ಎಮೋಜಿ ಎಂಬ ಸಚಿತ್ರ ಅಭಿವ್ಯಕ್ತಿ!


Team Udayavani, Oct 29, 2018, 12:30 AM IST

z-2.jpg

ಎಮೋಜಿಗಳು ಹೆಚ್ಚು ಜನಪ್ರಿಯವಾಗಿದ್ದು ವಾಟ್ಸ್‌ಆ್ಯಪ್‌ ಚಾಲ್ತಿಗೆ ಬಂದ ಮೇಲೆ. ಆದರೆ ಇದು 90ರ ದಶಕದಿಂದಲೂ ಚಾಲ್ತಿಯಲ್ಲಿತ್ತು ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಮೊದಲು ಇದು ಶುರುವಾಗಿದ್ದು ಜಪಾನ್‌ನ ಮೊಬೈಲ್‌ಫೋನ್‌ಗಳಲ್ಲಿ! ಆರಂಭದಲ್ಲಿ ಇವುಗಳನ್ನು ಎಮೋಜಿ ಎನ್ನುತ್ತಿರಲಿಲ್ಲ. ಎಮೋಟಿಕಾನ್‌ಗಳು ಎನ್ನುತ್ತಿದ್ದೆವು. ಇವು ಕೇವಲ ಚಿಹ್ನೆಗಳಾಗಿದ್ದವು. ಈ ಎಮೋಟಿಕಾನ್‌ಗಳು ವಾಕ್ಯದಲ್ಲಿದ್ದ ತುಂಟತನವನ್ನೋ, ತಮಾಷೆಯನ್ನೋ ಸೂಚಿಸುವ ಮಧ್ಯವರ್ತಿಗಳಂತೂ ಆಗಿದ್ದವು.

ಕಳೆದ ವಾರ ವಾಟ್ಸ್‌ಆ್ಯಪ್‌ ಬೀಟಾ ಆವೃತ್ತಿಯಲ್ಲಿ ಸ್ಟಿಕರ್‌ಗಳ ಸ್ಟೋರ್‌ ಅನ್ನು ಪರಿಚಯಿಸಲಾಗಿದೆ. ಈಗಾಗಲೇ ಎಮೋಜಿಗಳು ವಾಟ್ಸ್‌ಆ್ಯಪ್‌ನಲ್ಲಿ ಜನಪ್ರಿಯ. ಇಡೀ ದಿನ ಚಾಟ್‌ ಮಾಡುತ್ತಲೇ ಕಳೆಯುವ ಯುವ ಜನಾಂಗಕ್ಕಂತೂ ಎಮೋಜಿಗಳ ಚಿತ್ರಗಳು ಕನಸಲ್ಲೂ ಕಣ್ಣ ಮುಂದೆ ಬಂದು ನರ್ತಿಸಬಹುದು. ಅಷ್ಟರ ಮಟ್ಟಿಗೆ ಎಮೋಜಿಗಳು ನಮ್ಮ ಅಕ್ಷರಗಳಿಗೆ ಭಾವನೆಗಳ ಟಚ್‌ ಕೊಟ್ಟಿವೆ. ನಾವು ಈಗ ಚಾಟ್‌ ಅಪ್ಲಿಕೇಶನ್‌ಗಳಲ್ಲಿ ಹಾಗೂ ಸೋಷಿಯಲ್‌ ಮೀಡಿಯಾ ಗಳಲ್ಲಿ ಎಮೋಜಿಗಳಿಗೆ ಎಷ್ಟು ಅಡಿಕ್ಟ್ ಆಗಿದ್ದೇವೆಂದರೆ, ಒಂದು ವಾಕ್ಯದೊಂದಿಗೆ ಎಮೋಜಿ ಇಲ್ಲ ಎಂದಾದರೆ ಅದು ಯಾವ ಭಾವವನ್ನು ಸೂಚಿಸುತ್ತದೆ ಎಂಬುದೇ ಗೊತ್ತಾಗಲಾರದು. 

