ಪವಿತ್ರ ಆರ್ಥಿಕತೆ ಪರಿಕಲನೆ ಸಾಮಾಜಿಕ-ಸಾಂಸ್ಕೃ ತಿಕ ಚಳವಳಿಯಾಗಲಿ

'ಸುದಿನ' ಸಂದರ್ಶನದಲ್ಲಿ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಆಶಯ

Team Udayavani, Nov 22, 2019, 2:50 PM IST

21-November-17

ಹಸುರನ್ನು ಹಸುರಾಗಿ ಉಳಿಸಬಲ್ಲ, ಸಭ್ಯತೆಯನ್ನು ಸಭ್ಯವಾಗಿ ಉಳಿಸಬಲ್ಲ,
ಕೆಲಸಗಳನ್ನೇ ಕೊಲ್ಲದಿರುವ ಕೆಲಸಗಳನ್ನು ಕೊಡುವ, ಗ್ರಾಮಗಳನ್ನು ನಾಶ
ಮಾಡದಿರುವಂತಹ, ಭೂಮಿ ಬಿಸಿಯಾಗದಿರುವಂತಹ, ನೆಲ -ಜಲ,
ಜೀವ-ಜಂತುಗಳು ನರಳದಿರುವಂತಹ, ಜನರನ್ನು ಒಟ್ಟಾಗಿ ಉಳಿಸಬಲ್ಲಂತಹ
ಕೆಲಸ ಕೊಡುವ ಮೂಕ ಪವಿತ್ರ ಆರ್ಥಿಕತೆ ಜಾರಿಗೊಳಿಸುವಂತೆ ಆಗ್ರಹಿಸಿ
ನಡೆಯುತ್ತಿರುವ ಸತ್ಯಾಗ್ರಹದ ಅಂಗವಾಗಿ ಇತ್ತೀಚೆಗೆ ಮಂಗಳೂರಿಗೆ ಭೇಟಿ
ನೀಡಿದ್ದ ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೋಡು ಅವರು “ಸುದಿನ’ದ
ಹಿಲರಿ ಕ್ರಾಸ್ತಾ ಅವರಿಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.

ಪವಿತ್ರ ಆರ್ಥಿಕತೆ ಎಂದರೇನು?
ಪವಿತ್ರ ಆರ್ಥಿಕತೆ ಅಂದರೆ ಮೂಲತಃ ಸಣ್ಣ ಆರ್ಥಿಕತೆ. ಅಂದರೆ ಶೂ ಮೇಕರ್‌ನ ಅರ್ಥದಲ್ಲಿ “ಸ್ಮಾಲ್‌ ಈಸ್‌ ಗುಡ್‌’ ಎಂಬರ್ಥದ ಆರ್ಥಿಕತೆ. ಮಹಾತ್ಮಾ ಗಾಂಧಿ ಇದೇ ವಿಷಯವನ್ನು ಗ್ರಾಮ ಸ್ವರಾಜ್ಯ, ಗ್ರಾಮೀಣ ಆರ್ಥಿಕತೆ ಎಂದಿದ್ದರು. ನಾವು ಇದನ್ನು ಗ್ರಾಮ ಸ್ವರಾಜ್ಯ ಎಂದು ಕರೆಯದೆ ಪವಿತ್ರ ಆರ್ಥಿಕತೆ ಎಂಬುದಾಗಿ ಏಕೆ ಕರೆದಿದ್ದೇವೆ ಅಂದರೆ ಗ್ರಾಮ ಸ್ವರಾಜ್ಯ ಒಂದು ಆದರ್ಶ. ಅದನ್ನು ನಾವು ತಲುಪಬೇಕಿದ್ದು, ಅದರಿಂದ ಬಹಳಷ್ಟು ದೂರ ಇದ್ದೇವೆ; ಅಂದರೆ ನಾವು ರಾಕ್ಷಸ ಆರ್ಥಿಕತೆಯ ಒಳಗೆ ಮುಳುಗಿದ್ದೇವೆ. ಹಂತ ಹಂತವಾಗಿ ಗ್ರಾಮೀಣ ಸ್ವರಾಜ್ಯದ ಕಡೆಗೆ ತಲುಪಬೇಕಾಗಿದೆ.

