ಮುಂಬಯಿ:ವ್ಯಕ್ತಿಯ ಕಿಸೆಯಲ್ಲಿ ಮೊಬೈಲ್ ಸ್ಫೋಟ!;ಏನಾಯಿತು?ವಿಡಿಯೋ ನೋಡಿ
Team Udayavani, Jun 6, 2018, 3:56 AM IST
ಮುಂಬಯಿ: ನಗರದ ಭಾಂಡುಪ್ ಪ್ರದೇಶದ ರೆಸ್ಟೋರೆಂಟ್ವೊಂದರಲ್ಲಿ ವ್ಯಕ್ತಿಯೊಬ್ಬನ ಶರ್ಟ್ನ ಕಿಸೆಯಲ್ಲಿದ್ದ ಮೊಬೈಲ್ ಏಕಾಏಕಿ ಸ್ಫೋಟಗೊಂಡ ಘಟನೆ ಸೋಮವಾರ ನಡೆದಿದೆ. ಸಿಸಿಟಿವಿ ವಿಡಿಯೋ ನೋಡಿ
ಮೊಬೈಲ್ ಸ್ಫೋಟಗೊಳ್ಳುತ್ತಿದ್ದಂತೆ ಹೊಟೇಲ್ನಲ್ಲಿ ಗ್ರಾಹಕರು ದಿಕ್ಕಾಪಾಲಾಗಿ ಓಡಿದ್ದಾರೆ. ಬಾಂಬ್ ಸ್ಫೋಟವಾಯಿತೆಂದು ಕೆಲವರು ಬೆಚ್ಚಿ ಬಿದ್ದು ಹೊಟೇಲ್ನಿಂದ ಹೋರಗೋಡಿ ಬಂದಿದ್ದಾರೆ.
ಮೊಬೈಲ್ ಸ್ಫೋಟದಿಂದ ವ್ಯಕ್ತಿಯ ಎದೆ ಭಾಗಕ್ಕೆ ಗಾಯಗಳಾಗಿದ್ದು ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.