ಜೈನ ಧರ್ಮದ ಕುರಿತು ಹೇಳಿಕೆ;ಮಿಲಿಂದ್ ದೇವೊರಾ ವಿರುದ್ಧ ಎಫ್ಐಆರ್
Team Udayavani, Apr 21, 2019, 11:25 AM IST
ಮುಂಬಯಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕೆ ಮುಂಬಯಿ ಕಾಂಗ್ರೆಸ್ ಅಧ್ಯಕ್ಷ ಮಿಲಿಂದ್ ದೇವೊರಾ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ದೇವೊರಾ ವಿರುದ್ದ ಎಫ್ಐಆರ್ ದಾಖಲಿಸಿಕೊಳ್ಳಲು ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಎಲ್ಟಿಎ ಮಾರ್ಗ್ ಪೊಲೀಸರಿಗೆ ಸೂಚನೆ ನೀಡಿತ್ತು.
ದೇವೊರಾ ಅವರು ಜೈನ ಸಮುದಾಯದ ವಿರುದ್ಧ ನೀಡಿದ ಹೇಳಿಕೆ ತಪ್ಪು ಮತ್ತು ಧಾರ್ಮಿಕ ಸೂಕ್ಷ್ಮವಾಗಿರುವ ಕಾರಣಕ್ಕೆ ಎಫ್ಐಆರ್ ದಾಖಲಿಸಲಾಗಿದೆ.
ದೇವೊರಾ ವಿರುದ್ಧ ಶಿವಸೇನೆಯ ನಾಯಕರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.