ವೈರಲ್ ಆದ ನೀಲಿ ಕಣ್ಣನ ಬಾಲಕಿಗೆ ಕೋವಿಡ್ 19 ವೈರಸ್ ಇಲ್ಲ.
Team Udayavani, Mar 26, 2020, 9:24 PM IST
ವೈರಲ್ ಆದ ಮಗುವಿನ ಫೋಟೋ..
ಇರಾನ್: ವಿಶ್ವದ ಅತೀ ಮುದ್ದಾದ ಮಗು ಎಂದು ಪ್ರಖ್ಯಾತಿ ಪಡೆದ ಅನಾಹಿತಾ ಹಶೆಮ್ಜಾಡೆ ಕೋವಿಡ್ 19 ವೈರಸ್ ದಿಂದ ಬಳಲುತ್ತಿದ್ದಾಳೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರದಾಡುತ್ತಿದ್ದುದು ಹಳೆ ಸುದ್ದಿ. ಈಗ ಅವಳ ತಾಯಿಯೇ ಮೌನ ಮುರಿದು ನನ್ನ ಮಗಳು ಆರೋಗ್ಯಪೂರ್ಣವಾಗಿದ್ದಾಳೆ. ನೀವೇನೂ ಆತಂಕ ಪಡಬೇಡಿ ಎಂದು ಹೇಳಿದ್ದಾಳೆ.
ಸಾಮಾಜಿಕ ಜಾಲತಾಣಗಳಲ್ಲಿ ಬಾಲಕಿಯ ಪೋಟೋ ಹಾಕಿ, ಕೋವಿಡ್ 19 ವೈರಸ್ದಿಂದ ಬಳಲುತ್ತಿರುವ ಪ್ರಪಂಚದ ಅತಿ ಸುಂದರ ಮಗುವಿಗಾಗಿ ಎಲ್ಲರೂ ಪ್ರಾರ್ಥಿಸಿ. ಮಗು ಬೇಗ ಚೇತರಿಸಿಕೊಳ್ಳಲಿ ಎಂಬ ಹಾರೈಕೆಯ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಸಾವಿರಾರು ಜನರು ಪೋಸ್ಟ್ ಅನ್ನು ಬೇರೊಂದಿಗೆ ಹಂಚಿ, ಮಗು ಗುಣಮುಖವಾಗಲಿ ಎಂದೂ ಹಾರೈಸಿದ್ದರು.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಂತಾರಾಷ್ಟ್ರೀಯ ಮಾಧ್ಯಮ ಒಂದು ಮತ್ತೂಂದು ಸಾಮಾಜಿಕ ತಾಣದಲ್ಲಿ ಬಾಲಕಿಯ ಮಾಹಿತಿಯನ್ನು ಕಲೆ ಹಾಕಿತು. ಬಳಿಕ ಬಾಲಕಿಯ ಹೆತ್ತವರಿಗೆ ಸುದ್ದಿ ತಿಳಿಸಿತು.
ಇನ್ಸ್ಟಾಗ್ರಾಂ ಮೂಲಕ ಸ್ಟಷ್ಟನೆ
ಈ ಹಿನ್ನೆಲೆಯಲ್ಲಿ ಬಾಲಕಿಯ ತಾಯಿ ತನ್ನ ಸಾಮಾಜಿಕ ತಾಣದಲ್ಲಿ ಕಂಡಾಗ ಮಗುವಿನ ಆರೋಗ್ಯ ಕುರಿತ ನೂರಾರು ಪ್ರಶ್ನೆಗಳಿದ್ದವು. ಇವೆಲ್ಲವನ್ನೂ ಗಮನಿಸಿದ ತಾಯಿ ತನ್ನ ಮಗಳು ಹಾಲು ಕುಡಿಯುತ್ತಿರುವ ಪೋಟೋವನ್ನು ಪ್ರಕಟಿಸಿ, ನನ್ನ ಮಗಳು ಆರೋಗ್ಯ ಹಾಗೂ ಸುರಕ್ಷಿತವಾಗಿದ್ದಾಳೆ ಎಂದು ತಿಳಿಸಿ ವೈರಲ್ ಸುದ್ದಿಗೆ ಗುದ್ದು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