ಲೋಕಸಭೆ ಚುನಾವಣೆ ಮತ ಎಣಿಕೆ: ಸಿದ್ಧತೆ ಪೂರ್ಣ


Team Udayavani, May 23, 2019, 6:11 AM IST

siddate

ಕಾಸರಗೋಡು: ಲೋಕಸಭೆ ಚುನಾವಣೆಯ ಮತಗಣನೆ ಮೇ 23ರಂದು ಪಡನ್ನಕ್ಕಾಡ್‌ ನೆಹರೂ ಕಲಾ-ವಿಜ್ಞಾನ ಕಾಲೇಜಿನಲ್ಲಿ ನಡೆಯಲಿದೆ.
ಗ್ರಾಮ-ನಗರಗಳ ವ್ಯತ್ಯಾಸವಿಲ್ಲದೆ ಈ ಬಾರಿಯ ಲೋಕಸಭೆ ಚುನಾವಣೆ ಸಂಬಂಧ ಕಳೆದ ಅನೇಕ ಕಾಲಗಳಿಂದ ನಡೆದುಬರುತ್ತಿರುವ ಬಿಸಿ ಚರ್ಚೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟಗೊಂಡ ಕೂಡಲೇ ಕೊನೆಬೀಳಲಿದೆ.

ಮತಗಣನೆ ಕೇಂದ್ರವಾಗಿರುವ ಪಡನ್ನಕ್ಕಾಡ್‌ ನೆಹರೂ ಕಾಲೇಜಿನಲ್ಲಿ ಮಂಜೇಶ್ವರ, ಕಾಸರಗೋಡು, ಕಾಂಞಂಗಾಡ್‌ ವಿಧಾನಸಭೆ ಕ್ಷೇತ್ರಗಳ ತಲಾ 14 ಗಣನೆಯ ಮೇಜುಗಳು ಸಿದ್ಧವಾಗಿವೆ. ಉದುಮಾಕ್ಕೆ 10, ತ್ರಿಕರಿಪುರಕ್ಕೆ 13, ಪಯ್ಯನ್ನೂರು, ಕಲ್ಯಾಶೇರಿಗೆಗಳಿಗೆ ತಲಾ 12 ಮೇಜುಗಳಿವೆ. ಈ ಮೇಜುಗಳ ನಿಗಾದ ಹೊಣೆ ಉಪಚುನಾವಣಾಧಿಕಾರಿಗಳಿಗೆ ನೀಡಲಾಗಿದೆ. ಪ್ರತಿ ಎಣಿಕೆ ಮೇಜಿನಲ್ಲೂ ಕೌಂಟಿಂಗ್‌ ಸೂಪರ್‌ವೈಸರ್‌ಗಳು, ಕೌಂಟಿಂಗ್‌ ಅಸಿಸ್ಟೆಂಟ್‌ಗಳು, ಮೈಕ್ರೋ ಅಬ್ಸರ್ವರ್‌ಗಳು ಇರುವರು. ಮೈಕ್ರೋ ಆಬ್ಸರ್ವರ್‌ಗಳ ನಿಗಾದಲ್ಲಿ ಕೌಂಟಿಂಗ್‌ ಸೂಪರ್‌ವೈಸರ್‌ ಮತ್ತು ಕೌಂಟಿಂಗ್‌ ಅಸಿಸ್ಟೆಂಟ್‌ಗಳು ಪ್ರತಿ ಮೇಜಿನಲ್ಲಿ ಮತಗಳ ಎಣಿಕೆ ನಡೆಸಲಿದ್ದಾರೆ. ಪ್ರತಿ ಗಣನೆಯ ಮೇಜಿನ ವ್ಯಾಪ್ತಿಯಲ್ಲಿ ಆಯಾ ಅಭ್ಯರ್ಥಿಗಳ ಏಜೆಂಟರು ಇರುವರು.

ಅಂಚೆ ಮತಗಳ ಎಣಿಕೆ ಜಿಲ್ಲಾಧಿಕಾರಿ ಅವರ ಮೇಲ್ನೋಟದಲ್ಲಿ ನಡೆಯಲಿದೆ. ಇದಕ್ಕಾಗಿ ಸಹಾಯಕ ಜಿಲ್ಲಾಧಿಕಾರಿಯ ಶ್ರೇಣಿಯಲ್ಲಿರುವ 6 ಎ.ಆರ್‌.ಒ..ಗಳನ್ನು ನೇಮಿಸಲಾಗಿದೆ. ಇಲೆಕ್ಟ್ರಾನಿಕಲಿ ಟ್ರಾನ್ಸ್‌ ಮಿಟೆಡ್‌ ಪೋಸ್ಟಲ್‌ ವೋಟ್‌ಗಳು, ಸ್ಕ್ಯಾನ್‌ ನಡೆಸಿ ಮತ ಎಣಿಕೆ ನಡೆಸಲು 12 ಮೇಜುಗಳನ್ನು ಸಿದ್ಧಪಡಿಸಲಾಗಿದೆ. ಇವುಗಳಲ್ಲಿ 16 ತಂತ್ರಜ್ಞರು ಇರುವರು.