ವಾಟ್ಸ್‌ಆ್ಯಪ್‌ ಸ್ಟಿಕರ್‌ಗಳು ಅಕ್ಷರ ಸಂವಹನಕ್ಕೆ ಇನ್ನಷ್ಟು ಪೂರಕ. ಹಾಗೆಂದ ಮಾತ್ರಕ್ಕೆ ಎಮೋಜಿಯ ಕಾಲ ಮುಗಿದುಹೋಗಿ, ಸ್ಟಿಕರ್‌ ಕಾಲ ಆರಂಭವಾಯಿತು ಎಂದೇನೂ ಹೇಳಲಾಗದು. ಯಾಕೆಂದರೆ ಎಮೋಜಿ ಎಂಬುದು ಪ್ರತಿ ಶಬ್ದದ ಜೊತೆಗೆ ಅಂಟಿಕೊಂಡ ಭಾವ. ಆದರೆ ಸ್ಟಿಕರ್‌ನ ಅಸ್ತಿತ್ವವೇ ಬೇರೆ. ಚಾಟ್‌ ಅಪ್ಲಿಕೇಶನ್‌ಗಳಲ್ಲಿ ಅದಕ್ಕೊಂದು ಸ್ವತಂತ್ರ ಅಸ್ತಿತ್ವವಿದೆ. ಸ್ಟಿಕರ್‌ಗಳು ಜನಪ್ರಿಯವಾಗಿದ್ದು ಹೈಕ್‌ ಎಂಬ ಚಾಟ್‌ ಅಪ್ಲಿಕೇಶನ್‌ನಲ್ಲಿಯಾದರೂ, ಅದು ಕಾಲ ಕ್ರಮೇಣ ಹಿನ್ನೆಲೆಗೆ ಸರಿಯಿತು. ಸ್ನಾಪ್‌ಚಾಟ್‌ನಂತಹ ಯುವಜನರ ಪ್ರೀತಿಯ ಆ್ಯಪ್‌ಗ್ಳಲ್ಲಿ ಇವು ಈಗಲೂ ಮೆಚ್ಚಿನ ಫೀಚರ್‌. 

