ಮಕ್ಕಳ ವಾಹನ ಮೋಹಕ್ಕೆ ಪೋಷಕರ ಮೊಹರೇಕೆ?


Team Udayavani, Oct 5, 2018, 1:38 AM IST

s-26.jpg

ನನ್ನ ವಿದ್ಯಾರ್ಥಿಯೊಬ್ಬ ದುಬಾರಿ ಬೈಕ್‌ ಕೊಡಿಸದಿದ್ದರೆ ತಾನು ಶಾಲೆಗೇ ಹೋಗುವುದಿಲ್ಲ ಎಂದು ರಚ್ಚೆ ಹಿಡಿದಿದ್ದ! ಆತ ಶಾಲೆಗೆ ಬಾರದಿದ್ದರೂ ಪರವಾಗಿಲ್ಲ, ಬೈಕ್‌ ಮಾತ್ರ ಕೊಡಿಸಬೇಡಿ ಎಂದು ಸಲಹೆ ಕೊಡುವ ತಾಕತ್ತಾದರೂ ಬಡ ಶಿಕ್ಷಕರಿಗೆಲ್ಲಿಂದ ಬರಬೇಕು? ಒಬ್ಬನೇ ಮಗ, ಮನೆ ಬಿಟ್ಟು ಹೋದರೇನು ಗತಿ ಎಂದು ಹೆದರಿ ಬೈಕ್‌ ಕೊಡಿಸಿದರು. ಇದು ಕೇವಲ ಒಂದು ಕುಟುಂಬದ ಕಥೆಯಾಗಿರಲಾರದು.

ವಾಹನ ಚಾಲಕನಾಗುವುದು ಪ್ರತಿಯೊಂದು ಮಗುವಿನ ಕನಸು. ಊಟದ ತಟ್ಟೆಯನ್ನು ಸ್ಟಿಯರಿಂಗ್‌ ವೀØಲೆಂದು ಕಲ್ಪಿಸಿಕೊಂಡು ವಾಹನ ಚಲಾಯಿಸುವ ಅಭಿನಯ ಮಾಡದ ಬಾಲಕರಿಲ್ಲ. ಬಸ್ಸು ಪ್ರಯಾಣದಲ್ಲಿ ಚಾಲಕನ ಪಕ್ಕದ ಸೀಟೇ ಬೇಕು. ತದೇಕ ಚಿತ್ತದಿಂದ ಚಾಲಕನ ಚಾಲಾಕಿತನವನ್ನು ಅಚ್ಚರಿ ಮಿಶ್ರಿತ ಮೆಚ್ಚುಗೆಯೊಂದಿಗೆ ಗಮನಿಸುತ್ತಾ ವಾಹನ ಚಾಲನೆಯ ಮೂಲ ಪಾಠಗಳನ್ನು ಕಲಿಯುತ್ತಲೇ ಕೌಮಾರ್ಯದ ಹೊಸ್ತಿಲು ದಾಟುವವರೇ ಹೆಚ್ಚು. ನನ್ನ ಸೇ°ಹಿತರೋರ್ವರ ಪುತ್ರ ಹದಿನೇಳನೆ ವಯಸ್ಸಿನಲ್ಲಿ ಡ್ರೈವಿಂಗ್‌ ಕಲಿಯುತೇ¤ನೆಂದು ಹೊರಟ ತಂದೆಯನ್ನೇ ದಂಗುಪಡಿಸಿದ್ದ. ಹಾಗೆಂದು ಉತ್ಸಾಹ ತೋರಿದರೆಂದು ಚಿಕ್ಕ ವಯಸ್ಸಿನಲ್ಲೇ ಮಕ್ಕಳ ಕೈಗೆ ವಾಹನ ಕೊಡಬಹುದೇ?

