ವಿಶೇಷ ಚೇತನ ಬಾಲೆಯ ಮೇಲೆ ಅತ್ಯಾಚಾರವೆಸಗಿದ ದುರುಳ: ಆರೋಪಿ ಬಂಧನ
Team Udayavani, Dec 13, 2019, 9:15 AM IST
ಹರ್ಯಾಣ: ವಿಶೇಷ ಚೇತನ ಬಾಲೆಯ ಮೇಲೆ ಕಾಮಾಂಧನೊಬ್ಬ ಅತ್ಯಾಚಾರ ಎಸಗಿದ ಘಟನೆ ಫತೆಹಾಬಾದ್ ನ ಲುಥೇರಾ ಗ್ರಾಮದಲ್ಲಿ ನಡೆದಿದೆ.
13ರಿಂದ 14 ವಯಸ್ಸಿನ ವಿಶೇಷ ಚೇತನ ಬಾಲಕಿ ಮದುವೆ ಕಾರ್ಯಕ್ರಮವೊಂದಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ದುರುಳನೊಬ್ಬ ಅತ್ಯಾಚಾರವೆಸಗಿದ್ದಾನೆ. ಈ ಕುರಿತು ಬಾಲಕಿ ಮನೆಗೆ ಬಂದು ಘಟನೆಯನ್ನು ತಿಳಿಸಿದ್ದು ಆಕೆಯ ತಂದೆ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಾಚರಣೆಗಿಳಿದ ಪೊಲೀಸರು 28 ವರ್ಷದ ಆರೋಪಿಯೋರ್ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ಪೋಕ್ಸೋ ಮತ್ತು ಎಸ್ ಟಿ, ಎಸ್ ಸಿ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ತನಿಖೆ ಪ್ರಗತಿಯಲ್ಲಿದೆ.