ಎಮೋಜಿಗಳು ಹೆಚ್ಚು ಜನಪ್ರಿಯವಾಗಿದ್ದು ವಾಟ್ಸ್‌ಆ್ಯಪ್‌ ಚಾಲ್ತಿಗೆ ಬಂದ ಮೇಲೆ. ಆದರೆ ಇದು 90ರ ದಶಕದಿಂದಲೂ ಚಾಲ್ತಿಯಲ್ಲಿತ್ತು ಎಂಬುದು ಬಹುತೇಕರಿಗೆ ಗೊತ್ತಿರಲಿಕ್ಕಿಲ್ಲ. ಮೊದಲು ಇದು ಶುರುವಾಗಿದ್ದು ಜಪಾನ್‌ನ ಮೊಬೈಲ್‌ಫೋನ್‌ಗಳಲ್ಲಿ! ಆರಂಭದಲ್ಲಿ ಇವುಗಳನ್ನು ಎಮೋಜಿ ಎನ್ನುತ್ತಿರಲಿಲ್ಲ. ಎಮೋಟಿಕಾನ್‌ಗಳು ಎನ್ನುತ್ತಿದ್ದೆವು. ಇವು ಕೇವಲ ಚಿಹ್ನೆಗಳಾಗಿದ್ದವು. ಅಂದರೆ ಖುಷಿಗೆ 🙂 ಹಾಗೂ ಬೇಸರಕ್ಕೆ 🙁 ಈ ಎಮೋಟಿಕಾನ್‌ಗಳು ಈಗಿನ ಎಮೋಜಿಗಳಷ್ಟು ಅಭಿವ್ಯಕ್ತಿಯಲ್ಲಿ ಸ್ಪಷ್ಟವಲ್ಲದಿದ್ದರೂ, ವಾಕ್ಯದಲ್ಲಿದ್ದ ತುಂಟತನವನ್ನೋ, ತಮಾಷೆಯನ್ನೋ ಸೂಚಿಸುವ ಮಧ್ಯವರ್ತಿಗಳಂತೂ ಆಗಿದ್ದವು. ಈಗಿನ ಎಮೋಜಿ ಎಂಬ ಕಲ್ಪನೆ ಶುರುವಾಗಿದ್ದು, 1999 ರಲ್ಲಿ ಜಪಾನ್‌ ಕಲಾಕಾರ ಶಿಗೆಟಕ ಕುರಿಟಾ ಎಂಬುವವರು ನಿರ್ಮಿಸಿದ ಚಿತ್ರಗಳಿಂದ. ಆ ಕಾಲದಲ್ಲಿ ಜಪಾನ್‌ನ ಪ್ರಮುಖ ಟೆಲಿಕಾಂ ಪೂರೈಕೆದಾರ ಸಂಸ್ಥೆ ಡೊಕೊಮೊದ ಐ-ಮೋಡ್‌ ಎಂಬ ಮೊಬೈಲ್‌ ಇಂಟರ್‌ನೆಟ್‌ ಪ್ಲಾಟ್‌ಫಾರಂನಲ್ಲಿ ಇವರು ಕೆಲಸ ಮಾಡುತ್ತಿದ್ದರು. ಸಾಮಾನ್ಯವಾಗಿ ಜಪಾನ್‌ನಲ್ಲಿ ಹವಾಮಾನ ವರದಿಗೆ ಹೆಚ್ಚಿನ ಮಹತ್ವವಿರುತ್ತದೆ. ತಮ್ಮ ಪ್ಲಾಟ್‌ಫಾರಂನಲ್ಲಿ ಹವಾಮಾನ ವರದಿಯನ್ನು ವಿಶಿಷ್ಟವಾಗಿ ನೀಡಲು ಯೋಜಿಸಿದ ಕುರಿಟಾ, ಮೋಡದ ಚಿತ್ರಗಳು, ಮಳೆ ಬರುವ ಚಿತ್ರಗಳನ್ನು ಬಳಸಿಕೊಂಡು ಹವಾಮಾನ ವರದಿಯನ್ನೇ ವಿಶಿಷ್ಟವಾಗಿ ನೀಡಿದರು. ಇದು ಜನರ ಮೆಚ್ಚುಗೆ ಗಳಿಸುತ್ತಿದ್ದಂತೆಯೇ ಇನ್ನಷ್ಟು ವಿಸ್ತರಿಸಿ ಇತರ ಮಾಹಿತಿಯನ್ನೂ ಅಭಿವ್ಯಕ್ತಪಡಿಸುವ ಎಮೋಜಿ ರಚಿಸಿದರು. ಇವರು ರಚಿಸಿದ 176 ಎಮೋಜಿಗಳು ಈಗ ನಾವು ಬಳಸುತ್ತಿರುವ ಜನಪ್ರಿಯ ಎಮೋಜಿಗಳಿಗಿಂತ ಭಿನ್ನವಾಗಿದ್ದವು. ಕೆಲವು ಈಗಲೂ ಬಳಕೆಯಲ್ಲಿವೆ. ಇವರು ಎಮೋಜಿ ಚಿತ್ರಿಸುವಾಗ ಇದ್ದ ಉದ್ದೇಶವೇನೆಂದರೆ ಮಾಹಿತಿಯನ್ನು ರವಾನಿಸುವುದಷ್ಟೇ ಆಗಿತ್ತು. ಅಂದರೆ ಸೂರ್ಯ, ಮೋಡಗಳು, ಛತ್ರಿ, ಕಾರು, ವಿಮಾನ, ರೈಲು, ಹಡಗು, ಲ್ಯಾಂಡ್‌ಲೈನ್‌, ಸೆಲ್‌ಫೋನ್‌, ಟಿವಿ ಥರದ ಪುಟ್ಟ ಪುಟ್ಟ ಚಿತ್ರಗಳನ್ನು ಇವರು ರಚಿಸಿದ್ದರು. ಇದು ಜನಪ್ರಿಯವಾಗುತ್ತಿದ್ದಂತೆಯೇ, ಜಪಾನ್‌ನ ಇತರ ಕಂಪನಿಗಳು ಇದನ್ನು ಅನುಕರಿಸಿದವು. 2000 ನೇ ಇಸ್ವಿಯ ನಂತರವಂತೂ ಇದು ಭಾರಿ ಚಾಲ್ತಿಗೆ ಬಂತು. ಜಪಾನ್‌ನ ಹೊರಗೆ ಇತರ ಕಂಪನಿಗಳೂ ಇದನ್ನು ಬಳಸಲು ಆರಂಭಿಸಿದವು. ಆ್ಯಪಲ್‌ ಕೂಡ ಆರಂಭದಲ್ಲೇ ಇದನ್ನು ಬಳಸಲು ಆರಂಭಿಸಿತು. ಈ ವೇಳೆಗೆ ಇಂಟರ್‌ನೆಟ್‌ ಹಾಗೂ ಕಂಪ್ಯೂಟರ್‌ಗಳ ಅಧಿಪತ್ಯ ಹೆಚ್ಚುತ್ತಿದ್ದಂತೆಯೇ ಯುನಿಕೋಡ್‌ ಶಿಷ್ಟತೆಯ ಭಾಷೆಯೂ ಚಾಲ್ತಿಗೆ ಬಂತು. ಆಗ ಈ ಎಮೋಜಿಗಳಿಗೂ ಯೂನಿಕೋಡ್‌ ಶಿಷ್ಟತೆಯನ್ನು ಒದಗಿಸಬೇಕು ಎಂದು ಗೂಗಲ್‌ ಪ್ರಯತ್ನ ನಡೆಸಿತು. ಮೂಲದಲ್ಲಿ ಕುರಿಟಾ ರಚಿಸಿದ ಎಮೋಜಿಗಳು ನ್ಯೂಯಾರ್ಕ್‌ ಮಾಡರ್ನ್ ಆರ್ಟ್‌ ಮ್ಯೂಸಿಯಂನಲ್ಲಿ ಶಾಶ್ವತ ಕಲೆಕ್ಷನ್‌ ಆಗಿ ಸೇರಿಕೊಂಡಿವೆ.