ಬೈಸಿಕಲ್‌ ತೀರ ಸರಳ ವಾಹನ. ಆದರೂ ಅದನ್ನು ಸರಕಾರ ಉಚಿತವಾಗಿ ವಿತರಿಸುವುದು ಎಂಟನೇ ತರಗತಿಯ ಮಕ್ಕಳಿಗೆ. ಅದನ್ನು ಪ್ರತಿಯೊಬ್ಬ ಮಗುವೂ ಶಾಲೆಗೆ ತರಬೇಕೆಂದೂ, ತರದಿದ್ದರೆ ಕಾರಣ ಕೇಳಬೇಕೆಂದೂ ಮುಖ್ಯೋಪಾಧ್ಯಾಯರಿಗೆ ಶಿಕ್ಷಣ ಇಲಾಖೆ ನಿರ್ದೇಶಿಸುತ್ತದೆ. ಆದರೂ ಎಲ್ಲ ಮಕ್ಕಳು ಬೈಸಿಕಲ್‌ ತರುವುದಿಲ್ಲ. ಹೆಣ್ಣು ಮಕ್ಕಳಂತೂ ಬೈಸಿಕಲ್ಲನ್ನು ಮನೆಯಲ್ಲೇ ಜೋಪಾನವಾಗಿ ಇಟ್ಟಿರುತ್ತಾರೆ. ಕೆಲವು ಮಕ್ಕಳ ಹೆತ್ತವರೇ ಮಕ್ಕಳು ಬೈಸಿಕಲ್ಲಿನಲ್ಲಿ ಶಾಲೆಗೆ ಹೋಗಲು ಅನುಮತಿ ನೀಡುವುದಿಲ್ಲ. ಸುರಕ್ಷತೆಯ ಕಾಳಜಿ ಹಾಗೂ ಅದಿಲ್ಲದಿರುವ ಭಯವೇ ಕಾರಣ. ಇದಕ್ಕೆ ವಿರುದ್ಧವಾಗಿ ವರ್ತಿಸುವ ಹೆತ್ತವರ ಇನ್ನೊಂದು ವರ್ಗದ ಬಗ್ಗೆ ಹೇಳುವುದೇ ಈ ಲೇಖನದ ಉದೇªಶ.

ಸ್ವಂತ ವಾಹನ ಉಳ್ಳವರ ಖಯಾಲಿ ಇದು. ತಮ್ಮ ಮಕ್ಕಳು ಯುವಕ-ಯುವತಿಯರಾಗುವ ಮೊದಲೇ ವಾಹನ ಚಾಲನೆಯಲ್ಲಿ ನಿಷ್ಣಾತರಾಗಬೇಕೆನ್ನುವ ಶಪಥ ಮಾಡಿರುತ್ತಾರೆ ಈ ಪೋಷಕರು. ಅತಿ ಚಿಕ್ಕ ವಯಸ್ಸಿನಲ್ಲಿಯೇ ವಾಹನ ಚಾಲನೆಯ ದೀಕ್ಷೆ ಕೊಡುತ್ತಾರೆ ಮಕ್ಕಳಿಗೆ. ಸಾರ್ವಜನಿಕ ಸಭೆಗಳಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಬಲ್ಲ ಮಹನೀಯರೋರ್ವರು ಅಂಗನವಾಡಿಗೆ ಹೋಗುತ್ತಿದ್ದ ತನ್ನ ಹಾಲುಗಲ್ಲದ ಹಸುಳೆಯ ಕೈಗೆ ಬೈಕ್‌ ಹ್ಯಾಂಡಲ್‌ ಕೊಟ್ಟದ್ದನ್ನು ನೋಡಿದ್ದೇನೆ. ಅಷ್ಟೇನೂ ದೃಢಕಾಯನಲ್ಲದ, ಕಾಲುಗಳು ಕ್ಲಚ್‌ ಬ್ರೇಕುಗಳಿಗೆ ಸರಿಯಾಗಿ ತಲುಪದ ಆರನೇ ತರಗತಿಯ ಬಾಲಕ ಹಲವು ಕಿಲೋಮೀಟರುಗಳಷ್ಟು ದೂರ ಕಾರು ಚಲಾಯಿಸಿದ್ದನ್ನು ತೀರ ಸಹಜವಾಗಿ ಹೆಮ್ಮೆಯಿಂದ ಹೇಳಿಕೊಂಡ ತಂದೆಯನ್ನು ನೋಡಿದ್ದೇನೆ. ನನ್ನ ವಿದ್ಯಾರ್ಥಿಯ ಬಗ್ಗೆ ಹೆಮ್ಮೆಪಟ್ಟುಕೊಳ್ಳುವುದೋ ಮರುಕಪಡುವುದೋ ಎಂಬ ಗೊಂದಲಕ್ಕೀಡಾಗಿದ್ದೆ. 

