ಸಂತ್ರಸ್ತರಿಗೆ ತಪ್ಪದ ಗೋಳು!


Team Udayavani, Dec 20, 2019, 4:34 PM IST

bg-tdy-1

ಗೋಕಾಕ: ಕಳೆದ ಆಗಸ್ಟ್‌ ತಿಂಗಳಿನಲ್ಲಿ ಪ್ರವಾಹದಿಂದ ತತ್ತರಿಸಿ ಬದುಕು ಕಟ್ಟಿಕೊಳ್ಳಲು 4 ತಿಂಗಳಿನಿಂದ ಹೆಣಗಾಡುತ್ತಿರುವ ನೆರೆ ಸಂತ್ರಸ್ತರ ಸಮಸ್ಯೆಗಳತ್ತ ಸರ್ಕಾರ ಮತ್ತು ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಸಂತ್ರಸ್ತರು ಆರೋಪಿಸಿದ್ದಾರೆ.

ಭಾರೀ ಮಳೆ ಹಾಗೂ ಪ್ರವಾಹದಿಂದ ಗೋಕಾಕ ನಗರದಲ್ಲಿ ಸಾವಿರಾರು ಮನೆ ನೀರು ಪಾಲಾಗಿ ತೀವ್ರ ಸಂಕಟದಲ್ಲಿ ಇರುವವರಿಗೆ ಮಾನವೀಯತೆ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕಾದ ಅಧಿ ಕಾರಿಗಳು ಸಂತ್ರಸ್ತರ ನೆರವಿಗೆ ಧಾವಿಸುತ್ತಿಲ್ಲ. ಅಲ್ಲದೇ ನೆರೆ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ಪರಿಹಾರ ಧನಕ್ಕಾಗಿ ದಿನನಿತ್ಯ ಅಧಿ ಕಾರಿಗಳ ಕಡೆಗೆ ಅಲೆಯುವಂತಾಗಿದೆ ಎಂದು ಸಂತ್ರಸ್ತರು ಅಳಲು ತೊಡಿಕೊಂಡಿದ್ದಾರೆ.

ಗೋಕಾಕ ನಗರದಲ್ಲಿ ಒಟ್ಟು 1538 ಮನೆಗಳು (ಅಧಿಕೃತ) ಬಿದ್ದ ಮನೆಗಳಾಗಿದ್ದು, ಇದರಲ್ಲಿ (ಅನಧಿಕೃತ) ಅಂದರೆ ಕೆಲ ದಾಖಲೆಗಳು ಇಲ್ಲದೇ ಬಿದ್ದ ಮನೆಗಳ ಸಂಖ್ಯೆ 143 ಇವೆ. ಎ ಕೆಟಗೇರಿ ಫಲಾನುಭವಿಗಳ ಸಂಖ್ಯೆ 841 ಇದೆ. ಅವರಿಗೆ 1 ಲಕ್ಷ ರೂ. ಹಾಗೂ ಬಾಡಿಗೆ ಹಣ 25 ಸಾವಿರ ರೂ. ಮತ್ತು ಬಿ ಕೆಟಗೇರಿ ಫಲಾನುಭವಿಗಳ ಸಂಖ್ಯೆ 79 ಇದ್ದು, ಅವರಿಗೆ 1 ಲಕ್ಷ ರೂ. ನೆರವು ಫಲಾನುಭವಿಗಳ ಖಾತೆಗೆ ಜಮೆಯಾಗಿವೆ. ಮತ್ತು ಸಿ ಕೆಟಗೇರಿ ಜನರಿಗೆ 50 ಸಾವಿರ ರೂ. ಇನ್ನೂ ಜಮಾ ಆಗಿಲ್ಲ. ಅದರಲ್ಲಿ 25 ಸಾವಿರ ರೂ. ಮಾತ್ರ ಬಿಡುಗಡೆ ಮಾಡಿದ್ದು, ನೆರೆ ಸಂತಸ್ತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಒಟ್ಟು ಫಲಾನುಭವಿಗಳಲ್ಲಿ 287 ಜನರ ಹೆಸರುಗಳನ್ನು ವಿವಿಧ ಕಾರಣಗಳಿಂದ ಡಿಲೀಟ್‌ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತರಿಗೆ ಸಿಎಂ ಮನವಿ: ಪ್ರವಾಹದಿಂದ ತೀವ್ರ ಹಾನಿಗೀಡಾದ ಎ ಮತ್ತು ಬಿ ವರ್ಗದ ಮನೆಗಳ ಪುನರ್‌ ನಿರ್ಮಾಣಕ್ಕೆ 5 ಲಕ್ಷ ರೂ.ಗಳ ನೆರವು ಸರ್ಕಾರ ಘೋಷಿಸಿದೆ. ಆದರೆ 5 ಲಕ್ಷದ ಪೈಕಿ 1 ಲಕ್ಷ ರೂ. ನೆರೆ ಸಂತ್ರಸ್ತರ ಖಾತೆ ಜಮೆಗೊಂಡರೂ ಅದರಲ್ಲಿ ಇನ್ನು ಶೇ. 30ರಷ್ಟು ನೆರೆ ಸಂತ್ರಸ್ತರ ಖಾತೆಗೆ ಹಣವೇ ಜಮೆ ಆಗಿಲ್ಲ. ಉಳಿದ 4 ಲಕ್ಷ ರೂ. ಅನುದಾನವನ್ನು ನಿರ್ಮಾಣವಾಗುತ್ತಿರುವ