ಕಂಪ್ಯೂಟರು ಚಾಲ್ತಿಗೆ ಬಂದ ಆರಂಭದ ದಿನದಲ್ಲಿ ಅಕ್ಷರಗಳು, ಸಂಖ್ಯೆಗಳು ಒಂದೊಂದು ರೀತಿಯಲ್ಲಿ ಎನ್‌ಕೋಡ್‌ ಆಗುತ್ತಿದ್ದವು. ಇದಕ್ಕೊಂದು ಸಮಾನ ಶಿಷ್ಟಾಚಾರವಿರಲಿಲ್ಲ. ಹೀಗಾಗಿ ಎಲ್ಲ ಭಾಷೆ, ಅಪ್ಲಿಕೇಶನ್‌ಗಳಲ್ಲೂ ಒಂದೇ ರೀತಿಯ ಶಿಷ್ಟಾಚಾರದಲ್ಲಿ ಭಾಷೆಯನ್ನು ಸರಳಗೊಳಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಿದಾಗ ಈ ಎಮೋಜಿಗಳು ಯೂನಿಕೋಡ್‌ ಆಗಿ ಮಾರ್ಪಟ್ಟವು. ಇದು ಇಂದಿಗೂ ಎಮೋಜಿಗಳು ಜನಪ್ರಿಯತೆಯನ್ನು ಕಾಯ್ದುಕೊಳ್ಳಲು ಅನುವಾಯಿತು. ಇದು 2010ರಲ್ಲಿ ಎಮೋಜಿಗಳಿಗೆ ಯೂನಿಕೋಡ್‌ ಶಿಷ್ಟಾಚಾರ ಜಾರಿಗೆ ಬಂತು. ಆರಂಭದಲ್ಲಿ 625 ಸ್ಟಾಂಡರ್ಡ್‌ ಎಮೋಜಿಗಳಿದ್ದವು. ಪ್ರತಿ ವರ್ಷ ಈ ಪಟ್ಟಿಗೆ ಇನ್ನಷ್ಟು ಎಮೋಜಿಗಳು ಸೇರುತ್ತಲೇ ಇವೆ. ಈ ಎಮೋಜಿಗಳ ಸಮುದ್ರದಲ್ಲಿ ನಾವು ನಿತ್ಯ ನಾಲ್ಕೈದು ಎಮೋಜಿಗಳನ್ನಷ್ಟೇ ಹೆಚ್ಚಾಗಿ ಬಳಸುತ್ತೇವೆ.

