ತೊಗರಿಗೆ ಕಾಯಿಕೊರಕ ಕೀಟಬಾಧೆ: ರೈತರ ಆತಂಕ


Team Udayavani, Oct 12, 2019, 2:47 PM IST

kopala-tdy-2

ದೋಟಿಹಾಳ: ಸದ್ಯ ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಇರುವುದರಿಂದ ಗ್ರಾಮದ ಸುತ್ತಮುತ್ತಲ ಪ್ರದೇಶದ ರೈತರು ತೊಗರೆ ಬೆಳೆ ಬೆಳೆದಿದ್ದಾರೆ. ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೆಳೆಗೆ ಕಾಯಿಕೊರಕ ಕೀಟ ಬಾಧೆ ಕಾಣಿಕೊಂಡಿದರಿಂದ ರೈತರು ಆತಂಕಗೊಂಡಿದ್ದಾರೆ.

ಈ ಭಾಗದ ಗೋತಗಿ, ತೊನಸಿಹಾಳ, ತೊನಸಿಹಾಳ ತಾಂಡಾ, ಕಲಕೇರಿ, ಕಡೇಕೊಪ್ಪ, ಮೇಣಸಗೇರಿ, ಕಿಡದೂರ, ಕಳಮಳ್ಳಿ, ಮುದೇನೂರ, ದೋಟಿಹಾಳ ಹಾಗೂ ಇನ್ನಿತರ ಪ್ರದೇಶದಲ್ಲಿ ಹೆಚ್ಚಾಗಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಕಿಡದೂರು, ಕಳಮಳ್ಳಿ ಭಾಗದಲ್ಲಿ ಎರೆ ಭೂಮಿ ಇದೆ. ಹೆಚ್ಚಿನ ಪ್ರಮಣದಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಈ ಭೂಮಿಯಲ್ಲಿ ಕಳೆದ 8-10 ವರ್ಷಗಳಿಂದ ರೈತರು ತೊಗರಿ ಬೆಳೆ ಬೆಳೆಯುತ್ತಿದ್ದಾರೆ.

ಕಳೆದ ವರ್ಷಕಿಂತ ಈ ವರ್ಷ ಹೆಚ್ಚಿನ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಬೆಳೆ ಚೇತರಿಕೆ ಕಂಡಿತ್ತು. ಕೆಲವೆಡೆ ಬೆಳೆ ಹೂವು ಬಿಟ್ಟಿದೆ. ಇನ್ನೂ ಕೆಲವು ಕಡೆ ಕಾಯಿ ಬಿಡುವ ಹಂತದಲ್ಲಿದೆ. ಆದರೆ ಒಂದು ವಾರದಿಂದ ಮಳೆ ಹಾಗೂ ಮೋಡ ಕವಿದ ವಾತಾವರಣ ಇರುವುದರಿಂದ ಕಾಯಿಕೊರಕ ಹುಳುಗಳ ಬಾಧೆ ಹೆಚ್ಚಾಗಿದೆ. ಇದರಿಂದ ತೊಗರಿ ಬೆಳೆಯನ್ನು ರಕ್ಷಿಸಿಕೊಳ್ಳಲು ವಿವಿಧ ಔಷಧ ಸಿಂಪರಣೆ ಮಾಡಲಾಗುತ್ತಿದೆ.

