ವಿದ್ಯುತ್ ತಂತಿ ಮೇಲೆ ಮರಗಳು: ಅಪಾಯ ಭೀತಿ
Team Udayavani, Jun 8, 2018, 4:21 PM IST
ಬೆಳ್ತಂಗಡಿ : ನಾವೂರು ಗ್ರಾಮದ ಕೈಕಂಬ-ಹತ್ಯಡ್ಕ ರಸ್ತೆ ಬದಿ ಬಾಗಿದ್ದು, ತೆರವುಗೊಳಿಸದಿದ್ದಲ್ಲಿ ಅಪಾಯ ಕಾದಿದೆ. ಕೆಲವು ಭಾಗಗಳಲ್ಲಿ ವಿದ್ಯುತ್ ಕಂಬಗಳ ಮೇಲೆ ಅಕೇಶಿಯಾ ಮರಗಳು ಆವರಿಸಿದ್ದು, ವಿದ್ಯುತ್ ಕಂಬಗಳು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಮಳೆಗಾಲದಲ್ಲಿ ಗಾಳಿ-ಮಳೆಗೆ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂಗೆ ಹಲನವು ಬಾರಿ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು.
ಒಂದು ವೇಳೆ ತಂತಿ ಮೇಲೆ ಮರ ಬಿದ್ದಲ್ಲಿ ಕಂಬಗಳಿಗೆ ಹಾನಿಯಾಗುವ ಸಾಧ್ಯತೆಯಿದೆ ಹಾಗೂ 25ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಕಡಿತಗೊಳಿಸುವ ಸಾಧ್ಯತೆಯೂ ಹೆಚ್ಚಾಗಿದೆ.