ಹತ್ತನೇ ಶೆಡ್ನೂಲ್‌ ರದ್ದುಗೊಳಿಸಲು ಇದು ಸಕಾಲ


Team Udayavani, Feb 12, 2020, 6:52 AM IST

schduel

ಪಕ್ಷಾಂತರ ತಡೆ ಕಾಯಿದೆ ಎಂದೇ ಪ್ರಖ್ಯಾತವಾದ ಹತ್ತನೆ ಶೆಡ್ನೂಲ್‌ ನಿರುಪಯುಕ್ತ ಎಂಬ ಅಭಿಪ್ರಾಯ ಇತ್ತು. ಈ ಶೆಡ್ನೂಲ್‌ನ ದೋಷಗಳ ಪೈಕಿ ಒಂದು ಗಂಭೀರ ನ್ಯೂನತೆಯತ್ತ ಸರ್ವೋಚ್ಚ ನ್ಯಾಯಾಲಯ ಈಗ ಬೆರಳು ತೋರಿಸಿದೆ. 2019ರ ಉತ್ತರಭಾಗದಲ್ಲಿ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಕೆಲವು ಶಾಸಕರು ಸರಕಾರದ ಆಡಳಿತ ವೈಖರಿಯಿಂದ ಅತೃಪ್ತರಾಗಿ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದರು. ಹತ್ತನೇ ಶೆಡ್ನೂಲ್‌ನಲ್ಲಿ ದತ್ತವಾದ ಅಧಿಕಾರದಂತೆ ರಾಜೀನಾಮೆ ಸ್ವೀಕರಿಸಬೇಕಾದ ವಿಧಾನಸಭಾ ಸಭಾಪತಿಗಳು ತೋರಿದ ಅನುಚಿತ ವಿಳಂಬ, ಬಳಿಕ ಪ್ರಕರಣದ ಇತ್ಯರ್ಥದಲ್ಲಿ ಪ್ರಸ್ತಾಪಿತ ಶಾಸಕರ ಸದಸ್ಯತ್ವವನ್ನು ರದ್ದುಗೊಳಿಸಲಾಗಿತ್ತು.

ಕುಪಿತರಾದ ಶಾಸಕರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೋದರು. ಆದರೆ ಇತ್ತೀಚೆಗೆ ಮಣಿಪುರ ರಾಜ್ಯದ ಅರಣ್ಯ ಸಚಿವರಾಗಿದ್ದ ಶ್ಯಾಮ ಕುಮಾರ್‌ರವರ ಅನರ್ಹತೆಯ ಪ್ರಕರಣವನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಶಾಸಕರ ಅನರ್ಹತೆಯನ್ನು ನಿರ್ಧರಿಸುವ ವ್ಯಾಪ್ತಿ ಸ್ಪೀಕರ್‌ಗೆ ಇರುವುದು ನ್ಯಾಯಯುತವಾದುದಲ್ಲ, ಈ ಬಗ್ಗೆ ಪ್ರತ್ಯೇಕ ಸ್ವತಂತ್ರ ಪ್ರಾಧಿಕಾರ ರಚಿಸುವುದು ಉತ್ತಮ ಎಂಬ ಸಲಹೆ ನೀಡಿದೆ. ಈ ಸಂಬಂಧ ಹತ್ತನೇ ಶೆಡ್ನೂಲ್‌ನ ಔಚಿತ್ಯದ ಗ್ರಹಿಕೆಗೆ ಸಹಕಾರಿಯಾಗಬ ಹುದಾದ ಕೆಲವು ಅಂಶಗಳು ಇಲ್ಲಿವೆ.