 ಪವಿತ್ರ ಆರ್ಥಿಕತೆಯ ಕ್ಷೇತ್ರಗಳು ಯಾವುವು?
ಮಹಾತ್ಮಾ ಗಾಂಧಿ ಹೇಳಿದ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯನ್ನು ಸ್ವಲ್ಪ ವಿಸ್ತರಿಸಿ ಇನ್ನೂ ಕೆಲವು ಕ್ಷೇತ್ರಗಳನ್ನು ಅಂದರೆ ಸಣ್ಣ ಕ್ಷೇತ್ರಗಳನ್ನು, ಸಣ್ಣ ಕೈಗಾರಿಕೆಗಳು, ಗುಡಿ ಕೈಗಾರಿಕೆಗಳು, ವ್ಯಾಪಾರಸ್ಥರು, ಸರ್ವಿಸ್‌ ಸೆಕ್ಟರನ್ನು , ಮೆಶಿನ್‌ ಶಾಪ್‌ ಗಳನ್ನು ಸೇರಿಸಿಕೊಂಡಿದ್ದೇವೆ. ಏಕೆಂದರೆ ಇವರೆಲ್ಲರೂ ಇಂದು ಸಂಕಷ್ಟದಲ್ಲಿದ್ದಾರೆ. ಇವರೆಲ್ಲರನ್ನು ಒಳಗೊಂಡ ಕ್ಷೇತ್ರಗಳನ್ನು ನಾವು ಪವಿತ್ರ ಆರ್ಥಿಕತೆ ಎಂದಿದ್ದೇವೆ.

 ಈ ನಿಮ್ಮ ಆಂದೋಲನಕ್ಕೆ ಏನಾದರೂ ಮಾನದಂಡಗಳಿವೆಯೇ ?
ಇದಕ್ಕೆ ಕೆಲವು ಮಾನದಂಡಗಳನ್ನು ನಿರ್ಧರಿಸಿದ್ದೇವೆ. ಅವುಗಳೆಂದರೆ ಯಾವ ಉತ್ಪಾದನ ವ್ಯವಸ್ಥೆಯಲ್ಲಿ ಕನಿಷ್ಠ ಶೇ.60ರಷ್ಟು ಮಾನವ ಶ್ರಮ ಬಳಕೆ ಮಾಡುತ್ತದೋ, ಯಾವ ಉತ್ಪಾದನ ಕ್ಷೇತ್ರದಲ್ಲಿ ಕನಿಷ್ಠ ಶೇ.60ರಷ್ಟು ಸ್ಥಳೀಯ ಸಂಪನ್ಮೂಲ ಬಳಕೆ ಮಾಡುತ್ತೂ ಅದು ಪವಿತ್ರ ಆರ್ಥಿಕತೆ. ಯಾವ ಉತ್ಪಾದನ ವ್ಯವಸ್ಥೆಯಲ್ಲಿ ಶೇ. 40ಕ್ಕಿಂತ ಹೆಚ್ಚು ಸ್ವಯಂ ಚಾಲಿತ ಯಂತ್ರವನ್ನು ಬಳಕೆ ಮಾಡುತ್ತೋ, ಶೇ. 40ಕ್ಕೂ ಹೆಚ್ಚು ಆಮದಿತ ಕಚ್ಚಾ ವಸ್ತುವನ್ನು ಬಳಕೆ ಮಾಡುತ್ತೋ ಅದು ರಾಕ್ಷಸ ಆರ್ಥಿಕತೆ.

