ ಅಸಮಾಧಾನ ಮೂಡುವಂತೆ ಮಾಡಿತ್ತು ಆದರೆ ಪ್ರಸಕ್ತ ಸರ್ಕಾರದ ಗಮನ ಸೆಳೆಯುವಂಥ ಸಾಧನೆಯೆಂದರೆ, ಜಗತ್ತಿನ ಎದುರು ಭಾರತದ ಇಮೇಜ್‌ ಅನ್ನು ಸರಿಪಡಿಸಿದ್ದು ಮತ್ತು ಭಾರತ ತನ್ನ ಪೂರ್ಣ ಸಾಮರ್ಥಯವನ್ನು ತಲುಪಲಿದೆ ಎಂದು ಜಾಗತಿಕ ಸಮುದಾಯಕ್ಕೆ ಖಾತ್ರಿಪಡಿಸಿದ್ದು. ಇಂದು ಜಾಗತಿಕ ಸಮುದಾಯಕ್ಕೆ ಭಾರತದ ಬಗ್ಗೆಯಿದ್ದ ನಿಲುವು
ಬದಲಾಗಿದೆ ಎನ್ನುವುದು ಸ್ಪಷ್ಟ. ಈ ಮಾತನ್ನು ಇಂದು ಹೆಚ್ಚುತ್ತಲೇ ಸಾಗುತ್ತಿರುವ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ಡಿಐ)ಯೇ ಸಾರುತ್ತಿದೆ. 

ನರೇಂದ್ರ ಮೋದಿಯವರ ಸರ್ಕಾರ ನಾಲ್ಕು ವರ್ಷ ಅಧಿಕಾರ ಪೂರೈಸಿದೆ. ಇದೇ ಹೊತ್ತಿನಲ್ಲೇ ಇಡೀ ದೇಶ ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗಾಗಿ ಸಜ್ಜುಗೊಳ್ಳುತ್ತಿದೆ. ಹೀಗಾಗಿ, ಪ್ರಸಕ್ತ ಸರ್ಕಾರದ ನೀತಿ ನಿರೂಪಣೆ, ಕಾರ್ಯವಿಧಾನವನ್ನು ರೂಪಿಸುತ್ತಿರುವ ಆಂತರಿಕ ಪ್ರೇರಣೆಗಳೇನು ಎನ್ನುವುದನ್ನು ಅರ್ಥಮಾಡಿಕೊಳ್ಳುವುದಕ್ಕೆ ಇದು ಸುಸಮಯ. 2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸಾಧಿಸಿದ ಗೆಲುವು ಭಾರತೀಯ ರಾಜಕೀಯದಲ್ಲೇ ಅತಿ ದೊಡ್ಡ ಪಲ್ಲಟಕ್ಕೆ ಕಾರಣವಾಯಿತು. ಅಂದಿನ ಜನಾದೇಶವು ಅಂದಿನ ಮಂದಗತಿಯ ಆಡಳಿತವನ್ನು ಧಿಕ್ಕರಿಸಿ, ವೇಗದ ಸುಧಾರಣೆಯ ಪರವಾಗಿತ್ತು. ಆರ್ಥಿಕ ಬೆಳವಣಿಗೆಗೆ ವೇಗ ನೀಡುವ, ಭ್ರಷ್ಟಾಚಾರ ಮುಕ್ತ ವಾತಾವರಣವನ್ನು ನಿರ್ಮಿಸುವ ಮತ್ತು ಸಹಭಾಗಿತ್ವದ ಅಭಿವೃದ್ಧಿಯನ್ನು ಸಾಧಿಸುವ ಭರವಸೆಯೊಂದಿಗೆ ಮೋದಿಯವರು ಅಧಿಕಾರಕ್ಕೆ ಬಂದರು.

ಆರ್ಥಿಕ ದೃಷ್ಟಿ: ಹಣಕಾಸು ವಿಷಯದಲ್ಲಿ ಜವಾಬ್ದಾರಿಯುತ ನಡೆಯಿಡಬೇಕು, ಜನ ಸಬಲೀಕರಣಕ್ಕೆ ಪೂರಕವಾಗಿರುವ ಕಾನೂನುಗಳನ್ನು ಮತ್ತು ನೀತಿಗಳನ್ನು ರೂಪಿಸಬೇಕು ಎನ್ನುವುದನ್ನು ಮೋದಿ ಸರ್ಕಾರ ಬಲವಾಗಿ ನಂಬುತ್ತದೆ. ಅಂತ್ಯೋದಯದ ಉದ್ದೇಶದೊಂದಿಗೆ ಮುನ್ನಡೆಯುತ್ತಿರುವ ಈ ಸರ್ಕಾರ ನಿಸ್ಸಂಶಯವಾಗಿಯೂ ಬಡವರ ಪರವಾಗಿದೆ, ಅಸಮಾನತೆ ಮತ್ತು ಆರ್ಥಿಕ ಪಲ್ಲಟಗಳು ಎದುರಿಡುವ ಸವಾಲುಗಳನ್ನು ಎದುರಿಸಲು ಕಟಿಬದ್ಧವಾಗಿದೆ.

