13.8 ಲಕ್ಷ ಮೌಲ್ಯದ ನಾಣ್ಯಗಳ ವಶ
Team Udayavani, Mar 9, 2020, 2:07 PM IST
ವಲ್ಸಾದ್: 5 ಮತ್ತು 10 ರೂ. ಮುಖಬೆಲೆಯ 13.80 ಲಕ್ಷ ರೂ ಮೌಲ್ಯದ ನಾಣ್ಯಗಳನ್ನು ಇಬ್ಬರು ವ್ಯಕ್ತಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಮುಂಬಯಿ- ಅಹಮದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿನಲ್ಲಿ ನಾಣ್ಯಗಳನ್ನು ಇರಿಸಿಕೊಂಡು ಹೋಗುತ್ತಿದ್ದ ವೇಳೆ ಇವರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ನಾವು ಈ ನಾಣ್ಯಗಳನ್ನು ಬ್ಯಾಂಕ್ನಿಂದ ಸಂಗ್ರಹಿಸಿ ಟೋಲ್ ಬೂತ್ಗಳಿಗೆ ಸರಬರಾಜು ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದರೂ, ಪೂರಕ ದಾಖಲೆ ಒದಗಿಸದ ಕಾರಣ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.