ಎಲ್ಲವನ್ನೂ ಕಲಿಸಬೇಕೆಂಬ ಆತುರ!
ಈಗಿನ ಚಿಕ್ಕ ಕುಟುಂಬಗಳಲ್ಲಿರುವ ಮಕ್ಕಳಿಗೆ ಎಲ್ಲವನ್ನು ಕಲಿಸಬೇಕೆಂಬ ಆತುರ ಹೆತ್ತವರಿಗೆ. ಸಂಗೀತ, ಸಾಹಿತ್ಯ, ನೃತ್ಯ, ಕರಾಟೆ ಇತ್ಯಾದಿ. ಇದೆಲ್ಲ ಅಪೇಕ್ಷಣೀಯವೇ. ಆದರೆ ಮಕ್ಕಳ ಮನಸ್ಸಿನ ಮೇಲಾಗುವ ಪರಿಣಾಮವನ್ನು ಯಾರೂ ಗ್ರಹಿಸುವುದಿಲ್ಲ. ಪ್ರತಿಭಾನ್ವಿತ ಮಕ್ಕಳ ಮೇಲೆ ಹೇರಲ್ಪಡುವ ಹೊರೆಯ ಬಗ್ಗೆ ಯಾರೂ ಚಿಂತಿಸುವುದಿಲ್ಲ. ತಮ್ಮ ಮಕ್ಕಳನ್ನು ಅರವತ್ತುನಾಲ್ಕು ವಿದ್ಯೆಗಳಲ್ಲಿ ಪಾರಂಗತರನ್ನಾಗಿಸಿ ಹೆಮ್ಮೆಪಟ್ಟುಕೊಳ್ಳುವುದರಲ್ಲಿ ಸಾರ್ಥಕ್ಯ ಕಾಣುತ್ತಾರೆ ಹೆತ್ತವರು. ಇವುಗಳನ್ನೆಲ್ಲ ಕಲಿಯುವುದರಲ್ಲಿ ಮಗು ವಿಫ‌ಲವಾದರೆ ಮಗುವಿನ ಎಳೆಯ ಮನಸ್ಸಿಗಾಗುವ ಘಾಸಿಯನ್ನು ಹೆತ್ತವರು ಗಣನೆಗೆ ತೆಗೆದುಕೊಳ್ಳುತ್ತಾರೆಯೇ?

ಅದೇನೇ ಇರಲಿ? ಮೇಲೆ ಉದಾಹರಿಸಿದ ವಿದ್ಯೆಗಳು ಅನ್ಯಥಾ ಅಪಾಯಕಾರಿಯಲ್ಲ. ಅಪಾಯಕಾರಿ ವಿದ್ಯೆಯೆಂದು ಆರಂಭದಿಂದಲೇ ಅನ್ನಿಸುವುದು ವಾಹನ ಚಾಲನೆ. ಚಾಲಕನ ಆಸನದಲ್ಲಿ ಕುಳಿತ ತಕ್ಷಣ ಯಾರೂ ನುರಿತ ಚಾಲಕರಾಗುವುದಿಲ್ಲ. ಚಾಲನೆ ಕಲಿಯುವಾಗ ಹೆದರಿಕೆ ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅಪಾಯ ಒಬ್ಬನಿಗಲ್ಲ ಅನೇಕರಿಗೆ. ಆದುದರಿಂದ ಜಾಗರೂಕತೆಯಿಂದಲೇ ವಾಹನ ಚಲಾಯಿಸಿ ಪ್ರಾಣ ಉಳಿಸಿಕೊಳ್ಳುವಷ್ಟು ಭಯ ಇರಲೇಬೇಕು. ಪಳಗಿದ ವಾಹನಚಾಲಕನಿಗೆ ಯಾವ ಮಾರ್ಗವೂ ಪಂಥಾಹ್ವಾನದಂತೆ ಕಾಣದಿದ್ದರೂ ಆರಂಭದಲ್ಲಿ ಅನುಭವಿಸಿದ ತಳಮಳವನ್ನು ಮರೆಯಲಾರ. ಹಾಗಿರುವಾಗ ಡ್ರೈವಿಂಗ್‌ ಕಲಿಯುತ್ತಿರುವ ತನ್ನ ಎಳೆಯ ಪ್ರಾಯದ ಮಗುವಿನ ಮನಸ್ಸಿನ ಮೇಲೆ ಎಷ್ಟು ಒತ್ತಡ ಬೀಳಬಹುದು ಎಂದು ಗ್ರಹಿಸಲಾಗದೇ? 