ಈ ಮಾನದಂಡದಲ್ಲಿ ಸ್ಥಳೀಯತೆಯ ಮಾನದಂಡ ಯಾವುದೆಂದರೆ ಉತ್ಪಾದನ ಕ್ಷೇತ್ರದಿಂದ 100 ಕಿ.ಮೀ. ಅಂತರ. ಗಾಂಧೀಜಿ ಅವರು ಇದನ್ನು 8 ಕಿ.ಮೀ. (ಅಂದರೆ 5 ಮೈಲಿ) ಅಂತರ ಎಂದಿದ್ದರು. ಆದರೆ ಇವತ್ತು ಸಮಾಜ ಬಹಳಷ್ಟು ಬದಲಾಗಿದ್ದರಿಂದ ನಾವು 100 ಕಿ. ಮೀ. ದೂರ ಹೋಗಿದ್ದೇವೆ. ನಾಳೆ ಸರಕಾರವು ಇಲ್ಲ, ಎಲ್ಲವನ್ನೂ 100 ಕಿ.ಮೀ. ವ್ಯಾಪ್ತಿಗೆ ನಿಲ್ಲಿಸಲು ಸಾಧ್ಯ ಆಗುವುದಿಲ್ಲ ಎಂದು ಹೇಳಿದರೆ ಕೆಲವು ಸಣ್ಣ ಪುಟ್ಟ ಬದಲಾವಣೆ ಮಾಡಲು ತಯಾರಿದ್ದೇವೆ.

 ಸತ್ಯಾಗ್ರಹದ ಈಗಿನ ಸ್ವರೂಪ ಹೇಗಿದೆ?
ಈಗಾಗಲೇ ಸತ್ಯಾಗ್ರಹ ನಡೆಯುತ್ತಿದೆ. ಕಾನೂನನ್ನು ಮಾಡುವುದು ಕೇಂದ್ರ ಸರಕಾರ ಆಗಿರುವುದರಿಂದ ಮಾತುಕತೆಗಾಗಿ ನಾವು ತಿಂಗಳ ಅವಧಿಯನ್ನು ನೀಡಿದ್ದೆವು. ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈಗ ನಾವು ಮತ್ತೊಂದು ಪತ್ರವನ್ನು ಬರೆಯುತ್ತೇವೆ. ಅವರು ಮಾತುಕತೆಗೆ ಬಾರದೆ ಇದ್ದರೆ ಪ್ರಾಯಶಃ ಡಿ.1ರಂದು ಈ ಸತ್ಯಾಗ್ರಹವನ್ನು ಕೇಂದ್ರ ಅಸಹಕಾರ ಚಳವಳಿಯಾಗಿ ಪರಿವರ್ತಿಸುವ ಅಗತ್ಯ ಬರಬಹುದು. ಅದು ಬಾರದಿರಲಿ ಎಂದು ಆಶಿಸುತ್ತೇವೆ.

 ಸಚಿವರು ಯಾರಾದರೂ ಮಾತನಾಡಿದ್ದಾರೆಯೇ?
ನಮ್ಮ ಜತೆ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಮಾತುಕತೆ ನಡೆಸಿದ್ದು, ಅವರು “ಇಲ್ಲ, ಇದು ನಮ್ಮ ಬೇಡಿಕೆಯೂ ಹೌದು, ನಾವು ಕೂಡ ಪವಿತ್ರ ಆರ್ಥಿಕತೆಯನ್ನು ಬೆಂಬಲಿಸುವವರು ಆಗಿರುವುದರಿಂದ ಸಹಾನುಭೂತಿಯಿಂದ ಪರಿಗಣಿಸುತ್ತೇವೆ’ ಎಂದಿದ್ದಾರೆ. ಅದು ಏನಾಗುತ್ತದೆಂದು ಕಾದು ನೋಡುತ್ತೇವೆ.

