ಕಾಪ್ಟರ್ ಪತನ: ಸೇನಾ ಮುಖ್ಯಸ್ಥ ಸೇರಿ 8 ಸಾವು
Team Udayavani, Jan 3, 2020, 1:47 AM IST
ತೈಪೆ: ತೈವಾನ್ನ ತೈಪೆ ಸಮೀಪದ ಪರ್ವತ ಸಮೂಹದಲ್ಲಿ ಗುರುವಾರ ಹೆಲಿಕಾಪ್ಟರ್ ಪತನಗೊಂಡ ಪರಿಣಾಮ, ಪ್ರಮುಖ ಸೇನಾಧಿಕಾರಿ ಜ| ಶೆನ್-ಇ-ಮಿಂಗ್ ಮತ್ತು ಇತರೆ 7 ಸಿಬಂದಿ ಮೃತಪಟ್ಟಿದ್ದಾರೆ.
ಮೃತರಲ್ಲಿ ಮೂವರು ಮೇಜರ್ ಜನರಲ್ಗಳೂ ಸೇರಿದ್ದಾರೆ. ಯಿಲಾನ್ ಕೌಂಟಿಯಲ್ಲಿ ಯೋಧರನ್ನು ಭೇಟಿಯಾಗಲು ತೆರಳುತ್ತಿದ್ದ ವೇಳೆಯೇ ಈ ದುರ್ಘಟನೆ ಸಂಭವಿಸಿದೆ.