ಮುಂದಿನ ನಿಲ್ದಾಣ ಟ್ರೇಲರ್‌ಗೆ ಮೆಚ್ಚುಗೆ


Team Udayavani, Nov 21, 2019, 4:10 PM IST

Ananya

ಕೆಲವೊಂದು ಚಿತ್ರಗಳೇ ಹಾಗೆ. ತಮ್ಮ ಚಿತ್ರದ ಶೀರ್ಷಿಕೆ ಮೂಲಕವೇ ಒಂದಷ್ಟು ಕುತೂಹಲ ಕೆರಳಿಸುತ್ತವೆ. ಅಂತಹ ಚಿತ್ರಗಳ ಸಾಲಿಗೆ “ಮುಂದಿನ ನಿಲ್ದಾಣ’ ಚಿತ್ರವೂ ಸೇರಿದೆ. ಹೌದು, ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ನಾಲ್ವರು ಗೆಳೆಯರು ಸೇರಿ ಪ್ರೀತಿಯಿಂದ ನಿರ್ಮಿಸಿರುವ ಚಿತ್ರ ಅನ್ನೋದು ಒಂದಾದರೆ, ಇದೇ ಮೊದಲ ಸಲ ಶಾರುಖ್‌ ಖಾನ್‌ ಅವರ ಮಾಲೀಕತ್ವದ ರೆಡ್‌ ಚಿಲ್ಲೀಸ್‌ ಸ್ಟುಡಿಯೋದಲ್ಲಿ ಚಿತ್ರದ ಕಲರ್‌ ಗ್ರೇಡಿಂಗ್‌ ಮಾಡಿಸಿರುವ ಚಿತ್ರ ಅನ್ನೋದು ಮತ್ತೂಂದು ವಿಶೇಷ.

ಇವೆಲ್ಲದರ ನಡುವೆ, ಮಸಾಲ ಕಾಫಿ ತಂಡ ಸಂಗೀತ ನೀಡಿರುವ ಚಿತ್ರದ ಹಾಡೊಂದನ್ನು ಮೆಚ್ಚಿ ಖ್ಯಾತ ಸಂಗೀತ ನಿರ್ದೇಶಕ ಎ.ಆರ್‌.ರೆಹಮಾನ್‌ ಕೂಡ ಟ್ವೀಟ್‌ ಮಾಡಿದ್ದು ಇನ್ನೊಂದು ವಿಶೇಷ. ಏಳು ಜನ ಸಂಗೀತ ನಿರ್ದೇಶಕರು ಏಳು ಹಾಡುಗಳನ್ನು ಕೊಟ್ಟಿರುವುದು ಚಿತ್ರದ ಹೊಸತನಕ್ಕೊಂದು ಸಾಕ್ಷಿ. ಸದ್ಯಕ್ಕೆ ಸಾಕಷ್ಟು ನಿರೀಕ್ಷೆ ಹುಟ್ಟಿಸುವ ಮೂಲಕ ಈಗಾಗಲೇ ಹಾಡು, ಟೀಸರ್‌, ಟ್ರೇಲರ್‌ನಲ್ಲೂ ಮೆಚ್ಚುಗೆ ಪಡೆದ “ಮುಂದಿನ ನಿಲ್ದಾಣ’ ನವೆಂಬರ್‌ 29 ರಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ವಿದೇಶದಲ್ಲಿ ಚಿತ್ರದ ಪೂರ್ವಭಾವಿ ಪ್ರದರ್ಶನ ಏರ್ಪಡಿಸಲು ನಿರ್ಮಾಪಕ ಮುರಳೀಧರ್‌ ಸಿದ್ಧತೆ ನಡೆಸಿದ್ದಾರೆ.

ವಿದೇಶದಲ್ಲಿ “ಮುಂದಿನ ನಿಲ್ದಾಣ’ ಪ್ರದರ್ಶನಕ್ಕೆ ಕಾರಣ, ಅಲ್ಲಿನ ಅನಿವಾಸಿ ಭಾರತೀಯರು, ಚಿತ್ರದ ಹಾಡು, ಟ್ರೇಲರ್‌ ನೋಡಿ, ಸಿನಿಮಾ ಪ್ರದರ್ಶನ ಏರ್ಪಡಿಸಬೇಕು ಎಂದು ಮಾಡಿದ ಮನವಿ. ಹೀಗಾಗಿ, ಇಲ್ಲಿ ಬಿಡುಗಡೆಯಾಗುವ ಮೊದಲೇ ಅನಿವಾಸಿ ಭಾರತೀಯರಿಗೆ “ಮುಂದಿನ ನಿಲ್ದಾಣ’ ದರ್ಶನವಾಗಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ ಟ್ರೆಂಡಿಂಗ್‌ನಲ್ಲಿದೆ.

