ಭೂಗತ ಕೇಬಲ್‌ ಸಂಪರ್ಕ: ದೂರವಾಗುತ್ತಿವೆ ದೂರವಾಣಿ ಕಂಬಗಳು


Team Udayavani, Feb 3, 2019, 5:37 AM IST

3-february-4.jpg

ಪುತ್ತೂರು: ಡಿಜಿಟಲ್‌ ಯುಗಕ್ಕೆ ಬಿಎಸ್ಸೆನ್ನೆಲ್‌ ಕಂಬಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಡಿಜಿಟಲ್‌ ಯುಗ ಆಗಮಿಸುತ್ತಿದ್ದಂತೆ ಸಾಂಪ್ರದಾಯಿಕ ಫೋನ್‌ಗಳ ಸಂಖ್ಯೆ ಕುಸಿಯ ತೊಡಗಿದವು. ಫೋನ್‌ಗಳ ಸ್ಥಾನವನ್ನು ಮೊಬೈಲ್‌ಗ‌ಳು ಆಕ್ರಮಿಸಿಕೊಂಡಿವೆ. ಲ್ಯಾಂಡ್‌ಲೈನ್‌ಗಿಂತ ಕಡಿಮೆ ದರದಲ್ಲಿ ಮೊಬೈಲ್‌ಗ‌ಳು ಜನರನ್ನು ತಲುಪಿತು. ಇದರಿಂದಾಗಿ ಲ್ಯಾಂಡ್‌ಲೈನ್‌ ಹಾಗೂ ಇದರಲ್ಲೇ ಬರುತ್ತಿದ್ದ ನೆಟ್ವರ್ಕ್‌ಗೆ ಬೇಡಿಕೆ ಕುಸಿದಿದೆ. ಕಳೆದ ಒಂದು ವರ್ಷದ ಅಂಕಿ ಅಂಶವನ್ನೇ ಗಮನಿಸಿದರೆ ಪುತ್ತೂರಿನಲ್ಲಿ 1 ಸಾವಿರದಷ್ಟು ಸಂಪರ್ಕಗಳು ಕಡಿಮೆಯಾಗಿವೆ. ಸದ್ಯ ಸುಮಾರು 3 ಸಾವಿರದಷ್ಟು ಸಂಪರ್ಕ ಇವೆ.

ಕೇಬಲ್‌ ಬಳಕೆ
ಬಿಎಸ್ಸೆನ್ನೆಲ್‌ ಕಂಬಗಳ ಮೂಲಕ ಸಾಗುತ್ತಿದ್ದ ವಯರ್‌ಗಳನ್ನು ತೆಗೆದು ನೆಲದಡಿಯಿಂದ ಕಳುಹಿಸಲಾಗುತ್ತಿದೆ. ನೆಲದಡಿ ಸಾಗುವ ಫೈಬರ್‌, ಆಪ್ಟಿಕಲ್‌ ಕೇಬಲ್‌ಗ‌ಳ ಮೂಲಕ ಸಂಪರ್ಕ ನೀಡಲಾಗುತ್ತಿದೆ. ಭೂಮಿಯಡಿ ಇವುಗಳು ಸಾಗುವ ಕಾರಣ, ಕಂಬಗಳ ಆವಶ್ಯಕತೆ ಇಲ್ಲ. ಆದ್ದರಿಂದ ಒಂದು ಕಾಲದಲ್ಲಿ ಪ್ರತಿ ಬೀದಿಯಲ್ಲೂ ರಾರಾಜಿಸುತ್ತಿದ್ದ ಬಿಎಸ್ಸೆನ್ನೆಲ್‌ ಕಂಬಗಳು ಇಂದು ಕಣ್ಮರೆಯಾಗುತ್ತಲಿವೆ.