ರಾಜೀವ ಗಾಂಧಿಯವರಿಗೆ 1984ರಲ್ಲಿ ದೊರೆತ ಅಭೂತಪೂರ್ವ ಜಯದಿಂದ ಗಳಿಸಿದ ಬೆಂಬಲವನ್ನು ಉಳಿಸಿಕೊಳ್ಳುವ ಬಗೆ ಹೇಗೆ ಎಂಬ ಚಿಂತನೆಯಲ್ಲಿರುವಾಗ ಅವರ ಆಪ್ತ ವಲಯದವರೆಂದು ಹೇಳಿಕೊಳ್ಳುವರ್ಯಾರೋ ಪಕ್ಷಾಂತರ ತಡೆ ಕಾಯಿದೆ ಜಾರಿಗೊಳಿಸುವ ಸಲಹೆ ನೀಡಿರಬಹುದು. ಸಲಹೆಯಿಂದ ಪ್ರಭಾವಿತರಾದ ರಾಜೀವ ಗಾಂಧಿಯವರು ಅವಸರವಸರವಾಗಿ ಸಂವಿಧಾನದ ಆರ್ಟಿಕಲ್‌ 101, 102 ಹಾಗೂ 191ಕ್ಕೆ ಬದಲಾವಣೆ ತಂದು ಹೊಸತೊಂದು ಶೆಡ್ನೂಲ್‌ನ್ನು ಸಂವಿಧಾನದಲ್ಲಿ ಅಳವಡಿಸುವಲ್ಲಿ ಯಶಸ್ವಿಯಾದರು. ಅದೇ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದನ್ನು ತಡೆಯಲು ಉದ್ದೇಶಿಸಿದ ಹತ್ತನೇ ಶೆಡ್ನೂಲ್‌. 01-03-1985ರಿಂದ ಈ ಕಾಯಿದೆ ಜಾರಿಗೆ ಬಂತು. ಇದರ ಪ್ಯಾರಾ (2)(ಎ)ರಲ್ಲಿ ಒಂದು ರಾಜಕೀಯ ಪಕ್ಷದ ಟಿಕೆಟ್‌ನಲ್ಲಿ ವಿಜೇತರಾದವ ಸ್ವಇಚ್ಛೆಯಿಂದ ಆ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ ಹಾಗೂ ಉಪನಿಯಮ(ಬಿ)ದಲ್ಲಿ ಹೇಳಿದಂತೆ ತಾನು ಸದಸ್ಯನಾಗಿರುವ ರಾಜಕೀಯ ಪಕ್ಷದ ಮುಖಂಡ ಅಥವಾ ನಿಯೋಜಿತ ವ್ಯಕ್ತಿ ಸದನದ ಮುಂದೆ ಬರುವ ಇಂಥ ವಿಷಯದ ಪರವಾಗಿ ಮತ ಚಲಾಯಿಸಬೇಕೆಂದು ನೀಡುವ ನಿರ್ದೇಶನ (ವಿಪ್‌)ವನ್ನು ಉಲ್ಲಂ ಸಿದರೆ/ ಮತದಾನದಿಂದ ಹೊರಗುಳಿದರೆ ಆ ಶಾಸಕನ/ಸಂಸದನ ಸದಸ್ಯತ್ವ ರದ್ದಾಗುತ್ತದೆ .

ಸಾರ್ವಜನಿಕರಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಯ ವಿವೇಚನೆಯನ್ನು ಈ ಕಾನೂನು ನಿಯಂತ್ರಿಸುತ್ತದಲ್ಲದೆ ಪಕ್ಷ ಹೇಳಿದ ಹಾಗೆ ಕೇಳಿಕೊಂಡು ಪಕ್ಷದಲ್ಲಿ ಮುಂದುವರಿಯಲು ಆಜ್ಞಾಪಿಸುತ್ತದೆ. ಇದು ಸಂವಿಧಾನದ ಮೂಲಾಶಯಕ್ಕೆ ವಿರೋಧವಾದ ನೀತಿ. ಗಮನಾರ್ಹವಾದ ವಿಷಯವೇನೆಂದರೆ ನಿರ್ದೇಶನ ಅಥವಾ ವಿಪ್‌ ನೀಡುವ ಪಕ್ಷದ ಮುಖಂಡ ಯಾ ವ್ಯಕ್ತಿ ಸದನದ ಸದಸ್ಯನಾಗಿರಬೇಕೆಂಬ ಕಡ್ಡಾಯವಿಲ್ಲ, ಸಾಮಾನ್ಯವಾಗಿ ಆತ ಆ ಪಕ್ಷದ ಮುಖಂಡ ಅಥವಾ ಆ ಪಕ್ಷಕ್ಕೆ ಸೇರಿದ ವ್ಯಕ್ತಿ. ಕೌತುಕವೆಂದರೆ ಆತ ಸದನದ ಹೊರಗಿದ್ದು ಸದನದ ಒಳಗಿರುವ ಚುನಾಯಿತ ಪ್ರತಿನಿಧಿಯನ್ನು ನಿಯಂತ್ರಿಸಲು ಶಕ್ತ. ಆತ ಬೇರೆ ರಾಜ್ಯದ ಆ ಪಕ್ಷದ ಸದಸ್ಯನಾಗಿರಲೂಬಹುದು.

