ಹಳೆಯ ಕಥೆ ನಂಬಿ ಒಂಟಿಯಾದವರು

ಚಿತ್ರ ವಿಮರ್ಶೆ

Team Udayavani, Jul 7, 2019, 3:02 AM IST

Onti

“ಕಿಕ್‌ ಏರ್‌ ಬೇಕು ಅಂದ್ರೆ ಕ್ವಾಟ್ರಾ ಬೇಕು… ಒಂಟಿನ ಮುಟ್ಬೇಕು ಅಂದ್ರೆ ಮೀಟ್ರಾ ಬೇಕು…’ ಇಂಥದ್ದೊಂದು ಮಾಸ್‌ ಡೈಲಾಗ್‌ ಹೇಳಿ ಮುಗಿಸುವಷ್ಟರಲ್ಲಿ, “ಒಂಟಿ’ಯನ್ನು ಮುಟ್ಟಲು ಬಂದವರು ಅಡ್ಡಡ್ಡ ಬಿದ್ದಿರುತ್ತಾರೆ. ಇದು ಈ ವಾರ ತೆರೆಗೆ ಬಂದಿರುವ “ಒಂಟಿ’ ಚಿತ್ರದಲ್ಲಿ ಬರುವ ಒಂದು ದೃಶ್ಯ. ಇನ್ನು “ಒಂಟಿ’ ಚಿತ್ರದ ಟೈಟಲ್‌ನಲ್ಲೂ “ಆರಡಿ ಹೈಟು ನಿಂತ್ರೆ ಫೈಟು’ ಅಂಥ ಟ್ಯಾಗ್‌ಲೈನ್‌ ಇರುವುದರಿಂದ, “ಒಂಟಿ’ ಅಂದ್ರೆ ಔಟ್‌ ಆ್ಯಂಡ್‌ ಔಟ್‌ ಆ್ಯಕ್ಷನ್‌ ಚಿತ್ರ ಅನ್ನೋದನ್ನ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯಿಲ್ಲ.

ಇನ್ನು ಚಿತ್ರದ ಕಥಾಹಂದರದ ಬಗ್ಗೆ ಹೇಳುವುದಾದರೆ, ಅವನ ಮೂಲ ಹೆಸರು ಅಮರ್‌. ಆದ್ರೆ ಎಲ್ಲರೂ ಅವನನ್ನ “ಒಂಟಿ’ ಎಂದೇ ಕರೆಯುವುದರಿಂದ, ಅದೇ ಹೆಸರಿನಲ್ಲಿ ಅವನು ಫೇಮಸ್‌. ಮನೆಯಲ್ಲಿ ಅಮ್ಮ, ಅಣ್ಣ, ಸ್ನೇಹಿತ, ಪ್ರೀತಿಸುವ ಹುಡುಗಿ ಎಲ್ಲರೂ ಇದ್ದರೂ ಅವನು “ಒಂಟಿ’. ರೆಬಲ್‌ ವರ್ತನೆಯಿಂದ ಸಹಜವಾಗಿಯೇ “ಒಂಟಿ’ಗೆ ಒಂದಷ್ಟು ಶತ್ರುಗಳು ಹುಟ್ಟಿಕೊಳ್ಳುತ್ತಾರೆ. ಮುಂದೇನಾಗುತ್ತದೆ ಅನ್ನೋದೇ ಚಿತ್ರದ ಕ್ಲೈಮ್ಯಾಕ್ಸ್‌.

ಇಷ್ಟು ಹೇಳಿದ ಮೇಲೆ ಕನ್ನಡದಲ್ಲಿ ಇಂಥ ಲೆಕ್ಕವಿಲ್ಲದಷ್ಟು ಚಿತ್ರಗಳನ್ನು ನೋಡಿ ಪಂಟರ್‌ ಆಗಿರುವ ಪ್ರೇಕ್ಷಕರು ಕೂತಲ್ಲಿಯೇ ಚಿತ್ರದ ಕ್ಲೈಮ್ಯಾಕ್ಸ್‌ ಏನಂತ ಸುಲಭವಾಗಿ ಊಹಿಸಿಬಿಡುತ್ತಾರೆ. ಅದೇ ಊಹೆ ಚಿತ್ರದಲ್ಲಿ ನಿಜವಾಗುವುದರಿಂದ “ಒಂಟಿ’ ಕೊನೆವರೆಗೂ ಕುತೂಹಲ ಉಳಿಸಿಕೊಂಡು ಹೋಗುವುದೇ ಇಲ್ಲ. “ಒಂಟಿ’ ಗಾಂಧಿನಗರದ ಪಕ್ಕಾ ಮಾಸ್‌ ಪ್ರೇಕ್ಷಕರನ್ನೇ ಗಮನದಲ್ಲಿ ಇಟ್ಟುಕೊಂಡು ಬಂದಿರುವ ಚಿತ್ರ. ಹಾಗಾಗಿ, ಚಿತ್ರದಲ್ಲಿ ಕಥೆಯನ್ನು ಹೊರತುಪಡಿಸಿದರೆ, ಖಡಕ್‌ ಡೈಲಾಗ್ಸ್‌, ಭರ್ಜರಿ ಫೈಟು, ರಿಚ್‌ ಮೇಕಿಂಗ್‌ ಹೀಗೆ ಯಾವುದಕ್ಕೂ ಕೊರತೆ ಇಲ್ಲ.

