ಶಾಸಕರ ಸೂಚನೆ ಪಾಲಿಸದ ಗ್ರಾಪಂ ಪಿಡಿಒ: ಸತ್ತಾರ್‌


Team Udayavani, Oct 27, 2019, 5:18 PM IST

27-October-35

ಬಾಳೆಹೊನ್ನೂರು: ಬಿ.ಕಣಬೂರು ಗ್ರಾಪಂ ವ್ಯಾಪ್ತಿಯ ಹಕ್ಕುಪತ್ರದ ನಿವೇಶನದಲ್ಲಿ ನಿರ್ಮಿಸಿರುವ ಕಾಂಪೌಂಡ್‌ ತೆರವುಗೊಳಿಸದಂತೆ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡರು ಸೂಚಿಸಿದ್ದರೂ ಗ್ರಾಪಂ ಪಿಡಿಒ ತೆರವುಗೊಳಿಸಿದ್ದಾರೆಂದು ನಿವೇಶನದ ಮಾಲಿಕ ಅಬ್ದುಲ್‌ ಸತ್ತಾರ್‌ ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಪಂ ಅಧ್ಯಕ್ಷರ ಸೂಚನೆ ಮೇರೆಗೆ ಪಿಡಿಒ ಕಾಂಪೌಂಡ್‌ ತೆರವುಗೊಳಿಸಿದ್ದಾರೆಂದು ದೂರಿದರು. ಕಂದಾಯ ಇಲಾಖೆಯಿಂದ ಸರ್ವೆ ನಂ.139ರಲ್ಲಿ ಪೋಡಿ ನಂ.457ರಂತೆ ನಮ್ಮ ನಿವೇಶನ ದಾಖಲೆಯಿದ್ದು, ಕಾಂಪೌಂಡ್‌ ನಿರ್ಮಿಸಲಾಗುತ್ತಿತ್ತು. ಪಕ್ಕದ ವಾಣಿಜ್ಯ ಮಳಿಗೆ ಮಾಲೀಕರು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕಾಂಪೌಂಡ್‌ ತೆರವುಗೊಳಿಸಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ನೂರಾರು ಎಕರೆ ಕಂದಾಯ, ಅರಣ್ಯ ಹಾಗೂ ಗ್ರಾಮ ಠಾಣಾ ಒತ್ತುವರಿಯಾಗಿದ್ದರೂ ಪಿಡಿಒ ದುರುದ್ದೇಶದಿಂದ ಶಾಸಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ ತೆರವುಗೊಳಿಸಿ ನಷ್ಟ ಉಂಟು ಮಾಡಿದ್ದಾರೆ ಎಂದರು.

ಪರವಾನಗಿ ಪಡೆಯದೇ ಕಾಂಪೌಂಡ್‌ ನಿರ್ಮಾಣ ಹಾಗೂ ನಮ್ಮ ಮನೆ ಪಕ್ಕದ
ಜಾಗದ ಹಿಂಭಾಗದ ಮನೆಯವರಿಗೆ ದಾರಿ ಬೇಕೆಂಬ ನೆಪವೊಡ್ಡಿ ಕಾಂಪೌಂಡ್‌ ಕೆಡವಿದ್ದಾರೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪಿಡಿಒ ತೆರವುಗೊಳಿಸಿದ್ದಾರೆ. ಈ ಸಂಬಂಧ ನನಗೆ ನ್ಯಾಯ ಕೊಡಿಸಬೇಕೆಂದು ಒತ್ತಾಯಿಸಿದರು.

ಬಿ.ಕಣಬೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ಇಬ್ರಾಹಿಂ ಮಾತನಾಡಿ, ಗ್ರಾಪಂನಲ್ಲಿ ಹಣ ನೀಡಿದರೆ ದಾಖಲೆ ಇಲ್ಲದಿರುವ ಸರಕಾರಿ ಜಾಗಕ್ಕೂ ಇ ಸ್ವತ್ತು ಮಾಡಿಕೊಟ್ಟಿದ್ದಾರೆ. ಕಂದಾಯ ಇಲಾಖೆ ನೌಕರರ ನಿವೇಶನಕ್ಕೆ ಮೀಸಲಿಟ್ಟ ಪ್ರದೇಶವನ್ನು ಕೆಲವು ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿದ್ದು, ಪ್ರಭಾವಿಗಳ ಒತ್ತಡಕ್ಕೆ ಮಣಿದು ಗ್ರಾಪಂನಲ್ಲಿ ಖಾತೆ ಮಾಡಿಕೊಟ್ಟಿದ್ದಾರೆ.