ಒಂದು ಜೀವಂತ ಉದಾಹರಣೆ ಕರ್ನಾಟಕದ್ದೇ. ಕರ್ನಾಟಕ ವಿಧಾನಸಭೆಯ ಒಬ್ಬ ಸದಸ್ಯ ಬಿಎಸ್‌ಪಿಗೆ ಸೇರಿದವರಿದ್ದು, ಅವರನ್ನು ನಿಯಂತ್ರಿಸಬಹುದಾದ ವ್ಯಕ್ತಿ ಉತ್ತರಪ್ರದೇಶದಲ್ಲಿದ್ದಾನೆ. ಇಂಥ ವ್ಯಕ್ತಿಗೆ ಸದನದ ಕಲಾಪದ ಮಾಹಿತಿ ಹೇಗೆ ಲಭ್ಯವಾಗುತ್ತದೆ ಹಾಗೂ ಯಾವ ಆಧಾರದಲ್ಲಿ ಸದನದ ಒಳಗಿನ ವ್ಯಕ್ತಿಯನ್ನು ನಿಯಂತ್ರಿಸುವುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಒಂದಕ್ಕೊಂದು ಸಂಬಂಧವಿಲ್ಲದೆ ತೊಳಸಂಬಟ್ಟೆ ಕಾನೂನು. ಅಲ್ಲದೆ, ನಮ್ಮ ಸಂವಿಧಾನ ನಿರೂಪಿಸುವಂತೆ, ಸದನದೊಳಗೆ ರಾಜಕೀಯವೆಂಬುದಿಲ್ಲ. ಎಲ್ಲರೂ ಸದಸ್ಯರು. ವಿಜೇತ ಪಕ್ಷೇತರ ಅಭ್ಯರ್ಥಿಯೂ ಸದಸ್ಯನೇ. ಸದನದ ಮುಂದೆ ಬರುವ ಪ್ರಸ್ತಾಪಗಳು ಉಪಸ್ಥಿತ ಸದಸ್ಯರ ಬಹುಮತದ ಆಧಾರದಲ್ಲಿ ಅನುಮೋದನೆ ಯಾ ತಿರಸ್ಕಾರಗೊಳ್ಳುತ್ತವೆ ಹೊರತು ಪಕ್ಷವಾರು ನೆಲೆಯಲ್ಲಿ ಅಲ್ಲ. ವಸ್ತುಸ್ತಿತಿ ಹೀಗಿರುವಾಗ ಹತ್ತನೇ ಶೆಡ್ನೂಲ್‌ ಮೂಲಕ ಸದನದ ಒಳಗೆ ರಾಜಕೀಯ ಪಕ್ಷವನ್ನು ತಂದಿರುವುದು ಸಂವಿಧಾನಕ್ಕೆ ಎಸಗಿದ ಅಪಚಾರ.

ಮೇಲಾಗಿ ಈ ಕಾನೂನಿನ ಉದ್ದೇಶವೇ ಸ್ಪಷ್ಟವಾಗಿಲ್ಲ. ಚುನಾಯಿತ ಪ್ರತಿನಿಧಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದನ್ನು ತಡೆಯುವುದೇ ಮುಖ್ಯ ಉದ್ದೇಶವೆಂಬುದನ್ನು ಈ ಕಾನೂನು ಖಚಿತಪಡಿಸುವುದಿಲ್ಲ. ಒಂದು ಪಕ್ಷದ ಮೂರನೇ ಒಂದರಷ್ಟು ಸದನ ಸದಸ್ಯರು ಆ ಪಕ್ಷವನ್ನು ತ್ಯಜಿಸಿ ಇನ್ನೊಂದು ಪಕ್ಷ ಸೇರಿದರೆ ಅದನ್ನು ವಿಲೀನ ಎಂದೂ, ಮೂರನೇ ಎರಡಷ್ಟು ಮಂದಿ ಪಕ್ಷ ತ್ಯಜಿಸಿದರೆ ವಿಭಜನೆ ಎಂದೂ ಪರಿಗಣಿಸುವ ಅವಕಾಶವಿದೆ ಎಂಬ ಉಲ್ಲೇಖವಿದೆ. ಆಗ ಅವರ ಸದಸ್ಯತ್ವ ರದ್ದಾಗುವುದಿಲ್ಲ.

