ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌: ಕಂಚು ಜಯಿಸಿದ ಪೂಜಾ ದಂಡಾ

Team Udayavani, Oct 27, 2018, 6:00 AM IST

27-pooja-1.jpg

ಬುಡಾಪೆಸ್ಟ್‌ (ಹಂಗೇರಿ): ಭಾರತದ ವನಿತಾ ಕುಸ್ತಿಪಟು ಪೂಜಾ ದಂಡಾ “ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌’ನಲ್ಲಿ 2017ರ ಯೂರೋಪಿಯನ್‌ ಚಾಂಪಿಯನ್‌ ನಾರ್ವೆಯ ಗ್ರೇಸ್‌ ಜಾಕೋಬ್‌ ಬುಲೆನ್‌ ಅವರನ್ನು 10-7 ಅಂಕಗಳಿಂದ ಸೋಲಿಸಿ ಕಂಚಿನ ಪದಕ ಜಯಿಸಿದ್ದಾರೆ. 

ವನಿತೆಯರ 57 ಕೆಜಿ ವಿಭಾಗದ ಕಂಚಿನ ಪದಕದ ಪಂದ್ಯದ ಆರಂಭದಲ್ಲೇ ಪೂಜಾ 4-1 ಮುನ್ನಡೆಯಲ್ಲಿದ್ದರು. ಬಳಿಕ ಸತತ ದಾಳಿ ನಡೆ ಸುತ್ತ ಅಂಕವನ್ನು 6-1ಕ್ಕೆ ವಿಸ್ತರಿಸಿದರು. ಹೀಗೆ ಸ್ಪರ್ಧೆಯಲ್ಲಿ ಹಿಡಿತ ಸಾಧಿಸಿಕೊಂಡು ಬಂದ ಪೂಜಾ ಅಂತರವನ್ನು 10-2ಕ್ಕೆ ವಿಸ್ತರಿಸಿ ದರು. ಆನಂತರ ಆಕ್ರಮಣಕ್ಕಿಳಿದ ಬುಲೆನ್‌ ಸತತ 5 ಅಂಕ ಗಳಿಸಿ ಅಂತರವನ್ನು ಕಡಿಮೆಗೊಳಿಸಿದರು. ಅಂತಿಮವಾಗಿ 3 ಅಂಕಗಳ ಅಂತರದಿಂದ ಪೂಜಾ ಗೆಲುವು ದಾಖಲಿಸಿದರು.

ಅವರಿಗಿದು ಈ ಋತುವಿನಲ್ಲಿ ದೊರಕಿದ 2ನೇ ಅಂತಾರಾಷ್ಟ್ರೀಯ ಪದಕ. ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ ನಲ್ಲಿ ಪೂಜಾ ಬೆಳ್ಳಿ ಪದಕ ಜಯಿಸಿದ್ದರು. ಪೂಜಾ ಸಾಧನೆಯಿಂದ ಭಾರತ 6 ವರ್ಷಗಳ ಬಳಿಕ ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ ವನಿತಾ ವಿಭಾಗದಲ್ಲಿ ಭಾರತಕ್ಕೆ ಪದಕವೊಂದನ್ನು ಜಯಿಸಿತು. ಅಲ್ಲದೆ ಪೂಜಾ ದಂಡಾ ಈ ಕೂಟದಲ್ಲಿ ಪದಕ ಗೆದ್ದ ಭಾರತದ 4ನೇ ಕುಸ್ತಿಪಟು. ಇದಕ್ಕೂ ಮುನ್ನ ಅಲ್ಕಾ ತೋಮರ್‌ (2006), ಗೀತಾ ಪೋಗಟ್‌ (2012), ಬಬಿತಾ ಪೋಗಟ್‌ (2016) ಪದಕ ಜಯಿಸಿದ್ದಾರೆ. ಇದು ಪ್ರಸಕ್ತ ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ ಭಾರತಕ್ಕೆ ಒಲಿದ 2ನೇ ಪದಕ. ಪುರುಷರ ವಿಭಾಗದಲ್ಲಿ ಭಜರಂಗ್‌ ಪೂನಿಯ ಬೆಳ್ಳಿ ಗೆದ್ದಿದ್ದರು. 

ಮುಂದಿನ ಗುರಿ ಒಲಿಂಪಿಕ್ಸ್‌
“ಈ ಪದಕದ ಮೂಲಕ ದೇಶಕ್ಕೆ ಹೆಮ್ಮೆ ತಂದಿದ್ದೇನೆ. ಈ ಪ್ರಯತ್ನ ಸಂತಸ ತಂದಿದೆ. ನನ್ನ ಮುಂದಿನ ಗುರಿ ಟೋಕಿಯೊ ಒಲಿಂಪಿಕ್ಸ್‌. ನನ್ನಲ್ಲಿ ಆತ್ವವಿಶ್ವಾಸ ಹೆಚ್ಚಿದೆ. ಆದರೆ ಕೆಲವು ಅಂಶಗಳಲ್ಲಿ ಮತ್ತಷ್ಟು ಪರಿಣತಿ ಹೊಂದ ಬೇಕು. ಸರಿಯಾದ ತಯಾರಿಯೊಂದಿಗೆ ಮತ್ತೆ ಕುಸ್ತಿ ಅಂಗಳಕ್ಕೆ ಇಳಿಯುತ್ತೇನೆ’ ಎಂದು ಪೂಜಾ ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ ರಿತು ಪೋಗಟ್‌ ಕಂಚಿನ ಪದಕ ತಪ್ಪಿಸಿಕೊಂಡಿದ್ದರು. ಗ್ರೀಕೊ ರೋಮನ್‌ ವಿಭಾಗದಲ್ಲಿ ಸ್ಪರ್ಧಿಸಿದ 4 ವನಿತಾ ಕುಸ್ತಿ ಪಟುಗಳು ಒಂದೂ ಪಂದ್ಯ ಗೆಲ್ಲದೆ ನಿರಾಸೆ ಮೂಡಿಸಿದರು.

ಟಾಪ್ ನ್ಯೂಸ್

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

Shiradi Ghat: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ; ಬಂಟ್ವಾಳ ಮೂಲದ ತಾಯಿ ಮಗ ದುರ್ಮರಣ

1

ಪೋರ್ಷೆ ಕಾರು ಓಡಿಸಿ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ: ಪ್ರಕರಣ ಸಂಬಂಧ ಬಾಲಕನ ತಂದೆ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

1-wwewqe

Retirement ಬಗ್ಗೆ ಧೋನಿ ಏನೂ ಹೇಳಿಲ್ಲ: ಸಿಎಸ್‌ಕೆ

1-fff

Geneva Open ಟೆನಿಸ್‌: ಸುಮಿತ್‌ಗೆ ಸೋಲು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.