ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಲಾಕ್‌ಡೌನ್‌ನಿಂದ ಕುಟುಂಬ ಯೋಜನೆ ಪಾಲನೆ ಅಸಾಧ್ಯ

Team Udayavani, Apr 8, 2020, 1:15 PM IST

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಮಣಿಪಾಲ: ವಿಶ್ವದ್ಯಾಂತ ಲಾಕ್‌ಡೌನ್‌ ಹಾಗೂ ಪ್ರಯಾಣ ನಿರ್ಬಂಧಗಳನ್ನು ಹೇರಿರುವುದರಿಂದ ಸುಮಾರು 9.5 ಕೋಟಿ ಮಹಿಳೆಯರು ಕುಟುಂಬ ಯೋಜನೆಯ ಸೂಕ್ತ ಸೌಲಭ್ಯಗಳನ್ನು ಎದುರಿಸುವಲ್ಲಿ ಸಮಸ್ಯೆ ಎದುರಿಸಬಹುದು ಎಂದು ಸಂಸ್ಥೆಯೊಂದು ಅಧ್ಯಯನದಲ್ಲಿ ತಿಳಿಸಿದೆ.

ಅಗತ್ಯ ಸೇವೆಗಳಿಗಾಗಿ ಪರದಾಟ
ಮೇರಿ ಸ್ಟಾಪ್ಸ್ ಇಂಟರ್‌ನ್ಯಾಷನಲ್‌ ನಡೆಸಿರುವ ಅಧ್ಯಯನದ ಪ್ರಕಾರ, ಲಾಕ್‌ಡೌನ್‌ನಿಂದಾಗುವ ತೊಂದರೆ ತಾಪತ್ರಯಗಳನ್ನು ತೆರೆದಿಟ್ಟಿದೆ. ಗರ್ಭ ನಿರೋಧಕ ಮತ್ತು ಸುರಕ್ಷಿತ ಗರ್ಭಪಾತದಂತಹ ಇತರ ಸಂತಾನೋತ್ಪತ್ತಿ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಲು ಮಹಿಳೆಯರು ಪರದಾಡುವ ಸ್ಥಿತಿ ಎದುರಾಗಬಹುದು ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ಈ ಸಂಸ್ಥೆಯು ತಾನು ಕಾರ್ಯ ನಿರ್ವಹಿಸುತ್ತಿರುವ 37 ದೇಶಗಳಲ್ಲಿ ಈ ಅಧ್ಯಯನವನ್ನು ನಡೆಸಿದೆ ಎಂದು ದಿ ಗಾರ್ಡಿಯನ್‌ ವರದಿ ಮಾಡಿದೆ.

ಅಡ್ಡಗಾಲಾದ ಲಾಕ್‌ಡೌನ್‌
ಎಂಎಸ್‌ಐ ಅಂದಾಜಿನ ಪ್ರಕಾರ, ಸದ್ಯ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಮೂರು ತಿಂಗಳವರೆಗೆ ಅಗತ್ಯ ಸೇವಾ ಸೌಲಭ್ಯದಲ್ಲಿ ಶೇ.80 ರಷ್ಟು ಕಡಿತವಾಗಲಿದೆ. ಸುಮಾರು 9.5 ಕೋಟಿ ಕುಟುಂಬ ಯೋಜನೆಯಿಂದ ಹೊರ ಬೀಳಲಿದ್ದಾರೆ ಎಂದು ಹೇಳಿದೆ. ಒಂದು ವೇಳೆ ನಿಗದಿತ ಸಮಯಕ್ಕೆ ಲಾಕ್‌ಡೌನ್‌ ತೆರವುಗೊಂಡರೆ ಇದರ ಪ್ರಮಾಣ 4 ಕೋಟಿಗೆ ಇಳಿಯಲಿದೆ ಎಂಬುದನ್ನು ಉಲ್ಲೇಖೀಸಿದೆ.