ಗುಜರಿಗೂ ಹಾಕುವಂತಿಲ್ಲ
ಬಿಎಸ್ಸೆನ್ನೆಲ್‌ ಸಂಸ್ಥೆಯ ಅಧಿಕಾರಿಗಳು ಈ ಕಂಬಗಳನ್ನು ನೇರವಾಗಿ ಗುಜರಿಗೆ ಹಾಕುವಂತಿಲ್ಲ. ಇದಕ್ಕಾಗಿಯೇ ಪ್ರತ್ಯೇಕ ಸಮಿತಿ ಇದೆ. ಅವರಿಗೆ ಪ್ರಸ್ತಾವನೆ ಸಲ್ಲಿಸಬೇಕು. ಅವರು ಯಾವಾಗಲಾದರೊಮ್ಮೆ ಆಯಾ ಸ್ಥಳಕ್ಕೆ ಬಂದು ಕಂಬಗಳನ್ನು ಕೊಂಡೊಯ್ಯುತ್ತಾರೆ.

ಸ್ಕ್ರ್ಯಾಪ್ ವಿಭಾಗದವರು ಸ್ಥಳಕ್ಕೆ ಆಗಮಿಸುವ ಹೊತ್ತಿನಲ್ಲಿ ಕಂಬಗಳು ಇರಲೇಬೇಕು. ಕೆಲ ಸಂದರ್ಭಗಳಲ್ಲಿ ಪ್ರಸ್ತಾವನೆ ಕೊಟ್ಟ ಕಂಬಗಳನ್ನು ಕದಿಯಲಾಗಿತ್ತು. ಈ ಸಂದರ್ಭ ಅಧಿಕಾರಿಗಳೇ ಉತ್ತರ ನೀಡಬೇಕಾಗುತ್ತದೆ. ವರ್ಷಗಳ ಹಿಂದೆ ಪುತ್ತೂರಿನ ಅನಗತ್ಯ ಕಂಬಗಳನ್ನು ಸಾð ್ಯಪ್‌ ವಿಭಾಗದವರು ಕೊಂಡೊಯ್ದಿದ್ದಾರೆ. ಇನ್ನೂ ಕೆಲ ಕಂಬಗಳು ತೋಟದ ನಡುವೆ, ರಸ್ತೆ ಬದಿ ಬಿದ್ದುಕೊಂಡಿವೆ.

ಹಾನಿ ಕಡಿಮೆಯಾಗುತ್ತಿದೆ
ಬಿಎಸ್ಸೆನ್ನೆಲ್‌ ಕಂಬಗಳನ್ನು ಸದ್ಯದ ಮಟ್ಟಿಗೆ ಕೆಲ ಪ್ರದೇಶಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆ. ಫೈಬರ್‌ ಕೇಬಲ್‌ಗ‌ಳನ್ನು ಬೇಕಾದಲ್ಲಿ ತುಂಡರಿಸಲು ಅಸಾಧ್ಯ. ಆದ್ದರಿಂದ ಇವುಗಳಿಂದ ಸಂಪರ್ಕ ಪಡೆದುಕೊಳ್ಳುವಲ್ಲಿಂದ ವಿದ್ಯುತ್‌ ಕಂಬಗಳ ಮೂಲಕ ವಯರ್‌ ಕಳುಹಿಸಲಾಗುತ್ತದೆ. ವಿದ್ಯುತ್‌ ತಂತಿ ಹಾದು ಹೋಗಿರುವುದಕ್ಕಿಂತ ಸ್ವಲ್ಪ ಕೆಳಭಾಗದಲ್ಲಿ ಈ ತಂತಿ ಹಾದು ಹೋಗುತ್ತದೆ. ಹಿಂದೆ ತಂತಿಗಳ ಹಾನಿ ಆಗುತ್ತಿತ್ತು. ವಿದ್ಯುತ್‌ ಕಂಬದ ಮೂಲಕ ವಯರ್‌ ಕಳುಹಿಸಿದ ಬಳಿಕ ಹಾನಿಯಾಗುತ್ತಿಲ್ಲ. ಮೆಸ್ಕಾಂ ಜತೆ ಬಿಎಸ್ಸೆನ್ನೆಲ್‌ ಒಪ್ಪಂದ ಮಾಡಿಕೊಂಡಿರುವುದು ಒಂದು ರೀತಿಯಲ್ಲಿ ಅನುಕೂಲವೇ ಆಗಿದೆ.