ಹಾಗಂತ 2010 ಕ್ಕೂ ಮೊದಲೂ ಎಮೋಜಿಗಳಿರಲಿಲ್ಲವೇ ಎಂದು ಕೇಳಿದರೆ… ಆಗಲೂ ಎಮೋಜಿಗಳಿದ್ದವು. ಆದರೆ ಅವು ಇಮೇಜ್‌ ರೂಪದಲ್ಲಿದ್ದವು. ಅಂದರೆ ಇವುಗಳನ್ನು ಒಂದು ಅಪ್ಲಿಕೇಶನ್‌ನಿಂದ ಇನ್ನೊಂದು ಅಪ್ಲಿಕೇಶನ್‌ಗೆ ಕಾಪಿ ಪೇಸ್ಟ್‌ ಮಾಡಿ ಅಂಟಿಸಬೇಕಾಗುತ್ತಿತ್ತು. ಕೀಬೋರ್ಡ್‌ನಲ್ಲಿ, ಒಂದು ಬಟನ್‌ ಒತ್ತಿದ ತಕ್ಷಣ ಅವು ಸಿಗುತ್ತಿರಲಿಲ್ಲ. 2011ರಲ್ಲಿ ಮೊದಲು ಆ್ಯಪಲ್‌ ತನ್ನ ಐಒಎಸ್‌ ಕೀಬೋರ್ಡ್‌ನಲ್ಲೇ ಈ ಎಮೋಜಿಗಳನ್ನು ಸೇರಿಸಿತು. ಅಂದರೆ ನಾವು ಈಗ ಆಂಡ್ರಾಯ್ಡನಲ್ಲಿ ಬಳಸುತ್ತೇವಲ್ಲ, ಹಾಗೆ ಕೀಬೋರ್ಡ್‌ನಲ್ಲಿ ಒಂದು ಕೀ ಒತ್ತಿದರೆ ಎಮೋಜಿಗಳ ಸ್ಟೋರ್‌ ತೆರೆದುಕೊಳ್ಳುತ್ತಿತ್ತು. ಇದೇ ಕ್ರಮವನ್ನು ಒಂದೆರಡು ವರ್ಷದ ಬಳಿಕ ಆಂಡ್ರಾಯ್ಡ ಕೂಡ ನಕಲು ಮಾಡಿತು. ಸ್ಮಾರ್ಟ್‌ಫೋನ್‌ಗಳಲ್ಲಿರುವ ಚಾಟ್‌ ಅಪ್ಲಿಕೇಶನ್‌ಗಳಲ್ಲಿ ಎಮೋಜಿಗಳನ್ನು ಜನಪ್ರಿಯವಾಗಿಸಿದ್ದೇ ಈ ಕ್ರಮ. ಯಾಕೆಂದರೆ, ಚಾಟ್‌ ಮಾಡಲೊಂದು ಆ್ಯಪ್‌ ಹಾಗೂ ಎಮೋಜಿಗಳನ್ನು ಕಳುಹಿಸುವುದಕ್ಕೆಂದು ಇನ್ನೊಂದು ಆ್ಯಪ್‌ ಬಳಸುವುದು ಕಿರಿಕಿರಿಯ ಸಂಗತಿಯಾಗಿತ್ತು. ಯಾವಾಗ ಒಂದು ವಾಕ್ಯದ ಮುಂದೆ ಭಾವಾಭಿವ್ಯಕ್ತಿಗೆ ಎಮೋಜಿಯನ್ನು ಕೇವಲ ಒಂದು ಟ್ಯಾಪ್‌ ಮಾಡಿ ಸೇರಿಸಬಹುದಾದ ಅವಕಾಶ ಸಿಕ್ಕಿತೋ, ಜನರು ಎಮೋಜಿಗಳ ಮೂಲಕವೇ ಮಾತನಾಡುವಂತಾದರು.

