ಇರಾನ್ ಕ್ಷಿಪಣಿ ದಾಳಿ : ಅಮೆರಿಕ ಯೋಧರ ಮೆದುಳಿಗೆ ಹಾನಿ
Team Udayavani, Jan 30, 2020, 12:50 AM IST
ವಾಷಿಂಗ್ಟನ್: ಇರಾಕ್ನ ಬಾಗ್ಧಾದ್ನಲ್ಲಿರುವ ಅಮೆರಿಕದ ಸೇನೆಯ 2 ನೆಲೆಗಳನ್ನು ಗುರಿಯಾಗಿರಿಸಿಕೊಂಡು ಜ.8ರಂದು ಇರಾನ್ ಸೇನೆ ನಡೆಸಿದ ಕ್ಷಿಪಣಿ ದಾಳಿಯಲ್ಲಿ 50 ಮಂದಿ ಅಮೆರಿಕ ಸೈನಿಕರ ಮೆದುಳಿಗೆ ಗಾಯಗಳಾಗಿವೆ. ಅಮೆರಿಕದ ರಕ್ಷಣಾ ಸಚಿವಾಲಯದ ಪ್ರಧಾನ ಕಚೇರಿ ಪೆಂಟಗನ್ ಈ ಅಂಶ ಖಚಿತಪಡಿಸಿದೆ.
ಕೆಲ ದಿನಗಳ ಹಿಂದೆ ಗಾಯಗೊಂಡವರ ಸಂಖ್ಯೆ 25 ಎಂದು ಅದು ಹೇಳಿತ್ತು. ಜತೆಗೆ ಯಾರೂ ಗಾಯಗೊಂಡಿರಲಿಲ್ಲ ಎಂದಿತ್ತು. ಇರಾನ್ ಸೇನಾ ಕಮಾಂಡರ್ ಖಾಸಿಮ್ ಸುಲೇಮಾನ್ ಹತ್ಯೆ ಖಂಡಿಸಿ ಈ ದಾಳಿ ನಡೆಸಲಾಗಿತ್ತು.