ಪಾಕ್ನ ಕೋರ್ಟ್ ಬಳಿ ಸ್ಫೋಟ: 7 ಸಾವು
Team Udayavani, Feb 18, 2020, 1:21 AM IST
ಕರಾಚಿ: ಪಾಕಿಸ್ಥಾನದ ಬಲೂಚಿಸ್ತಾನ ಪ್ರಾಂತ್ಯದ ಜಿಲ್ಲಾ ನ್ಯಾಯಾಲಯದ ಸಮೀಪದಲ್ಲೇ ಪ್ರಬಲ ಬಾಂಬ್ ಸ್ಫೋಟಗೊಂಡ ಪರಿಣಾಮ 7 ಮಂದಿ ಸಾವಿಗೀಡಾದ ಘಟನೆ ಸೋಮವಾರ ನಡೆದಿದೆ.
ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಕ್ವೆಟ್ಟಾ ಪ್ರಸ್ಕ್ಲಬ್ನಲ್ಲಿ ಪ್ರತಿಭಟನೆಯೊಂದು ನಡೆಯುತ್ತಿದ್ದಾಗಲೇ ಈ ಘಟನೆ ನಡೆದಿದ್ದು, ಹಲವು ವಾಹನಗಳೂ ಹಾನಿಗೀಡಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.