ಇನ್ನೊಂದು ತಮಾಷೆಯ ಸಂಗತಿಯೆಂದರೆ, ಹೊಸ ಹೊಸ ಎಮೋಜಿಗಳು ಬಿಡುಗಡೆಯಾಗುವುದರ ಹಿಂದೆ ಸುಮಾರು ಎರಡು ವರ್ಷಗಳ ಪರಿಶ್ರಮವಿದೆ! ಯೂನಿಕೋರ್ಡ್‌ ಕನ್ಸಾರ್ಶಿಯಮ್‌ನ ಉಪ ಸಮಿತಿಯು ಈ ಬಗ್ಗೆ ವಾರಕ್ಕೆರಡು ಬಾರಿಯಂತೆ ಸುಮಾರು ಎರಡು ವರ್ಷಗಳವರೆಗೆ ಚರ್ಚಿಸಿ ಪ್ರತಿಯೊಂದು ಎಮೋಜಿಯನ್ನು ಅಂತಿಮಗೊಳಿಸುತ್ತದೆ. ನಮಗೆ ನೋಡಲು ಸುಲಭವೆನಿಸುವ ಈ ಎಮೋಜಿಗಳು ಕಾಲ-ದೇಶ ಹಾಗೂ ಸಂಸ್ಕೃತಿಯನ್ನು ಮೀರಿದವು. ಅಂದರೆ ಭಾರತದ ಸ್ಮಾರ್ಟ್‌ಫೋನ್‌ ಬಳಕೆದಾರರು ಬಳಸುವ ನಗುವಿನ ಎಮೋಜಿಗಳನ್ನು ಅಮೆರಿಕದ ಬಳಕೆದಾರರೂ ಬಳಸುತ್ತಾರೆ. ಹೀಗಾಗಿ ಇಡೀ ಮನುಷ್ಯ ಕುಲವನ್ನು ಪ್ರತಿನಿಧಿಸುವಂತೆ ಈ ಎಮೋಜಿಯನ್ನು ರೂಪಿಸುವುದು ಆರಂಭದಲ್ಲಿನ ಆದ್ಯತೆಯಾಗಿತ್ತು. ಹಾಗಂತ ಇದು ಸುಲಭದ ಸಂಗತಿಯಲ್ಲ. ಉದಾಹರಣೆಗೆ ಒಂದು ಬೀನ್ಸ್‌ನ ಎಮೋಜಿಯನ್ನು ಸೇರಿಸಬೇಕು ಎಂದಾದರೆ ಯಾವ ಬೀನ್ಸ್‌ ಬಳಸಬೇಕು ಎಂಬುದಕ್ಕೇ ವರ್ಷಗಟ್ಟಲೆ ಚರ್ಚೆ ನಡೆಯುತ್ತದೆ. ಪ್ರತಿ ದೇಶದಲ್ಲೂ ಬೀನ್ಸ್‌ನ ಆಕಾರ, ಗಾತ್ರ ಹಾಗೂ ವ್ಯಾಸ ಬದಲಾಗುತ್ತದೆ. ಇವೆಲ್ಲ ಬೀನ್ಸ್‌ ಅನ್ನೂ ಪ್ರತಿನಿಧಿಸುವ ಚಿತ್ರವನ್ನು ಆಯ್ಕೆ ಮಾಡುವುದು ಸುಲಭವಲ್ಲ. ಹೀಗಾಗಿ ಒಂದು ಎಮೋಜಿ ಹುಟ್ಟಿ, ಬೆಳೆದು, ನಮ್ಮ ಸ್ಮಾರ್ಟ್‌ಫೋನ್‌ಗೆ ಬರಲು ಕನಿಷ್ಠ ಎರಡು ವರ್ಷ ಬೇಕಾಗುತ್ತದೆ!

