ಯುವ ಜನತೆ ಪರಿಸರ ಸ್ವಚ್ಛತೆಗೆ ಶ್ರಮಿಸಿ: ಶಶಿಕಾಂತ್‌ ಸೆಂಥಿಲ್‌ 


Team Udayavani, Nov 12, 2018, 12:24 PM IST

12-november-9.gif

ಮೂಲ್ಕಿ: ಪರಿಸರದ ಸ್ವಚ್ಛತೆ ಬಗ್ಗೆ ಜ್ಞಾನ ಮೂಡಿಸುವಲ್ಲಿ ಯುವ ಸಮಾಜದ ಪಾತ್ರ ಅದರಲ್ಲೂ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಲ್ಲಿ ನಮ್ಮ ದೇಶ ವಿಶ್ವ ಮಾನ್ಯತೆಯನ್ನು ಹೊಂದುತ್ತದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಹೇಳಿದರು.

ಮೂಲ್ಕಿಯ ಸರ್ಫ್ ಸ್ವಾಮಿ ಫೌಂಡೇಶನ್‌ ಆಶ್ರಯದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು ಮತ್ತು ಸೇವಾ ಸಂಘಟನೆಗಳ ಸ್ವಯಂ ಸೇವಕರು ಮೂಲ್ಕಿ- ಹೆಜಮಾಡಿ ಬೀಚ್‌ ಪರಿಸರದಲ್ಲಿ ರವಿವಾರ ಬೆಳಗ್ಗಿನಿಂದ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸ್ವಯಂ ಸೇವಕರನ್ನು ಉದ್ದೇಶಿಸಿ ಅವರು ಮಾತನಾಡಿದರು.

ನೆಲದ ಉಳಿವಿಗಾಗಿ ಶ್ರಮಿಸಿ
ಯುವಕರ ತಂಡ ಸಾರ್ವಜನಿಕ ಹಿತಕ್ಕಾಗಿ ಸರ್ಫ್‌ ಸ್ವಾಮಿ ಫೌಂಡೇಶನ್‌ ಮೂಲಕ ನಡೆಸಲಾಗುತ್ತಿರುವ ನಿರಂತರ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಭಾಗವಹಿಸಿ ನಮ್ಮ ನೆಲದ ಉಳಿವಿಗಾಗಿ ಶ್ರಮಿಸುವ ಎಂದರು.

ದ.ಕ. ಮತ್ತು ಉಡುಪಿ ಜಿಲ್ಲಾ ಆದಾಯ ತೆರಿಗೆ ವಿಭಾಗದ ಜಂಟಿ ಆಯುಕ್ತ ಸೌರಬ್‌ ದುಭೆ ಭಾಗವಹಿಸಿ, ಯುವ ಶಕ್ತಿಯ ಪ್ರಯತ್ನದಿಂದ ದೇಶದ ಸಮಸ್ಯೆಗೆ ಉತ್ತರ, ಮಾತ್ರವಲ್ಲ ಮಾಲಿನ್ಯವನ್ನು ತಡೆಯುವಲ್ಲಿ ಉತ್ತಮ ಯಶಸ್ಸು ಸಿಗಬಹುದು ಎಂದರು. ಸರ್ಫ್‌ ಸ್ವಾಮಿ ಫಂಡೇಶನ್‌ನ ಗೌರವ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ಮೂಲ್ಕಿ ಘಟಕದ ಪ್ರಧಾನ ಕಾರ್ಯದರ್ಶಿ ಎಂ. ಹರಿಶ್ಚಂದ್ರ, ಉದ್ಯಮಿ ಧರ್ಮರಾಜ್‌, ಶಿಮಂತೂರು ಶ್ರೀ ಆದಿಜನಾರ್ದನ ದೇಗುಲದ ಆಡಳಿತ ಮೊಕ್ತೇಸರ ಉದಯ ಬಿ.ಶೆಟ್ಟಿ, ಪತ್ರಕರ್ತ ಎಚ್‌.ಕೆ. ಹೆಜಮಾಡಿ, ಸರ್ಫ್‌ ಸ್ವಾಮಿ ಫೌಂಡೇಶನ್‌ನ ರಾಮಪ್ರಸಾದ್‌, ಯತೀಶ್‌ ಬೈಕಂಪಾಡಿ, ಶ್ಯಾಮ್‌ಪ್ರಸಾದ್‌, ನಟರಾಜ್‌, ಕೀರ್ತನ್‌, ಧ್ರುವ ಮತ್ತಿತರರು ಉಪಸ್ಥಿತರಿದ್ದರು.

350ಕ್ಕೂ ಅಧಿಕ ಮಂದಿ ಭಾಗಿ
ಭಾರತ್‌ ಸ್ಕೌಟ್ಸ್‌ ಆ್ಯಂಡ್‌ ಗೈಡ್ಸ್‌ ವಿಭಾಗ ಕಿಲ್ಪಾಡಿ ವ್ಯಾಸ ಮಹರ್ಷಿ ಶಾಲೆ, ಮಣಿಪಾಲ ಡೆಂಟಲ್‌ ಕಾಲೇಜು, ಮೂಡಬಿದಿರೆ ಆಳ್ವಾಸ್‌ ಕಾಲೇಜು, ಮಂಗಳೂರು ಬೈಸಿಕಲ್‌ ಕ್ಲಬ್‌ ಮತ್ತು ಇತರ ಸೇವಾ ಸಂಘಟನೆಗಳ ಸುಮಾರು 350ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದರು. ಸುಮಾರು 500 ಚೀಲಗಳಲ್ಲಿ ಪ್ಲಾಸ್ಟಿಕ್‌ ಬಾಟಲಿ, ಗಾಜಿನ ಬಾಟಲಿ, ರಬ್ಬರ್‌, ಮತ್ತಿತರ ತ್ಯಾಜ್ಯಗಳನ್ನು ಸ್ವಯಂ ಸೇವಕರು ಸಂಗ್ರಹಿಸಿದರು.

ಮನದಟ್ಟು ಮಾಡಿ
ಸಾರ್ವಜನಿಕರು ತ್ಯಾಜ್ಯ ಗಳನ್ನು ಕಂಡುಕಂಡಲ್ಲಿ ಎಸೆಯುವುದರಿಂದ ಸಮುದ್ರ ಮಾಲಿನ್ಯ ಉಂಟಾಗುವುದನ್ನು ತಡೆಯುವಲ್ಲಿ ಯುವ ಸಮಾಜ ಸಾರ್ವಜ ನಿಕರಲ್ಲಿ ಮನ ದಟ್ಟು ಮಾಡುವ ಕೆಲಸವನ್ನು ಮಾಡುವುದು ಅಗತ್ಯ ಎಂದು ಜಿಲ್ಲಾಧಿಕಾರಿ ಸೆಂಥಿಲ್‌ ತಿಳಿಸಿದರು.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.