ಅನ್ನ (ಕಥೆ)ವೇ ಹಳಸಿರುವಾಗ, ಅದಕ್ಕೆ ಎಷ್ಟು ಮಸಾಲೆ ಹಾಕಿದರೇನು, ಯಾವ “ಚಿತ್ರ’ನ್ನ ಮಾಡಿದರೇನು ಅದನ್ನು ಸವಿಯುವವರಿಗೆ ಸಪ್ಪೆಯಾಗಿಯೇ ಕಾಣುತ್ತದೆ. ಹಾಗಿದೆ “ಒಂಟಿ’ಯ ಪಾಡು. ಚಿತ್ರದಲ್ಲಿರುವ ಎಲ್ಲಾ ಅಂಶಗಳ ಜೊತೆಗೆ ಒಂದೊಳ್ಳೆ ಕಥೆ ಇದ್ದಿದ್ದರೆ, “ಒಂಟಿ’ಗೆ ಪ್ರೇಕ್ಷಕರು ಜಂಟಿಯಾಗುವ ಸಾಧ್ಯತೆಗಳಿದ್ದವು. ಇನ್ನು ನಾಯಕ ಕಂ ನಿರ್ಮಾಪಕ ಆರ್ಯ ಚಿತ್ರಕ್ಕೆ ಸಾಕಷ್ಟು ಪರಿಶ್ರಮ ಹಾಕಿರುವುದು ತೆರೆಮೇಲೆ ಕಾಣುತ್ತದೆ.

ಆ್ಯಕ್ಷನ್‌, ಡ್ಯಾನ್ಸ್‌, ಡೈಲಾಗ್‌ ಡೆಲಿವರಿ ಎಲ್ಲದರಲ್ಲೂ ಆರ್ಯ ಪರವಾಗಿಲ್ಲ ಎನ್ನಬಹುದು. ನಾಯಕಿ ಮೇಘನಾ ರಾಜ್‌ ಪಾತ್ರ “ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬಂತಿದೆ. ಅದನ್ನು ಹೊರತುಪಡಿಸಿದರೆ ನೀನಾಸಂ ಅಶ್ವತ್‌ ಮತ್ತು ಬೆನಕ ಪವನ್‌ ಅಭಿನಯ ಗಮನ ಸೆಳೆಯುತ್ತದೆ. ಉಳಿದ ಪಾತ್ರಗಳ ಬಗ್ಗೆ ಹೆಚ್ಚೇನು ಹೇಳುವಂತಿಲ್ಲ. ಹಾಡಿಗಿಂತ ಹಿನ್ನೆಲೆ ಸಂಗೀತದ ಅಬ್ಬರವೇ “ಒಂಟಿ’ಗೆ ಜೋರಾಗಿದೆ. ಚಿತ್ರದ ಛಾಯಾಗ್ರಹಣ, ಸಂಕಲನ ಗಮನ ಸೆಳೆಯುತ್ತದೆ.

ಚಿತ್ರ: ಒಂಟಿ
ನಿರ್ಮಾಣ: ಆರ್ಯ
ನಿರ್ದೇಶನ: ಶ್ರೀ
ತಾರಾಗಣ: ಆರ್ಯ, ಮೇಘನಾ ರಾಜ್‌, ದೇವರಾಜ್‌, ನೀನಾಸಂ ಅಶ್ವಥ್‌, ಶರತ್‌ ಲೋಹಿತಾಶ್ವ, ಬೆನಕ ಪವನ್‌, ಗಿರಿಜಾ ಲೋಕೇಶ್‌, ರಾಕ್‌ಲೈನ್‌ ಸುಧಾಕರ್‌ ಮತ್ತಿತರರು.

* ಜಿ. ಎಸ್‌ ಕಾರ್ತಿಕ ಸುಧನ್‌

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.