ದೋಟಿಹಾಳ ಹೋಬಳಿಯಲ್ಲಿ ಪ್ರಸಕ್ತ ಮುಂಗಾರ ಹಂಗಾಮಿನಲ್ಲಿ ಸುಮಾರು 1800-1900 ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿದೆ.ಕಾಯಿಕೊರಕ ಕೀಟ ಹತೋಟಿಗೂ ಮೊದಲು ರೈತರು ಬೇವಿನ ಎಣ್ಣೆ ಸಿಂಪಡಿಸಬೇಕು. ನಂತರ ಪ್ರನೋಪಾಸ್‌ ಔಷಧವನ್ನು ಸಿಂಪಡಿಸಬೇಕು. ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರನೋಪಾಸ್‌ ಔಷಧ ಮಾರಲಾಗುತ್ತದೆ ಹಾಗೂ ರೈತರಿಗೆರಿಯಾಯಿತಿ ದರದಲ್ಲಿ ಸಿಂಪರಣೆ ಯಂತ್ರಗಳನ್ನೂ ನೀಡಲಾಗುತ್ತಿದೆ. –ಮಹಾದೇವಪ್ಪ, ಸಹಾಯಕ ಕೃಷಿ ನಿರ್ದೇಶಕ, ಕುಷ್ಟಗಿ

 ಸದ್ಯ ಮಳೆಯಿಂದ ತೊಗರಿ ಬೆಳೆಗೆ ಕಾಯಿಕೊರಕ ಹುಳುಗಳ ಬಾಧೆ ಹೆಚ್ಚಾಗಿ ಕಾಣಿಸಿಕೊಂಡಿದ್ದು ರೈತರು ಔಷಧ ಖರೀದಿ ಪ್ರಮಾಣ ಹೆಚ್ಚಾಗಿದೆ. ಕಳಕಪ್ಪ ಗೌಡರ, ಕೀಟನಾಶಕ ಅಂಗಡಿ ಮಾಲೀಕ

ಒಂದು ವಾರದಿಂದ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆ ಹಾಗೂ ಮುಸುಕಿನ ವಾತಾವರಣದಿಂದ ತೊಗರಿ ಬೆಳೆಗೆ ಕಾಯಿಕೊರಕ ಹುಳುಗಳ ಬಾಧೆ ಹೆಚ್ಚಾಗಿ ಕಾಣಿಕೊಂಡಿದೆ. ಹೀಗಾಗಿ ಔಷಧ ಸಿಂಪರಣೆ ಮಾಡಲು ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ರಾಮಣ್ಣ ಕಮಲಾಪೂರು, ಕಳಮಳ್ಳಿ ರೈತ

 

-ಮಲ್ಲಿಕಾರ್ಜುನ ಮೆದಿಕೇರಿ

ಟಾಪ್ ನ್ಯೂಸ್

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

13

Gangolli: ಮಹಿಳೆಗೆ ಬೈಕ್‌ ಢಿಕ್ಕಿ; ಗಾಯ

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌

HDK ಹೇಳುತ್ತಿದ್ದದ್ದು ಪ್ರಜ್ವಲ್‌ ಪೆನ್‌ಡ್ರೈವ್‌ ಇರಬೇಕು: ಜಮೀರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

Koppala; ಸಿಎಂ ಸಿದ್ದರಾಮಯ್ಯ ಎದುರೇ ಸ್ಪೋಟಗೊಂಡ ಗಂಗಾವತಿ ಕಾಂಗ್ರೆಸ್ ಬಣ ಬಡಿದಾಟ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

ಬಿಜೆಪಿ ಸುಳ್ಳು ಉತ್ಪಾದನೆ ಮಾಡುವ ಫ್ಯಾಕ್ಟರಿ: ಸಿಎಂ ಸಿದ್ದರಾಮಯ್ಯ

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

CM Siddaramaiah ನನ್ನ ಮಗ ಮೃತಪಟ್ಟಾಗ ಮೋದಿ,ಸುಷ್ಮಾ ಸಹಾಯ ಮಾಡಿಲ್ಲ

19

Malpe ಬೀಚ್‌: ಸಮುದ್ರ ಪಾಲಾಗತ್ತಿದ್ದ ಬಾಲಕನ ರಕ್ಷಣೆ

18

Kaup: ಕೆಲಸಕ್ಕಾಗಿ ಬಂದಿದ್ದ ಯುವತಿ ನಾಪತ್ತೆ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

16-

Chikkaballapur: ಕೃಷಿ ಹೊಂಡದಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.