ಮೂಲಸೌಕರ್ಯಾಭಿವೃದ್ಧಿಯತ್ತ ಹೆಚ್ಚು ಗಮನ ಹರಿಸಬೇಕೆಂದರೆ ಮತ್ತು ಸಮಾಜದಲ್ಲಿನ ಆರ್ಥಿಕವಾಗಿ
ದುರ್ಬಲವಾಗಿರುವ ವರ್ಗಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದರೆ ಸಹಜವಾಗಿಯೇ ಸರ್ಕಾರ ಹೆಚ್ಚು ಖರ್ಚು
ಮಾಡಬೇಕಾಗುತ್ತದೆ. ಆದರೆ ವಿತ್ತೀಯ ಕೊರತೆಯನ್ನು ತಗ್ಗಿಸುತ್ತಲೇ ಇದನ್ನು ಸಾಧಿಸಬೇಕೆಂದರೆ ಜಿಡಿಪಿ ಅನುಪಾತಕ್ಕೆ ಸರಿಹೊಂದುವಂತೆ ತೆರಿಗೆ ಹೆಚ್ಚಿಸುವ ಅಗತ್ಯವಿರುತ್ತದೆ. ಇದನ್ನು ಮನಗಂಡ ಮೋದಿ ಸರ್ಕಾರ ಈ ಗುರಿ ತಲುಪುವುದಕ್ಕಾಗಿ ಸ್ವಾತಂತ್ರಾÂ ನಂತರ ಅತಿದೊಡ್ಡ ತೆರಿದೆ ಸುಧಾರಣೆಯಾಗಿರುವ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ(ಜಿಎಸ್‌ಟಿ)ಯನ್ನು ಅನುಷ್ಠಾನಕ್ಕೆ ತಂದಿತು. ರೆಜಿಸ್ಟ್ರೇಷನ್‌, ಮೌಲ್ಯಮಾಪನ, ಕ್ರೆಡಿಟ್‌ ಮತ್ತು ರೀಫ‌ಂಡ್‌ನ‌ಂಥ ಕಾರ್ಯಗಳನ್ನು ಆನ್‌ಲೈನ್‌ ವೇದಿಕೆಯಲ್ಲಿ ತಂದು ಹಸ್ತಕ್ಷೇಪ ಮತ್ತು ಕಿರುಕುಳವನ್ನು
ತಡೆಯುವಂಥ ವ್ಯವಸ್ಥೆ ಸೃಷ್ಟಿಯಾಗಿದೆ. ಇದರಿಂದ ಜಿಎಸ್‌ಟಿಯು ದೇಶದಲ್ಲಿನ ತೆರಿಗೆ ವ್ಯಾಪ್ತಿಯನ್ನು ವಿಸ್ತರಿಸಲು
ಸಫ‌ಲವಾಗಿದೆ.