ನೀರಾವರಿ ಕೆರೆ ಒತ್ತುವರಿ ಮಾಡಿದ್ದನ್ನು ತೆರವುಗೊಳಿಸುವಂತೆ ಜಿಲ್ಲಾ ಧಿಕಾರಿಗಳು ಆದೇಶ ಮಾಡಿದ್ದರೂ ಗ್ರಾಪಂನವರು ಕ್ರಮ ಕೈಗೊಂಡಿಲ್ಲ ಎಂದರು.

ನಮ್ಮ ವಿರುದ್ಧ ಸುಳ್ಳು ದೂರು ದಾಖಲಿಸಿದ್ದಾರೆ. ಈ ಎಲ್ಲ ಸಂಗತಿಗಳ ಸಮಗ್ರ ಮಾಹಿತಿ ಸಿಸಿ ಕ್ಯಾಮರಾಧಲ್ಲಿ ರ್ಸೆಏಯಾಗಿದ್ದು, ಪರಿಶೀಲಿಸಿದರೆ ಸತ್ಯಾಂಶ ಬೆಳಕಿಗೆ ಬರುತ್ತದೆ. ಈ ಬಗ್ಗೆಯೂ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.

ಇತ್ತೀಚೆಗೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಬಸ್‌ ನಿಲ್ದಾಣ ಆವರಣದಲ್ಲಿದ್ದ 19 ಅಂಗಡಿ- ಮಳಿಗೆಗಳನ್ನು ಯಾವುದೇ ಟಂಡರ್‌ ಹಾಗೂ ಪತ್ರಿಕಾ ಪ್ರಕಟಣೆ ನೀಡದೇ ಕಡೆವಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.  ಗ್ರಾಪಂ ಮಾಜಿ ಸದಸ್ಯ ವಿನ್ಸಿಲೋಬೊ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು, ಅಕ್ರಮ ಇಸ್ವತ್ತಿಗೆ ಸಂಬಂಧಿಸಿದಂತೆ ಹಿಂದಿನ ಜಿಪಂ ಸಿಇಒ ದಾಖಲೆ ಪರಿಶೀಲಿಸಿ 450ಕ್ಕೂ ಹೆಚ್ಚು ಕಡತಗಳನ್ನು ತನಿಖೆಗೆ ಒಳಪಡಿಸಿದ್ದಾರೆ. ಅಕ್ರಮ ಕಾಂಪೌಂಡ್‌ ಹೆಸರಿನಲ್ಲಿ ಕ್ರಮ ಕೈಗೊಂಡಿರುವುದು ಸರಿಯಲ್ಲ.

ಬಸ್‌ ನಿಲ್ದಾಣ ದುರಸ್ತಿ, ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡದ ಇವರು ಭದ್ರಾ ಹಿನ್ನೀರು ನಿಲ್ಲುವ ಪ್ರದೇಶದಲ್ಲಿ ಸುಮಾರು 80ಲಕ್ಷ ರೂ. ವೆಚ್ಚದಲ್ಲಿ ಸಂತೆ ಮಾರ್ಕೆಟ್‌ ನಿರ್ಮಾಣ ಮಾಡಿದ್ದಾರೆ. ಇದರ ಬಗ್ಗೆ ತನಿಖೆ ಮಾಡಬೇಕೆಂದು ಒತ್ತಾಯಿಸಿದರು.

ಈ ಸಂಬಂಧ ಜಿಲ್ಲಾ ಧಿಕಾರಿ ಹಾಗೂ ಜಿಪಂ ಸಿಇಒ ಹಾಗೂ ಎಬಿಸಿ ಮತ್ತು ಲೋಕಾಯುಕ್ತಕ್ಕೆ ನಿಯೋಗದಲ್ಲಿ ತೆರಳಿ ದೂರು ಸಲ್ಲಿಸಿ, ತನಿಖೆಗೆ ಒತ್ತಾಯಿಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜೀವನ್‌, ಜೋಸೆಫ್‌ ಎಚ್‌.ಎಲ್‌, ಟಿಪ್ಪು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

CT Ravi: ಶೇ. 80ರಷ್ಟು ಹಿಂದೂಗಳೇ ಇದ್ದರೂ ಗಣೇಶೋತ್ಸವಕ್ಕೆ ಅಡ್ಡಿ

1-asaaasa

Hindutva ಮತ್ತು ಹಿಂದೂಗಳಿಗೆ ಒಳ್ಳೆಯದಾಗಲಿ: ದೇವರ ಹುಂಡಿಗೆ ಪತ್ರ!

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: ಮನೆಯಲ್ಲಿ ಯಾರೂ ಇರದ ವೇಳೆ ಐದರ ಬಾಲಕಿ ಅನುಮಾನಾಸ್ಪದ ಸಾವು

Chikkamagaluru: Dress code enforced at Horanadu Annapoorneshwari temple

Chikkamagaluru: ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.