“ಮೂರ್ಕಲ್‌ ಎಸ್ಟೇಟ್‌’ನಲ್ಲಿ ಭಯದ ವಾತಾವರಣ!

ಹಾರರ್‌ ಪ್ರಿಯರಿಗೊಂದು ಬೆಚ್ಚಿಬೀಳಿಸುವ ಚಿತ್ರ

Team Udayavani, Oct 24, 2019, 6:01 AM IST

Murkal-Estate

ಸಾಮಾನ್ಯವಾಗಿ ರಕ್ತಪಾತ, ಕೊಲೆ, ಭಾರೀ ಹೊಡೆದಾಟ, ಅಶ್ಲೀಲ ಪದ ಪ್ರಯೋಗ ಇತ್ಯಾದಿ ಅಂಶಗಳಿದ್ದರೆ, ಸೆನ್ಸಾರ್‌ ಮಂಡಳಿ ಮುಲಾಜಿಲ್ಲದೆ “ಎ’ ಪ್ರಮಾಣ ಪತ್ರ ಕೊಡೋದು ಪಕ್ಕಾ. ಆದರೆ, ಇಲ್ಲೊಂದು ಚಿತ್ರದಲ್ಲಿ ಇದ್ಯಾವುದೂ ಇಲ್ಲ. ಆದರೂ ಸಿನಿಮಾ ವೀಕ್ಷಿಸಿರುವ ಸೆನ್ಸಾರ್‌ ಮಂಡಳಿ ಬೆಚ್ಚಿ ಬಿದ್ದು ಚಿತ್ರಕ್ಕೆ “ಎ’ ಪ್ರಮಾಣ ಪತ್ರ ನೀಡಿದೆ! ಹೌದು, ಆ ಚಿತ್ರದ ಹೆಸರು “ಮೂರ್ಕಲ್‌ ಎಸ್ಟೇಟ್‌’. ಅಷ್ಟಕ್ಕೂ ಸೆನ್ಸಾರ್‌ ಮಂಡಳಿ ಬೆಚ್ಚಿ ಬಿದ್ದಿದ್ದು ಯಾಕೆ? ಅದಕ್ಕೆ ನಿರ್ದೇಶಕ ಪ್ರಮೋದ್‌ ಕುಮಾರ್‌ ಉತ್ತರಿಸೋದು ಹೀಗೆ.

“ಇಲ್ಲಿ ಕೊಲೆ ಅಂಶವಿಲ್ಲ, ರಕ್ತಪಾತವಿಲ್ಲ, ಅಶ್ಲೀಲತೆ ಮೊದಲೇ ದೂರ. ಆದರೂ ಸಿನಿಮಾಗೆ “ಎ’ಪ್ರಮಾಣ ಪತ್ರ ಸಿಕ್ಕಿದೆ. ಸಹಜವಾಗಿಯೇ ನಮಗೆ ಬೇಸರವಾಗಿದ್ದು ನಿಜ, ನಾವು ಇದನ್ನು ಪ್ರಶ್ನಿಸಿ ರಿವೈಸಿಂಗ್‌ ಕಮಿಟಿವರೆಗೂ ಹೋಗಿದ್ದೆವು. ಆದರೆ, ಅಲ್ಲೂ ಕೂಡ ಚಿತ್ರಕ್ಕೆ “ಎ’ ಪ್ರಮಾಣ ಪತ್ರವೇ ಸಿಕ್ಕಿದೆ’ ಎಂಬುದು ಅವರ ಮಾತು. ಹಾಗಾದರೆ, ಅದಕ್ಕೆ ಕಾರಣವೇನು? ಸಿನಿಮಾದಲ್ಲಿರುವ ಭರ್ಜರಿ ಎಫೆಕ್ಟ್ಸ್ ಮತ್ತು ಭಯಪಡಿಸುವ ಸೌಂಡ್‌ ಎನ್ನುತ್ತಾರೆ ಅವರು.

“ಮೂರ್ಕಲ್‌ ಎಸ್ಟೇಟ್‌’ ಇದು ಹಾರರ್‌ ಚಿತ್ರ. ಹಾಗಾಗಿ ಇಲ್ಲಿ ಭಯಬೀಳಿಸುವ ಅಂಶಗಳೇ ಇಲ್ಲವೆಂದರೆ ಹೇಗೆ ಹೇಳಿ? ಹಾಗಂತ ಇಲ್ಲಿ ದೆವ್ವವಿಲ್ಲ, ಭೂತವಿಲ್ಲ, ದ್ವೇಷಿಸುವ ಆತ್ಮವೂ ಇಲ್ಲ, ಕಾಟ ಕೊಡುವ ಪಿಶಾಚಿಯೂ ಇಲ್ಲ. ಇಲ್ಲಿರೋದು ಎನರ್ಜಿ ಅಂಶ. ನೆಗೆಟಿವ್‌ ಹಾಗು ಪಾಸಿಟಿವ್‌ ಅಂಶಗಳನ್ನಿಟ್ಟುಕೊಂಡೇ ನಿರ್ದೇಶಕರು ಕಥೆ ಮಾಡಿದ್ದಾರೆ. ಇಲ್ಲಿ ವಿಚಿತ್ರವಾಗಿ ಧ್ವನಿ ಮಾಡುವ ದೆವ್ವದ ಬದಲಾಗಿ, ಸ್ಮೋಕ್‌ನಲ್ಲೊಂದು ಎಫೆಕ್ಟ್ಸ್ ಕೊಟ್ಟು ಬೆಚ್ಚಿಬೀಳಿಸುವ ಪ್ರಯತ್ನ ಮಾಡಲಾಗಿದೆ.