ಪ್ರತಿ ವಿಧಾನಸಭೆ ಕ್ಷೇತ್ರದ 5 ಮತಗಟ್ಟೆಗಳನ್ನು ಆಯ್ದು, ಈ ಬೂತ್‌ಗಳ ವಿವಿಪಾಟ್‌ ಸ್ಲಿಪ್‌ಗ್ಳನ್ನು ಗಣನೆ ಮಾಡಿ, ಮತಯಂತ್ರದ ಫಲಿತಾಂಶವನ್ನು ಹೋಲಿಸಿ ನೋಡಲಾಗುವುದು.

ಮತಗಣನೆ ಕೇಂದ್ರದಲ್ಲಿ ಚುನಾವಣೆ ಅಧಿಕಾರಿ ಮತ್ತು ಜನರಲ್‌ ಅಬ್ಸರ್ವರ್‌ಗಳ ಜೊತೆಗೆ ಅಭ್ಯರ್ಥಿಗಳು ಕುಳಿತುಕೊಳ್ಳಲಿದ್ದಾರೆ.

ಬೆಳಗ್ಗೆ 6 ಗಂಟೆಗೆ ಅಭ್ಯರ್ಥಿಗಳ ಏಜೆಂಟರು ಮತಎಣಿಕೆಯ ಕೇಂದ್ರವಾಗಿರುವ ಪಡನ್ನಕ್ಕಾಡ್‌ ನೆಹರೂ ಕಾಲೇಜಿಗೆ ಹಾಜರಾಗ ಬೇಕು ಎಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದರು. ಬಿಗಿ ಸುರûಾ ತಪಾಸಣೆಯ ಅನಂತರ ಇವರಿಗೆ ಕೇಂದ್ರದೊಳಗೆ ಪ್ರವೇಶಾತಿ ನೀಡಲಾಗುವುದು. ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್‌ ಫೋನ್‌ ಬಳಕೆ ಸಲ್ಲದು. ತರುವವರ ಮೊಬೈಲ್‌ ಫೋನ್‌ ಹಿಡಿದಿರಿಸಲಾಗುವುದು. ಆಹಾರ ಮತ್ತು ನೀರು ಹೊರಗಡೆಯಿಂದ ತರಬಾರದು.

ಮತ ಎಣಿಕೆ ಹೀಗಿರುವುದು
ಕಾಸರಗೋಡು ಲೋಕಸಭೆ ಕ್ಷೇತ್ರದ ಮತಗಣನೆ ಒಂದು ಸುತ್ತಿನಲ್ಲಿ 89 ಮತಗಟ್ಟೆಗಳ ಮತಗಳ ಎಣಿಕೆ ನಡೆಯಲಿದೆ. ಒಟ್ಟು 15 ಸುತ್ತುಗಳಲ್ಲಿ ಮತ ಎಣಿಕೆ ಇರುವುದು. ಮಂಜೇಶ್ವರ, ಕಾಸರಗೋಡು, ಉದುಮಾ, ಕಾಂಞಂಗಾಡ್‌, ತ್ರಿಕರಿಪುರ, ಕಲ್ಯಾಶೇರಿ, ಪಯ್ಯನ್ನೂರು ವಿಧಾನಸಭೆ ಕ್ಷೇತ್ರಗಳಿಗಾಗಿ ಪ್ರತ್ಯೇಕ ಮತ ಎಣಿಕೆ ಕೊಠಡಿಗಳಲ್ಲಿ ಎಣಿಕೆಗೆ ಮೇಜುಗಳು ಇರುವುವು.