ಇಷ್ಟು ಚರ್ಚೆ ಮಾಡಿ ಎಮೋಜಿಗಳನ್ನು ಅಂತಿಮಗೊಳಿಸಿದರೂ, 2014 ರ ಹೊತ್ತಿಗೆ ಈ ಬಗ್ಗೆ ದೊಡ್ಡ ರಾಜಕೀಯ ರಾದ್ಧಾಂತವೇ ಶುರುವಾಗಿತ್ತು. ಸಾಮಾಜಿಕ ಹೋರಾಟಗಾರರು ಎಮೋಜಿ ಲಿಂಗ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿದರು. ವೈದ್ಯರು, ಅಡುಗೆ ಮಾಡುವವರು, ಪೊಲೀಸರ ಎಮೋಜಿಗಳೆಲ್ಲ ಯಾಕೆ ಪುರುಷರನ್ನೇ ಪ್ರತಿನಿಧಿಸುತ್ತವೆ? ಮಹಿಳಾ ವೈದ್ಯರು ಹಾಗೂ ಪೊಲೀಸರೂ ಇರುವುದಿಲ್ಲವೇ ಎಂಬ ಪ್ರಶ್ನೆ ಕೇಳತೊಡಗಿದರು. ಬಹುತೇಕ ಎಮೋಜಿಗಳು ಬಿಳಿಯ ವ್ಯಕ್ತಿಗಳನ್ನೇ ಯಾಕೆ ಪ್ರತಿನಿಧಿಸುತ್ತವೆ? ಕರಿಯರು ಯಾಕಿಲ್ಲ ಎಂಬ ಎಲ್ಲ ಪ್ರಶ್ನೆಗಳೂ ಉದ್ಭವಿಸಿದವು. ಹೀಗಾಗಿ ಯೂನಿಕೋರ್ಡ್‌ ಕನ್ಸಾರ್ಶಿಯಮ್‌ನ ಉಪ ಸಮಿತಿಗೆ ತಲೆ ಬೇನೆ ಶುರುವಾಗಿ ಎಲ್ಲ ವಿಧದ ಎಮೋಜಿಗಳಿಗೂ ಮಾನದಂಡ ರೂಪಿಸಿದವು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಳೆದ 2-3 ವರ್ಷದ ಹಿಂದೆ ಎಮೋಜಿಗಳ ಚರ್ಮದ ಬಣ್ಣವನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನೂ ನೀಡಿತು. ಅಲ್ಲಿಗೆ ಎಮೋಜಿಗಳು ವೈವಿಧ್ಯವಾಗುತ್ತ ಸಾಗಿದವು. 

