ರಾಷ್ಟ್ರಮಟ್ಟಕ್ಕೆ ರಾಜ್ಯದ 30 ತಂಡ ಆಯ್ಕೆ


Team Udayavani, Dec 18, 2018, 11:35 AM IST

gul-2.jpg

ಕಲಬುರಗಿ: ಗುಲಬರ್ಗಾ ವಿವಿ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ 26ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಉತ್ತಮ ಯೋಜನೆ ಮಂಡಿಸಿದ 30 ತಂಡಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿವೆ. ವಿವಿ ಡಾ.ಬಿ.ಆರ್‌. ಅಂಬೇಡ್ಕರ್‌ ಸಂಭಾಗಣದಲ್ಲಿ ಸೋಮವಾರ ನಡೆದ ರಾಜ್ಯಮಟ್ಟದ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಇಸ್ರೋ ನಿಕಟ ಪೂರ್ವ ಅಧ್ಯಕ್ಷ ಎ.ಎಸ್‌. ಕಿರಣಕುಮಾರ ಬಾಲ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ದಾವಣಗೆರೆ ಜಿಲ್ಲೆ ನಿಟ್ಟುವಳ್ಳಿಯ ಕೆಆರ್‌ವಿ ಪ್ರೌಢಶಾಲೆ ವಿದ್ಯಾರ್ಥಿ ಪ್ರಥಮ ಕೆ.ಎಂ. ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿಗೆ ಭಾಜನರಾದರು. ಪ್ರಸಕ್ತ ವರ್ಷ “ಸ್ವತ್ಛ, ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ-ತಂತ್ರಜ್ಞಾನ ಮತ್ತು ಆವಿಷ್ಕಾರಗಳು’ ಎಂಬ ವಿಷಯದ ಮೇಲೆ ಮಕ್ಕಳ ವಿಜ್ಞಾನ ಸಮಾವೇಶ ನಡೆಯುತ್ತಿದೆ. 10ರಿಂದ 17 ವರ್ಷದೊಳಗಿನ ತಲಾ ಇಬ್ಬರು ಮಕ್ಕಳನ್ನು ಗ್ರಾಮೀಣ ಹಿರಿಯ, ಗ್ರಾಮೀಣ ಕಿರಿಯ, ನಗರ ಹಿರಿಯ, ನಗರ ಕಿರಿಯ ಎಂದು ತಂಡ ವಿಂಗಡಿಸಲಾಗಿದೆ.

ರಾಜ್ಯಮಟ್ಟದ ಸಮಾವೇಶದಲ್ಲಿ ಜಿಲ್ಲಾಮಟ್ಟದಲ್ಲಿ ಆಯ್ಕೆಯಾದ 600 ಬಾಲ ವಿಜ್ಞಾನಿಗಳು ತಾವು ಸಂಶೋಧಿಸಿದ 300 ಯೋಜನೆ ಮಂಡಿಸಿದ್ದರು. ಇದರಲ್ಲಿ 30 ತಂಡಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿವೆ. ಡಿ.27ರಿಂದ ಡಿ.30ರವರೆಗೆ
ಒಡಿಶಾದ ಭುವನೇಶ್ವರದಲ್ಲಿ ರಾಷ್ಟ್ರಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಬಾಲ ವಿಜ್ಞಾನಿಗಳು ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. 

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ತಂಡಗಳು: ನಗರ ಕಿರಿಯ ವಿಭಾಗ- ಪ್ರಥಮ ಕೆ.ಎಂ. (ಕೆಆರ್‌ವಿ ಪ್ರೌಢಶಾಲೆ ದಾವಣಗೆರೆ), ನಿರುಥ್‌ ಎನ್‌.ಎನ್‌. (ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯ, ಮಡಿಕೇರಿ), ಐಶ್ವರ್ಯಾ ವಣ್ಣೂರು (ದಿ ಫೋಬ್ಸ್ ಅಕಾಡೆಮಿ, ಗೋಕಾಕ, ಬೆಳಗಾವಿ), ಜುನೈದ್‌ ಪೀರ್‌ (ಪೋದ್ದಾರ ಇಂಟರ್‌ನ್ಯಾಷನಲ್‌ ಸ್ಕೂಲ್‌, ಶಿವಮೊಗ್ಗ), ಸಂಜನಾ ಎಸ್‌. (ವಿಎಸ್‌ವಿಎಸ್‌ಬಿ ಶ್ರೀ ಶಿಕ್ಷಣ ಸಂಸ್ಥೆ, ಮೈಸೂರು), ರೋಶಿನಿ ಜಿ.ಎಸ್‌. (ಕೇಂದ್ರೀಯ
ವಿದ್ಯಾಲಯ ಕೆಜಿಎಫ್‌, ಕೋಲಾರ). 

