ಅಮೆರಿಕ ಶಟ್ಡೌನ್ ತಾತ್ಕಾಲಿಕ ತೆರವು
Team Udayavani, Jan 27, 2019, 2:47 AM IST
ವಾಷಿಂಗ್ಟನ್: ರಾಜಕೀಯ ಒತ್ತಡಕ್ಕೆ ಮಣಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಶಟ್ಡೌನ್ ಅನ್ನು ತಾತ್ಕಾಲಿಕವಾಗಿ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಟ್ರಂಪ್ ಸಹಿ ಹಾಕಿದ್ದಾರೆ. ಮೆಕ್ಸಿಕೋ ಗಡಿಯಲ್ಲಿ ಗೋಡೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವ ಟ್ರಂಪ್ ಪ್ರಸ್ತಾವಕ್ಕೆ ಡೆಮಾಕ್ರಾಟ್ ಸಂಸದರು ಸಂಸತ್ತಿನಲ್ಲಿ ಅನುಮೋದನೆ ನೀಡದ್ದರಿಂದ ಹಣಕಾಸು ಮಸೂದೆ ಪಾಸಾಗದೇ ಉಳಿದಿತ್ತು. ಇದರಿಂದಾಗಿ ಲಕ್ಷಾಂತರ ಸರಕಾರಿ ಉದ್ಯೋಗಿಗಳು ಸಂಬಳವಿಲ್ಲದೇ ಕೆಲಸ ಮಾಡುವಂತಾ ಗಿತ್ತು. 35 ದಿನಗಳಿಂದಲೂ ಸರಕಾರ ಕಾರ್ಯಸ್ಥಗಿತಗೊಳಿಸಿದ್ದು ಅಮೆರಿಕದ ಇತಿಹಾಸದಲ್ಲೇ ಮೊದಲನೆಯದಾಗಿದೆ. ಸದ್ಯ ಫೆ. 15ರ ವರೆಗೆ ಸರಕಾರ ಎಂದಿನಂತೆ ಕಾರ್ಯನಿರ್ವಹಿಸುವುದಕ್ಕೆ ಅನುವು ಮಾಡುವ ಒಪ್ಪಂದಕ್ಕೆ ಟ್ರಂಪ್ ಸಮ್ಮತಿಸಿದ್ದು, ಇದಕ್ಕೆ ಸಂಸತ್ತು ಕೂಡ ಅನುಮೋದನೆ ನೀಡಿದೆ.