ಹೀಗೆ ನಾನಾ ನ್ಯೂನತೆಗಳೊಂದಿಗೆ ಗಂಭೀರವಾದ ಲೋಪವೊಂದು ಈ ಕಾನೂನನ್ನು ಕಾಡುತ್ತಿದೆ. ಅದಾವುದೆಂದರೆ ಸ್ಪೀಕರ್‌ಗೆ ದತ್ತವಾದ ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ. ಚುನಾಯಿತ ಪ್ರತಿನಿಧಿ ಸ್ವಇಚ್ಛೆಯಿಂದ ಪಕ್ಷಕ್ಕೆ ರಾಜಿನಾಮೆ ನೀಡಿದ ಹಾಗೂ ವಿಪ್‌ನ್ನು ಉಲ್ಲಂಘಿಸಿದ ದೂರನ್ನು ಈ ಕಾನೂನಿನಂತೆ ಸ್ಪೀಕರ್‌ಗೆ ಸಲ್ಲಿಸತಕ್ಕದ್ದು. ಸಭಾಪತಿ ಯಾ ಸ್ಪೀಕರ್‌ ಆ ಪ್ರಕರಣವನ್ನು ಒಂದು ನ್ಯಾಯಸ್ಥಾನ ಇತ್ಯರ್ಥ ಪಡಿಸುವ ರೀತಿಯಂತೆ ನಿರ್ಣಯಿಸಬೇಕಾದ ಜವಾಬ್ದಾರಿ ಇದೆ. ವಿಪರ್ಯಾಸವೆಂದರೆ ಆ ನ್ಯಾಯಾಧಿಕರಣದ ಕ್ಷಮತೆ ಸ್ಪೀಕರ್‌ಗೆ ಇರಬೇಕಾಗಿಲ್ಲ. ವಾಸ್ತವಾಗಿ ಇರುವುದೂ ಇಲ್ಲ. ಆತನೂ ಓರ್ವ ರಾಜಕಾರಣಿಯೇ ಆಗಿರುತ್ತಾನೆ. ಹಾಗಾಗಿ ಪ್ರಕರಣಗಳು ನ್ಯಾಯಾಧಿಕರಣದಲ್ಲಿ ಇತ್ಯರ್ಥಗೊಂಡ ಹಾಗೆ ಪರಿಹಾರಗೊಳ್ಳಲು ಸಾಧ್ಯವಿಲ್ಲ. ಅದೂ ಅಲ್ಲದೆ, ಸ್ಪೀಕರ್‌ ಕೂಡ ಒಬ್ಬ ರಾಜಕೀಯ ಪಕ್ಷದ ನೇತಾರ. ಆತನಿಂದ ನಿಷ್ಪಕ್ಷಪಾತವಾದ ಹಾಗೂ ನ್ಯಾಯಯುತವಾದ ತೀರ್ಮಾನ ಬರುವುದೂ ಅನುಮಾನ. ಈ ಅಂಶವನ್ನು ಸರ್ವೋಚ್ಚ ನ್ಯಾಯಾಲಯ ಈಗ ಗಂಭೀರವಾಗಿ ಪರಿಗಣಿಸಿದೆ. ಕರ್ನಾಟಕದಲ್ಲಿ ಇತ್ತೀಚೆಗೆ ಶಾಸಕರ ಪಕ್ಷಾಂತರ ಹಾಗೂ ಅವರನ್ನು ಅನರ್ಹಗೊಳಿಸಿದ ಪ್ರಕರಣವೂ ಒಂದೇ ಸ್ವರೂಪದ್ದಾಗಿದ್ದು ನ್ಯಾಯಾಲಯ ಜನಪ್ರತಿನಿಧಿಗಳ ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ ಸ್ಪೀಕರ್‌ಗೆ ಬೇಡ. ಅದಕ್ಕೆ ಪ್ರತ್ಯೇಕ ಸ್ವತಂತ್ರ ಪ್ರಾಧಿಕಾರ ರಚಿಸುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವುದರಲ್ಲಿ ಅನುಮಾನವಿಲ್ಲ.