ಪ್ರತಿ ವಿಧಾನಸಭೆ ಕ್ಷೇತ್ರದ ಮತಗಣನೆಯ ಕೊಠಡಿಗಳಲ್ಲಿ ಸಹಾಯಕ ರಿಟರ್ನಿಂಗ್‌ ಆಫೀಸರ್‌ (ಎ.ಆರ್‌.ಒ.) ನೇತೃತ್ವದಲ್ಲಿ ಒಂದು ಟೇಬಲ್‌, ಜತೆಗೆ ನಿಗದಿತ ಗಣನೆಯ ಮೇಜೂ ಇರುವುದು. ಪ್ರತಿ ಕೌಂಟಿಂಗ್‌ ಟೇಬಲ್‌ನಲ್ಲಿ ಕೌಂಟಿಂಗ್‌ ಸೂಪರ್‌ ವೈಸರ್‌ಗಳು, ಕೌಂಟಿಂಗ್‌ ಅಸಿಸ್ಟೆಂಟ್‌, ಮೈಕ್ರೋ ಅಬ್ಸರ್ವರ್‌ಗಳು ಇರುವರು. ಎ.ರ್‌.ಒ. ನ ಟೇಬಲ್‌ ಸಹಿತ ಸಮೀಪ ಅಭ್ಯರ್ಥಿಗಳ ಏಜೆಂಟರಿಗೂ ಪ್ರತ್ಯೇಕ ಜಾಗ ಇರುವುದು.

ಅಂಚೆ ಮತಗಳ ಮತ್ತು ವಿವಿಪ್ಯಾಟ್‌ ಮತಗಳ ಗಣನೆ ಬೆಳಗ್ಗೆ 8ರಿಂದ ಆರಂಭಗೊಳ್ಳಲಿದೆ. ಹಿಂದೆ ಅಂಚೆ ಮತಗಳನ್ನು ಮೊದಲಿಗೆ ಎಣಿಕೆ ಮಾಡಲಾಗುತ್ತಿತ್ತು. ಈ ಮತಗಳನ್ನೂ ಪೂರ್ಣರೂಪದಲ್ಲಿ ಎಣಿಕೆ ನಡೆಸಿದ ಅನಂತರ ವಿವಿಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಎಣಿಕೆ ಮಾಡಲಾಗುವುದು.

ವಿವಿಪ್ಯಾಟ್‌ ಎಣಿಕೆ ರೀತಿ
ಕಳೆದ ಬಾರಿಯ ಲೋಕಸಭೆ ಚುನಾವಣೆಗಿಂತ ವಿಭಿನ್ನ ರೀತಿ ಈ ಬಾರಿ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ತಲಾ 5 ಬೂತ್‌ಗಳ ವಿವಿಪ್ಯಾಟ್‌ಗಳ ಸ್ಲಿಪ್‌ಗ್ಳನ್ನು ಗಣನೆ ಮಾಡಲಾಗುವುದು.

4 ರೀತಿ ವಿವಿಪ್ಯಾಟ್‌ ಸ್ಲಿಪ್‌ಗ್ಳ ಗಣನೆ ನಡೆಯಲಿದೆ:
– ಪ್ರತಿ ವಿಧಾನಸಭೆ ಕ್ಷೇತ್ರಗಳಿಂದ ಚೀಟಿ ಎತ್ತುವ ಮೂಲಕ ಆಯ್ಕೆ ಮಾಡಿದ 5
ಮತಗಟ್ಟೆಗಳ ವಿವಿಪ್ಯಾಟ್‌ ಸ್ಲಿಪ್‌ ಗಳ ಗಣನೆ.
– ಇವಿಎಂ ನ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣದಿದ್ದರೂ ವಿವಿಪ್ಯಾಟ್‌ನ ಗಣನೆ
ನಡೆಸಲಾಗುವುದು.
– ಮತದಾನಕ್ಕೆ ಮೊದಲು ನಡೆಸಿದ ಮೋಕ್‌ಪೋಲ್‌ ರದ್ದುಗೊಳಿಸದೇ ಇರುವ
ಇವಿಎಂ ನ ವಿವಿಪ್ಯಾಟ್‌ ಸ್ಲಿಪ್‌ ಗಣನೆ ಮಾಡಲಾಗುವುದು.
– ಮತದಾನ ಪ್ರಕ್ರಿಯೆ ಪೂರ್ಣಗೊಳಿಸಿದ ಇವಿಎಂ ಕ್ಲೋಸ್‌ ಬಟನ್‌ ಬಳಸದೇ
ಸೀಲ್‌ ನಡೆಸಿದ ಇವಿಎಂಗಳ ವಿವಿಪ್ಯಾಟ್‌ ಸ್ಲಿಪ್‌ ಗಣನೆ ಮಾಡಲಾಗುವುದು.

ಟಾಪ್ ನ್ಯೂಸ್

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Ajekar ಕೊಳವೆ ಬಾವಿ ಕೊರೆಯುವ ವಿಚಾರ: ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.