ಕನಸುಗಳಿಗೆ ಏಣಿ ಹಾಕುವ ಕಲರ್‌ “ಲುಂಗಿ’

ಚಿತ್ರ ವಿಮರ್ಶೆ

Team Udayavani, Oct 12, 2019, 3:03 AM IST

lungi

ಅದು ಕರಾವಳಿಯ ಸುಂದರ ಪರಿಸರ. ಅಲ್ಲಿ ನಾಡು-ನುಡಿ-ಸಂಸ್ಕೃತಿಯ ಕಡೆಗೆ ಒಲವಿಟ್ಟುಕೊಂಡು ಇಂಜಿನಿಯರಿಂಗ್‌ ಓದುತ್ತಿರುವ ಹುಡುಗನ ಹೆಸರು ರಕ್ಷಿತ್‌ ಶೆಟ್ಟಿ. ಓದಿನಲ್ಲಿ ಮುಂದಿರುವ ಈ ಹುಡುಗನನ್ನು ಇಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ ವಿದೇಶಕ್ಕೆ ಕಳುಹಿಸಬೇಕು ಅನ್ನೋದು ಹೆತ್ತವರ ಕನಸು. ಆದರೆ, ಅವನಿಗೋ ತನ್ನ ಸ್ವಂತ ಊರಿನಲ್ಲೇ ಏನಾದರೂ ಸಾಧನೆ ಮಾಡಬೇಕು ಅನ್ನೋದು ದೊಡ್ಡ ಆಸೆ.

ತನ್ನ ಜೊತೆ ಓದಿದವರೆಲ್ಲರೂ ಇಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ ಒಳ್ಳೆಯ ಕಂಪೆನಿಗಳಲ್ಲಿ ಜಾಬ್‌ ಗಿಟ್ಟಿಸಿಕೊಂಡು, ಲೈಫ್ನಲ್ಲಿ ಸೆಟಲ್‌ ಆಗುತ್ತಿದ್ದರೆ, ಈ ಹುಡುಗ ಮಾತ್ರ ಇಂಜಿನಿಯರಿಂಗ್‌ ಮುಗಿಸಿದ್ದರೂ, ಮನೆಯವರು, ಊರಿನವರ ಕಣ್ಣಿಗೆ ಬಾರದ ವೇಸ್ಟ್‌ ಬಾಡಿ ಥರ ಕಾಣುತ್ತಿರುತ್ತಾನೆ. ಒಮ್ಮೆ ಇಂಥ ಹುಡುಗನ ಕಣ್ಣಿಗೆ ಬೀಳುವ ಕಲರ್‌ ಕಲರ್‌ “ಲುಂಗಿ’ ಕೊನೆಗೆ ಈ ಹುಡುಗ ಲೈಫ್ ಅನ್ನೆ ಕಲರ್‌ಫ‌ುಲ್‌ ಆಗಿ ಮಾಡುತ್ತದೆ.

ಇದು ಈ ವಾರ ತೆರೆಗೆ ಬಂದಿರುವ “ಲುಂಗಿ’ ಚಿತ್ರದ ಕಥಾಹಂದರ. ಅದು ಹೇಗೆ, “ಲುಂಗಿ’ ಗೂ ಹುಡುಗನ ಲೈಫಿಗೂ ಎತ್ತಿಂದೆತ್ತಣ ಸಂಬಂಧ ಅನ್ನೋ ಕುತೂಹಲವಿದ್ದರೆ, “ಲುಂಗಿ’ ಚಿತ್ರವನ್ನು ನೋಡಲು ಅಡ್ಡಿಯಿಲ್ಲ.ತೆರೆಮುಂದೆ, ತೆರೆಹಿಂದೆ ಬಹುತೇಕ ಹೊಸ ಪ್ರತಿಭೆಗಳಿಂದ ಮೂಡಿಬಂದಿರುವ “ಲುಂಗಿ’ ಚಿತ್ರದ ಕಥೆಯಲ್ಲಿ ತೀರಾ ಹೊಸತನ ನಿರೀಕ್ಷಿಸುವಂತಿಲ್ಲ. ಆದರೆ ಚಿತ್ರಕಥೆ ಮತ್ತು ನಿರೂಪಣೆ ಪ್ರೇಕ್ಷಕರಿಗೆ ಎಲ್ಲೂ ಬೋರ್‌ ಹೊಡೆಸದಂತೆ ಕೊನೆಯವರೆಗೂ ನೋಡಿಸಿಕೊಂಡು ಹೋಗುತ್ತದೆ.

