ದೀವಿ ಹಲಸು ಆದಾಯಕ್ಕೂ ಲೇಸು

Team Udayavani, Sep 20, 2020, 5:30 AM IST

breadfruit

ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ ತಯಾರಿಕೆಯಲ್ಲಿ ಬಳಸಲ್ಪಡುವ ದಿವಿ ಹಲಸಿಗೆ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆ ಇದೆ.

ಕರಾವಳಿ ಪ್ರಾಂತ್ಯದ ಮನೆಗಳ ಹಿತ್ತಿಲು ಅಥವಾ ತೋಟಗಳಲ್ಲಿ ಇದನ್ನು ನೋಡಬಹುದು. ತುಳು ಭಾಷೆಯಲ್ಲಿ ಜೀಗುಜ್ಜೆ ಅಥವಾ ದೀಗುಜ್ಜೆ ಎಂದು ಸಂಬೋಧಿಸುತ್ತಾರೆ. ದಕ್ಷಿಣ ಕನ್ನಡ, ಕಾರಾವರ, ಉತ್ತರ ಕರ್ನಾಟಕ, ಧಾರವಾಡಗಳಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ. ದೀಗುಜ್ಜೆಯಲ್ಲಿ ತೇವಾಂಶ, ಸಸಾರಾಜನಕ, ಮೇದಸ್ಸು, ಶರ್ಕರ, ನಾರು, ಖನಿಜ ಅಂಶಗಳಿವೆ. ಪೂರ್ಣವಾಗಿ ಬಲಿತಕಾಯಿ ಹಾಗೂ ಬೀಜಗಳನ್ನು ಬಳಸುತ್ತಾರೆ.

ಕಾಯಿಯಲ್ಲಿ ತಿರುಳಿನಲ್ಲಿ ಶೇ. 70 ರಷ್ಟು ತಿನ್ನಲು ಯೋಗ್ಯವಿರುತ್ತದೆ. ಬೇಯಿಸಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಅಲೂಗಡ್ಡೆ ತರಹ ಇರುತ್ತದೆ. ಸಾರು, ಪಲ್ಯ, ಹುಳಿ ಮುಂತಾದ ತಯಾರಿಕೆಗೆ ಬಳಸಲಾಗುತ್ತದೆ. ದಿವಿ ಹಲಸು ಗಿಡದ ಬೆಳವಣಿಗೆಗೆ ನೀರು ಸುಲಭವಾಗಿ ಬಸಿದು ಹೋಗುವಂತಹ ಆಳವಾದ ಗೋಡು ಮಣ್ಣು ಉತ್ತಮ. ಇಲ್ಲಿ ಫಲವತ್ತತೆ ಅಂಶ ಅಧಿಕವಾಗಿದ್ದರೆ ಫಸಲು ಕೂಡ ಅಧಿಕ ದೊರೆಯುತ್ತದೆ.

ಬೆಳೆಯುವ ಬಗೆ
ಉಷ್ಣವಲಯದ ಬೆಳೆ ಆಗಿರುವುದರಿಂದ ಸಮುದ್ರ ಮಟ್ಟದಿಂದ 900 ಮೀಟರ್‌ ಎತ್ತರದ ತನಕವೂ ಸಾಗುವಳಿ ಮಾಡಲು ಸಾಧ್ಯವಿದೆ. ಬೆಚ್ಚಗಿನ ಹಾಗೂ ಕೆಳಮಟ್ಟದ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯುತ್ತದೆ. 19 ರಿಂದ 30 ಸೆ.ಉಷ್ಣಾಂಶ, 200 ರಿಂದ 250 ಸೆಂ.ಮೀ. ಮಳೆ ಹಾಗೂ 70 ರಿಂದ 80 ಆರ್ದತೆ ಇರುವ ಪ್ರದೇಶಗಳಲ್ಲಿ ನಾಟಿಗೆ ಅನುಕೂಲಕರ. ಫಸಲಿನ ಹಿತದೃಷ್ಟಿಯಿಂದ ಶೀತ ಪ್ರದೇಶ ಮತ್ತು ಬೆಟ್ಟ ಗುಡ್ಡ ಪ್ರದೇಶಗಳು ಅಷ್ಟು ಸೂಕ್ತವಲ್ಲ ಎಂದೂ ತಜ್ಞರು ಅಭಿಪ್ರಾಯಪಡುತ್ತಾರೆ.

ಬೇಡಿಕೆ ಇದೆ
ಪದಾರ್ಥ ಹಾಗೂ ವಿವಿಧ ಖಾದ್ಯಗಳ ತಯಾರಿಕೆಗೆ ಜೀಗುಜ್ಜೆ ಹೆಚ್ಚಾಗಿ ಬಳಸ್ಪಡುವ ಕಾರಣ ಮಾರುಕಟ್ಟೆಗಳಲ್ಲಿ ಇದಕ್ಕೆ ಬೇಡಿಕೆಯೂ ಇದೆ. ಆದರೆ ದಕ್ಷಿಣ ಕನ್ನಡದಲ್ಲಿ ಇದನ್ನು ಆದಾಯದ ದೃಷ್ಟಿಯಿಂದ ಬೆಳೆಯುವುದು ಕಡಿಮೆ. ಮನೆ ಖರ್ಚಿಗೆ ಆದಿತು ಎಂಬ ಕಾರಣಕ್ಕೆ ಗಿಡ ನೆಡುತ್ತಾರೆ. ಇದನ್ನು ಉಪ ಬೆಳೆಯಾಗಿ ಬೆಳೆದರೆ ಒಂದಷ್ಟು ಆದಾಯವೂ ದೊರೆಯಬಹುದು. ತೋಟಗಾರಿಕಾ ಇಲಾಖೆಯಿಂದಲೂ ಈ ಸಸಿ ದೊರೆಯುವುದರಿಂದ ಉತ್ತಮ ಗುಣಮಟ್ಟದ ಗಿಡ ನಾಟಿ ಮಾಡಬಹುದು. ಅಡಿಕೆ, ತೆಂಗು, ರಬ್ಬರ್‌ ತೋಟ ಮಧ್ಯೆ ನಾಟಿ ಇದನ್ನು ಮಾಡುವಂತಹದಲ್ಲ. ದಿವಿ ಹಲಸು ರೆಂಬೆ, ಕೊಂಬೆ ಚಾಚಿಕೊಂಡು ಬೆಳೆಯುವ ಕಾರಣ, ವಿಸ್ತಾರವಾದ ಜಾಗವೂ ಬೇಕು.

ಟಾಪ್ ನ್ಯೂಸ್

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಜಗತ್ತಿಗಿಂತ ಮೊದಲು ಪಾಕ್‌ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್‌ ದಾಳಿ ಬಗ್ಗೆ ಪ್ರಧಾನಿ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

ಬ್ಯಾಟಿಂಗ್‌ – ಬೌಲಿಂಗ್‌ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್‌ಗೆ ದಕ್ಷಿಣ ಆಫ್ರಿಕಾ ಪ್ರಕಟ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

Encounter: ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Ramana Avatara: ಇದು ಮಾಡರ್ನ್ ರಾಮನ ಕಥೆ: ‘ರಾಮನ ಅವತಾರ’ ಮೇಲೆ ರಿಷಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.