 ಚಳವಳಿ ಆರಂಭವಾದದ್ದು ಯಾವಾಗ?
ಈ ಚಳವಳಿ ನಿಜವಾಗಿಯೂ ಆರಂಭವಾಗಿ 6- 7 ವರ್ಷಗಳಾಯಿತು. ನೇಕಾರರ ಸತ್ಯಾಗ್ರಹ ಅರ್ಥಾತ್‌ ಬನಂಶಂಕರಿ ಯಾತ್ರೆಯಿಂದ ಇದು ಆರಂಭವಾಗಿದೆ. ಅದಾದ ಬಳಿಕ ಬದನವಾಳ ಸತ್ಯಾಗ್ರಹ ನಡೆಯಿತು. ಈ ಸತ್ಯಾಗ್ರಹದಲ್ಲಿ ಇತರ ಎಲ್ಲ ಕ್ಷೇತ್ರಗಳ ರಚನಾತ್ಮಕ ಕಾರ್ಯಕರ್ತರು ಒಟ್ಟಿಗೆ ಸೇರಿದ್ದರು. ಇದರಿಂದ ಸತ್ಯಾಗ್ರಹ ರಚನಾತ್ಮಕ ಚಳವಳಿಯ ಸ್ವರೂಪ ಪಡೆದುಕೊಂಡಿತ್ತು. “ದುಡಿಮೆಯೇ ಧರ್ಮ ಎನ್ನುವುದು ನಿಜವಾದ ಪಾವಿತ್ರ್ಯ ಎಂಬುದನ್ನು ಮನವರಿಕೆ ಮಾಡುವ ನಿಟ್ಟಿನಲ್ಲಿ ಈ ಸತ್ಯಾಗ್ರಹಗಳು ನಡೆದಿವೆ. ನಾವಿಂದು ಪಾವಿತ್ರ್ಯ ಎಂಬ ಪದವನ್ನು ಬಸವಣ್ಣ, ಕಬೀರ, ಕನಕದಾಸ, ಪುರಂದರ ದಾಸ, ಚಮ್ಮಾರ ರವಿ ದಾಸ ಅವರು ಬಳಸಿದ ಅರ್ಥದಲ್ಲಿ ಬಳಸುತ್ತಿದ್ದೇವೆ.

 ಈಗಾಗಲೇ ಎಷ್ಟು ಸಮಾವೇಶಗಳು ನಡೆದಿವೆ?
ಒಂದು ತಿಂಗಳ ಬಿಡುವಿನ ಅವಧಿಯಲ್ಲಿ ಸುಮಾರು 15 ಸಮಾವೇಶಗಳು ನಡೆದಿವೆ. ಇನ್ನೂ ಹಲವಾರು ಸಮಾವೇಶಗಳು ಆಗಲಿವೆ.

 ಈ ಸಮಾವೇಶಗಳು ಕರ್ನಾಟಕಕ್ಕೆ ಮಾತ್ರ ಸೀಮಿತವೇ ?
ಗ್ರಾಮ ಸೇವಾ ಸಂಘದ ಘಟಕಗಳು ಕರ್ನಾಟಕದಲ್ಲಿ ಜಾಸ್ತಿ ಇರುವುದರಿಂದ ಸದ್ಯಕ್ಕೆ ಕರ್ನಾಟಕಕ್ಕೆ ಸೀಮಿತವಾಗಿವೆ. ಆದರೆ ಬೇರೆ ಕಡೆ ಈ ಕುರಿತ ಚರ್ಚೆಗಳು ಆರಂಭವಾಗಿವೆ. ಕೇರಳ, ಚೆನ್ನೈನಲ್ಲಿಯೂ ವಿಸ್ತೃತ ಚರ್ಚೆ ನಡೆದಿದೆ. ದಿಲ್ಲಿಯಲ್ಲಿ ಅನೇಕ ತಂಡಗಳು, ಬನಾರಸ್‌ನಲ್ಲಿ ಹಳೆಯ ಸಂಘಟನೆ ಲೋಕ ವಿದ್ಯಾ ವೇದಿಕೆ ವತಿಯಿಂದ ಚರ್ಚೆ ನಡೆಯುತ್ತಿದೆ. ನಿಧಾನವಾಗಿ ಇದು ಎಲ್ಲ ಕಡೆ ವಿಸ್ತರಿಸುವ ಸೂಚನೆಗಳು ಕಾಣಿಸುತ್ತಿವೆ.

 ದೊಡ್ಡ ಮಟ್ಟದ ಸಮಾವೇಶ ಇದೆಯೇ?
ಡಿ. 1ರಂದು ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಸಮಾವೇಶ ನಡೆಯುವುದಿದೆ. ಅದರಲ್ಲಿ ಗ್ರಾಮೀಣ ಮತ್ತು ಕೈಗಾರಿಕೆಗಳ ನೌಕರರು, ಪರಿಸರವಾದಿಗಳು, ಸಣ್ಣ ಉದ್ದಿಮೆಗಳ ಮಾಲಕರು ಪಾಲ್ಗೊಳ್ಳುವರು. ಈ ಸಮಾವೇಶದ ವೇಳೆಗೆ ಅಕಸ್ಮಾತ್‌ ಕೇಂದ್ರ ಸರಕಾರ ಮಾತುಕತೆಗೆ ಆಹ್ವಾನಿಸದಿದ್ದರೆ, ಪ್ರಾಯಶಃ ಅವತ್ತೇ ನಾವು ಅಸಹಕಾರ ಚಳವಳಿಯನ್ನು ಘೋಷಿಸಲಿದ್ದೇವೆ.