ಪೋಸ್ಟರ್‌ನಲ್ಲೇ ಸಣ್ಣದ್ದೊಂದು ಕುತೂಹಲ ಮೂಡಿಸಿದ್ದ ಈ ಚಿತ್ರ, ನಂತರದ ದಿನಗಳಲ್ಲಿ “ಮನಸೇ ಮಾಯ’ ಹಾಡು ಹಾಗು ವಾಸುಕಿ ವೈಭವ್‌ ಸಂಯೋಜಿಸಿ ಹಾಡಿದ “ಇನ್ನೂನು ಬೇಕಾಗಿದೆ…’ ಹಾಡು ಕೇಳುಗರಿಂದ ಮೆಚ್ಚುಗೆ ಪಡೆದಿತ್ತು. ಟ್ರೇಲರ್‌ ಕೂಡ ಮುಂಬೈನಲ್ಲೇ ರೆಡಿಯಾಗಿದ್ದು ಚಿತ್ರದ ವಿಶೇಷತೆಗಳಲ್ಲೊಂದು. ಈ ಎಲ್ಲಾ ವಿಶೇಷತೆಗಳ ಜೊತೆಗೆ ಚಿತ್ರದಲ್ಲಿ ಸುಂದರ ತಾಣಗಳು ಸಹ ಮಾತನಾಡುತ್ತವೆ. ನಾಯಕ ಪ್ರವೀಣ್‌ ತೇಜ್‌ ಇಲ್ಲಿ ಮೊದಲ ಸಲ ಸಿಕ್ಸ್‌ಪ್ಯಾಕ್‌ ಜೊತೆಗೆ ಗ್ಲಾಮರಸ್‌ ಆಗಿ ಕಾಣಿಸಿಕೊಂಡರೆ, ರಾಧಿಕಾ ನಾರಾಯಣ್‌ ಹೊಸ ಪಾತ್ರದ ಮೂಲಕ ಗಮನಸೆಳೆಯಲಿದ್ದಾರೆ. ಹೊಸ ಹುಡುಗಿ ಅನನ್ಯಾ ಕಶ್ಯಪ್‌ಗ್ೂ ಇದು ವಿಶೇಷ ಸಿನಿಮಾ ಎಂಬುದು ತಂಡದ ಮಾತು.

ವಿನಯ್‌ ಭಾರಧ್ವಜ್‌ ನಿರ್ದೇಶನದ ಈ ಚಿತ್ರದಲ್ಲಿ ದತ್ತಣ್ಣ, ಅಜೇಯ್‌ರಾಜ್‌ ಇತರರು ನಟಿಸಿದ್ದಾರೆ. ಕೋಸ್ಟಲ್‌ ಬ್ರಿಜ್‌ ಪ್ರೊಡಕ್ಷನ್ಸ್‌ ನಿರ್ಮಾಣದ ಈ ಚಿತ್ರವನ್ನು ಕಾರ್ತಿಕ್‌ ಗೌಡ ವಿತರಣೆ ಮಾಡುತ್ತಿದ್ದಾರೆ.

ಟಾಪ್ ನ್ಯೂಸ್

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು

Gangavathi ಸಾಣಾಪೂರ ಕೆರೆಯಲ್ಲಿ ಮುಳುಗಿ ಯುವಕ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vikasa parva Kannada movie

Kannada Movie; ಸೆನ್ಸಾರ್ ಪಾಸಾದ ‘ವಿಕಾಸ ಪರ್ವ’

Biography of Mother Teresa in web series

Mother Teresa; ವೆಬ್‌ ಸೀರೀಸ್‌ನಲ್ಲಿ ಮದರ್‌ ತೆರೇಸಾ ಜೀವನ ಚರಿತ್ರೆ

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

Re Release; ಭರ್ಜರಿ ಓಪನಿಂಗ್‌ ಪಡೆದ ಉಪ್ಪಿ ‘ಎ’

20

Sandalwood: ದರ್ಶನ್‌ ʼಡೆವಿಲ್‌ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್‌ ಪೋಸ್ಟರ್‌ ಔಟ್

vijay raghavendra’s swapna mantapa movie

Kannada Cinema; ‘ಸ್ವಪ್ನ ಮಂಟಪ’ದಲ್ಲಿ ವಿಜಯ ರಾಘವೇಂದ್ರ-ರಂಜನಿ; ಬರಗೂರು ನಿರ್ದೇಶನ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

1-qwqeewqe

Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.