ಒಂದು ಹಂತಕ್ಕೆ ಎಮೋಜಿಗಳ ನಿರ್ಲಿಪ್ತತೆಯೇ ಜನರಿಗೆ ಬೇಸರ ಬಂತೋ ಗೊತ್ತಿಲ್ಲ. ಸ್ಟಿಕರ್‌ಗಳು ಚಾಲ್ತಿಗೆ ಬಂದವು. ಈ ಸ್ಟಿಕರ್‌ಗಳಂತೂ ಒಂದಕ್ಕಿಂತ ಒಂದು ವಿಶಿಷ್ಟ. ಇವು ಚಿತ್ರಗಳಷ್ಟೇ. ಇವುಗಳ ಹಿಂದೆ ಶಿಷ್ಟ ಭಾಷೆಯಿಲ್ಲ. ಸ್ನ್ಯಾಪ್‌ಚಾಟ್‌ನಲ್ಲಂತೂ ನಾವು ಬಳಸುವ ಸ್ಟಿಕರ್‌ಗೆ ನಮ್ಮ ಮುಖವನ್ನೇ ಇಡಬಹುದು. ನಮ್ಮನ್ನೇ ಪ್ರತಿನಿಧಿಸುವ ಸ್ಟಿಕರ್‌ ರಚಿಸಿ ಅದನ್ನು ಬಳಸಬಹುದು. ಇವೆಲ್ಲವೂ ಅಭಿವ್ಯಕ್ತಿಯ ಹೊಸ ಮಗ್ಗಲುಗಳಾದವು. ಇದೇ ವಿಧಾನವನ್ನು ಆ್ಯಪಲ್‌ ಕೂಡ ಎಮೋಜಿಯಲ್ಲೇ ಪ್ರಯತ್ನಿಸಿದೆ. ಹಂದಿಯ ಎಮೋಜಿಗೆ ಆ್ಯಪಲ್‌ನ ಫೇಸ್‌ಟೈಮ್‌ ಬಳಸಿ ನಮ್ಮ ಮುಖವನ್ನೇ ಲಗತ್ತಿಸಬಹುದು. ಅಂದರೆ ನಮ್ಮಂತೆಯೇ ಕಾಣುವ ಹಂದಿಯನ್ನು ನಾವು ಸೃಷ್ಟಿಸಬಹುದು ಕಾಲಕಾಲಕ್ಕೆ ಎಮೋಜಿಗಳು ಹೊಸ ರೂಪ ಪಡೆದುಕೊಳ್ಳಬಹುಷ್ಟೇ, ಆದರೆ ಇವು ನಮ್ಮ ಭಾವನೆಗಳ ಮೂಲಕ ಶಬ್ದವನ್ನು ವರ್ಗಾಯಿಸುವ ಅನುವಾದಕನಾಗಿ ಇನ್ನಷ್ಟು ವರ್ಷ ಇರುತ್ತದೆ ಎಂಬುದಂತೂ ಖಚಿತ.

ಕೃಷ್ಣ ಭಟ್‌

ಟಾಪ್ ನ್ಯೂಸ್

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Lok Sabha Elections; ಉತ್ತರ ಕರ್ನಾಟಕಕ್ಕೆ ಚುನಾವಣಾ ಆಯೋಗ ಶಿಫ್ಟ್

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!

Aranthodu ಅಣ್ಣ – ತಮ್ಮ ಜತೆಯಲ್ಲಿ ನಿಧನ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

ವರದಿ, ವೀಡಿಯೋ ಪ್ರಕಟಿಸದಂತೆ ನಿರ್ಬಂಧಕಾಜ್ಞೆ ತಂದ ಈಶ್ವರಪ್ಪ ಪುತ್ರ

1-24-wednesday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Missing Case ಉಪ್ಪಿನಂಗಡಿ: ತಾಯಿ-ಮಗು ನಾಪತ್ತೆ; ಪ್ರಕರಣ ದಾಖಲು

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

Hassan Pen Drive; 40 ಜಿಬಿ ಪೆನ್‌ಡ್ರೈವ್‌ನಲ್ಲಿ ಸಾವಿರಾರು ಅಶ್ಲೀಲ ವಿಡಿಯೋ!

amit

W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್‌ ಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.