ಕೆಲವೆಡೆ ಕಂಬ ಬೇಕು
ನೆಲದಡಿ ಹಾದು ಹೋಗುವ ವಯರ್‌ಗಳಿಗೆ ಕೆಲ ಸಂದರ್ಭ ಹಾನಿ ಆಗುವುದಿದೆ. ಅಥವಾ ಮೋರಿ ನಿರ್ಮಾಣದಂತಹ ಸಂದರ್ಭ ವಯರ್‌ಗಳನ್ನು ಭೂಮಿ ಅಡಿಯಿಂದ ಮೇಲೆ ತರಲಾಗುತ್ತದೆ. ಇಂತಹ ಸಂದರ್ಭ ಎರಡೂ ಬದಿ ಕಂಬಗಳನ್ನು ಹಾಕಿ, ಅದರ ಮೇಲಿನಿಂದ ತಂತಿಯನ್ನು ಹಾದು ಹೋಗುವಂತೆ ಮಾಡಲಾಗುವುದು. ಇನ್ನೂ ಕೆಲ ಸಂದರ್ಭ ಪೇಟೆಯಲ್ಲಿ ವಿದ್ಯುತ್‌ ಕಂಬಗಳ ಅಗತ್ಯ ಇರುತ್ತದೆ. ಆಗ ಈ ಕಂಬಗಳನ್ನು ಬಳಸಿಕೊಳ್ಳಲಾಗುತ್ತದೆ.

ಕಂಬ ಕದ್ದ ಪ್ರಕರಣ
ಕಂಬ ನಿರುಪಯುಕ್ತ ಎಂದು ಅನಿಸತೊಡಗುತ್ತಿದ್ದಂತೆ, ಈ ಕಂಬಗಳು ಸಾರ್ವಜನಿಕರಿಗೆ ಉಪಯುಕ್ತ ಆಗತೊಡಗಿತು. ಕೆಲ ಕಂಬಗಳು ತೋಡಿಗೆ ಕಾಲುಸಂಕವಾಗಿ ಹೀಗೆ ವಿವಿಧ ರೀತಿಯಲ್ಲಿ ಬಳಕೆ ಆಗತೊಡಗಿತು. ಇದು ಬಲಿಷ್ಠ ಇರುವುದರಿಂದ ತುಕ್ಕು ಹಿಡಿಯುವ, ಹಾಳಾಗುವ ಪ್ರಮೇಯ ಇಲ್ಲ. ಈ ಎಲ್ಲ ಕಾರಣಕ್ಕೆ ಬಿಎಸ್ಸೆನ್ನೆಲ್‌ ಕಂಬಗಳ ಕಳ್ಳತನ ಹೆಚ್ಚಾಗತೊಡಗಿತು. ಇದರ ಬಗ್ಗೆ ಪುತ್ತೂರು ನ್ಯಾಯಾಲಯದಲ್ಲಿ ಪ್ರಕರಣವಿದ್ದ ಉದಾಹರಣೆ ಇದೆ.

ತೀರಾ ಅಗತ್ಯವಿದ್ದಲ್ಲಿ ಮಾತ್ರ ಕಂಬ
2 ವರ್ಷ‌ ಹಿಂದೆ ಕಂಬಗಳನ್ನು ಸ್ಕ್ರ್ಯಾಪ್‌ಗೆ ಕೊಡಲಾಗಿದೆ. ಪುತ್ತೂರಿನಲ್ಲಿದ್ದ ಸುಮಾರು 800ರಷ್ಟು ಕಂಬಗಳನ್ನು ಸ್ಕ್ರ್ಯಾಪ್‌ ಮಾಡಿ ಕೊಂಡೊಯ್ದಿದ್ದಾರೆ. ಇದೀಗ ತೀರಾ ಅಗತ್ಯ ಇರುವ ಕಡೆಗಳಲ್ಲಿ ವಿದ್ಯುತ್‌ ಕಂಬದ ಮೂಲಕ ವಯರ್‌ ಎಳೆಯಲಾಗುತ್ತಿದೆ.
-ಆನಂದ್‌,
ಎಜಿಎಂ, ಬಿಎಸ್ಸೆನ್ನೆಲ್‌ ಪುತ್ತೂರು

ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.