ಮೋದಿ ಸರ್ಕಾರ ಪ್ರಬಲ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣ ಹೊಂದಿದೆ. ತತ#ಲವಾಗಿಯೇ ಹಣದುಬ್ಬರ ತಗ್ಗಿದೆ, ಹಣಕಾಸಿನ ಕೊರತೆ ನಿಯಂತ್ರಣಕ್ಕೆ ಬಂದಿದೆ. ಡಿಮಾನಿಟೈಸೇಷನ್‌, ನೇರ ಲಾಭ ವರ್ಗಾವಣೆ(ಡಿಬಿಟಿ),
ಜನಧನ ಖಾತೆ, ಬೇನಾಮಿ ಆಸ್ತಿ ಕಾಯ್ದೆ ಮತ್ತು ಸರ್ಕಾರಿ ಕಾರ್ಯವಿಧಾನದಲ್ಲಿ ಪಾರದರ್ಶಕತೆ ತರುವ ಮೂಲಕ
ಭ್ರಷ್ಟಾಚಾರವನ್ನು ಹೊಡೆದೋಡಿಸಲು ಎಲ್ಲಾ ರೀತಿಯಲ್ಲೂ ಸರ್ಕಾರ ಪ್ರಯತ್ನಿಸುತ್ತಿದೆ. ಖೊಟ್ಟಿ ಕಂಪನಿಗಳ ರಿಜಿಸ್ಟ್ರೇಷನ್‌ರದ್ದು, ದ್ವಿಪಕ್ಷೀಯ ತೆರಿಗೆ ಒಪ್ಪಂದಗಳ ಮರು ನಿರೂಪಣೆ, ಆದಾಯ ಘೋಷಣೆ ನಿಬಂಧ…ಇವೆಲ್ಲವೂ ಈ ಬದಲಾವಣೆಯ ಹಾದಿಯಲ್ಲಿನ ಅತಿದೊಡ್ಡ ಹೆಜ್ಜೆಗಳು. ದಿವಾಳಿತನ ಸಂಹಿತೆ(ಇನ್ಸಾಲ್ವೆನ್ಸಿ ಆ್ಯಂಡ್‌ ಬ್ಯಾಂಕ್‌ರಪ್ಟಿ ಕೋಡ್‌) ವಿತ್ತ ಮಾರುಕಟ್ಟೆಯಲ್ಲಿನ ಅತಿದೊಡ್ಡ ಸುಧಾರಣೆಯಾಗಿದೆ. ಇಂದು ಡಿಫಾಲ್ಟರ್‌ ಕಂಪೆನಿಗಳ ಪ್ರವರ್ತಕರು ತಮ್ಮ ಕಂಪೆನಿಗಳ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವ ಸವಾಲನ್ನು ಎದುರಿಸುತ್ತಿದ್ದಾರೆ. ವಿತ್ತ ಸಂಸ್ಥೆಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಾಂಸ್ಥಿಕ ವ್ಯವಸ್ಥೆಯೊಂದನ್ನು ರೂಪಿಸಲು ರೂಪು ಪಡೆದಿದೆ ಎಫ್ಡಿಆರ್‌ಐ ಮಸೂದೆ. ಆದರೆ, ದುರದೃಷ್ಟವಶಾತ್‌ ಇಂಥ ಮಸೂದೆಯನ್ನು ಕಾಂಗ್ರೆಸ್‌ ಪಕ್ಷ ವಿರೋಧಿಸುತ್ತಿದೆ.

ಯುಪಿಎ ಸರ್ಕಾರದ ಆಳ್ವಿಕೆಯಲ್ಲಿ ಭಾರತದ ಇಮೇಜ್‌ಗೆ ಧಕ್ಕೆಯಾಗಿತ್ತು. ಅಂತಾರಾಷ್ಟ್ರೀಯ ಸಮುದಾಯದಲ್ಲಿ
ಭಾರತದ ಭವಿಷ್ಯದ ಬಗ್ಗೆ ಅಸಮಾಧಾನ ಮೂಡುವಂತೆ ಮಾಡಿತ್ತು ಆಗಿನ ಸರ್ಕಾರ. ಪ್ರಸಕ್ತ ಸರ್ಕಾರದ ಗಮನ
ಸೆಳೆಯುವಂಥ ಸಾಧನೆಯೆಂದರೆ, ಜಗತ್ತಿನ ಎದುರು ಭಾರತದ ಇಮೇಜ್‌ ಅನ್ನು ಸರಿಪಡಿಸಿದ್ದು ಮತ್ತು ಭಾರತ ತನ್ನ
ಪೂರ್ಣ ಸಾಮರ್ಥಯವನ್ನು ತಲುಪಲಿದೆ ಎಂದು ಜಾಗತಿಕ ಸಮುದಾಯಕ್ಕೆ ಖಾತ್ರಿಪಡಿಸಿದ್ದು. ಇಂದು ಜಾಗತಿಕ
ಸಮುದಾಯಕ್ಕೆ ಭಾರತದ ಬಗ್ಗೆಯಿದ್ದ ನಿಲುವು ಬದಲಾಗಿದೆ ಎನ್ನುವುದನ್ನು ಹೆಚ್ಚುತ್ತಲೇ ಇರುವ ವಿದೇಶಿ ನೇರ ಬಂಡವಾಳ ಹೂಡಿಕೆ(ಎಫ್ಡಿಐ) ಸಾರುತ್ತಿದೆ.