ಮಕ್ಕಳನ್ನು ಶಾಲೆಗೆ ದಾಖಲಿಸಲು ಆರು ವರ್ಷ ವಯಸ್ಸಿನ ನಿಬಂಧನೆ ಏಕೆ? ಆರು ವರ್ಷವಾದ ಬಳಿಕವೇ ಮಗು ಏನನ್ನಾದರೂ ನೆನಪಿಟ್ಟುಕೊಳ್ಳುವುದು ಸಾಧ್ಯ ಎನ್ನುವುದು ವೈದ್ಯರೊಬ್ಬರು ಕೊಟ್ಟ ಉತ್ತರ. ಹಾಗೆಯೇ ವಾಹನ ಚಾಲನಾ ಪರವಾನಿಗೆ ನೀಡುವುದಕ್ಕೆ ಸರಕಾರ ನಿಗದಿಪಡಿಸಿದ ಅರ್ಹತಾ ವಯಸ್ಸು 18 ವರ್ಷ. ತಿಪ್ಪರಲಾಗ ಹಾಕಿದರೂ ಈ ಆಧಾರ್‌ ಯುಗದಲ್ಲಿ ಅಷ್ಟು ವಯಸ್ಸಾಗದೆ ಲೈಸನ್ಸ್‌ ಸಿಗಲಾರದು. ಹಾಗಿದ್ದರೂ ಹತ್ತು-ಹನ್ನೆರಡು ವರ್ಷ ವಯಸ್ಸಿನಲ್ಲೇ ಡ್ರೈವಿಂಗ್‌ ಕಲಿಸಿ ಇವರೇನು ಸಾಧಿಸಲು ಹೊರಡುತ್ತಾರೆ?

ಲೈಸನ್ಸ್‌ ಇಲ್ಲದಿದ್ದರೂ ವಾಹನ ಓಡಿಸುವುದಕ್ಕೆ ಮಕ್ಕಳಿಗೆ ಪ್ರೋತ್ಸಾಹ ನೀಡುವುದು ಹಿರಿಯರೇ ತಾನೇ? ಈಗ ಇಂಥವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎನ್ನುವುದು ಕಳವಳಕರ. ಪರಿಣಾಮ ನಿಸ್ಸಂಶಯವಾಗಿಯೂ ಅಪಘಾತಗಳ ಸಂಖ್ಯೆಯಲ್ಲಿನ ಹೆಚ್ಚಳ. ಜನಸಾಮಾನ್ಯರ, ಹಿರಿಯ ರಾಜಕಾರಣಿಗಳ, ಖ್ಯಾತ ಉದ್ಯಮಿಗಳ ಮಕ್ಕಳು ಅಪಘಾತಗಳಲ್ಲಿ ಮಡಿದ ಸುದ್ದಿ ಆಗಾಗ ಪತ್ರಿಕೆಗಳಲ್ಲಿ ವರದಿಯಾಗುತ್ತದೆ. ಮಾರ್ಗ ಮಧ್ಯದಲ್ಲಿ ಎಳೆಯ ಜೀವಗಳು ವಿಲವಿಲ ಒದ್ದಾಡುವುದನ್ನೋ, ನಿಶೇcಷ್ಟಿತರಾಗಿ ಮಲಗಿರುವುದನೋ° ಕಂಡಾಗ ವಿಧಿಯನ್ನು ಹಳಿಯುತ್ತೇವೆ. ಆ ಜೀವಗಳಿಗೆ ಅನ್ಯಾಯವಾಯೆ¤ಂದೂ ಹಲುಬುತ್ತೇವೆ. ಆ ಜೀವ ಹೆತ್ತವರ ಏಕಮಾತ್ರ ಪುತ್ರನೆಂದೋ ಹಿರಿಯರನ್ನು ಮೊದಲೇ ಕಳೆದುಕೊಂಡ ಕುಟುಂಬವೊಂದರ ಆಧಾರ ಸ್ಥಂಭವಾಗಿದ್ದ ಹಿರಿಯ ಮಗನೆಂದೋ ತಿಳಿದರಂತೂ ಆತ ತೀರ ಅಪರಿಚಿತನಾಗಿದ್ದರೂ ದುಃಖದ ಛಾಯೆ ನಮ್ಮನ್ನಾವರಿಸುತ್ತದೆ. 

