ಪರಿಸರ ಸ್ನೇಹಿ ಫ್ಲೈಓವರ್‌ ಆದ್ಯತೆಯಾಗಲಿ


Team Udayavani, Sep 16, 2018, 12:45 PM IST

16-sepctember-12.jpg

ನಿತ್ಯವೂ ಟ್ರಾಫಿಕ್‌ ಕಿರಿಕಿರಿ, ರಸ್ತೆ ದಾಟಲು ಸಮಸ್ಯೆ, ಮಿತಿ ಮೀರಿದ ಧೂಳು… ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಬೇಕೆಂದಾದರೆ ಎಲ್ಲರೂ ಬಯಸುವುದು ಪರಿಸರ ಸ್ನೇಹಿ ಫ್ಲೈಓವರ್‌. ನಮ್ಮ ದೇಶದಲ್ಲಿ ಇಂದು ಬಹುತೇಕ ಹೆಚ್ಚಿನ ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿರುವುದೇ ಇಲ್ಲಿ ವಾಹನ ದಟ್ಟಣೆಗೆ ಪ್ರಮುಖ ಕಾರಣ. ಹೀಗಾಗಿ ನಗರದ ಜನಸಂಚಾರ ವ್ಯವಸ್ಥೆಗಾಗಿಯೇ ಹಲವಾರು ಪರ್ಯಾಯ ಮಾದರಿಗಳನ್ನು ನಿರಂತರವೂ ಪ್ರಯತ್ನಿಸಲಾಗುತ್ತಿದೆ.

ನಗರದಲ್ಲಿ ಜನಸಂಚಾರ ಹಾಗೂ ವಾಹನಗಳ ಸಂಖ್ಯೆ ಹೆಚ್ಚು ಆಗಿರುವುದರಿಂದ ರಸ್ತೆ ಸಂಚಾರಕ್ಕಾಗಿ ವಿಭಿನ್ನವಾದ ಅತ್ಯಾಧುನಿಕ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ, ಟ್ರಾಫಿಕ್‌ನ ಕಿರಿಕಿರಿ ತಪ್ಪಿಸಲೆಂದು ಫ್ಲೈ ಒವರ್‌ಗಳನ್ನು ನಿರ್ಮಿಸಲಾಗಿದೆ. ಇದೊಂದು ಅಭಿವೃದ್ಧಿ ಪಥದ ಆಲೋಚನೆ ಆದರೂ ಇದೂ ಕೂಡ ಪರಿಸರ ಸ್ನೇಹಿಯಾಗಿ ರೂಪುಗೊಳ್ಳಬೇಕಿದೆ.

ಈಗ ಇರುವ ಫ್ಲೈ ಓವರ್‌ ಗಳು ಕೇವಲ ವಾಹನಗಳ ಸಂಚಾರಕ್ಕಾಗಿ ಮಾತ್ರ ಉಪಯೋಗವಾಗುತ್ತಿದೆ. ವಿನಾಃ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಟ್ರಾಫಿಕ್‌ನ ಕಿರಿಕಿರಿಯನ್ನು ಸ್ಪಲ್ಪ ಮಟ್ಟಿಗೆ ಕಡಿಮೆ ಮಾಡಿರಬಹುದು. ಆದರೆ ಅಷ್ಟೇನೂ ಪರಿಣಾಮಕಾರಿಯಾಗಿ ಬೆಳೆದಿಲ್ಲ. ಮೆಕ್ಸಿಕೋ ಫ್ಲೈ ಓವರ್‌ಗಳೆಲ್ಲ ಪರಿಸರ ಸ್ನೇಹಿ ರಸ್ತೆಯಲ್ಲಿ ಸಂಚರಿಸುವ ವಾಹನಗಳು ನಿತ್ಯವೂ ಉಗುಳುವ ಹೊಗೆಯಿಂದಾಗಿ ಇಂದು ಹೆಚ್ಚು ಪರಿಸರ ಮಾಲಿನ್ಯವಾಗುತ್ತಿದೆ. ಭಾರತದಂಥ ದೇಶಗಳಲ್ಲಿ ಇದರ ನಿಯಂತ್ರಣವೇ ಕಷ್ಟ ಎನ್ನುವಂತಾಗಿದೆ. ಆದರೆ ಈ ವಿಚಾರದಲ್ಲಿ ಮೆಕ್ಸಿಕೋ ದೇಶ ಮಾತ್ರ ಕೊಂಚ ವಿಭಿನ್ನ.  