ಸಾಮಾಜಿಕ ದೃಷ್ಟಿ: ಸಾಮಾಜಿಕ ಸುಧಾರಣೆಗಾಗಿ ಮೋದಿ ಸರ್ಕಾರ ತಂದಿರುವ ಕಾರ್ಯಕ್ರಮಗಳು ಮತ್ತು ನೀತಿಗಳನ್ನು ನೋಡಿದಾಗ, ಸಾಮಾಜಿಕ ಉನ್ನತೀಕರಣಕ್ಕೆ ವೇಗ, ವ್ಯಾಪ್ತಿ ಮತ್ತು ಸಾಮೂಹಿಕ ಶಕ್ತಿಯ ಅಗತ್ಯವಿದೆ ಎನ್ನುವುದನ್ನು ಅದು ನಂಬಿರುವುದು ಗೋಚರಿಸುತ್ತದೆ.

“ಸ್ವತ್ಛ ಭಾರತ’ದಡಿಯಲ್ಲಿನ ನೈರ್ಮಲ್ಯ ಅಭಿಯಾನವು ಜಾತಿ, ಧರ್ಮ, ಲಿಂಗ ತಾರತಮ್ಯ ಮಾಡದೇ ಬಡವರೆಲ್ಲರಿಗೂ ಗೌರವಯುತ ಜೀವನ ಒದಗಿಸುವ ಗುರಿಯನ್ನು ಹಾಕಿಕೊಂಡಿದೆ. “ಬೇಟಿ ಬಚಾವೋ, ಬೇಟಿ ಪಢಾವೋ’ದಂಥ ಕಾರ್ಯಕ್ರಮವನ್ನು ಜಾರಿಗೆ ತಂದು ನಮ್ಮ ಹೆಣ್ಣುಮಕ್ಕಳಿಗೆ ಸಮಾನ ಸ್ಥಾನ, ಅವಕಾಶ ನೀಡುವುದಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಜನಜಾಗೃತಿ ಮತ್ತು ಜನಸಹಭಾಗಿತ್ವ ರೂಪಿಸುವಲ್ಲಿ ಈ ಸರ್ಕಾರ ಯಶಸ್ವಿಯಾಗಿದೆ. ಇನ್ನು ತ್ರಿವಳಿ ತಲಾಖ್‌ ಎನ್ನುವುದು ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಮಾಡುತ್ತಿದೆ ಎನ್ನುವ ಸುಪ್ರೀಂ ಕೋರ್ಟ್‌ನ ನಿಲುವನ್ನು ಬೆಂಬಲಿಸುತ್ತದೆ ಮೋದಿ ಸರ್ಕಾರ.

ರಾಜಕೀಯ ದೃಷ್ಟಿ: “ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌ ‘ಎನ್ನುವ ಘೋಷವಾಕ್ಯವನ್ನೇ ಗಮನಿಸಿ. ಮೋದಿ ಸರ್ಕಾರ,
ಸಮಾಜದ ಪ್ರತಿಯೊಂದು ವರ್ಗದ ಬೆಂಬಲವನ್ನು ಪಡೆಯಲು ಬಯಸುತ್ತದೆ ಮತ್ತು ಎಲ್ಲರ ಏಳಿಗೆಗಾಗಿ ಶ್ರಮಿಸುತ್ತದೆ ಎನ್ನುವುದನ್ನಿದು ಸೂಚಿಸುತ್ತದೆ. ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುನ್ನಡೆಯುವ ಸರ್ಕಾರವಲ್ಲ ಇದು. ಈ ವಿಷಯದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎಗೆ ಇದ್ದ ನಿಲುವನ್ನು ಮರೆಯುವುದಕ್ಕಂತೂ ಸಾಧ್ಯವಿಲ್ಲ. 2004-2014ರವರೆಗಿನ ಆಡಳಿತದಲ್ಲಿ ಯುಪಿಎ ಸರ್ಕಾರ, ಚುನಾವಣಾ ಲಾಭ ಪಡೆಯುವುದಕ್ಕಾಗಿ ಸಮಾಜದಲ್ಲಿನ ಬಿರುಕುಗಳನ್ನೇ ಬಂಡವಾಳವಾಗಿಸಿಕೊಳ್ಳಲು ಪ್ರಯತ್ನಿಸಿತು. ಹಿಂದೂಗಳನ್ನೇ ಟಾರ್ಗೆಟ್‌ ಮಾಡಿ “ಕೋಮು ಹಿಂಸಾಚಾರ ಮಸೂದೆ’ಗೆ ಅನುಮೋದನೆ ಪಡೆಯಲು ಪ್ರಯತ್ನಿಸಿತು. ಅಂತೆಯೇ ಶಿಕ್ಷಣ ಹಕ್ಕು ಕಾಯ್ದೆಯ ವ್ಯಾಪ್ತಿಯಿಂದ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರಗಿಟ್ಟಿತು. ಆ ಮೂಲಕ
ಹಿಂದೂಧರ್ಮದಿಂದ ಪ್ರತ್ಯೇಕಗೊಳ್ಳಲು ಅನೇಕ ಗುಂಪುಗಳಿಗೆ ಪ್ರೋತ್ಸಾಹ ನೀಡಿತು.