ಇಷ್ಟಾಗಿ ಇಲ್ಲಿ ಗಹನವಾದ ವಿಚಾರ ಯಾವುದು ಮತ್ತು ಆ ವಿಚಾರಕ್ಕೆ ಸಂಬಂಧಿಸಿ ಹತ್ತನೇ ಶೆಡ್ನೂಲಿನ ಉಪಯುಕ್ತತೆ ಏನೆಂಬುದರ ಚರ್ಚೆ ಅಗತ್ಯ. ಅಧಿಕಾರ ದಾಹ ಮತ್ತು ಪ್ರಲೋಭನೆಯಿಂದಾಗಿ ಚುನಾಯಿತ ರಾಜಕಾರಣಿಗಳು ಪಕ್ಷದಿಂದ ಪಕ್ಷಕ್ಕೆ ಜಿಗಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ನಿಜ. ಇದರಿಂದಾಗಿ ಸರಕಾರಗಳು ಹಠಾತ್‌ ಪತನಗೊಳ್ಳುವುದು ಹಾಗೂ ತಾತ್ವಿಕವಾಗಿ ಭಿನ್ನಾಭಿಪ್ರಾಯವುಳ್ಳ ರಾಜಕೀಯ ಪಕ್ಷಗಳು ಕೇವಲ ಅಧಿಕಾರಕ್ಕಾಗಿ ಒಂದಾಗಿ ಸರಕಾರ ನಡೆಸುವುದು, ಹೊಂದಾಣಿಕೆಯಿಲ್ಲದೆ ನಡೆಸುವ ಆಡಳಿತದಿಂದ ಸಾರ್ವಜನಿಕರಿಗೆ ಸಂವಿಧಾನಾತ್ಮಕವಾದ ಆಡಳಿತದ ಸವಿಯನ್ನು ಉಣ್ಣಲಾಗದ ಸ್ಥಿತಿ, ಇದನ್ನೆಲ್ಲ ನಾವು ನೋಡುತ್ತಿದ್ದೇವೆ. ಪಕ್ಷಾಂತರ ಒಂದು ಪಿಡುಗು. ಇದು ಪ್ರಜಾಸತ್ತೆಗೆ ಅಪಾಯಕಾರಿ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನು ಸಮರ್ಥ ಹಾಗೂ ಸಮರ್ಪಕವಾಗಿ ನಿಯಂತ್ರಿಸದೆ ಇದ್ದಲ್ಲಿ ಪ್ರಜಾಸತ್ತೆಗೆ ಅರ್ಥವೇ ಇಲ್ಲವೆಂಬ ಮಾತು ಅಷ್ಟೇ ನಿಜ. ಹಾಗಾಗಿ ಪ್ರಗತಿಪರ ಸರಕಾರ ಇದನ್ನು ನಿಯಂತ್ರಿಸಲೇಬೇಕು. ಇಲ್ಲವಾದರೆ ಪ್ರಜಾಸತ್ತಾತ್ಮಕ ಆಡಳಿತ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವುದರಲ್ಲಿ ಸಂಶಯವಿಲ್ಲ.