ಚಿತ್ರದ ಸಂಭಾಷಣೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ ಚಿತ್ರದ ದೊಡ್ಡ ಪ್ಲಸ್‌ ಪಾಯಿಂಟ್ಸ್‌. ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿದ್ದರೆ, “ಲುಂಗಿ’ ಇನ್ನಷ್ಟು ಕಲರ್‌ಫ‌ುಲ್‌ ಆಗಿ ಕಾಣುತ್ತಿತ್ತು. ಚಿತ್ರದ ತಾಂತ್ರಿಕ ಕೆಲಸಗಳಿಗೆ ಕೊಟ್ಟಷ್ಟೇ ಮಹತ್ವವನ್ನು, ಚಿತ್ರತಂಡ ಕೆಲ ಕುಸುರಿ ಕೆಲಸಗಳಿಗೆ ಕೊಟ್ಟಂತೆ ಕಾಣುತಿಲ್ಲ.  ಇನ್ನು ಚಿತ್ರದ ಕಲಾವಿದರ ಬಗ್ಗೆ ಹೇಳುವುದಾದರೆ, ಚಿತ್ರದ ನಾಯಕ ಪ್ರಣವ್‌ ಹೆಗ್ಡೆ, ನಾಯಕಿಯರಾದ ಅಹಲ್ಯಾ ಸುರೇಶ್‌, ರಾಧಿಕಾ ರಾವ್‌ ತಮ್ಮ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ.

ಉಳಿದಂತೆ ಇತರ ಕಲಾವಿದರು ಕೂಡ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಚಿತ್ರದ ಇತರೆ ತಾಂತ್ರಿಕ ಕೆಲಸಗಳು ಕೂಡ ಅಚ್ಚುಕಟ್ಟಾಗಿ ಮೂಡಿಬಂದಿದೆ. ಒಟ್ಟಾರೆ ಚಿತ್ರದ ಅಲ್ಲಲ್ಲಿ ಕಾಣುವ ಕೆಲವೊಂದು ಒಪ್ಪಬಹುದಾದ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ, ಕೊಟ್ಟ ಕಾಸಿಗೆ ಮೋಸವಿಲ್ಲದೆ “ಲುಂಗಿ’ ಒಂದಷ್ಟು ಮನರಂಜನೆಯಂತೂ ನೀಡುತ್ತದೆ. ವಾರಾಂತ್ಯದಲ್ಲಿ ಬಿಡುವಿದ್ದರೆ, “ಲುಂಗಿ’ ಎಂಬ ಹೊಸ ಪ್ರತಿಭೆಗಳ ಚೊಚ್ಚಲ ಪ್ರಯತ್ನವನ್ನು ಒಮ್ಮೆ ನೋಡಿಬರಬಹುದು.

ಚಿತ್ರ: ಲುಂಗಿ
ನಿರ್ಮಾಣ: ಮುಖೇಶ್‌ ಹೆಗ್ಡೆ
ನಿರ್ದೇಶನ: ಅರ್ಜುನ್‌ ಲೂಯಿಸ್‌, ಅಕ್ಷಿತ್‌ ಶೆಟ್ಟಿ
ತಾರಾಗಣ: ಪ್ರಣವ್‌ ಹೆಗ್ಡೆ, ಅಹಲ್ಯಾ ಸುರೇಶ್‌, ರಾಧಿಕಾ ರಾವ್‌, ಮನೋಹರ್‌, ದೀಪಕ್‌ ರೈ, ರೂಪ, ಜಯಶೀಲ, ಪ್ರಕಾಶ್‌, ಸಂದೀಪ್‌ ಶೆಟ್ಟಿ, ಜಯರಾಂ ಆಚಾರ್ಯ ಮತ್ತಿತರರು.

* ಜಿ.ಎಸ್‌. ಕಾರ್ತಿಕ ಸುಧನ್‌

ಟಾಪ್ ನ್ಯೂಸ್

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

1-weweqwe

Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

1-qweqweqw

Chennai ಅಪಾರ್ಟ್‌ಮೆಂಟ್‌ನ ಟಿನ್ ರೂಫ್‌ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.