ಇದಷ್ಟೇ ಅಲ್ಲ, ಮುಸಲ್ಮಾನರಿಗಾಗಿಯೇ ಸಾಚಾರ್‌ ಸಮಿತಿಯನ್ನು ರಚಿಸಿದ ಕಾಂಗ್ರೆಸ್‌ ನಂತರ ಅಸಂವಿಧಾನಿಕ
ಬದಲಾವಣೆಗಳನ್ನೂ ತರಲು ಪ್ರಯತ್ನಿಸಿತು. ಮುಸಲ್ಮಾನ ಮತಗಳನ್ನು ಕ್ರೋಢೀಕರಿಸುವುದಕ್ಕಾಗಿ “ಕೇಸರಿ
ಭಯೋತ್ಪಾದನೆ’ ಎಂಬ ಸಂಪೂರ್ಣ ಸುಳ್ಳು ಕಥೆಯನ್ನು ಹೆಣೆಯಿತು. ಆದರೆ ಇನ್ನೊಂದೆಡೆ ಮೋದಿ ಸರ್ಕಾರದ
ಕಾರ್ಯವೈಖರಿ ಮತ್ತು ನಿಲುವು ಭಿನ್ನವಾಗಿದೆ. ಪರಿಣಾಮಕಾರಿ ಆಡಳಿತದಿಂದ ಮತ್ತು ಜನರಿಗೆ ವೇಗವಾಗಿ ಸ್ಪಂದಿಸುವುದರಿಂದ ಚುನಾವಣಾ ಯಶಸ್ಸು ಖಾತ್ರಿಯಾಗುತ್ತದೆ ಎಂಬ ನಂಬಿಕೆ ಮೋದಿಯವರದ್ದು. ಅದರಂತೆಯೇ ಸಕ್ಷಮ ಕಾರ್ಯವಿಧಾನದ ಮೂಲಕ ತಮಗೆ ನಾಲ್ಕು ವರ್ಷಗಳ ಹಿಂದೆ ಸಿಕ್ಕಿದ್ದ ಜನಾದೇಶವನ್ನು ಗೌರವಿಸುವ ಕೆಲಸ
ಮಾಡುತ್ತಿದ್ದಾರವರು. ಉತ್ತಮ ಆರ್ಥಿಕತೆಯೇ ಉತ್ತಮ ರಾಜಕೀಯ ಎಂದೂ ನಂಬುತ್ತದೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತ. ಅಧಿಕಾರದಲ್ಲಿರುವ ಕೆಲವೇ ಕೆಲವರ ಹಿತಾಸಕ್ತಿಗಾಗಿ ಆಡಳಿತ ದುರುಪಯೋಗ ಮಾಡಿಕೊಳ್ಳುವ ಹಿಂದಿನ ಸರ್ಕಾರಗಳಂತಿಲ್ಲ ಈ ಸರ್ಕಾರ. ಉತ್ತರದಾಯಿತ್ವವನ್ನೇ ಆದ್ಯತೆಯಾಗಿಸಿ ಅದಕ್ಕಾಗಿ ಉನ್ನತ ಮಾನದಂಡಗಳನ್ನು, ಮೌಲ್ಯಮಾಪನ ವ್ಯವಸ್ಥೆಯನ್ನು ಸ್ಥಾಪಿಸಿದೆ. 2014ರ ನಂತರ ಬಿಜೆಪಿಯು ವಿಧಾನಸಭಾ ಚುನಾವಣೆಗಳಲ್ಲಿ ಸಾಧಿಸುತ್ತಿರುವ ಯಶಸ್ಸು, ಮೋದಿ ಸರ್ಕಾರ ಕೇಂದ್ರ ಮಟ್ಟದಲ್ಲಿ ಮಾಡುತ್ತಿರುವ
ಕೆಲಸದ ಪ್ರತಿಫ‌ಲ ಎನ್ನುವುದಂತೂ ನಿಜ.

(ಲೇಖಕರು ಬಿಜೆಪಿಯ ರಾಷ್ಟ್ರೀಯ ವಕ್ತಾರರು)

– ಗೋಪಾಲಕೃಷ್ಣ ಅಗರ್ವಾಲ್‌

ಟಾಪ್ ನ್ಯೂಸ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.