ವಾಟರ್‌ನಲ್ಲೇ ಜೋತಾದ ಸದ್ದು ಮಾಡುವ ಮೂಲಕ ಭಯಪಡಿಸುವ ಮಟ್ಟಕ್ಕೆ ಕೆಲಸ ಮಾಡಲಾಗಿದೆ. ಕೇವಲ ಇದನ್ನಷ್ಟೇ ನೋಡಿ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ “ಎ’ ಪ್ರಮಾಣ ಪತ್ರ ಕೊಟ್ಟಿದೆ. ಆದರೂ, ಇಲ್ಲೊಂದು ಸಂದೇಶವಿದೆ. ಅದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು ಚಿತ್ರತಂಡದ ಹೇಳಿಕೆ. ಕುಮಾರ್‌ ಭದ್ರಾವತಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಲಕ್ಷ್ಮೀನಾರಾಯಣ್‌ ಹಿನ್ನೆಲೆ ಸಂಗೀತವಿದೆ. ಕೃಷ್ಣ, ಮುನಿಸ್ವಾಮಿ ಅವರು ನಿರ್ಮಾಣದಲ್ಲಿ ಸಾಥ್‌ ನೀಡಿದ್ದಾರೆ. ಶಂಕರ್‌ ಎಫೆಕ್ಟ್ಸ್ ಚಿತ್ರಕ್ಕಿದೆ.

ಟಾಪ್ ನ್ಯೂಸ್

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ? Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

Nagamangala Case: ಎನ್‌ಐಎ ತನಿಖೆಗೆ ಬಿಜೆಪಿ ಆಗ್ರಹ

goa

Goa Beachನಲ್ಲಿ ಮದುವೆ: ದಿನಕ್ಕೆ 1 ಲಕ್ಷ ರೂ. ಶುಲ್ಕ

1-ddsadsa

Amit Shah; ತಡೆಯದಿದ್ದರೆ ಅಕ್ರಮ ವಲಸಿಗರೇ ಬಹುಸಂಖ್ಯಾಕರಾಗುತ್ತಾರೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Priya Shatamarshan spoke about her fame after Bheema movie

Priya Shatamarshan: ಇನ್ಸ್ ಪೆಕ್ಟರ್‌ ಗಿರಿಜಾ ರಿಪೋರ್ಟಿಂಗ್‌ ಸಾರ್‌..

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Vijaya Bhaskar: ಹೊಸತನಕ್ಕೆ ಹಂಬಲಿಸಿದ ಸ್ವರ ಸಾಮ್ರಾಟ

Karki kananda movie

Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ

Family drama ‘Langoti Man’ hits screens today

Langoti Man: ಫ್ಯಾಮಿಲಿ ಡ್ರಾಮಾ ʼಲಂಗೋಟಿ ಮ್ಯಾನ್‌ʼ ಇಂದು ತೆರೆಗೆ

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

Hagga Movie: ʼಹಗ್ಗʼವೇ ಆಯುಧ; ಅನುಕ್ಷಣ ಹಾರರ್

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ? Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Kasturi Rangan ವರದಿಗೆ ಮತ್ತೆ ರಾಜ್ಯ ತಿರಸ್ಕಾರ?

Electric scooter

Battery production ಅಮೆರಿಕ ಹೂಡಿಕೆ; ಚೀನಕ್ಕೆ ಸಡ್ಡು

CHandrababu Naidu

Tirupati Laddus row;ತಪ್ಪಿತಸ್ಥರನ್ನು ಸುಮ್ಮನೆ ಬಿಡಲು ಸಾಧ್ಯವೇ?: ಸಿಎಂ ನಾಯ್ಡು ಪ್ರಶ್ನೆ

1-ambani

Ambani;1,000 ಕೋಟಿಯ ವಿಮಾನ ಖರೀದಿಸಿದ ಮುಕೇಶ್‌ ಅಂಬಾನಿ

ISREL

Israel- ಹೆಜ್ಬುಲ್ಲಾ ನಡುವೆ ಬಾಂಬ್‌ಗಳ ಸುರಿಮಳೆ! ; 100 ರಾಕೆಟ್‌ ಲಾಂಚರ್‌ ಧ್ವಂಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.