ಮನೆಯ ಹಂತ ಹಂತವಾಗಿ ಜಿಪಿಎಸ್‌ ಛಾಯಾಚಿತ್ರಗಳ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಈಗಾಗಲೇ ಶೇ. 50ರಷ್ಟು ಜನ ಮನೆ ನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದು, ಇನ್ನುಳಿದ ಜನರು ಮನೆ ನಿರ್ಮಾಣ ಕಾರ್ಯದಿಂದ ತಟಸ್ಥರಾಗಿದ್ದಾರೆ. ಕಾರಣ ಈಗಾಗಲೇ ಕಟ್ಟಡಗಳನ್ನು ಕಟ್ಟುತ್ತಿರುವ ಮನೆಗಳ ಜಿಪಿಎಸ್‌ ಮಾಡದ ಅಧಿಕಾರಿಗಳು ಇನ್ನುಳಿದ ಅನುದಾನಬಿಡುಗಡೆಯಾಗುತ್ತದೆಯೋ ಅಥವಾ ಇಲ್ಲ ಎಂಬ ಸಂಶಯವನ್ನು ವ್ಯಕ್ತಪಡಿಸಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ.

 

-ಮಲ್ಲಪ್ಪ ದಾಸಪ್ಪಗೋಳ

ಟಾಪ್ ನ್ಯೂಸ್

police crime

Hubli; ನೇಹಾ & ಅಂಜಲಿ ಹತ್ಯೆ ಪ್ರಕರಣ: ಡಿಸಿಪಿ ತಲೆದಂಡ

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

1-eweweq

Gadag: ರಥೋತ್ಸವ ವೇಳೆ ರಥದ ಗಾಲಿಗೆ ಸಿಲುಕಿ ಇಬ್ಬರು ಭಕ್ತರು ಮೃತ್ಯು

1-ew-eqw-e

BJP ಕಚೇರಿಗೆ ಬರುತ್ತಿದ್ದೇವೆ.. ಎಲ್ಲರನ್ನೂ ಬಂಧಿಸಿ: ಪ್ರಧಾನಿಗೆ ಕೇಜ್ರಿವಾಲ್ ಸವಾಲು

yogi-2

Congress ಪಕ್ಷದಲ್ಲಿ ಔರಂಗಜೇಬನ ಆತ್ಮ ಸೇರಿಕೊಂಡಿದೆ: ಸಿಎಂ ಯೋಗಿ ವಾಗ್ದಾಳಿ

1-qewwqeqqw

RSS ಕೂಡ ನಕಲಿ ಎಂದು ನಾಳೆ ಮೋದಿ ಹೇಳಬಹುದು : ಉದ್ಧವ್ ಠಾಕ್ರೆ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

drowned

Vedganga ನದಿಯಲ್ಲಿ ಮುಳುಗಿ ನಾಲ್ವರು ಮೃತ್ಯು:ಇಬ್ಬರು ಬೆಳಗಾವಿಯವರು

ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

Belagavi; ಅಂಜಲಿ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

Satish Jarkiholi ಫಲಿತಾಂಶ ನಂತರ ಸಂಪುಟ ವಿಸ್ತರಣೆ ಆಗಲ್ಲ

satish jarakiholi

Belagavi,ಚಿಕ್ಕೋಡಿ ಸೇರಿ 14 ರಿಂದ 17 ಸೀಟು ಕಾಂಗ್ರೆಸ್ ಗೆಲ್ಲಲಿದೆ: ಸತೀಶ್ ಜಾರಕಿಹೊಳಿ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

police crime

Hubli; ನೇಹಾ & ಅಂಜಲಿ ಹತ್ಯೆ ಪ್ರಕರಣ: ಡಿಸಿಪಿ ತಲೆದಂಡ

1-sadasds

IPL ಚೆನ್ನೈ ಗೆ ಗೆಲ್ಲಲು 219 ರನ್ ಗಳ ಗುರಿ ಮುಂದಿಟ್ಟ ಆರ್ ಸಿಬಿ

Lokayukta

Marks card ಕೊಡಲು ಲಂಚ: ಶಿಕ್ಷಣ ಇಲಾಖೆ ಅಧಿಕಾರಿಗಳಿಬ್ಬರು ಲೋಕಾಯುಕ್ತ ಬಲೆಗೆ

1-qwqeewqe

Vijayapura;ದಲಿತರ ಭವನ ನಿರ್ಮಾಣಕ್ಕೆ ಮುಸ್ಲಿಮರ ವಿರೋಧ:ಪೊಲೀಸರ ಮಧ್ಯಸ್ಥಿಕೆ

Minchu

Banavasi ; ಕ್ರಿಕೆಟ್ ಆಡುತ್ತಿದ್ದ ಬಾಲಕ ಸಿಡಿಲಿಗೆ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.