 ಈ ಮಾದರಿ ಚಳವಳಿಗೆ ಜನರ ಬೆಂಬಲ ಹೇಗಿದೆ?
ಜನರ ಬೆಂಬಲ ತೋರಿಸಲಿಕ್ಕಾಗಿ ಲಾರಿಗಳಲ್ಲಿ ಜನರನ್ನು ಕರೆ ತಂದುಸಮಾವೇಶ ಮಾಡುತ್ತಿಲ್ಲ. ಮೂಲತಃ ನಾವು ಸಣ್ಣ ಸಂಘಟನೆಗಳ ಸಂಘಟಕರ ಜತೆ ಮಾತನಾಡುತ್ತೇವೆ. ಅಂದರೆ ಕೂಡಕುಳಂ ನ್ಯೂಕ್ಲಿಯರ್‌ ಪ್ಲಾಂಟ್‌ ವಿರುದ್ಧ ಹೋರಾಟ ಮಾಡುತ್ತಿರುವಂತಹ ಸಣ್ಣ ಸಣ್ಣ ಸಂಘಟನೆಗಳನ್ನು ಜತೆ ಗೂಡಿಸುತ್ತೇವೆ. ಅವರೆಲ್ಲರೂ ಒಟ್ಟಿಗೆ ಬಂದರೆ ಇದೊಂದು ಬೃಹತ್‌ ಸಾಮಾಜಿಕ, ಸಾಂಸ್ಕೃತಿಕ ಚಳವಳಿಯಾಗಿ ಮೂಡಿ ಬರಲಿದೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ.

 ರಾಜಕೀಯ ಪಕ್ಷಗಳ ಬೆಂಬಲ ಇದೆಯೇ?
ರಾಜಕೀಯ ಪಕ್ಷಗಳ ಸಮಸ್ಯೆ ಏನೆಂದರೆ ಒಂದೋ ಕಾಂಗ್ರೆಸ್‌, ಇಲ್ಲವೇ ಬಿಜೆಪಿ ಎನ್ನುವ ರೀತಿ ನೋಡುತ್ತಾರೆ. ಆದ್ದರಿಂದ ನಾವು ತತ್‌ ಕ್ಷಣಕ್ಕೆ ಆ ರೀತಿ ನೋಡದೆ ಮೊದಲು ಜನರಿಗೆ, ಅಂದರೆ ನಮಗೆ, ನಿಮಗೆ ಪವಿತ್ರ ಆರ್ಥಿಕತೆ ಎಂದರೆ ಏನೆಂಬುದು ಅರ್ಥ ಆಗಬೇಕಾಗಿದೆ. ಅದಕ್ಕಾಗಿ ಈ ಸತ್ಯಾಗ್ರಹ. ಎಲ್ಲ ರಾಜಕೀಯ ಪಕ್ಷಗಳ ಕಾರ್ಯಕರ್ತರಿಗೆ ನಾವು ಹೇಳುವುದು ಇಷ್ಟು: ನೀವೂ ಬನ್ನಿ, ನಿಮ್ಮನ್ನು ತಡೆಯುತ್ತಿಲ್ಲ. ಆದರೆ ಬಂದರೆ ಈ ವೇದಿಕೆಯಲ್ಲಿದ್ದುಕೊಂಡು
ನಿಮ್ಮ-ನಿಮ್ಮ ಪಕ್ಷಗಳ ಮೇಲೆಯೇ ಒತ್ತಡ ಹೇರಬೇಕು. ಬೇರೆ ಪಕ್ಷಗಳ ಮೇಲೆ ಅಲ್ಲ.

