ಕಾರು ತುಕ್ಕು ಹಿಡಿಯದಂತೆ ಏನು ಮಾಡಬೇಕು?


Team Udayavani, Jun 7, 2019, 6:00 AM IST

auto-expert-1

ಮಳೆಗಾಲ ಸಮೀಪಿಸುತ್ತಿದೆ. ಈ ಸಂದರ್ಭದಲ್ಲಿ ಲೋಹದ ವಸ್ತುಗಳಿಗೆ ತುಕ್ಕು ಹಿಡಯುವುದು ಸಾಮಾನ್ಯ. ಅದರಲ್ಲೂ ಸಮುದ್ರ ತೀರದ, ಗಾಳಿಯಲ್ಲಿ ತೇವ, ಉಪ್ಪಿನಂಶ ಇರುವ ಕರಾವಳಿ ಪ್ರದೇಶದಲ್ಲಿ ತುಕ್ಕು ಬಹುಬೇಗ ಹಿಡಿಯುತ್ತಿದೆ. ಇಂತಹ ಸಂದರ್ಭಗಳಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ನೋಡೋಣ.

ಪೈಂಟ್‌ ಸುರಕ್ಷೆಗೆ ಆದ್ಯತೆ
ಕಾರು ತೊಳೆಯುವ ಸಂದರ್ಭದಲ್ಲಿ ಸೋಪು ನೀರು ಬಳಸಿರಿ ಅಥವಾ 200 ಎಂ.ಎಲ್‌ನಷ್ಟು ಡೀಸೆಲ್‌ ಅನ್ನು ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ ಕಾರನ್ನು ತೊಳೆಯಿರಿ. ಬಾಡಿ ಮೇಲಿಂದ ಸಂಪೂರ್ಣ ಕೆಸರು ಹೋದರೆ, ಪೈಂಟ್‌ ಬಣ್ಣ ಕುಂದುವುದಿಲ್ಲ. ಹಾಗೆಯೇ ಟಯರ್‌ನ ಮಡ್‌ಗಾರ್ಡ್‌ ಭಾಗದಲ್ಲಿ ಪೈಂಟ್‌ ಬಣ್ಣ ಮಾಸುತ್ತಿದ್ದರೆ, ಆ ಭಾಗದಲ್ಲಿ ನೀರು, ಡೀಸೆಲ್‌ನಿಂದ ತೊಳೆಯಿರಿ. ಬಳಿಕ ರಬ್ಬಿಂಗ್‌ ಕಾಂಪೌಂಡ್‌ ಎಂಬ ವಸ್ತು ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಚೆನ್ನಾಗಿ ಪೈಂಟ್‌ ಮೇಲೆ ಹತ್ತಿ ಬಟ್ಟೆಯಿಂದ ಒರೆಸಿರಿ. ಆಗ ಪೈಂಟ್‌ ಮೊದಲಿನಂತೆಯೇ ಹೊಳೆಯುತ್ತದೆ.

ತುಕ್ಕು ನಿರೋಧಕ ಸ್ಪ್ರೆ
ಕಾರಿನ ಅಡಿ ಭಾಗಕ್ಕೆ ತುಕ್ಕು ಬಹುಬೇಗನೆ ಹಿಡಿಯುತ್ತದೆ. ಇದನ್ನು ತಪ್ಪಿಸಲು ತುಕ್ಕು ನಿರೋಧಕವನ್ನು ಸ್ಪ್ರೆà ಮಾಡಬೇಕು. ಕಾರನ್ನು ಚೆನ್ನಾಗಿ ತೊಳೆದು, ಒಣಗಿಸಿದ ಬಳಿಕ ಇದನ್ನು ಸ್ಪ್ರೆà ಮಾಡಲಾಗುತ್ತದೆ. ಕಾರ್‌ಕೇರ್‌ಗಳಲ್ಲಿ, ಷೋರೂಂಗಳಲ್ಲಿ ಪರಿಣತರು ಮಾಡಿಕೊಡುತ್ತಾರೆ. ತುಕ್ಕು ನಿರೋಧಕ ಕಪ್ಪಾದ ಪೈಂಟ್‌ನಂತಿದ್ದು, ಇದು ಸುಮಾರು 5 ವರ್ಷಗಳ ಕಾಲ ಬಾಳಿಕೆ ಬರುತ್ತದೆ. ಇದಕ್ಕೆ 5 ಸಾವಿರ ರೂ. ವರೆಗೆ ವೆಚ್ಚ ತಗಲುತ್ತದೆ.

ಕೆಸರು ನೀರಲ್ಲಿ ಓಡಿಸಬೇಡಿ
ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲುವುದು ಸಾಮಾನ್ಯ. ಆದರೆ ಅತಿಯಾದ ಕೆಸರು, ನೀರು ನಿಂತಲ್ಲಿ ಚಾಲನೆ ಮಾಡುವುದನ್ನು ತಪ್ಪಿಸಿ ಅಥವಾ ಕನಿಷ್ಠ ಪಕ್ಷ ವೇಗದ ಚಾಲನೆ ಮಾಡಬೇಡಿ. ನೀರು ಎಂಜಿನ್‌ ಬೇ ಒಳಗೆ ಹಾರುವ ಸಂಭವವಿರುತ್ತದೆ. ಕೆಲವು ಕಡೆ ನೀರು/ಕೆಸರು ನಿಂತು ತುಕ್ಕು ಹಿಡಿಯುವ ಸಂದರ್ಭವೂ ಇರುತ್ತದೆ. ಮಳೆಗಾಲದ ಮಧ್ಯೆ ಮತ್ತು ಮಳೆಗಾಲದ ಕೊನೆಯಲ್ಲಿ 2 ಬಾರಿ ವಾಹನವನ್ನು ಡೀಸೆಲ್‌ ಸ್ಪ್ರೆà ಮಾಡಿ ಅಂಡರ್‌ ಬಾಡಿ ವಾಷ್‌ ಮಾಡಿಸಿದರೆ ಆದಷ್ಟೂ ತುಕ್ಕು ಹಿಡಿಯುವುದನ್ನು ತಪ್ಪಿಸಬಹುದು.

ನಿಯಮಿತವಾಗಿ ತೊಳೆಯಿರಿ
ಕಾರನ್ನು ನಿಯಮಿತವಾಗಿ ತೊಳೆಯಿರಿ. ಮಳೆಗಾಲದಲ್ಲಿ ತೊಳೆದರೆ ಹೆಚ್ಚಿನ ಪ್ರಯೋಜವಾಗದಿದ್ದರೂ, ಕಾರಿನ ಬಾಡಿ ಮೇಲೆ ಇರುವ ಕೆಸರನ್ನಾದರೂ ತುಸು ನೀರು ಹಾಕಿ ತೆಗೆಯಿರಿ. ದೀರ್ಘಾವಧಿ ಕೆಸರು ಬಾಡಿ ಮೇಲೆ ಅಥವಾ ಟಯರ್‌ನ ರಿಮ್‌ ಮತ್ತು ಎಂಜಿನ್‌ ಬದಿಯಲ್ಲಿ ನಿಲ್ಲಲು ಬಿಡಬೇಡಿ. ಒಂದು ವೇಳೆ ಕೆಸರನ್ನು ಹಾಗೇ ಬಿಟ್ಟಿರಾದರೆ, ಬಹುಬೇಗನೆ ತುಕ್ಕು ಹಿಡಿಯುತ್ತದೆ.

 - ಈಶ

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.