ಜಾಗತಿಕವಾಗಿಯೂ ಅಪಘಾತಗಳಿಗೆ ಬಲಿಯಾಗುವವರಲ್ಲಿ ಹದಿಹರೆಯದವರ ಪಾಲೇ ದೊಡ್ಡದಂತೆ. ಹದಿಹರೆಯದವರ ದುರ್ಮರಣಗಳಲ್ಲಿ ಮೂರನೇ ಒಂದರಷ್ಟು ವಾಹನ ಅಪಘಾತಗಳಲ್ಲಿ ಸಂಭವಿಸುತ್ತವೆಂಬ ಮಾಹಿತಿ ಅಂತರ್ಜಾಲ ಪುಟಗಳಲ್ಲಿ ಕಂಡುಬರುತ್ತದೆ. ಹೆಲ್ಮೆಟ್‌ ರಹಿತವಾಗಿ ಬೈಕ್‌ ಓಡಿಸುವುದು, ಮೊಬೈಲ್‌ ಬಳಸುತ್ತಲೇ ವಾಹನ ಓಡಿಸುವುದು… ಇವೆಲ್ಲ ಹದಿಹರೆಯದವರ ಟ್ರೇಡ್‌ಮಾರ್ಕ್‌ಗಳೇ ಆಗಿವೆ. ಅಪಘಾತಗಳ ಕಾರಣಗಳನ್ನು ಜಾಲಾಡಿದರೆ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವುದು ಪ್ರಮುಖವೆಂದು ಕಾಣುತ್ತದೆ. ಚಿಕ್ಕ ವಯಸ್ಸಿನಲ್ಲೆ ವಾಹನ ಚಾಲನೆ ಕಲಿತವರಲ್ಲಿ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾರೆ. ಅತೀ ವೇಗದ ಹುಚ್ಚು ಅವರನ್ನಾವರಿಸಿರುತ್ತದೆ. ಅತ್ಯಾಧುನಿಕ ವಾಹನಗಳೂ ಅವರ ಹುಚ್ಚನ್ನು ಕೆದರಿಸುತ್ತವೆ. ಉಳಿದವರನ್ನು ಹೆದರಿಸುತ್ತವೆ.

ಉಳ್ಳವರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಡ್ರೈವಿಂಗ್‌ ಕಲಿಸುವುದು ಮಾತ್ರವಲ್ಲ, ವಾಹನಗಳನ್ನೂ ಕೊಡಿಸುತ್ತಾರೆ. ಕೊಡದಿದ್ದರೆ ಮಕ್ಕಳು ಹಠಹಿಡಿಯುತ್ತಾರೆ. ನನ್ನ ವಿದ್ಯಾರ್ಥಿಯೊಬ್ಬ ದುಬಾರಿ ಬೈಕ್‌ ಕೊಡಿಸದಿದ್ದರೆ ತಾನು ಶಾಲೆಗೇ ಹೋಗುವುದಿಲ್ಲ ಎಂದು ರಚ್ಚೆ ಹಿಡಿದಿದ್ದ! ಆತ ಶಾಲೆಗೆ ಬಾರದಿದ್ದರೂ ಪರವಾಗಿಲ್ಲ, ಬೈಕ್‌ ಮಾತ್ರ ಕೊಡಿಸಬೇಡಿ ಎಂದು ಸಲಹೆ ಕೊಡುವ ತಾಕತ್ತಾದರೂ ಬಡ ಶಿಕ್ಷಕರಿಗೆಲ್ಲಿಂದ ಬರಬೇಕು? ಒಬ್ಬನೇ ಮಗ, ಮನೆ ಬಿಟ್ಟು ಹೋದರೇನು ಗತಿ ಎಂದು ಹೆದರಿ ಬೈಕ್‌ ಕೊಡಿಸಿದರು. ಇದು ಕೇವಲ ಒಂದು ಕುಟುಂಬದ ಕಥೆಯಾಗಿರಲಾರದು.

ಸಂಚಾರ ನಿಯಂತ್ರಿಸುವ ಪೊಲೀಸರೂ ಇಂತಹ ಮಕ್ಕಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಅನೇಕರಿಗೆ ಚಾಲನಾ ಪರವಾನಗಿ ಇಲ್ಲದಿದ್ದರೂ ರಸ್ತೆಯಲ್ಲಿ ಮೆರೆಯುತ್ತಿರುತ್ತಾರೆ. ಕನಿಷ್ಟ ಪಕ್ಷ ಚಾಲನಾ ಪರವಾನಗಿಯನ್ನಾದರೂ ಪರಿಶೀಲಿಸುವ ಕೆಲಸವನ್ನು ಸಂಬಂಧಪಟ್ಟವರು ಮಾಡಿದರೆ ಅಪಘಾತಗಳ ಸಂಖ್ಯೆ ಇಳಿಮುಖವಾದೀತು. ಅಮೂಲ್ಯ ಯುವಶಕ್ತಿ ಉಳಿದೀತು, ಅಮಾ ಯಕರ ಪ್ರಾಣಹಾನಿಯಾಗುವುದೂ ಕಡಿಮೆಯಾದೀತು. 

ಸಂಪಿಗೆ ರಾಜಗೋಪಾಲ ಜೋಶಿ

ಟಾಪ್ ನ್ಯೂಸ್

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್‌

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ

Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್‌ ಯಂತ್ರ ಕೊಡುಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ

PCB

Champions Trophy ತಾಣ ಅಂತಿಮ ಲಾಹೋರ್‌, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?

1-weweweqwe

Manipal ಹಾಸ್ಪಿಟಲ್ಸ್‌ ಪಾಲಾದ ಮೆಡಿಕಾ ಸಿನರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.