ಆದರೆ ಆ ಬಗ್ಗೆ ಈಗಾಗಲೇ ತಂದು ಚಾಲ್ತಿಯಲ್ಲಿರುವ ಹತ್ತನೇ ಶೆಡ್ನೂಲ್‌ನಿಂದ ಏನಾದರೂ ಹಾಗೂ ಎಷ್ಟಾದರೂ ಪ್ರಯೋಜನ ಆಗಿದೆಯೇ? ಕಳೆದ ಮೂವತ್ತು ವರ್ಷದಿಂದ ಊರ್ಜಿತದಲ್ಲಿದ್ದ ಈ ಕಾನೂನು ನ್ಯಾಯ ಒದಗಿಸಿದ ಉದಾಹರಣೆಯುಂಟೇ? ಸಂವಿಧಾನದ ಮೂಲಾಶಯಕ್ಕೆ ವಿರೋಧವಾದ ಈ ನಿರರ್ಥಕ ಕಾನೂನನ್ನು ಮುಂದುವರಿಸುವುದರಿಂದ ಯಾವ ಪುರಷಾರ್ಥವಿದೆ?
ಭಾರತದಲ್ಲಿ ರಾಜಕಾರಣವನ್ನು ಸ್ವತ್ಛಗೊಳಿಸಿ ಶುದ್ಧ ಆಡಳಿತ ನೀಡುವ ನೈಜ ಕಾಳಜಿ ಇರುವುದಾದರೆ ಸರಕಾರ ಜನತಾ ಪ್ರಾತಿನಿಧ್ಯ ಕಾಯಿದೆಗಳನ್ನು ಪರಿಷ್ಕರಿಸಿ ಬಲಪಡಿಸಬೇಕು. ಹಾಲಿ ಜನತಾ ಪ್ರಾತಿನಿಧ್ಯ ಕಾಯಿದೆಗಳು ಸಂವಿಧಾನದ ಆಶಯದಂತೆ ಶುದ್ಧ ಆಡಳಿತ ನಡೆಸಲು ಪೂರಕವಾಗಿಲ್ಲ. ಬದಲು ರಾಜಕಾರಣ ಹಾಗೂ ರಾಜಕಾರಣಿಗಳನ್ನು ಬೆಳೆಸಲು ಪೂರಕವಾಗಿದೆ. ಕಾನೂನಿನಲ್ಲಿ ಸಾಕಷ್ಟು ಸುಧಾರಣೆಗೆ ಅವಕಾಶವಿದ್ದರೂ ಇಲ್ಲಿಯ ತನಕದ ಸರಕಾರಗಳು ಕ್ರಾಂತಿಕಾರಿ ಸುಧಾರಣೆಗಳನ್ನು ತರಲೇ ಇಲ್ಲ. ತಂದವುಗಳು ಮತದಾರ ಕೇಂದ್ರೀಕೃತವಾದವುಗಳಲ್ಲದೆ ಅಭ್ಯರ್ಥಿ ಕೇಂದ್ರೀಕೃತವಾದವುಗಳಲ್ಲ. ಸಂವಿಧಾನದ ಮೂಲಾಶಯಕ್ಕೆ ವಿರೋಧವಾಗಿ ರಾಜಕೀಯ ಹಾಗೂ ರಾಜಕೀಯ ಪಕ್ಷವನ್ನು ಸದನದೊಳಗೆ ಪ್ರವೇಶಿಸಲು ಅವಕಾಶ ಕಲ್ಪಿಸಿದ ಹತ್ತನೇ ಶೆಡ್ನೂಲ್‌ನ್ನು ರದ್ದುಪಡಿಸಿ ಜನತಾ ಪ್ರಾತಿನಿಧ್ಯ ಕಾಯಿದೆಗಳನ್ನು ಬಲಪಡಿಸಲು ಇದು ಸಕಾಲ. ಇದರಿಂದ ಹತ್ತನೇ ಶೆಡ್ನೂಲ್‌ಗೋಸ್ಕರ ಒಂದು ಅನ್ಯಥಾ ನ್ಯಾಯಾಧೀಕರಣ ಪ್ರಾಧಿಕಾರ ಸ್ಥಾಪನೆ, ನಿರ್ವಹಣೆ ಇತ್ಯಾದಿ ಆರ್ಥಿಕ ಹೊರೆಯೂ ಕಡಿಮೆಯಾಗುತ್ತದೆ.

– ಬೇಳೂರು ರಾಘವ ಶೆಟ್ಟಿ

ಟಾಪ್ ನ್ಯೂಸ್

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Kollywood: ದಳಪತಿ ವಿಜಯ್‌ ʼGOATʼ ಸಿನಿಮಾದಲ್ಲಿ ಧೋನಿ, ರುತ್‌ ರಾಜ್ ನಟನೆ?

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ಲವೇ…? ಸಂಸದನ ವಿವಾದಾತ್ಮಕ ಹೇಳಿಕೆ

Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್‌ಗೆ ಗೆಲುವು: ಮುನಿಯಪ್ಪ ವಿಶ್ವಾಸ

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.