ಗ್ರಾಮೀಣ ಕಿರಿಯ ವಿಭಾಗ: ಧರಣಿ (ಎಸ್‌ ಡಿಎಂ, ಆಂಗ್ಲ ಮಾಧ್ಯಮ, ಧರ್ಮಸ್ಥಳ), ಅಮೃತಾ ಕೆ. (ಸರ್ಕಾರಿ ಹಿರಿಯ ಶಾಲೆ, ರಾಮೇಹಳ್ಳಿ, ಬೆಂಗಳೂರು), ಮೇಘನಾ ವಿ.ಜಿ. (ಸರ್ಕಾರಿ ಹಿರಿಯ ಶಾಲೆ, ಹಾವನೂರು), ನಿತಿನಿ (ಸರ್ಕಾರಿ
ಹಿರಿಯ ಪ್ರಾಥಮಿಕ ಶಾಲೆ ಬಂದರವಾಡ, ಕಲಬುರಗಿ), ರಿತ್ವಿಕ್‌ ಪೈ (ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ), ಲೋಕೇಶ (ಸರ್ಕಾರಿ ಹಿರಿಯ ಶಾಲೆ, ಮುಸಲಾಪುರ).
 
ನಗರ ಹಿರಿಯ ವಿಭಾಗ: ದಿಶಾ ಪಿ.ಎನ್‌. (ಸದ್ವಿದ್ಯಾ ಪ್ರೌಢಶಾಲೆ ಮೈಸೂರು), ಲೇಖನಾ ಮುತ್ತಕ್ಕ (ಭಾರತೀಯ ವಿದ್ಯಾಭವನ, ಕೊಡಗು ವಿದ್ಯಾಲಯ, ಮಡಿಕೇರಿ), ಯಶೋಧಾ ಬಿ.ಟಿ. (ಗುರುಶ್ರೀ ವಿದ್ಯಾಕೇಂದ್ರ, ನಾಗಸಂದ್ರ, ಬೆಂಗಳೂರು), ಶ್ರೀಷಾ ಆರ್‌. (ಚಿನ್ಮಯ ವಿದ್ಯಾಲಯ, ಕೋಲಾರ), ಶ್ರೇಯಾ ಬಿ.ಸಿ. (ಪೋದ್ದಾರ ಇಂಟರ್‌ನ್ಯಾಷನಲ್‌ ಸ್ಕೂಲ್‌ ಶಿವಮೊಗ್ಗ), ಸುಜಲ ಪೂಜಾರಿ (ಸರ್ಕಾರಿ ಪ್ರೌಢಶಾಲೆ ಗಣೇಶ ನಗರ, ಶಿರಸಿ), ಶ್ರೀನಿಧಿ ವಿ.
(ಅಪ್ಪ ಪಬ್ಲಿಕ್‌ ಸ್ಕೂಲ್‌, ಕಲಬುರಗಿ), ರಾಹುಲ್‌ ಮೈತ್ರಿ (ಬಿಇಎಸ್‌ ಪಿಯು ಕಾಲೇಜು ಜಮಖಂಡಿ), ಸುನೀಲ ಗರಗ (ಜೆಎಸ್‌ಎಸ್‌ ಕನ್ನಡ ಮಾಧ್ಯಮ ಶಾಲೆ ಧಾರವಾಡ).

ಗ್ರಾಮೀಣ ಹಿರಿಯ ವಿಭಾಗ: ಚ್ಯವನ್‌ ಹೆಗಡೆ (ವಾಡಿಯಾ ಪೂರ್ಣಪ್ರಜ್ಞಾ ಶಾಲೆ ಬೆಂಗಳೂರು), ಶುಕ್ಲಾ ಎನ್‌.ವಿ(ಅನ್ಮೋಲ್‌ ಪಬ್ಲಿಕ್‌ ಶಾಲೆ ದಾವಣಗೆರೆ), ಐಶ್ವರ್ಯಾ (ಆದರ್ಶ ಜ್ಯೂನಿಯರ್‌ ಕಾಲೇಜು ಬೇವೂರ ಬಾಗಲಕೋಟೆ), ನಯನ ಜಿ. (ಸರ್ಕಾರಿ ಪ್ರೌಢಶಾಲೆ ತಿಮ್ಮಲಾಪುರ ಕೂಡ್ಲಿಗಿ), ತೇಜನಾ ಎಚ್‌.ಎಸ್‌. (ಅಂಜೇಲಾ ವಿದ್ಯಾನಿಕೇತನ ಕೂಡಿಗೆ), ಗಂಗಮ್ಮ ಜೋಡಳ್ಳಿ (ಸರ್ಕಾರಿ ಪ್ರೌಢಶಾಲೆ ಕುಸುಗಲ್ಲ ಹುಬ್ಬಳ್ಳಿ), ಜ್ಯೋತಿ ಮರೋಲಾ (ಸರ್ಕಾರಿ ಪ್ರೌಢಶಾಲೆ ಹಾವನೂರು ಹಾವೇರಿ), ಸಿದ್ದರಾಜು ಎಚ್‌.ಎಂ. (ಸರ್ಕಾರಿ ಪಿಯು ಕಾಲೇಜು, ಹರವೆ, ಚಾಮರಾಜನಗರ) ಪ್ರಣವ್‌ (ಎಸ್‌ಡಿಎಂ ಆಂಗ್ಲ ಮಾಧ್ಯಮ, ಉಜಿರೆ).