 ಈಗಾಗಲೇ ಯಾರಾದರೂ ನಿಮ್ಮ ಜತೆ ಬಂದಿದ್ದಾರೆಯೇ?
ಬಿಜೆಪಿ, ಆರೆಸ್ಸೆಸ್‌ನವರು ಬಂದಿದ್ದಾರೆ. ಅವರು “ನಮ್ಮ ಸಂಪೂರ್ಣ ಬೆಂಬಲ ಇದೆ, ನಾವೂ ಅದಕ್ಕಾಗಿಯೇ ಹೋರಾಡುತ್ತಿದ್ದೇವೆ’ ಎಂದಿದ್ದಾರೆ. ಕಮ್ಯೂನಿಸ್ಟರು ಬಂದಿದ್ದಾರೆ. ವಿಚಾರವಾದಿಗಳು ಬೆಂಬಲಿಸಿದ್ದಾರೆ. ವಿಚಾರವಾದಿಯೂ ಕಮ್ಯೂನಿಸ್ಟ್‌ ಕೂಡ ಅಲ್ಲದ, ಆರೆಸ್ಸೆಸೂ ಅಲ್ಲದ ಅನೇಕ ಜನರು, ಸಂಘಟನೆಗಳು ಮುಂದೆ ಬಂದಿವೆ. ಇದು ಒಂದು ಒಳ್ಳೆಯ ಬೆಳವಣಿಗೆ.

 ಇದು ಗಾಂಧೀಜಿ ಅವರ ಅಹಿಂಸಾ ಮಾದರಿಯ ಚಳವಳಿಯೇ?
ಗಾಂಧಿ, ಬುದ್ಧ, ಅಂಬೇಡ್ಕರ್‌ ಅವರೆಲ್ಲರ ಅಸಾಧಾರಣವಾದ ಪ್ರಭಾವ ನಮ್ಮ ಎಲ್ಲ ಚಳವಳಿಗಳ ಮೇಲೆ ಇರುತ್ತದೆ. ಕಾರ್ಲ್ ಮಾರ್ಕ್ಸ್ ನ ಪ್ರಭಾವವೂ ಇದೆ. ಸಮಾಜವಾದ ನಮ್ಮ ಅಂತರ್ಗತವಾದ ಆಶಯವಾಗಿದೆ. ಯಾರನ್ನೋ ಪ್ರತ್ಯೇಕಿಸಿ ಇದು ಗಾಂಧಿ ಚಳವಳಿ, ಇದು ಅಂಬೇಡ್ಕರ್‌ ಚಳವಳಿ ಎಂದು ನಾವು ಹೇಳುವುದಿಲ್ಲ. ನಮ್ಮ ಎಲ್ಲ ಹೋರಾಟಗಳ ತಲೆಬರಹದಲ್ಲಿ ಗಾಂಧೀಜಿ, ಅಂಬೇಡ್ಕರ್‌ ಚಿತ್ರವನ್ನು ಪಕ್ಕ ಪಕ್ಕದಲ್ಲಿ ಇರಿಸಿ ಚಳವಳಿ ನಡೆಸುತ್ತೇವೆ.

ಟಾಪ್ ನ್ಯೂಸ್

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

6-kushtagi

Kushtagi: ಕಾರ್ಮಿಕ ದಿನಾಚರಣೆ ದಿನದಂದೇ ಪುರಸಭೆ ಪೌರ ಕಾರ್ಮಿಕ ಕಾಣೆ

4-by-ragh

LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ: ಅನುಭವಿ ಆಟಗಾರನಿಗಿಲ್ಲ ಚಾನ್ಸ್

T20 ವಿಶ್ವಕಪ್‌ ಗೆ ಆಸ್ಟ್ರೇಲಿಯಾ ತಂಡ ಪ್ರಕಟ; ಅನುಭವಿ ಆಟಗಾರನಿಗಿಲ್ಲ ಚಾನ್ಸ್

7-

Politics: ಡಿಕೆಶಿ ಹೆಸರು ಹೇಳದಿದ್ದರೆ ಕೆಲವರಿಗೆ ನಿದ್ದೆ ಬರಲ್ಲ : ರಾಮಲಿಂಗಾರೆಡ್ಡಿ

1

ದೆಹಲಿಯ 50 ಕ್ಕೂ ಹೆಚ್ಚಿನ ಶಾಲೆಗಳಿಗೆ ಬಾಂಬ್‌ ಬೆದರಿಕೆ ಇ-ಮೇಲ್:‌ ಪೋಷಕರಿಗೆ ಆತಂಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.