ಮೆಕ್ಸಿಕೋ ದೇಶದ ಒಂದು ನಗರದ ರಸ್ತೆಗಳು ಹಾಗೂ ಫ್ಲೈ ಓವರ್‌ನ ಫಿಲ್ಲರ್‌ ಗಳನ್ನು ಪರಿಸರ ಸ್ನೇಹಿಯಾಗಿ ರೂಪಿಸಲಾಗಿದೆ. ಫ್ಲೈ ಓವರ್‌ ಗಳ ಕಂಬಗಳಿಗೆ ಹಸುರು ಸಿರಿಯನ್ನು ಹೊದಿಸಲಾಗಿದೆ. ಫ್ಲೈಓವರ್‌ನ ತಡೆ ಗೋಡೆಗೆ  ಆಗುವ ಹಾನಿಯನ್ನು ತಡೆಯಲು ಲೋಹದ ಚೌಕಟ್ಟಿಗೆ ವಿಶೇಷ ಸಾಂಧ್ರತೆಯನ್ನು ಹಿಡಿಯಬಲ್ಲ, ಬಟ್ಟೆಗಳಿಂದ ಹಸುರು ಗೋಡೆಗಳನ್ನು ನಿರ್ಮಾಣ ಮಾಡಲಾಗಿದೆ. 

ಇನ್ನೂ ವಿಶೇಷವೆಂದರೆ, ನೆಡುವ ಸಸಿಗಳು, ನೆಲದ ಮಣ್ಣಿನಲ್ಲಿ ಮಾತ್ರವಲ್ಲ ಬಟ್ಟೆಯಿಂದ ನಿರ್ಮಿಸಿದ ಮಣ್ಣಿನ ಪ್ಯಾಕೆಟ್‌ಗಳಲ್ಲೂ ಸಸಿಗಳನ್ನು ನಡೆಸಲಾಗಿದೆ. ಇದೂ ನೀರನ್ನು ಕೂಡ ಶೇಖರಿಸುತ್ತದೆ. ಸುಮಾರು 27 ಕಿ.ಮೀ. ವ್ಯಾಪ್ತಿ ಉದ್ದದ ರಸ್ತೆಯ ಫ್ಲೈಒವರ್‌ 1,000 ಫಿಲ್ಲರ್‌ಗಳಿಗೆ ಹಸುರು ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಇದರಿಂದಾಗಿ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ಉಂಟಾಗುವ ವಿಷಾನಿಲ ಹಾಗೂ ಧೂಳನ್ನು ನಿಯಂತ್ರಿಸಬಹುದಾಗಿದೆ. ಇನ್ನೂ ಮುಖ್ಯವಾದ ಸಂಗತಿ ಎಂದರೆ, ಸುರಿಯುವ ಮಳೆ ನೀರನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸಂಗ್ರಹಿಸಿ, ಈ ಗಾರ್ಡನ್‌ಗಳಿಗೆ ಉಣಿಸಲಾಗುತ್ತದೆ. ಇದೊಂದು ಅದ್ಭುತವಾದ ಪರಿಸರ ಸ್ನೇಹಿ ಕಾಳಜಿಯ ಯೋಜನೆಯಾಗಿದ್ದು, ಮೆಕ್ಸಿಕೋ ದೇಶದ ಈ ಕಾರ್ಯ ಎಲ್ಲರಿಗೂ ಮಾದರಿಯಾಗಲಿದೆ.

ಸ್ಮಾರ್ಟ್‌ ಸಿಟಿ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹಾನಗರ ಮಂಗಳೂರು ನಗರಕ್ಕೆ ಇಂತಹದೇ ಆಲೋಚನೆಯ ಫ್ಲೈಓವರ್‌ ನಿರ್ಮಾಣ ಅಗತ್ಯವಾಗಿದೆ. ಅಲ್ಲದೇ ನಗರದಲ್ಲಿರುವ ಫ್ಲೈ ಓವರ್‌ಗಳಿಗೆ ಹಸುರು ಹೊದಿಕೆಯಿಂದಾಗಿ ವಾಹನಗಳಿಂದ ನಿರ್ಮಾಣವಾಗುವ ವಾಯುಮಾಲಿನ್ಯ ಹಾಗೂ ಧೂಳು ನಿರ್ಮಾಣ ಮಾಡಬಹುದು. ಇದಕ್ಕೆ ಆಡಳಿತ ವ್ಯವಸ್ಥೆ ಸಿದ್ಧವಾಗಬೇಕಷ್ಟೇ. ಈಗಾಗಲೇ ಮಂಗಳೂರು ನಗರದ ಹಲವೆಡೆ ಫ್ಲೈಓವರ್‌ ನಿರ್ಮಾಣಕ್ಕೆ ಬೇಡಿಕೆ ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಪರಿಸರ ಸ್ನೇಹಿತ ಫ್ಲೈಓವರ್‌ ನಿರ್ಮಾಣ ಮಾಡಿ ದರೆ ನಗರದ ಸೌಂದರ್ಯವನ್ನೂ ಹೆಚ್ಚಿಸಿಕೊಳ್ಳಬಹುದು ಜತೆಗೆ ಪರಿಸರವನ್ನು ಉಳಿಸಬಹುದು.

 ಶಿವ ಸ್ಥಾವರಮಠ

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.