ಎಖೀಔ 3 ಕಲಬುರಗಿ ಮಂಗಳವಾರ, ಡಿಸೆಂಬರ್‌, 18, 2018 ಕಲಬುರಗಿ 3 ರಾಷ್ಟ್ರಮಟ್ಟಕ್ಕೆ  ರಾಜ್ಯದ 30 ತಂಡ ಆಯ್ಕೆ ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ 26ನೇ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಸೋಮವಾರ ತೆರೆ ಬಿದ್ದಿದ್ದು, ಸಮಾವೇಶದಲ್ಲಿ ಪಾಲ್ಗೊಂಡು ಜಿಲ್ಲೆಯ ಶಾಲೆಗಳು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿವೆ.

ನಗರದ ಅಪ್ಪ ಪಬ್ಲಿಕ್‌ ಶಾಲೆ ಮತ್ತು ಬಂದರವಾಡದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಅತ್ಯುತ್ತಮ ಯೋಜನೆ ಮಂಡಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ಹೆಚ್ಚಿಸಿದ್ದಾರೆ. ನಗರ ಹಿರಿಯ ವಿಭಾಗದಲ್ಲಿ ಅಪ್ಪ ಪಬ್ಲಿಕ್‌ ಶಾಲೆ ಶ್ರೀನಿಧಿ ಮತ್ತು ರಮೇಶ ಡಾಂಗೆ ಪರಿಸರ ವ್ಯವಸ್ಥೆ (ಇಕೋ ಸಿಸ್ಟಮ್‌)ಕುರಿತು ಮಂಡಿಸಿದ ಯೋಜನೆ
ಪ್ರಯೋಗ ಹೆಚ್ಚು ಗಮನ ಸೆಳೆಯಿತು.

ಅದೇ ರೀತಿ ಗ್ರಾಮೀಣ ಕಿರಿಯ ವಿಭಾಗದಲ್ಲಿ ಅಫಜಲಪುರ ತಾಲೂಕು ಬಂದರವಾಡ ಸರ್ಕಾರಿ ಶಾಲೆ ವಿದ್ಯಾರ್ಥಿಗಳಾದ ನಿತಿನಿ ಶಾಂತಪ್ಪ ಹೊಸಮನಿ ಮತ್ತು ವಿಷ್ಣು ಅಣ್ಣಾರಾಯ ಹೊಸಮನಿ ಮಂಡಿಸಿದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆ ಯೋಜನೆ ಸಹ ಪ್ರಶಂಸೆಗೆ ಪಾತ್ರವಾಗಿ ಪ್ರಶಸ್ತಿಗೆ ಭಾಜನವಾಯಿತು.

ಸಮಾವೇಶದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ 600 ಬಾಲ ವಿಜ್ಞಾನಿಗಳು ತಾವು ಸಂಶೋಧಿಸಿದ 300 ಯೋಜನೆ ಮಂಡಿಸಿದ್ದರು. ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ರಾಜ ಪಿ. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರೊ| ಎಂ.ಎಸ್‌. ಜೋಗದ, ಪ್ರೊ| ಬಿ.ಕೆ. ಚಳಗೇರಿ, ರಾಜ್ಯ ವಿಜ್ಞಾನ ಪರಿಷತ್‌ ಗೌರವ ಕಾರ್ಯದರ್ಶಿ ಗಿರೀಶ್‌ ಕಡ್ಲೆವಾಡ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ಶಶಿಕುಮಾರ, ಡಿಡಿಪಿಐ ಶಾಂತಗೌಡ ಪಾಟೀಲ, ಡಿಡಿಪಿಯು ಶಿವಶರಣಪ್ಪ ಮಾಳೆಗಾಂವ, ಪ್ರೊ| ಗುರುನಂಜಯ್ಯ, ಸಿ. ಕೃಷ್ಣೇಗೌಡ, ಸೂರ್ಯಕಾಂತ ಘನಾತೆ, ಎಚ್‌.ಜಿ. ಹುದ್ದಾರ, ಡಾ| ಸಂಗಮೇಶ ಹಿರೇಮಠ, ಮಹೇಶಕುಮಾರ ದೇವಣಿ ಇದ್ದರು.

ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪ್ರಶಸ್ತಿ ಗೆದ್ದಿದ್ದೇವು. ಆದರೆ, ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಆಗುತ್ತೇವೆ ಎಂದು ಅನಿಸಿರಲಿಲ್ಲ. ಈಗ ಇಲ್ಲೂ ಗೆದ್ದಿರುವುದು ತುಂಬಾ ಖುಷಿಯಾಗಿದೆ. 
 ರಮೇಶ ಡಾಂಗೆ, ಪ್ರಶಸ್ತಿ ವಿಜೇತ ವಿದ್ಯಾರ್ಥಿ, ಅಪ್ಪ ಪಬ್ಲಿಕ್‌ ಶಾಲೆ

ವಿಜ್ಞಾನ ಸಮಾವೇಶದಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಹೆಚ್ಚು ಅನುಕೂಲವಾಗಿದ್ದು, ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಯಿತು. ನಮ್ಮ ವಿದ್ಯಾರ್ಥಿಗಳು ಎಲ್ಲರಿಗೂ ಉಪಯೋಗವಾಗುವಂತಹ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆ
ಮಂಡಿಸಿ ಯಶಸ್ವಿಯಾಗಿದ್ದಾರೆ. 
 ಸುರೇಖಾ ಜಗನ್ನಾಥ, ಮಾರ್ಗದರ್ಶಿ ಶಿಕ್ಷಕಿ, ಬಂದರವಾಡ ಶಾಲೆ

ಟಾಪ್ ನ್ಯೂಸ್

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

Dharmasthala ಮೇಳದ ಈ ಸಾಲಿನ ತಿರುಗಾಟಕ್ಕೆ ಮಂಗಳ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

ಸರಕಾರಿ ಅಧಿಕಾರಿಗಳ ರಕ್ಷಣೆಗೆ ಸದಾ ಬದ್ಧ: ಕೆ. ರಘುಪತಿ ಭಟ್‌ ಭರವಸೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

K. S. Eshwarappa ಪಕ್ಷ ನಿಷ್ಠರಿಗೆ ಅಮಾನತು ಶಿಕ್ಷೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ

ಕೇರಳಕ್ಕೆ ವಿದ್ಯುತ್‌ ಸಾಗಾಟಕ್ಕೆ ಟವರ್‌ ನಿರ್ಮಾಣ; ಇನ್ನಾದಲ್ಲಿ ಭಾರೀ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-kalburgi

Kalaburagi: ಹಣ ಡಬಲ್ ಮಾಡಿ ಬಹುಕೋಟಿ‌ ವಂಚನೆ: ಇಬ್ಬರು ಆರೋಪಿಗಳು ನ್ಯಾಯಾಲಯಕ್ಕೆ ಶರಣು

1-kalburgi

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಆತ್ಮಹತ್ಯೆ ಪ್ರಕರಣ;ನಾಗೇಂದ್ರ ವಜಾಕ್ಕೆ ಬಿಜೆಪಿ ಆಗ್ರಹ

ಭೀಕರ ರಸ್ತೆ ಅಪಘಾತ: ಮೂವರ ಸಾವು

Kalaburagi; ಭೀಕರ ರಸ್ತೆ ಅಪಘಾತ: ಮೂವರ ಸಾವು

1-sdsaas

Wadi; ಮರದ ಆಸರೆಗೆ ನಿಂತ ಇಬ್ಬರು ಸಿಡಿಲಿಗೆ ಬಲಿ

26

Road mishap: ಅಯೋಧ್ಯೆ ಸಮೀಪ ಅಪಘಾತ; ಕಲಬುರಗಿಯ ಮೂವರ ಸಾವು

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

1-qeeqwew

Mizoram; ರೆಮಲ್‌ ಅಬ್ಬರಕ್ಕೆ ಕುಸಿದ ಕಲ್ಲುಕ್ವಾರಿ: 17 ಮಂದಿ ಬಲಿ

1-wewewqe

Kerala ಸುರಿದ ಧಾರಾಕಾರ ಮಳೆ: ‘ಮೇಘ ಸ್ಫೋಟ’ದ ಸಾಧ್ಯತೆ

1-raf

26 Rafale ಖರೀದಿಗೆ ನಾಳೆ ಭಾರತ, ಫ್ರಾನ್ಸ್‌ ಮಾತುಕತೆ

1-wqeqewewqewqe

TMCಯ ಶಹಜಹಾನ್‌ ವಿರುದ್ಧ ಕೊಲೆ ಯತ್ನ ಕೇಸು

1-wqeqewqe

Congo;ಭಾರತದ ಮೇಜರ್‌ ರಾಧಿಕಾಗೆ ವಿಶ್ವಸಂಸ್ಥೆಯ ಉನ್ನತ ಪ್ರಶಸ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.