ಅಸುರಕ್ಷಿತ ಮಾರ್ಗಗಳಿಂದ ಸಾವು-ನೋವು
ಅಗತ್ಯ ಸೇವೆ ದೊರೆಯದ ಹಿನ್ನೆಲೆ ಅನಪೇಕ್ಷಿತ ಗರ್ಭಧಾರಣೆ ಪ್ರಮಾಣದಲ್ಲಿ ಮೂರು ಮಿಲಿಯನ್‌ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದ್ದು, ಅಸುರಕ್ಷಿತ ಮಾರ್ಗಗಳ ಪಾಲನೆಯಿಂದ 2.7 ಮಿಲಿಯನ್‌ ನಷ್ಟು ಗರ್ಭಪಾತ ಪ್ರಕರಣಗಳು ದಾಖಲಾಗಬಹುದು ಎಂದಿದೆ. ಜತೆಗೆ ಅಗತ್ಯ ಚಿಕಿತ್ಸೆಗಳು ದೊರೆಯದೇ 11 ಸಾವಿರದಷ್ಟು ಹೆರಿಗೆ ಸಂಬಂಧಿತ ಸಾವುಗಳು ಸಂಭವಿಸಲೂಬಹುದು ಎಂದು ಎಚ್ಚರಿಸಿದೆ.

ಹೆಚ್ಚಿದ ಬೇಡಿಕೆ
ನೇಪಾಲದಲ್ಲಿ ಮಾರ್ಚ್‌ 24ರಿಂದ ಲಾಕ್‌ಡೌನ್‌ ಜಾರಿ ಮಾಡಲಾಗಿದ್ದು, ದೇಶಾದ್ಯಂತ ಮೇರಿ ಸ್ಟಾಪ್ಸ್ ಚಿಕಿತ್ಸಾಲಯಗಳನ್ನು ಮುಚ್ಚಬೇಕಾಯಿತು. ಆದರೆ ಅಲ್ಲಿನ ಪ್ರಜೆಗಳಿಂದ ಗರ್ಭಧಾರಣೆ ಸಂಬಂಧಿತ ಸೇವೆಗೆ ಬೇಡಿಕೆ ಹೆಚ್ಚಿದ್ದು, ಸರಕಾರದ ಮುಂದೆ ಸೇವೆಯನ್ನು ಪುನರಾರಂಭಿಸುವಂತೆ ಕೋರಲಾಗಿದೆ. ಸರಕಾರ ಸಾರ್ವಜನಿಕರ ಬೇಡಿಕೆಗೆ ಸ್ಪಂದಿಸಿದ್ದು, ಆರೋಗ್ಯ ಕಾರ್ಯಕರ್ತರಿಗೆ ಮತ್ತು ಚಿಕಿತ್ಸಾಲಯದ ಸಿಬಂದಿಗೆ ಪ್ರಯಾಣಕ್ಕೆ ಅನುಕೂಲವಾಗುವಂತೆ ಪಾಸ್‌ಗಳನ್ನು ನೀಡಿದ್ದು, ಚಿಕಿತ್ಸಾಲಯವನ್ನು ತೆರೆಯಲು ಆದೇಶಿಸಿದೆ.

ಸಾವು-ನೋವು
ಇಂತಹ ಸಂದರ್ಭದಲ್ಲಿ ಗರ್ಭಧಾರಣೆ ಸಂಬಂಧಿತ ಸೇವಾ ಕೇಂದ್ರಗಳನ್ನು ಮತ್ತು ಸೇವೆಯನ್ನು ಕಡಿತಗೊಳಿಸುವುದರಿಂದ ಸಾವು-ನೋವುಗಳು ಹೆಚ್ಚಾಗಬಹುದು. ಸರಿಯಾದ ಸೇವೆಗಳು ಸಿಗದೇ 2014 ಮತ್ತು 2015ರ ನಡುವೆ 3,600 ಮತ್ತು 4,900 ಹೆಚ್ಚುವರಿ ತಾಯಿ, ನವಜಾತ ಮತ್ತು ಹೆರಿಗೆಯ ಸಾವುಗಳಿಗೆ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ.
ಎಬೋಲಾ ವೈರಸ್‌ ಕಾಣಿಸಿಕೊಂಡ ಸಂದರ್ಭದಲ್ಲೂ ಸೇವೆಗಳ ಕಡಿತದಿಂದ 4 ಸಾವಿರ ಸಾವುಗಳು ಸಂಭವಿಸಿತು ಎಂದು ತಿಳಿಸಿದ್ದಾರೆ.

ಟಾಪ್ ನ್ಯೂಸ್

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

3-

LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Lok Sabha polls: ಚಿಕ್ಕೋಡಿಯಲ್ಲಿ ಜೊಲ್ಲೆVs ಜಾರಕಿಹೊಳಿ ಪರಿವಾರ ಕದನ

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

Raichur; ವಿಷಾಹಾರ ಸೇವಿಸಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ

5-araga

LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.